ಅನುದಿನದ ಮನ್ನಾ
3
1
95
ನೀವು ನಿಜವಾದ ಆರಾಧಕರೇ?
Wednesday, 12th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು".. (ಯೋಹಾನ 4:23)
ತನ್ನ ಪ್ರಸಿದ್ಧ ಸ್ಥಾನಮಾನದ ಸಂಪೂರ್ಣ ಭಾರವನ್ನು ಹೊತ್ತುಕೊಂಡಿದ್ದ ಅರಸನಾದ ಸೊಲೊಮನನು ವೇಷಧಾರಿಯಾಗಿ ಹೋಗಿ "ಶೂಲಮಿನ ಊರಿನವಳಾದ ಅಷ್ಟೇನೂ ಖ್ಯಾತಳಲ್ಲದ ಒಬ್ಬ ಕುರುಬ ಸ್ತ್ರೀಯನ್ನು ಪ್ರೀತಿಸುತ್ತಿದ್ದನು. ಈಗಾಗಲೇ ಸಾವಿರ ಹೆಂಡತಿಯರನ್ನು ಹೊಂದಿದ್ದ ಪ್ರಸಿದ್ಧ ಆಡಳಿತಗಾರನೊಬ್ಬ ಒಂದು ಸರಳ ರೈತ ಹುಡುಗಿಯ ಬಗ್ಗೆ ಏಕೆ ಅಷ್ಟೊಂದು ಆಸಕ್ತಿ ಹೊಂದಿ ಕೊಳ್ಳುತ್ತಾನೆ?
ಪರಮಗೀತ ನಿರೂಪಣೆಯನ್ನು ನಾನು ನೋಡುವಾಗ , ಅದು ಹೇಳುವುದೇನೆಂದರೆ , ಪರಮಗೀತದ ಆರಂಭದಲ್ಲಿ, ಸ್ತ್ರೀ ಮತ್ತು ಅರಸನಾದ ಸೊಲೊಮೋನನ ನಡುವಿನ ಪ್ರಣಯದ ಬೆಳವಣಿಗೆಯನ್ನು ನಾವು ನೋಡುತ್ತೇವೆ. 5-6 ರ ವಾಕ್ಯಗಳಲ್ಲಿ ಶೂಲಮಿನ ಸ್ತ್ರೀಯು ತನ್ನ ಮೈಬಣ್ಣದಲ್ಲಿ ಕಪ್ಪಾಗಿದ್ದಾಳೆ, ಅವಳು ಇತರರ ದ್ರಾಕ್ಷಿತೋಟಗಳನ್ನು ಕಾಯುವವಳಾಗಿದ್ದು ಅವಳ ತಾಯಿಯ ಮಕ್ಕಳು ಅವಳ ಮೇಲೆ ಕೋಪಗೊಂಡಿದ್ದಾರೆ. ಸೂರ್ಯನ ಶಾಖದಿಂದ ಮೈಬಣ್ಣ ಕಪ್ಪಾಗಿರುವಂತ್ತದ್ದು ಆಕೆ ಕಷ್ಟಪಟ್ಟು ಹೊಲದಲ್ಲಿ ದುಡಿಮೆ ಮಾಡಿ ತನ್ನ ಜೀವನ ಕಳೆಯುತ್ತಿರುವುದನ್ನು ಸೂಚಿಸುತ್ತದೆ. ಆಕೆಗೆ ಐಷಾರಾಮಿ ಜೀವನ ಎಂದರೆ ಏನು ಎಂದು ತಿಳಿದಿಲ್ಲ, ಅಥವಾ ಅವಳು ತನ್ನನ್ನು ತಾನು ನೋಡಿಕೊಳ್ಳಲು ಅಥವಾ ಕಾಳಜಿ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಅವಳು ಸುಂದರವಾಗಿದ್ದಾಳೆ ಎಂದು ಹೇಳುವಾಗ (ಅವಳು ಅಂದವಾಗಿ ಕಾಣುತ್ತಾಳೆ,) ಅವಳ ದೇಹವು ಅವಳ ಕಠಿಣ ದುಡಿಮೆಯ ಪರಿಣಾಮಗಳನ್ನು ತೋರಿಸುತ್ತದೆ. ಅವಳು ತನ್ನ ಸ್ವಂತ ದ್ರಾಕ್ಷಿತೋಟವನ್ನು ಕಾಯುತಿಲ್ಲ, ಅಂದರೆ ಅವಳಿಗೆ ಅವಳದೇ ಆದ ದ್ರಾಕ್ಷಿತೋಟವಿಲ್ಲ ಎಂದು ಹೇಳಬಹುದು. ಅವಳ ಬಳಿ ಯಾವುದೇ ಸಂಪತ್ತು ಇಲ್ಲ; ಯಾವುದೇ ಆಸ್ತಿಯೂ ಇಲ್ಲ. ಹಳೆಯ ಒಡಂಬಡಿಕೆಯ ಕಾಲದಲ್ಲಿನ (ಹಾಗೆಯೇ ಮಧ್ಯಕಾಲೀನ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲೂ ಸಹ) ಪದ್ಧತಿ ಪ್ರಕಾರ ಅವಳು ಅರಸನಿಗೆ ಅಷ್ಟೇನೂ ಸರಿಹೊಂದುವ ವಧು ವಲ್ಲ; ಆಗ ರಾಜಮನೆತನದವರು ತಮ್ಮ ರಾಜ್ಯಗಳಿಗೆ ಶಾಂತಿ ಅಥವಾ ಸಮೃದ್ಧಿಯನ್ನು ತರಬಲ್ಲವರನ್ನು ಮದುವೆಯಾಗುತ್ತಿದ್ದರು . ಮೈತ್ರಿಗಳು, ವ್ಯಾಪಾರ ಒಪ್ಪಂದಗಳು ಮತ್ತು ವಿಲೀನಗಳು ರಾಜಮನೆತನದ ವಿವಾಹಗಳ ಮೂಲಕ ಆಯೋಜಿಸಲ್ಪಡುತ್ತಿದ್ದವು. ಶೂಲಮಿನ ಸ್ತ್ರೀಯು ಇವುಗಳಲ್ಲಿ ಯಾವುದನ್ನೂ ಪೂರೈಸದವಳಾಗಿದ್ದಳು . ಆದರೂ, ಆಕೆಯ ನಿರ್ಗತಿಕ ಪರಿಸ್ಥಿತಿಯ ಹೊರತಾಗಿಯೂ, ಅರಸನಾದ ಸೊಲೊಮೋನನು ಅವಳನ್ನು ಪ್ರೀತಿಸಿದನು. 2:4 ವಾಕ್ಯದಲ್ಲಿ, ಶೂಲಮಿಯ ಸ್ತ್ರೀಯು , " ಅವನು ನನ್ನನ್ನು ಔತಣಶಾಲೆಗೆ ಬರಮಾಡಿಕೊಂಡನು, ನನ್ನ ಮೇಲೆ ಅವನು ಎತ್ತಿದ ಧ್ವಜವು ಪ್ರೀತಿಯೇ."ಎಂದು ಹೇಳುತ್ತಾಳೆ.
ಅರಸನಾದ ಅಹಶ್ವರೋಷನು ಎಸ್ತರ್ಳನ್ನು ಪ್ರೀತಿಸಿದ ಅದೇ ಕಾರಣಗಳಿಗಾಗಿ ಸೊಲೊಮನನೂ ಸಹ ಈ ಸ್ತ್ರೀಯನ್ನು ಪ್ರೀತಿಸಿದನು ಎಂದು ನಾನು ನಂಬುತ್ತೇನೆ. ನಮಗೆ ತಿಳಿದಿರುವ ಈ ಪ್ರಪಂಚದ ಅತ್ಯಂತ ಸುಂದರ ಮಹಿಳೆಯರಲ್ಲಿ ಇಬ್ಬರನ್ನು ಈ ಇಬ್ಬರು ನಾಯಕರೂ ಆರಿಸಿಕೊಂಡರು. ಇಬ್ಬರೂ ಅರಸನರೂ ಸಹ ಈ ಸುಂದರ ಯುವತಿಯರು ತಮ್ಮನ್ನು ಅವರಿಗಿರುವ ರಾಜಪ್ರಭುತ್ವದ ಶಕ್ತಿಗಾಗಿಯೋ ಮತ್ತು ತಾವು ಮಹಾ ರಾಜನಾಗಿರವುದರಿಂದ ತಮಗಿರುವ ಅಧಿಕಾರಕ್ಕಾಗಿ ಪ್ರೀತಿಸದೇ ತಮ್ಮನ್ನು ಯಥಾರ್ಥವಾದ ಪ್ರೀತಿಯಿಂದ ಪ್ರೀತಿಸಬಹುದು ಎಂಬ ಅಂಶದಿಂದ ಬಹುಶಃ ಆ ಯುವತಿಯರಿಗೆ ಆಕರ್ಷಿತರಾಗಿದ್ದಿರಬಹುದು .
ಅದೇ ರೀತಿಯಲ್ಲಿ, ಎಸ್ತರಳಂತೆ ಅರಸನು ಕೊಡುವ ಆಶೀರ್ವಾದಗಳಿಗಿಂತ ಅರಸನನ್ನೇ ಹೆಚ್ಚಾಗಿ ಯಥಾರ್ಥವಾಗಿ ಪ್ರೀತಿಸುವ ಅನುಯಾಯಿಗಳಿಗಾಗಿ ಆ ಮಹಿಮೆಯ ಅರಸನು ಬಹಳವಾಗಿ ಹಂಬಲಿಸುವವನಾಗಿದ್ದಾನೆ. ವರಗಳಿಗಿಂತ ಹೆಚ್ಚಾಗಿ ವರಗಳನ್ನು ಅನುಗ್ರಹಿಸುವವನನ್ನು ಪ್ರೀತಿಸುವವರನ್ನು ದೇವರ ಹೃದಯವು ಬಯಸುತ್ತದೆ. ಗ್ರಾಹಕರು ರಾಜರ ಮೇಜಿನ ಬಳಿ ತಿನ್ನುತ್ತಾರೆ, ಆದರೆ ಅವರು ವಿರಳವಾಗಿ ಪ್ರೀತಿಯನ್ನು ತೋರಿಸುತ್ತಾರೆ. ಒಬ್ಬ ನಿಜವಾದ ಆರಾಧಕನಾದರೋ ಸಂಪೂರ್ಣವಾಗಿ ಅರಸನ ಮೇಲೆಯೇ ತನ್ನ ಮನಸ್ಸನ್ನಿಡುವುದರಿಂದ ಅವನ ಅಗತ್ಯಗಳೆಲ್ಲ ಪೂರೈಸಲ್ಪಡುತ್ತದೆ. ನೀವು ಗ್ರಾಹಕರಾಗಿದ್ದೀರೋ ಅಥವಾ ಆರಾಧಕರಾಗಿದ್ದೀರೋ ? ದೇವರಿಂದ ಏನನ್ನಾದರೂ ಹೊಂದಿಕೊಳ್ಳಬಹುದು ಎಂದು ಆತನನ್ನು ಅನುಸರಿಸುತ್ತಿದ್ದಿರಾ? ಅಥವಾ ಆತನು ಯಾರಾಗಿದ್ದಾನೆಯೋ ಅದಕ್ಕಾಗಿಯೋ? ನಿಮ್ಮ ಪ್ರಾರ್ಥನೆಗಳು ಯಾವಾಗಲೂ ಆತನು ನಿಮಗಾಗಿ ಏನು ಮಾಡಬೇಕೆಂಬ ಬಯಕೆಯ ಮೇಲೆ ಕೇಂದ್ರಿತವಾಗಿದೆಯೋ ಅಥವಾ ಆತನ ರಾಜ್ಯದ ಮೇಲೋ ? ನೀವು ಯಾವಾಗಲೂ ದೇವರನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕೆಂದು ಬಯಸುತ್ತಿದ್ದೀರಾ? ಅಥವಾ ನೀವು ಈಗಾಗಲೇ ಎಲ್ಲವನ್ನೂ ತಿಳಿದುಕೊಂಡವರಾಗಿದ್ದೀರಿ ಎಂದು ಉಬ್ಬಿಕೊಂಡಿದ್ದೀರಾ?
ದೇವರು ಸತ್ಯಾರಾಧಕರನ್ನು ಹುಡುಕುತ್ತಿದ್ದಾನೆ. ಯೋಹಾನ ಅಧ್ಯಾಯ 4 ರಲ್ಲಿ, ಒಬ್ಬ ಸ್ತ್ರೀಯು ಯೇಸುವನ್ನು ಬಾವಿಯ ಬಳಿಯಲ್ಲಿ ಭೇಟಿಯಾದಳು, ಅಲ್ಲಿ ಆತನು ಅವಳಿಗೆ ಜೀವಜಲವನ್ನು ನೀಡುವುದಾಗಿ ಅದನ್ನು ಹೊಂದಿಕೊಂಡರೆ ಅವಳು ಮತ್ತೆ ಬಾವಿಗೆ ನೀರು ತರಲು ಬರಬೇಕಾಗಿರುವುದಿಲ್ಲ ಎಂದು ಹೇಳಿದನು.ಆಗ ಆ ಸ್ತ್ರೀಯು ಅದಕ್ಕೆ ಆಕರ್ಷಿತಳಾಗಿ ನಮ್ಮಲ್ಲಿ ಹೆಚ್ಚಿನವರು ಬೇಡುವಂತೆ ಯೇಸುವಿಗೆ ಅದನ್ನು ಬೇಗನೆ ಕೊಡಬೇಕೆಂದು ಕೇಳಿಕೊಂಡಳು. ದೇವರು ಏನು ಕೊಡಬೇಕೆಂದಿದ್ದಾನೋಅದು ಬೇಗನೆ ಸಿಗಬೇಕೆಂದು ನಾವು ಬಯಸುತ್ತೇವೆ, ಆದರೆ ಯೇಸು ಅವಳ ಹೃದಯದ ಸ್ಥಿತಿಯ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದನು. ಆದರೆ ಆಕೆ ನಿಜವಾದ ಆರಾಧಕಳಾಗಿದ್ದಳಾ ?
ಯೋಹಾನ 4:21-24 ರಲ್ಲಿ "ಯೇಸು ಆಕೆಗೆ - ಅಮ್ಮಾ, ನಾನು ಹೇಳುವ ಮಾತನ್ನು ನಂಬು; ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇವಿುಗೂ ಹೋಗುವದಿಲ್ಲ. ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. ಆದದರಿಂದ ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು. ಅದಿರಲಿ; ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು ಅಂದನು."
ಇದು ಮರುಚಿಂತನೆ ಮಾಡುವ ಸಮಯ. ಇಂದು, ಅನೇಕರು ತಮಗೆ ಅಗತ್ಯವಿರುವಾಗ ಮಾತ್ರ ಕರ್ತನನ್ನು ಹುಡುಕಿ ಸಭೆಗೆ ಬರುತ್ತಾರೆ. "ಕರ್ತನೇ, ನೀನು ನನ್ನವನು ಮತ್ತು ನಾನು ಯಾವಾಗಲೂ ನಿನ್ನವನು?" ಎಂದು ನೀವು ನಿಜವಾಗಿ ಹೇಳುತ್ತೀರಾ?
Bible Reading: Leviticus 26-27
ಪ್ರಾರ್ಥನೆಗಳು
ತಂದೆಯೇ, ಇಂದು ನೀನು ನಿನ್ನ ವಾಕ್ಯವನ್ನು ನನಗೆ ಅರ್ಥಮಾಡಿಸಿದ್ದಕ್ಕಾಗಿ ನಿನಗೇ ಯೇಸುನಾಮದಲ್ಲಿ ಸ್ತೋತ್ರ . ನೀವು ನನ್ನ ಹೃದಯವನ್ನು ಸ್ವೀಕರಿಸಿ ನಿನಗಾಗಿ ಪವಿತ್ರಗೊಳಿಸಶುದ್ಧಕರಿಸು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನೀನು ನನ್ನೆಲ್ಲ ಕ್ಷಣ ಮತ್ತು ನನ್ನ ದಿನಗಳನ್ನು ಸ್ವೀಕರಿಸಿ ಅವೆಲ್ಲವೂ ನಿನಗಾಗಿ ಮಾತ್ರ ಮೀಸಲಾಗಿರಬೇಕು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನೀನು ಕೊಡುವಂತವುಗಳಲ್ಲ ನಿನ್ನನ್ನೇ ಸಂಪೂರ್ಣ ಮನಸ್ಸಿನಿಂದ ನಾನು ಹುಡುಕುವಂತೆ ಯೇಸುನಾಮದಲ್ಲಿ ನನಗೆ ಸಹಾಯ ಮಾಡಡು. ನನ್ನನ್ನು ನಿನ್ನ ನಿಜವಾದ ಆರಾಧಕನನ್ನಾಗಿ ಯೇಸುನಾಮದಲ್ಲಿ ಮಾರ್ಪಡಿಸು. ಆಮೆನ್.
Join our WhatsApp Channel

Most Read
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಯುದ್ಧಕ್ಕಾಗಿ ತರಬೇತಿ.
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ದೇವರಿಗೆ ಮೊದಲಸ್ಥಾನ ನೀಡುವುದು #3
ಅನಿಸಿಕೆಗಳು