ಅನುದಿನದ ಮನ್ನಾ
2
0
41
ಇದು ಅಧಿಕಾರ ವರ್ಗಾವಣೆಯ ಸಮಯ
Saturday, 22nd of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಯಾಕಂದರೆ ಉದ್ಧಾರವು ಮೂಡಲಿಂದಾಗಲಿ ಪಡುವಲಿಂದಾಗಲಿ ಅರಣ್ಯದಿಂದಾಗಲಿ ಬರುವದಿಲ್ಲ.
ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ. (ಕೀರ್ತನೆ 75:6-7)
ಶತ್ರುವನ್ನು ಸೋಲಿಸಿದ ನಂತರ, ದೇವಜನರು ಮುನ್ನಡೆ ಸಾಧಿಸಬಹುದು ಮತ್ತು ರಾಜಮನೆತನಕ್ಕೆ ಸೇರಬಹುದು. ಎಸ್ತರಳು 8: 1-2 " ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದ್ದರಿಂದ ಅರಸನು ಮೊರ್ದೆಕೈಯನ್ನು ಒಡ್ಡೋಲಗದಲ್ಲಿ ಸೇರಿಸಿ ತಾನು ಹಾಮಾನನಿಂದ ತೆಗಿಸಿದ್ದ ತನ್ನ ಮುದ್ರೆಯುಂಗರವನ್ನು ಅವನಿಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು." ಎಂದು ಸತ್ಯವೇದ ಹೇಳುತ್ತದೆ, ಮೊರ್ದೆಕೈಗೆ ರಾಜನು ನೀಡಿದ ಮುದ್ರೆಯುಂಗುರವು ಅವನ ಮೇಲೆ ಅರಸನಿಟ್ಟ ನಂಬಿಕೆ ಮತ್ತು ಕೊಟ್ಟ ಅಧಿಕಾರ ಮತ್ತು ಅವನ ಕಚೇರಿಯ ಉಸ್ತುವಾರಿಯನ್ನು ಸೂಚಿಸುತ್ತದೆ.
ಈಗ ಅಧಿಕಾರವು ಯಹೂದಿಗಳಿಗೆ ವರ್ಗಾಯಿಸಲ್ಪಟ್ಟಿದೆ. ಇದರಿಂದ ಈಗ ಯಹೂದಿಗಳು ಅರಮನೆ ಮತ್ತು ರಾಷ್ಟ್ರದ ಮಂತ್ರಿಮಂಡಲದಲ್ಲಿ ಎರಡನೇ ಧ್ವನಿಯನ್ನು ಹೊಂದಿದ್ದರು. ವಧೆಗಾಗಿ ಒಪ್ಪಿಸಲ್ಪಟ್ಟ ಅದೇ ಜನರು ಕೊಲ್ಲಲ್ಪಡದೆ ಈಗ ರಾಷ್ಟ್ರದ ನಾಯಕತ್ವ ರಚನೆಯಲ್ಲಿ ಸಂಪೂರ್ಣವಾಗಿ ತಮ್ಮ ಜನಾಂಗವನ್ನು ಪ್ರತಿನಿಧಿಸುತ್ತಿದ್ದಾರೆ. ಮೊರ್ದೆಕೈ ಈಗ ರಾಜನ ಅರಮನೆಯಲ್ಲಿ ಇನ್ನೊಬ್ಬ ಹಿರಿಯ ಸೇವಕನಾಗಿರದೇ ಅವನು ರಾಜನಷ್ಟೇ ಅಧಿಕಾರ ಇರುವವನಾದನು.
ರಾಜನು ಅವನಿಗೆ ತನ್ನ ಮುದ್ರೆ ಉಂಗುರವನ್ನು ಕೊಟ್ಟನು. ಆ ದಿನಗಳಲ್ಲಿ, ರಾಜನು ಶಾಸನವನ್ನು ಬರೆದ ನಂತರ ಅದನ್ನು ಜಾರಿ ಮಾಡಲು ಬಯಸಿದಾಗ, ಆ ದಾಖಲೆಯನ್ನು ಸಹಿ ಮಾಡಲು ರಾಜನ ಮುದ್ರೆಯ ಉಂಗುರವನ್ನು ಬಳಸಲಾಗುತ್ತಿತ್ತು. ಇದು ಅಧಿಕಾರದ ಸಂಕೇತವಾಗಿತ್ತು. ಆ ಮುದ್ರೆಯನ್ನು ಹೊಂದಿರುವ ಯಾವುದೇ ಬರಹವನ್ನು ಜನರು ನೋಡಿದಾಗ, ಆ ಸೂಚನೆಗಳನ್ನು ಪಾಲಿಸಲೇ ಬೇಕಾಗಿತ್ತು. ರಾಜನು ಮೊರ್ದೆಕೈಗೆ ಕೊಟ್ಟ ಉಂಗುರವೂ ಇದೇ ಆಗಿತ್ತು. ಈಗ ಯಹೂದ್ಯರು ಆ ಪ್ರದೇಶದಲ್ಲಿ ಹೊಂದಿರುವ ಅಧಿಕಾರದ ಆಯಾಮವನ್ನು ನೀವು ಊಹಿಸಬಹುದು. ಒಮ್ಮೆ ಬಂಧಿತನಾಗಿದ್ದ ಒಬ್ಬ ವ್ಯಕ್ತಿಯನ್ನು ಒಂದೇ ಆದೇಶದ ಮೂಲಕ ರಾಜನ ಎರಡನೇ ಸ್ಥಾನಕ್ಕೆ ಏರಿಸಲಾಯಿತು. ಅವನು ಈಗ ರಾಜನಷ್ಟೇ ಅಧಿಕಾರ ಇರುವವನಾದನು.
ಯಾವುದೇ ಪದೋನ್ನತಿಯು ಕರ್ತನ್ನಿಂದಲೇ ಬರುತ್ತದೆ ಎಂದು ಸತ್ಯವೇದ ಹೇಳುತ್ತದೆ. ಯಾರು ನಿಮ್ಮನ್ನು ಕಡೆಗಣಿಸಿದ್ದಾರೆ? ಅಥವಾ ಯಾರು ನಿಮ್ಮನ್ನು ಎಷ್ಟು ಮರೆತಿದ್ದಾರೆ? ಎಂಬುದು ಮುಖ್ಯವಲ್ಲ; ಸಮಯ ಬಂದಾಗ, ಅಧಿಕಾರವು ನಿಮಗೆ ವರ್ಗಾಯಿಸಲಾಗುತ್ತದೆ. ಈಗ ಪ್ರಶ್ನೆಯೆಂದರೆ, ಆಗ ಆಸ್ಥಾನದ ಇತರ ಸದಸ್ಯರು ಎಲ್ಲಿದ್ದರು? ಹಾಮಾನನ ನಂತರದ ಆ ಉದ್ಯೋಗಕ್ಕೆ ಬರಬೇಕಾದ ಸರಧಿ ಯಾರದ್ದಾಗಿತ್ತು? ರಾಜನು ತನ್ನೊಂದಿಗೆ ಕಾಲದಿಂದ ಇದ್ದಂತ ಅವರಲ್ಲಿಯೇ ಒಬ್ಬನನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲವೇ? ರಾಷ್ಟ್ರದ ರಾಜಕೀಯ ಆಸ್ಥಾನಕ್ಕೆ ಹೊಸ ವ್ಯಕ್ತಿಯನ್ನು ರಾಜನಿಗೆ ಎರಡನೇಅಧಿಕಾರಿಯಾಗಿ ಏಕೆ ತಂದನು ? ಆ ಜನರಲ್ಲಿ ಅನೇಕರು ರಾಜನ ಕೈಯಲ್ಲಿನ ಮುದ್ರೆಯ ಉಂಗುರವನ್ನು ನೋಡಿದ್ದರೆ ವಿನಃ ಬಹುಶಃ ಅದನ್ನು ಮುಟ್ಟಿರಲಿಲ್ಲ ಎನಿಸುತ್ತದೆ ಆದರೆ ಅಂತಹವರ ಉಪಸ್ಥಿತಿಯಲ್ಲಿಯೇ ಮೊರ್ದೆಕೈಗೆ ಈ ಅಧಿಕಾರವನ್ನು ಪ್ರದಾನ ಮಾಡಲಾಯಿತು.
ನನ್ನ ಸ್ನೇಹಿತರೇ, ದೇವರು ನಿಮಗಾಗಿ ಉತ್ತಮ ಯೋಜನೆಗಳನ್ನು ಹೊಂದಿದ್ದಾನೆ. ನೀವು ಮೇಲೇರಲು ನಿಮ್ಮದೇ ರೀತಿಯಲ್ಲಿ ಲಾಬಿ ಮಾಡುವ ಅಗತ್ಯವಿಲ್ಲ; ಬಡ್ತಿ ಪಡೆಯಲು ನೀವು ಕೊಲ್ಲುವ ಅಥವಾ ಮೋಸ ಮಾಡುವ ಅಗತ್ಯವಿಲ್ಲ. ಜೀವನದಲ್ಲಿ ಮೇಲೆ ಏರಲು ಮತ್ತು ರೂಪಾಂತರವನ್ನು ಆನಂದಿಸಲು ನೀವು ಹಾಮಾನನಂತಹ ದುಷ್ಟ ಸಂಚು ಮಾಡುವ ಅಗತ್ಯವಿಲ್ಲ. ನೀವು ಎಲ್ಲಿದ್ದೀರಿ ಎಂಬುದು ದೇವರಿಗೆ ತಿಳಿದಿದೆ ಮತ್ತು ಆತನು ನಿಮಗಾಗಿ ಉತ್ತಮ ಯೋಜನೆಗಳನ್ನು ಹೊಂದಿದ್ದಾನೆ. ಒಬ್ಬರನ್ನು ಕೆಳಗಿಳಿಸಿ ಮತ್ತೊಬ್ಬರನ್ನು ಸ್ಥಾಪಿಸುವುದರಲ್ಲಿ ಆತನು ನಿಪುಣನಾಗಿದ್ದಾನೆ . ಆತನು ಹಾಮಾನನನ್ನು ಕೆಳಗಿಳಿಸಿದಂತೆ, ನಿನ್ನ ಶತ್ರುಗಳನ್ನು ಕೆಳಗಿಳಿಸಿ ನಿನ್ನನ್ನು ಅವರ ಸ್ಥಾನದಲ್ಲಿ ನಿಲ್ಲಿಸುವನು. ನೀವು ಆತನ ಮಗುವಾಗಿದ್ದು ಆ ಬಾಧ್ಯತೆಯನ್ನು ಪುನಃ ಪಡೆದುಕೊಳ್ಳುತ್ತೀರಿ. ನೀನು ಗುಲಾಮನಲ್ಲ ಬದಲಾಗಿ ಅರಸನಾಗಿದ್ದೀಯ. " ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್. ಎಂದು ಪ್ರಕಟನೆ 1:6 ಹೇಳುತ್ತದೆ, ." ನಾವು ಆಳ್ವಿಕೆ ಮಾಡಲೂ ಮುನ್ನಡೆಸಲೆಂದು ವಿಮೋಚನೆಗೊಂಡಿದ್ದೇವೆ ಹೊರತು ಗುಲಾಮರಾಗಿರಲು ಅಲ್ಲ. ನೀವು ಈಗ ಜೀವನದಲ್ಲಿ ಮೇಲೇರಲು ಕಷ್ಟಪಡುತ್ತೀರಾ? ಚಿಂತಿಸಬೇಡಿ ; ದೇವರು ನಿಮಗಾಗಿ ಧಾವಿಸುತ್ತಾನೆ. ಆತನು ಈಗಾಗಲೇ ನಿಮ್ಮ ಸ್ಥಾನಕ್ಕಾಗಿ ತಯಾರಿ ನಡೆಸಿದ್ದಾನೆ. ಆತನು ಈಗಾಗಲೇ ನಿಮಗೆ ವರ್ಗಾಯಿಸಲ್ಪಡುವ ಉಂಗುರವನ್ನು ಸಿದ್ಧಪಡಿಸಿದ್ದಾನೆ.
ಆದ್ದರಿಂದ, ಸರಿಯಾದ ನಡತೆಯನ್ನು ಕಾಪಾಡಿಕೊಳ್ಳಿ. ನೀವು ಇನ್ನೂ ಉನ್ನತ ಸ್ಥಾನಕ್ಕೆ ಏರದ ಕಾರಣ ಖಿನ್ನತೆಗೆ ಒಳಗಾಗುವುದು ಮತ್ತು ಕೀಳರಿಮೆ ಅನುಭವಿಸುವುದು ಸುಲಭವಾದ ಕಾರ್ಯ. ಆದರೆ ಶತ್ರುವು ಆ ಸ್ಥಾನವನ್ನು ನಿಮಗಾಗಿ ಮಾತ್ರ ಏರ್ಪಡಿಸುತ್ತಿದ್ದಾನೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನೀವು ಎಲ್ಲಿದ್ದೀರೋ ಅಲ್ಲಿಯೇಉತ್ಸುಕರಾಗಿರಿ. ದೇವರ ಸೇವೆ ಮಾಡಿ ಮತ್ತು ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ. ಸರಿಯಾದ ಸಮಯದಲ್ಲಿ, ದೇವರ ಕೈ ನಿಮ್ಮನ್ನು ಮೇಲಕ್ಕೆ ಎತ್ತುತ್ತದೆ.
Bible Reading: Numbers 21-22
ಪ್ರಾರ್ಥನೆಗಳು
ತಂದೆಯೇ, ನೀನು ನನಗಾಗಿ ಹೊಂದಿರುವ ದೊಡ್ಡ ಯೋಜನೆಗಳಿಗಾಗಿ ನಿನಗೇ ಯೇಸುವಿನ ಹೆಸರಿನಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಾನು ಪದೋನ್ನತಿಗಾಗಿ ಯಾವುದೇ ತಪ್ಪು ಮಾಡದ ಕಾರಣ ನಿನಗೇ ಸ್ತೋತ್ರ ಸಲ್ಲಿಸುತ್ತೇನೆ . ನಿನ್ನ ಬಲವಾದ ಕೈಗಳೇ ನನ್ನನ್ನು ಧೂಳಿನಿಂದ ಮೇಲಕ್ಕೆತ್ತಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾನು ನಡೆಯುವ ದಾರಿಯನ್ನು ನೀನೇ ಮಾರ್ಗದರ್ಶಿಸ ಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಸರಿಯಾದ ನಡತೆಯನ್ನು ಕಾಪಾಡಿಕೊಳ್ಳಲು ನಿನ್ನ ಆತ್ಮದಿಂದ ನನಗೆ ಸಹಾಯ ಮಾಡಬೇಕೆಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು● ಕೃತಜ್ಞತೆಯ ಯಜ್ಞ
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
ಅನಿಸಿಕೆಗಳು