ಅನುದಿನದ ಮನ್ನಾ
3
1
114
ಇತರರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಅನುಭವಿಸುವ ಆಶೀರ್ವಾದಗಳು
Sunday, 6th of April 2025
Categories :
ಸೇವೆ (Serving)
ನಮ್ಮ ಜೀವನದ ಮೂಲತತ್ವವೆಂದರೆ, ನಮ್ಮ ಜೀವನವು ಒಂದು ಉದ್ದೇಶ ಮತ್ತು ಪ್ರಭಾವವನ್ನು ಹೊಂದಿರಬೇಕೆಂದು ನಾವೆಲ್ಲರೂ ಬಯಸುವವರಾಗಿದ್ದೇವೆ. ಅದು ನಮ್ಮ ಅನ್ವೇಷಣೆಗಳು ಮತ್ತು ಪ್ರಯತ್ನಗಳ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಅರ್ಥಪೂರ್ಣ ಕೊಡುಗೆ ನೀಡಲು ನಾವು ಪ್ರಗತಿ ಮತ್ತು ನಾಯಕತ್ವದ ಸ್ಥಾನಗಳಿಗಾಗಿ ಶ್ರಮಿಸುತ್ತೇವೆ. ಅದೇ ರೀತಿ, ನಮ್ಮ ಮಕ್ಕಳು ಶಿಕ್ಷಣ ಮತ್ತು ವೃತ್ತಿಜೀವನದ ಯಶಸ್ಸನ್ನು ಮುಂದುವರಿಸಲು ನಾವು ಪ್ರೋತ್ಸಾಹಿಸುತ್ತೇವೆ, ಅವರು ಪ್ರಪಂಚದ ಮೇಲೆ ತಮ್ಮಒಂದು ಮಹತ್ತರವಾದ ಗುರುತು ಬಿಡುವಂತ ಅವಕಾಶವನ್ನು ಹೊಂದಿರಬೇಕೆಂದು ನಾವು ಆಶಿಸುತ್ತೇವೆ.
ಸಂಪತ್ತು ಮತ್ತು ಪ್ರಭಾವವು ಸಕಾರಾತ್ಮಕ ಸ್ವತ್ತುಗಳಾಗಿರಬಹುದು, ಆದರೆ ಅವು ನಿಜವಾದ ಬದಲಾವಣೆಯನ್ನು ಸೃಷ್ಟಿಸುವ ಏಕೈಕ ಪರಿಹಾರವಲ್ಲ. ನಾವು ಸೃಷ್ಟಿಸಲ್ಪಟ್ಟ ಕಾರಣವು ಲೌಕಿಕ ಸಾಧನೆಗಳು ಮತ್ತು ಪುರಸ್ಕಾರಗಳನ್ನು ಮೀರಿದ್ದಾಗಿದೆ. ನಮ್ಮೊಳಗೆ ಒಂದು ಆಳವಾದ ಕರೆ ಇದೆ, ಅದು ನಮ್ಮ ಅನನ್ಯ ಉದ್ದೇಶವನ್ನು ಹುಡುಕಲು ಮತ್ತು ನಮ್ಮ ಪ್ರಪಂಚದ ಸುಧಾರಣೆಗೆ ಕೊಡುಗೆ ನೀಡುವಂತೆ ನಮ್ಮನ್ನು ಒತ್ತಾಯಿಸುತ್ತದೆ.
"ಇತರರಿಗೆ ಬೆಲೆಕೊಟ್ಟು ಅವರಿಗೆ ಸೇವೆ ಮಾಡಿ" ಎಂದು ನನ್ನ ತಾಯಿ ನನಗೆ, ನನ್ನ ಸಹೋದರ ಮತ್ತು ನನ್ನ ಸಹೋದರಿಗೆ ಆಗಾಗ್ಗೆ ಹೇಳುತ್ತಿದ್ದರು. ನನ್ನ ತಾಯಿಯಿಂದ ಕಲಿತ ಈ ಪಾಠಗಳು ಈ ವರ್ಷಗಳಲ್ಲಿ ನನ್ನೊಂದಿಗೆ ಉಳಿದು, ದೇವರ ಕರೆಯಲ್ಲಿ ನನಗೆ ಮಾರ್ಗದರ್ಶನ ನೀಡುತ್ತಿವೆ.
1. ಸೇವೆ ಮಾಡುವಂತದ್ದು ನಮ್ಮ ಆತ್ಮೀಕ ವರಗಳನ್ನು ಕಂಡುಹಿಡಿಯಲು ಮತ್ತು ಅಭಿವೃದ್ಧಿಪಡಿಸಿಕೊಳ್ಳಲು ನಮಗೆ ಅವಕಾಶ ನೀಡುತ್ತದೆ
ಅಪೊಸ್ತಲ ಪೌಲನು ಚರ್ಚ್ ಅನ್ನು ಮಾನವ ದೇಹಕ್ಕೆ ಉದಾಹರಿಸಿದನು, ನಮ್ಮ ಭೌತಿಕ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಒಟ್ಟಿಗೆ ಕೆಲಸ ಮಾಡುವ ಅನೇಕ ಅಂಗಗಳನ್ನು ಹೊಂದಿರುವಂತೆಯೇ, ಚರ್ಚ್ ಸಹ ವೈವಿಧ್ಯಮಯ ತಲಾಂತು ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಜನರನ್ನು ಒಳಗೊಂಡಿರುತ್ತದೆ, ಪ್ರತಿಯೊಬ್ಬರೂ ವಿಶಿಷ್ಟ ಕಾರ್ಯವನ್ನು ಪೂರೈಸುತ್ತಾರೆ. ಅಲ್ಲಿ ಪ್ರತಿಯೊಬ್ಬ ಸದಸ್ಯರು ದೇವರ ಉದ್ದೇಶವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. (1 ಕೊರಿಂಥ 12:12)
1 ಕೊರಿಂಥ 12 ರಲ್ಲಿ, ದೇವರ ಯೋಜನೆಯನ್ನು ಸಂಪೂರ್ಣವಾಗಿ ಸಾಧಿಸಲು ಅಗತ್ಯವಿರುವ ಎಲ್ಲಾ ವರಗಳು ಅಥವಾ ಸಾಮರ್ಥ್ಯಗಳನ್ನು ಯಾವುದೇ ಒಬ್ಬ ವ್ಯಕ್ತಿಯು ಹೊಂದಿರುವುದಿಲ್ಲ ಬದಲಾಗಿ, ನಮಗೆ ಪರಸ್ಪರ ಒಬ್ಬರಿಗೊಬ್ಬರ ಅಗತ್ಯವಿದೆ ಎಂದು ಪೌಲನು ಕಲಿಸುತ್ತಾನೆ. ಏಕೆಂದರೆ ನಮ್ಮ ಎಲ್ಲಾ ವೈಯಕ್ತಿಕ ತಲಾಂತುಗಳು ಮತ್ತು ಸಾಮರ್ಥ್ಯಗಳನ್ನು ಒಟ್ಟುಗೂಡಿಸಿ ಸುಂದರವಾದ ಮತ್ತು ಪ್ರಭಾವಶಾಲಿಯಾದ ಸಭೆಯನ್ನು ನಿರ್ಮಿಸಲು ಸಾಧ್ಯವಿದೆ.
ನಾವು ಇತರರಿಗೆ ಸೇವೆ ಸಲ್ಲಿಸುವಾಗ ನಾವು ನಮಗೆ ಅನುಗ್ರಹಿಸಿರುವ ಅನನ್ಯ ವರಗಳನ್ನು ಕಂಡುಕೊಳ್ಳಬಹುದು ಮತ್ತು ಸ್ತೂಲ ದೇಹದ ಪ್ರಯೋಜನಕ್ಕಾಗಿ ಅವುಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
2. ಸೇವೆ ಮಾಡುವುದರಿಂದ ನಮಗೆ ಅದ್ಭುತಗಳನ್ನು ಅನುಭವಿಸಲು ಅವಕಾಶ ಸಿಗುತ್ತದೆ.
ಯೋಹಾನ 2 ರಲ್ಲಿ ಹೇಳಲಾದ ಕಾನಾದಲ್ಲಿ ನಡೆದ ವಿವಾಹದ ಕಥೆಯು ಇತರರಿಗೆ ಸೇವೆ ಸಲ್ಲಿಸುವಂತದ್ದು ಹೇಗೆ ಅದ್ಭುತಗಳನ್ನು ಅನುಭವಿಸಲು ಕಾರಣವಾಗುತ್ತದೆ ಎಂಬುದರ ಪ್ರಬಲ ಜ್ಞಾಪನೆಯಾಗಿದೆ. ಈ ಕಥೆಯಲ್ಲಿ, ಯೇಸು ಮತ್ತು ಆತನ ಶಿಷ್ಯರನ್ನು ಮದುವೆಗೆ ಆಹ್ವಾನಿಸಲಾಯಿತು, ಅಲ್ಲಿ ಆತಿಥೇಯರಿಗೆ ದ್ರಾಕ್ಷಾರಸವು ಸಾಲದೇ ಬಂತು. ಯೇಸುವಿನ ತಾಯಿಯಾದ ಮರಿಯಳು ಆತನಿಗೆ ಸಹಾಯ ಮಾಡುವಂತೆ ಕೇಳಿದಳು ಮತ್ತು ಆರಂಭದಲ್ಲಿ ಇಷ್ಟವಿಲ್ಲದಿದ್ದರೂ, ಕಡೆಗೇ ಆತನು ಸೇವಕರಿಗೆ ದೊಡ್ಡ ಬಾನಿಗಳಲ್ಲಿ ನೀರನ್ನು ತುಂಬುವಂತೆ ಸೂಚಿಸಿದನು.
ಸೇವಕರು ಯೇಸುವಿನ ಸೂಚನೆಗಳನ್ನು ಪಾಲಿಸಿ ನಂತರ ಅವರು ಅತಿಥಿಗಳಿಗೆ ಆ ನೀರನ್ನು ಕುಡಿಯಲು ಕೊಡುವಾಗ, ಅದು ದ್ರಾಕ್ಷಾರಸವಾಗಿ ರೂಪಾಂತರಗೊಂಡಿತ್ತು - ಇದು ದೈವಿಕ ಹಸ್ತಕ್ಷೇಪದ ಕ್ರಿಯೆಯಾಗಿದ್ದು, ಅತಿಥಿಗಳು ಆಶ್ಚರ್ಯಚಕಿತರಾದರು.
ಅತಿಥಿಗಳು ಇಲ್ಲಿ ಅದ್ಭುತದ ಫಲಾನುಭವಿಗಳಾಗಿದ್ದರೂ, ಅದನ್ನು ನೇರವಾಗಿ ಕಂಡವರು ಸೇವಕರು ಎಂಬುದನ್ನು ಗಮನಿಸುವುದು ಇಲ್ಲಿ ಮುಖ್ಯ. ಅವರು ಬಾನಿಗಳನ್ನು ನೀರಿನಿಂದ ತುಂಬಿಸಿ ದ್ರಾಕ್ಷಾರಸವನ್ನು ಕುಡಿಯಕೊಟ್ಟರು ಆದ್ದರಿಂದ ಯೇಸು ಮಾಡಿದ ಅದ್ಭುತದಲ್ಲಿ ಆ ಸೇವಕರು ಸಹೋದ್ಯೋಗಿಗಳಾಗಿದ್ದರು. ನಾವು ಇತರರಿಗೆ ಸೇವೆ ಸಲ್ಲಿಸಿದಾಗ, ದೇವರು ಭೂಮಿಯ ಮೇಲೆ ತನ್ನ ಉದ್ದೇಶಗಳನ್ನು ಸಾಧಿಸಲು ನಮ್ಮನ್ನು ಬಳಸಿಕೊಳ್ಳುವ ಸಾಧ್ಯತೆಗೆ ನಾವು ನಮ್ಮನ್ನು ಒಪ್ಪಿಸಿಕೊಡುತ್ತೇವೆ .
3. ಸೇವೆ ಮಾಡುವುದು ನಾವು ಯೇಸುವಿನಂತೆ ಇರಲು ನಮಗೆ ಸಹಾಯ ಮಾಡುತ್ತದೆ
ಇಂದಿನ ಸಮಾಜದಲ್ಲಿ, ಯಶಸ್ಸಿನ ಕೀಲಿಕೈ ಸಾಧ್ಯವಾದಷ್ಟು ಮತ್ತೊಬ್ಬರಿಂದ ಪಡೆದುಕೊಳ್ಳುವುದು ಎಂಬ ನಂಬಿಕೆಯಿಂದ ವ್ಯಕ್ತಿಗಳು ಪ್ರಭಾವಿತರಾಗುವುದು ಸಾಮಾನ್ಯವಾಗಿದೆ. ಈ ದೃಷ್ಟಿಕೋನವು ಸಾಮಾಜಿಕ ರೂಢಿಗಳು ಮತ್ತು ಮಾಧ್ಯಮಗಳ ಮೂಲಕ ಅನೇಕರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಆದರೆ ನಾವು ಸೇವೆ ಮಾಡುವಾಗ, ಸೇವೆ ಮಾಡುವ ಮೂಲಕ ನಾವು ನಮ್ಮ ಗಮನವನ್ನು ನಮ್ಮ ಕಡೆ ಬಿಟ್ಟು ಇತರರ ಮೇಲೆ ಬದಲಾಯಿಸುತ್ತೇವೆ. ಯೇಸು ಅವರನ್ನು ನೋಡುವಂತೆ ನಾವು ಇತರರನ್ನು ನೋಡಲು ಪ್ರಾರಂಭಿಸುತ್ತೇವೆ. ಮತ್ತು ನಾವು ಇತರರಲ್ಲಿ ಯೇಸುವನ್ನು ನೋಡಲಾರಾಂಭಿಸುತ್ತೇವೆ.
ಆಗ ಅರಸನು ಅವರಿಗೆ ಪ್ರತ್ಯುತ್ತರವಾಗಿ--ನನ್ನ ಈ ಕೇವಲ ಸಹೋದರರಲ್ಲಿ ಒಬ್ಬನಿಗೆ ನೀವು ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದಿರಿ ಎಂದು ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ ಅಂದನು (ಮತ್ತಾಯ 25:40).
4. ಸೇವೆ ಮಾಡುವುದರಿಂದ ನಮ್ಮ ನಂಬಿಕೆ ಹೆಚ್ಚಾಗುತ್ತದೆ.
" ನಮ್ಮಲ್ಲಿ ಕಾರ್ಯ ಮಾಡುವ ಶಕ್ತಿಯ ಪ್ರಕಾರ, ನಾವು ಬೇಡುವುದಕ್ಕಿಂತಲೂ ಅಥವಾ ಯೋಚಿಸುವುದಕ್ಕಿಂತಲೂ ಹೆಚ್ಚಿನದನ್ನು ಮಾಡಲು ಶಕ್ತನಾಗಿರುವ ಆತನಿಗೆ"(ಎಫೆಸ 3:20)
ನಾವು ನಮ್ಮ ಆರಾಮಾಧಾಯಕ ವಲಯಗಳಲ್ಲಿರುವಾಗ, ನಾವು ಈಗಾಗಲೇ ತಿಳಿದಿರುವ ಮತ್ತು ನಾವು ಮಾಡಬಹುದೆಂದು ನಂಬಿರುವ ಬಾಗಿಲುಗಳಿಗೆ ಮಾತ್ರ ನಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ಆದರೆ ನಾವು ನಂಬಿಕೆಯಲ್ಲಿ ಹೆಜ್ಜೆ ಹಾಕುವಾಗ ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸುವಾಗ, ನಾವು ಹೊಸ ಹೊಸ ಅನುಭವಗಳು ಮತ್ತು ಅವಕಾಶಗಳಿಗೆ ನಮ್ಮನ್ನು ತೆರೆದುಕೊಳ್ಳುತ್ತೇವೆ. ಈ ಅನುಭವಗಳ ಮೂಲಕ, ದೇವರು ಹೊಸ ಸಾಮರ್ಥ್ಯಗಳನ್ನು ನಮ್ಮಲ್ಲಿ ಪ್ರಕಟಪಡಿಸಿ ಆತನಲ್ಲಿ ನಮ್ಮ ನಂಬಿಕೆಯನ್ನು ಇನ್ನೂ ಹೆಚ್ಚಿಸಬಹುದು.
ನಮ್ಮ ಆರಾಮ ವಲಯಗಳ ಹೊರಗೆ ಆ ಮೊದಲ ಹೆಜ್ಜೆ ಇಡುವುದು ಮೊದಲು ಭಯಾನಕವೆನಿಸಬಹುದು, ಆದರೆ ನಾವು ದೇವರಲ್ಲಿ ಮತ್ತು ನಮ್ಮ ಜೀವನಕ್ಕಾಗಿ ಇಟ್ಟಿರುವ ಆತನ ಯೋಜನೆಗಳಲ್ಲಿ ನಂಬಿಕೆ ಇಟ್ಟಾಗ, ಹೊಸ ವಿಷಯಗಳನ್ನು ಪ್ರಯತ್ನಿಸಲು ಮತ್ತು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ನಾವು ಧೈರ್ಯವನ್ನು ಕಂಡುಕೊಳ್ಳುತ್ತೇವೆ . ನಾವು ಹಾಗೆ ಮಾಡಿದಾಗ, ನಾವು ಅದುವರಿಗೂ ತಿಳಿದಿರದ ತಲಾಂತುಗಳನ್ನು ಮತ್ತು ಸಾಮರ್ಥ್ಯಗಳನ್ನು ನಾವು ಕಂಡುಕೊಳ್ಳುತ್ತೇವೆ ಮತ್ತು ಇತರರು ತಮ್ಮದೇ ಆದ ಆರಾಮ ವಲಯಗಳಿಂದ ಹೊರಬರಲು ನಾವು ಪ್ರೇರೇಪಿಸಲು ಶಕ್ತರಾಗುತ್ತೇವೆ .
ನಾವು ಆತನ ಶಕ್ತಿಯನ್ನು ನಂಬುವಾಗ ದೇವರು ನಮ್ಮ ಮೂಲಕ ಏನೆಲ್ಲಾ ಮಾಡಬಹುದೆಂದು ನಾವು ನೋಡಲು ಪ್ರಾರಂಭಿಸುವಾಗ, ಆತನು ಮುಚ್ಚಿದ ಬಾಗಿಲುಗಳ ಮೂಲಕ ನಾವು ನಮಗೆ ದಾರಿಯನ್ನು ಬಲವಂತವಾಗಿ ಮಾಡಿಕೊಳ್ಳಲು ಪ್ರಯತ್ನಿಸುವ ಬದಲು ಆತನು ನಮಗಾಗಿ ತೆರೆಯುತ್ತಿರುವ ಬಾಗಿಲುಗಳನ್ನು ಹುಡುಕಲು ಪ್ರಾರಂಭಿಸುತ್ತೇವೆ.
5. ಸೇವೆ ಮಾಡುವುದು ಸ್ವಯಂ ನಿಮಗೇ ಒಳ್ಳೆಯದು.
ಸೇವೆ ಮಾಡುವಂತದ್ದು ಸೇವೆ ಸಲ್ಲಿಸುತ್ತಿರುವ ಜನರಿಗೆ ಅಥವಾ ಸಂಸ್ಥೆಗಳಿಗೆ ಮಾತ್ರವಲ್ಲದೆ ತಮ್ಮ ಸಮಯ ಮತ್ತು ತಲಾಂತುಗಳನ್ನು ಸ್ವಯಂಸೇವಕರಾಗಿ ನೀಡುವ ವ್ಯಕ್ತಿಗಳಿಗೂ ಪ್ರಯೋಜನಕಾರಿ ಎಂದು ಸಂಶೋಧನೆ ನಿರಂತರವಾಗಿ ತೋರಿಸಿದೆ. ಸ್ವಯಂಸೇವೆಯು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಸೇವೆ ಮಾಡುವುದು ನಮ್ಮನ್ನು ಚಿಂತೆಗಳಿಂದ ದೂರವಿರಿಸಲು ಸಹ ಕಾರಣವಾಗಬಹುದು. ನಾವು ಇತರರ ಅಗತ್ಯತೆಗಳು ಮತ್ತು ಯೋಗಕ್ಷೇಮದ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಾಗ, ನಾವು ನಮ್ಮ ಸ್ವಂತ ಸಮಸ್ಯೆಗಳು ಅಥವಾ ಒತ್ತಡಗಳ ಮೇಲೆ ನಮ್ಮ ದೃಷ್ಟಿ ಕೇಂದ್ರೀಕರಿಸುವ ಸಾಧ್ಯತೆ ಕಡಿಮೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸೇವೆ ಮಾಡುವುದು ಸ್ವ-ಆರೈಕೆಯ ಪ್ರಬಲ ರೂಪವಾಗಿದೆ.
ಈ ಎಲ್ಲಾ ಪ್ರಯೋಜನಗಳ ಹೊರತಾಗಿಯೂ, ನಮ್ಮಲ್ಲಿ ಅನೇಕರು ಇನ್ನೂ ಸೇವೆ ಮಾಡದಿರಲು ನೆಪಗಳನ್ನು ಕಂಡುಕೊಳ್ಳುತ್ತಾರೆ. ನಮಗೆ ಸಾಕಷ್ಟು ಸಮಯವಿಲ್ಲ, ನಮ್ಮ ತಲಾಂತುಗಳು ಉಪಯುಕ್ತವಾದವಲ್ಲ ಅಥವಾ ಎಲ್ಲಿಂದ ಪ್ರಾರಂಭಿಸಬೇಕೆಂದು ನಮಗೆ ತಿಳಿಯುತ್ತಿಲ್ಲ ಎಂದು ನಮಗೆ ಅನಿಸಬಹುದು. ಆದಾಗ್ಯೂ, ಈ ನೆಪಗಳು ಹೆಚ್ಚಾಗಿ ಬರೀ - ನೆಪಗಳು ಮಾತ್ರವೇ. ನಮ್ಮ ಉತ್ಸಾಹ ಮತ್ತು ಆಸಕ್ತಿಗಳಿಗೆ ಹೊಂದಿಕೆಯಾಗುವ ಸಣ್ಣ ಹೆಜ್ಜೆಗಳನ್ನು ಇಡುವ ಮೂಲಕ ಮತ್ತು ಸೇವೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ, ದೇವರ ರಾಜ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಾಗ ಸೇವೆ ಮಾಡುವ ಅನೇಕ ಪ್ರಯೋಜನಗಳನ್ನು ನಾವು ಅನುಭವಿಸಬಹುದು.
Bible Reading: 1 Sam15-16
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀವು ನನಗೆ ಅನನ್ಯ ವರಗಳು ಮತ್ತು ತಲಾಂತುಗಳನ್ನು ನೀಡಿದ್ದೀರಿ ಎಂದು ಒಪ್ಪಿಕೊಳ್ಳುತ್ತಾ ಕೃತಜ್ಞತಾಪೂರ್ವಕ ಹೃದಯದಿಂದ ನಾನು ಇಂದು ನಿಮ್ಮ ಮುಂದೆ ಯೇಸುನಾಮದಲ್ಲಿ ಬರುತ್ತಿದ್ದೇನೆ. ನನ್ನ ಆರಾಮಾ ವಲಯಗಳಿಂದ ಹೊರಬಂದು ಈ ವರಗಳನ್ನು ಇತರರಿಗೆ ಸೇವೆ ಸಲ್ಲಿಸುವುದಕೋಸ್ಕರ ಮತ್ತು ನಿಮ್ಮ ರಾಜ್ಯವನ್ನು ನಿರ್ಮಿಸುವುದಕೋಸ್ಕರ ಬಳಸಲು ಧೈರ್ಯ ಮತ್ತು ಇಚ್ಛೆಯನ್ನು ಅನುಗ್ರಹಿಸಬೇಕೆಂದು ಯೇಸುನಾಮದಲ್ಲಿ ಬೇಡುತ್ತೇನೆ . ತಂದೆಯೇ, ಇದುವರೆಗೂ ಸೇವೆ ಮಾಡದಿದ್ದಕ್ಕಾಗಿ ನಾನು ಕೊಟ್ಟ ನೆಪಗಳನ್ನು ಯೇಸುನಾಮದಲ್ಲಿ ನಾನು ಒಪ್ಪಿಕೊಳ್ಳುತ್ತೇನೆ. ಈ ನೆಪಗಳನ್ನು ಜಯಿಸಲು ನನಗೆ ಸಹಾಯ ಮಾಡಿ. ತಂದೆಯೇ, ನಾನು ನಿನಗೆ ಮತ್ತು ನಿನ್ನ ಜನರಿಗೆ ಸೇವೆ ಮಾಡುವಾಗ, ನನಗೆ ಹೊಸ ಹೊಸ ಪ್ರಕಟನೆಗಳನ್ನು . ಯೇಸುವಿನ ಹೆಸರಿನಲ್ಲಿ ಪ್ರಕಟಪಡಿಸಿ.ಆಮೆನ್!
Join our WhatsApp Channel

Most Read
● ಪರಲೋಕದ ವಾಗ್ದಾನ● ನಮ್ಮನ್ನಲ್ಲ.
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ದೈನಂದಿನ ಮನ್ನಾ
● ಪ್ರೀತಿಯ ಹುಡುಕಾಟ
● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ಕೃತಜ್ಞತೆಯ ಪಾಠ
ಅನಿಸಿಕೆಗಳು