ಅನುದಿನದ ಮನ್ನಾ
ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Saturday, 23rd of December 2023
1
0
450
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನಿಮ್ಮ ಸಭೆಯನ್ನು ಕಟ್ಟಿರಿ
"ಮತ್ತು ನಾನೂ ನಿನಗೆ ಒಂದು ಮಾತನ್ನು ಹೇಳುತ್ತೇನೆ, ಅದೇನಂದರೆ - ನೀನು ಪೇತ್ರನು, ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳಲೋಕದ ಬಲವು ಅದನ್ನು ಸೋಲಿಸಲಾರದು. "(ಮತ್ತಾಯ 16:18).
ಸಭೆ ಎಂಬುದು ವಿಶ್ವಾಸಿಗಳು ಅಂದರೆ ಕರೆಯಲ್ಪಟ್ಟವರು ಕೂಡುವ ಸಂಘವಾಗಿದೆ. ಅನೇಕರಿಗೆ ಸಭೆಯ ಕುರಿತು ಮಿತವಾದಂತಹ ತಿಳುವಳಿಕೆ ಇದೆ. ಹಾಗಾಗಿ ಸಭೆಯ ಕಟ್ಟೋಣದ ಕಾರ್ಯವು ಸಹ ಮಿತವಾಗಿ ಹೋಗಿದೆ. ಸಭೆಯ ಅರ್ಥಕ್ಕೂ ಕಟ್ಟಡದ ಅರ್ಥಕ್ಕೂ ಅಂತರವಿದೆ. ಎಲ್ಲರೂ ಒಂದಾಗಿ ಕೂಡಿ ಆರಾಧಿಸುವ ಸ್ಥಳವೇ 'ಸಭೆ' ಎಂದು ಎಂದಿಗೂ ಯೋಚಿಸಬೇಡಿ.
ಸಭೆ ಎಂಬ ಪದವು ಗ್ರೀಕ್ ಭಾಷೆಯ 'ಎಕ್ಲೇಶಿಯ' ಎಂಬ ಪದದ ಮೂಲದಿಂದ ಬಂದಿದೆ. ಅದರ ಅರ್ಥ ಲೋಕದಿಂದ ಹೊರಕ್ಕೆ ಕರೆಯಲ್ಪಟ್ಟವರ ಸಂಘ ಎಂದು. ನಾವು ಕರ್ತನಿಂದ ವಿಮೋಚಿಸಲ್ಪಟ್ಟವರು ಅಂಧಕಾರದ ದೊರೆತನದಿಂದ ಅತಿಶಯವಾದ ಬೆಳಕಿಗೆ ಕರೆಯಲ್ಪಟ್ಟವರು ಆಗಿದ್ದೇವೆ. (1ಪೇತ್ರ 2:9)
ಈ ಭೂಮಿಯ ಮೇಲೆ ವಿಶ್ವಾಸಿಗಳೇ ಸಭೆಯಾಗಿದ್ದಾರೆ. ಮತ್ತು ಆ ಸಭೆಯು ಕ್ರಿಸ್ತನ ದೇಹವಾಗಿದೆ. ಅನೇಕ ವಿಧವಾದ ಬೋಧನೆಗಳು ಇಂದು ಕ್ರೈಸ್ತರನ್ನು ಅನೇಕ ಪಂಗಡಗಳಾಗಿ ವಿಭಜಿಸಿಬಿಟ್ಟಿದೆ. ಎಲ್ಲಾ ವಿಶ್ವಾಸಿಗಳು ಯೇಸುಕ್ರಿಸ್ತನಲ್ಲಿ ಒಂದುಗೂಡುವ ಬದಲು ತಮ್ಮ ಪಂಗಡಗಳ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಚಿಂತೆಯಲ್ಲೇ ಇದ್ದಾರೆ. ನಾವೆಲ್ಲರೂ 'ವಿಶ್ವಾಸಿಗಳು' ಎಂಬ ಸ್ಥಾನಕ್ಕೆ ಒಗ್ಗಟ್ಟಾಗಿ ಕೂಡಿ ಬರಬೇಕು. ಕ್ರೈಸ್ತರೆಲ್ಲಾ ಹೀಗೆ ಒಗ್ಗೂಡಬೇಕೆಂದರೆ ಪ್ರಾರ್ಥನೆಯು ಬೇಕೇ ಬೇಕು.
ನಾವು ನೀವೆಲ್ಲ ಭೌತಿಕ ಆಯಾಮದಲ್ಲಿ ದೇವರ ಹೆಜ್ಜೆಯ ಜಾಡನ್ನು ಹಿಂಬಾಲಿಸುವವರಾಗಿದ್ದೇವೆ. ಹೀಗಿರುವುದರಿಂದ ನಮ್ಮ ದೇಶಗಳಲ್ಲಿ ದೇವರು ತನ್ನ ಸಭೆಯನ್ನು ಕಟ್ಟಲು ನಾವೆಲ್ಲರೂ ತಂತ್ರೋಪಾಯವಾಗಿ ಪ್ರಾರ್ಥಿಸುವ ಅಗತ್ಯವಿದೆ. ದೇವರು ನಮ್ಮ ದೇಶದಲ್ಲಿ ಏನೆಲ್ಲಾ ಮಾಡಬೇಕೆಂದು ನಾವು ಬಯಸುತ್ತೇವೋ ಆ ಎಲ್ಲಾ ಕಾರಣಗಳಿಗಾಗಿ ನಾವು ಪ್ರಾರ್ಥಿಸಬೇಕು. ಆತನ ಚಿತ್ತವು ಭೂಮಿಯ ಮೇಲೆ ನೆರವೇರುವಂತೆ ಆತನು ಮಾಡಲು ನಮ್ಮ ಪ್ರಾರ್ಥನೆಯೇ ಆತನಿಗೆ ನೀಡುವ ಕಾನೂನು ಬದ್ಧ ಪರವಾನಿಗೆಯಾಗಿದೆ. ಆತನೇ ಹೀಗಾಗಬೇಕೆಂದು ಅಜ್ಞಾಪಿಸಿದ್ದಾನೆ.ಆದರಿಂದ ಆತನ ನಿಯಮಗಳ ಪ್ರಕಾರವೇ ಭೂಮಿಯ ಮೇಲೆ ಕಾರ್ಯಗಳು ಜರಗುತ್ತವೆ ಎಂಬುದನ್ನು ನಾವು ಅರಿತುಕೊಂಡಿರಬೇಕು.
ಕ್ರೈಸ್ತರೆಲ್ಲ ಒಟ್ಟುಗೂಡಿಬಿಟ್ಟರೆ ಅನೇಕರ ಜೀವಿತದ ಮೇಲೆ ಹಾಕಲ್ಪಟ್ಟಿರುವ ಅಂಧಕಾರದ ರಾಜ್ಯದ ದೊರೆತನದ ಹಿಡಿತಗಳು ಕಳಚಿ ಬೀಳುತ್ತವೆ. ಆಗ ದೇಶವು ಅದ್ಭುತವಾದ ರೂಪಾಂತರವನ್ನು ಹೊಂದುತ್ತದೆ. ನಮ್ಮ ಶಾಲೆಗಳು, ರಾಜಕೀಯ, ಮಾಧ್ಯಮ ಮತ್ತು ಕುಟುಂಬಗಳು ಈ ಒಂದು ಅದ್ಭುತವಾದ ರೂಪಾಂತರವನ್ನು ಆನಂದಿಸಬಹುದು.
ಸಭೆಯನ್ನು ಎರಡು ರೀತಿಯಾಗಿ ವರ್ಗೀಕರಿಸಬಹುದು
1. ಸಾರ್ವತ್ರಿಕ ಸಭೆ.
ಇಡೀ ಲೋಕದಲ್ಲಿರುವ ಎಲ್ಲಾ ದೇಶಗಳಲ್ಲಿರುವ ವಿಶ್ವಾಸಿಗಳಿಂದ ಕೂಡಿದ ಸಭೆ.
2. ಸ್ಥಳೀಯ ಸಭೆ.
ಸ್ಥಳೀಯ ಸಭೆ ಎಂಬುದು ದೇವರನ್ನು ಆರಾಧಿಸಲು ಪ್ರಾರ್ಥಿಸಲು ಸಹೋದರ ಅನ್ಯೂನ್ಯತೆಯಿಂದ ಕೂಡಲು ಮತ್ತು ದೇವರ ಕುರಿತು ತಿಳಿದುಕೊಳ್ಳುವುದಕ್ಕಾಗಿ ವಿಶ್ವಾಸಿಗಳು ಕೂಡುವಂತಹ ನಿರ್ದಿಷ್ಟ ಜಾಗತಿಕ ಪ್ರದೇಶವಾಗಿದೆ.
ಸಭೆಯು ಹೀಗೂ ಸಹ ಕರೆಯಲ್ಪಡುತ್ತದೆ.
1. ದೇವರ ಮನೆ (1ತಿಮೋತಿ 3:15)
2. ಕ್ರಿಸ್ತನ ಮದಲಗಿತ್ತಿ (ಪ್ರಕಟಣೆ 19:6-9,21:2,2ಕೊರಿಯಂತೆ 11:2)
3. ಕ್ರಿಸ್ತನ ದೇಹ (ಎಫಸ್ಸೆ 1:22-23)
4. ದೇವರ ಆಲಯ(1ಪೇತ್ರ 2:5, ಎಫಸ್ಸೆ 2:19-22)
5. ದೇವರ ಹಿಂಡು (1ಪೇತ್ರ 5:2-3)
6. ದೇವರ ದ್ರಾಕ್ಷಿತೋಟ (ಯೆಶಾಯ 5:1-7)
7. ವಿಶ್ವಾಸಿಗಳ ಮನೆ (ಗಲಾತ್ಯ 6:10)
ಸಭೆಯ ಜವಾಬ್ದಾರಿಗಳು.
ಸಭೆಯ ಜವಾಬ್ದಾರಿ ಎಂಬುದು ಒಂದು ಧಾರ್ಮಿಕ ಆರಾಧನೆಗೆ ಮಾತ್ರ ಸೀಮಿತವಾಗಿರದೆ ಅದಕ್ಕಿಂತ ಹೆಚ್ಚಾಗಿ ನಾವು ಸಮಾಜದ ಮೇಲೆ ಪ್ರಭಾವ ಬೀರುವಂತಾದ್ದಾಗಿದೆ
ಹಾಗಾದರೆ ಸಭೆಯ ಜವಾಬ್ದಾರಿಗಳೇನು?
1. ಆರಾಧಿಸುವುದು.
"ಆದರೆ ಪವಿತ್ರಾತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ "(ಎಫೆಸದವರಿಗೆ 5:19)
2. ಪ್ರಭಾವ ಬೀರುವಿಕೆ.
ಪ್ರಭಾವ ಬೀರಬೇಕು ಎಂದರೆ ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಬೇಕು ಎಂಬ ಅರ್ಥವಲ್ಲ ಬದಲಾಗಿ ನಾವು ಸಮಾಜದಲ್ಲಿ ಉತ್ತಮ ಆದರ್ಶ ವ್ಯಕ್ತಿಗಳಾಗಿ ಜೀವಿಸಿ ಕ್ರಿಸ್ತನ ಜೀವಿತವನ್ನು ಪ್ರದರ್ಶಿಸಬೇಕು.
"ಯೌವನಸ್ಥನೆಂದು ನಿನ್ನನ್ನು ಅಸಡ್ಡೆಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು."(1 ತಿಮೊಥೆಯನಿಗೆ 4:12).
"ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. 15 ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು."(ಮತ್ತಾಯ 5:14-15 )
3. ಜೀವಿತಗಳನ್ನು ಮಾರ್ಪಡಿಸುವುದು.
ನಾವು ಈ ಲೋಕದ ಮನುಷ್ಯರನ್ನು ಅಂಧಕಾರದ ರಾಜ್ಯದ ದೊರೆತನದಿಂದ ಬಿಡಿಸಿ ಬೆಳಕಿನ ರಾಜ್ಯದವರನ್ನಾಗಿ ಮಾಡಬೇಕು. ಈ ಲೋಕದ ಮನುಷ್ಯರ ನಡುವೆ ನಾವು ಕ್ರಿಸ್ತನ ಸುವಾರ್ತೆಗೂ ಮತ್ತು ದೇವರ ರಾಜ್ಯಕ್ಕೂ ಸಾಕ್ಷಿಗಳಾಗಿ ಜೀವಿಸಬೇಕು.
"ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು ಮೊದಲು ಯೆಹೂದ್ಯರಿಗೆ ಆಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ."
(ರೋಮಾಪುರದವರಿಗೆ 1:16).
4. ಸೈತಾನನ ಕಾರ್ಯಗಳನ್ನು ನಾಶಪಡಿಸಬೇಕು.
ಈ ಭೂಮಿಯ ಮೇಲೆ ಮನುಷ್ಯರ ಜೀವಿತದಲ್ಲಿ ಸೈತಾನನು ಮಾಡುವ ಕ್ರಿಯೆಗಳನ್ನು ಕಟ್ಟಿ ಹಾಕುವ, ಬಿಡಿಸುವ, ನಾಶಪಡಿಸುವ ಕಾರ್ಯವನ್ನು ನಾವು ಮಾಡಬೇಕು. ನಮ್ಮ ಸಮಾಜದ ಸ್ವಸ್ತತೆಗಾಗಿ, ಸುರಕ್ಷತೆಗಾಗಿ, ಬಿಡುಗಡೆಗಾಗಿ ಮತ್ತು ಸಹಾಯಕ್ಕಾಗಿ ದೇವರ ಅಗತ್ಯ ತುಂಬಾ ಇದೆ. ನಾವು ಪೌಳಿಯ ಒಡಕಿನಲ್ಲಿ ನಿಲ್ಲದಿದ್ದರೆ ದುಷ್ಟನಾದ ಸೈತಾನನು ಏನು ಮಾಡಿದರೂ ಅವಿಶ್ವಾಸಿಗಳಾದ ಮನುಷ್ಯರು ಅದನ್ನು ಪ್ರತಿರೋಧಿಸಲು ಅವರ ಕೈಯಲ್ಲಿ ಸಾಧ್ಯವೇ ಇಲ್ಲ.
"ಪಾಪಮಾಡುವವನು ಸೈತಾನನಿಂದ ಹುಟ್ಟಿದವನಾಗಿದ್ದಾನೆ; ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನಲ್ಲಾ. ಸೈತಾನನ ಕೆಲಸಗಳನ್ನು ಲಯ ಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು."(1 ಯೋಹಾನನು 3:8)
5.ಮಧ್ಯಸ್ಥಿಕೆ ಪ್ರಾರ್ಥನೆ.
ವಿಶ್ವಾಸಿಗಳಾದ ನಮಗೆ ದೇಶವನ್ನು ಆಳುವವರಿಗೋಸ್ಕರವೂ ಅಧಿಕಾರಿಗಳಿಗೋಸ್ಕರವೂ ಪ್ರಾರ್ಥಿಸಬೇಕೆಂಬ ಆಜ್ಞೆ ನಮಗಿದೆ. ಯಾಕೆಂದರೆ ಇವರುಗಳೇ ಸೈತಾನನ ಪ್ರಪ್ರಥಮ ಗುರಿಯಾಗಿರುತ್ತಾರೆ. ಸೈತಾನನು ಅವರನ್ನು ತನಗೆ ವಶಪಡಿಸಿಕೊಂಡುಬಿಟ್ಟರೆ ವಿಶ್ವಾಸಿಗಳಿಗೂ ದೇವರ ರಾಜ್ಯಕ್ಕೂ ಕೆಡುಕು ಉಂಟಾಗುವಂತ ನೀತಿ ನಿಯಮಗಳನ್ನು ರೂಪಿಸುವಂತೆ ಅವರನ್ನು ಪ್ರೇರೇಪಿಸಿ ಬಿಡುತ್ತಾನೆ. ಆದರೆ ನಮ್ಮ ಪ್ರಾರ್ಥನೆಗಳು ಅವರಿಗೆ ಸುರಕ್ಷಾ ಕವಚ ವಾಗಿದ್ದು ದೇಶದ ಹಿತಕ್ಕಾಗಿಯೂ ದೇವರ ಸಭೆಗಾಗಿಯೂ ಅವರು ದೇವರ ಚಿತ್ತದ ಪ್ರಕಾರ ಆಳ್ವಿಕೆ ನಡೆಸುವಂತೆ ಮಾಡುತ್ತದೆ.
"ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. 2 ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. 3 ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. 4 ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ."(1 ತಿಮೊಥೆಯನಿಗೆ 2:1-4 )
6.ನಮ್ಮ ನಡವಳಿಕೆಗಳು ಪ್ರೀತಿಯಿಂದ ಕೂಡಿರ ಬೇಕು.
ನಾವು ಎಲ್ಲಾ ಅವಿಶ್ವಾಸಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಅವರ ಬಳಿ ಇಲ್ಲದ್ದು ನಮ್ಮ ಬಳಿ ಇರುವಂತದ್ದು ಅದು 'ದೇವರ ಪ್ರೀತಿ' ಎಂಬ ಅಂಶವು. ನಾವು ಹೆಚ್ಚು ಹೆಚ್ಚಾಗಿ ದೇವರ ಪ್ರೀತಿಯನ್ನು ಅವರಿಗೆ ತೋರಿಸುವಾಗ ಅವರು ಹೆಚ್ಚು ಹೆಚ್ಚಾಗಿ ದೇವರಿಗೆ ಆಕರ್ಷಿತರಾಗುತ್ತಾರೆ.
"ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ."(ಎಫೆಸದವರಿಗೆ 5:2).
7. ಅಧಿಕಾರ.
ಭೂಮಿಯ ಮೇಲೆ ದೇವರ ರಾಜ್ಯವನ್ನು ಸ್ಥಾಪಿಸುವ ಮತ್ತು ದೇವರ ರಾಜ್ಯವನ್ನು ವಿಸ್ತರಿಸುವ ಅಧಿಕಾರ ಸಭೆಗೆ ಇದೆ.
" ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವದೂ ನಿಮಗೆ ಕೇಡುಮಾಡುವದೇ ಇಲ್ಲ."(ಲೂಕ 10:19).
ನಮ್ಮ ದೇಶಕ್ಕಾಗಿ ಪ್ರಾರ್ಥನೆ ಮಾಡುವುದು ವಿಶ್ವಾಸಿಗಳಾಗಿ ನಮ್ಮ ಕರ್ತವ್ಯವಾಗಿದೆ. ದೇಶದ ಶಾಂತಿ ಮತ್ತು ಆತ್ಮಿಕ ಪ್ರಗತಿಯು ನಮ್ಮನ್ನು ಸಹ ಶಾಂತಿ ಮತ್ತು ಪ್ರಗತಿ ಎಡೆಗೆ ನಡೆಸುತ್ತದೆ.
ನರಕದ ದ್ವಾರಗಳು ಅದರ ಶಕ್ತಿಗನುಸಾರವಾಗಿ ಎಲ್ಲಾ ರೀತಿಯಲ್ಲೂ ಸಭೆಗೆ ವಿರುದ್ಧವಾಗಿ ಹೋರಾಡುತ್ತಲೇ ಇರುತ್ತವೆ. ಆದರೆ ನಾವು ಕರ್ತನಲ್ಲಿ ಬಲವಾಗಿದ್ದು ಆತನ ಅದ್ಭುತವಾದ ಬಲದ ಮೂಲಕ ನಂಬಿಕೆಯ ಒಳ್ಳೆಯ ಹೋರಾಟವನ್ನು ಮಾಡಬೇಕು.
ಹೆಚ್ಚಿನ ಅಧ್ಯಯನಕ್ಕಾಗಿ :ಎಫಸ್ಸೆ 1:22-23,1 ಕೊರಿಯಂತೆ 12:12-27.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ, ಭಾರತ ದೇಶದಲ್ಲಿ ನಿನ್ನ ಸಭೆಯು ಯೇಸು ನಾಮದಲ್ಲಿ ಕಟ್ಟಲ್ಪಡಲಿ. (ಮತ್ತಾಯ 16:18)
2. ತಂದೆಯೇ ನಮ್ಮ ದೇಶಕ್ಕಾಗಿ ಪ್ರಾರ್ಥಿಸುವ ಭಾರವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು (1ತಿಮೋತಿ 2:1-2)
3. ನಾನು ಇತರ ಕ್ರೈಸ್ತದೊಂದಿಗೆ ನನ್ನ ನಂಬಿಕೆಯನ್ನು ಕೂಡಿಸಿ ಅಂಧಕಾರ ರಾಜ್ಯದ ಬಲವನ್ನು ಮುರಿಯಲು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. (2ಕೊರಿಯಂತೆ 10:14).
4. ಕರ್ತನೇ, ಭಾರತ ದೇಶದಲ್ಲಿ ನಿನ್ನ ರಾಜ್ಯವು ಪ್ರಗತಿಯನ್ನು ಹೊಂದುವಂತೆ ನಮ್ಮ ಭಾರತ ದೇಶದ ಪ್ರತೀ ಸಭೆಯ ಮೇಲೂ ಯೇಸು ನಾಮದಲ್ಲಿ ನಿನ್ನ ಪ್ರೀತಿಯನ್ನು ವರ್ಷಿಸು. (ಯೋಹಾನ 17:21)
5. ಭಾರತ ದೇಶದ ಪ್ರತಿ ಪಟ್ಟಣವನ್ನು ರಾಜ್ಯಗಳನ್ನು ಯೇಸುಕ್ರಿಸ್ತನಿಗಾಗಿ ಯೇಸು ನಾಮದಲ್ಲಿ ವಶಪಡಿಸಿಕೊಳ್ಳುತ್ತೇವೆ. (ಯೆಹೋಶುವ 1:3).
6. ಕ್ರಿಸ್ತನ ಸಭೆಗೂ ದೇವರ ತತ್ವಗಳಿಗೂ ಮತ್ತು ಮೌಲ್ಯಗಳಿಗೂ ವಿರೋಧವಾಗಿ ಏಳುವ ಯಾವುದೇ ಕಾನೂನು ಆಗಲಿ ಯೇಸು ನಾಮದಲ್ಲಿ ಅದು ಹಿಂದಿರುಗಿ ಹೋಗಲಿ.(ಜ್ಞಾನೋಕ್ತಿ 29:2)
7. ನಮ್ಮ ಪಟ್ಟಣಗಳ ಮೇಲೂ ಮತ್ತು ದೇಶದ ಮೇಲೂ ಯೇಸು ನಾಮದಲ್ಲಿ ದೇವರ ಶಾಂತಿಯು ಬಿಡುಗಡೆ ಯಾಗಲಿ. (ಫಿಲಿಪ್ಪಿ 4:7).
8.ತಂದೆಯೇ, ನಮ್ಮ ಪಟ್ಟಣದಲ್ಲೂ ನಮ್ಮ ದೇಶದಲ್ಲೂ ನಿಮ್ಮ ಚಿತ್ತವೇ ಯೇಸುನಾಮದಲ್ಲಿ ನೆರವೇರಲಿ . ( ಮ್ಯಾಥ್ಯೂ 6:10)
9. ತಂದೆಯೇ ಪಾಸ್ಟರ್ ಮೈಕಲ್ ಅವರೂ ಅವರ ಕುಟುಂಬದವರೂ ಮತ್ತು ಅವರ ತಂಡದವರೂ ಎಲ್ಲಾ ಸಮಯಗಳಲ್ಲೂ ಎಲ್ಲಾ ಪರಿಸ್ಥಿತಿಗಳಲ್ಲೂ ನಿನ್ನ ವಾಕ್ಯವನ್ನು ಸಾರಲು ಅವರಿಗೆ ಧೈರ್ಯವನ್ನು ಬಲವನ್ನು ಯೇಸು ನಾಮದಲ್ಲಿ ಅನುಗ್ರಹಿಸು. ( ಅಪೋಸ್ತಲರ ಕೃತ್ಯಗಳು 4:29).
10.ತಂದೆಯೇ ಕರುಣಾಸಾಧನ್ ಸಭೆಯ ಸೇವೆಯಲ್ಲಿ ಎಲ್ಲಾ ವೈಜ್ಞಾನಿಕ ಜ್ಞಾನವನ್ನು ಮೂಕ ವಿಸ್ಮಿತವನ್ನಾಗಿ ಮಾಡುವ ಮನುಷ್ಯರ ಎಲ್ಲಾ ಆಲೋಚನೆಗಳನ್ನು ಜ್ಞಾನವನ್ನು ವಿಸ್ಮಯಗೊಳಿಸುವ ಅದ್ಭುತ ಕಾರ್ಯಗಳು ಸೂಚಕ ಕಾರ್ಯಗಳು ಜರುಗಬೇಕೆಂದು ಯೇಸು ನಾಮದಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇವೆ. ( ಅಪೋಸ್ತಲ ಕೃತ್ಯ 2:22)
11. ತಂದೆಯೇ ಪಾಸ್ಟರ್ ಮೈಕಲ್ ಅವರಿಗೂ ಅವರ ಕುಟುಂಬದವರಿಗೂ ಮತ್ತು ಅವರ ತಂಡದವರಿಗೂ ಅದ್ಭುತವಾದ ಜ್ಞಾನವಿವೇಕಗಳನ್ನು ಯೇಸು ನಾಮದಲ್ಲಿ ಅನುಗ್ರಹಿಸಿ ಆಶೀರ್ವದಿಸಿ ಅದರಿಂದ ನೂತನವಾದ ಉಜ್ಜೀವನ ಉಂಟಾಗುವಂತೆಯೂ ಸಭೆಯು ಅಭಿವೃದ್ಧಿಯಾಗುವಂತೆಯೂ ಯೇಸು ನಾಮದಲ್ಲಿ ಮಾಡಿ. ( ಯಾಕೋಬ 1:5)
Join our WhatsApp Channel
Most Read
● ಇನ್ನು ಸಾವಕಾಶವಿಲ್ಲ.● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಪುರುಷರು ಏಕೆ ಪತನಗೊಳ್ಳುವರು -1
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಒಳಕೋಣೆ
ಅನಿಸಿಕೆಗಳು