ಅನುದಿನದ ಮನ್ನಾ
2
0
72
ಯುದ್ಧಕ್ಕಾಗಿ ತರಬೇತಿ - 1.
Monday, 14th of April 2025
Categories :
ಆಧ್ಯಾತ್ಮಿಕ ಯುದ್ಧ(Spiritual Warfare)
ತಯಾರಿ (Preparation)
"ಕೀಷನ ಮಗ ಸೌಲನ ನಿಮಿತ್ತ ದಾವೀದನು ಇನ್ನೂ ಬಚ್ಚಿಟ್ಟುಕೊಂಡಿರುವಾಗ, ಚಿಕ್ಲಗಿನಲ್ಲಿರುವ ದಾವೀದನ ಬಳಿಗೆ ಬಂದವರು ಇವರೇ. ಅವರು ಪರಾಕ್ರಮಶಾಲಿಗಳಲ್ಲಿ ಸೇರಿದವರೂ, ಯುದ್ಧಕ್ಕೆ ಸಹಾಯಕರೂ. ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ ನಿಪುಣರಾಗಿದ್ದು , ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು".(1 ಪೂರ್ವಕಾಲವೃತ್ತಾಂತ 12:1-2)
ದಾವೀದನನ್ನು ಹಿಂಬಾಲಿಸಿದ ಪುರುಷರ ಪ್ರಮುಖ ಗುಣಲಕ್ಷಣಗಳಲ್ಲಿ ಒಂದು ಅವರನ್ನು ಯುದ್ಧದಲ್ಲಿ ಅವರು ತೊಡಗಿಸಿಕೊಳ್ಳುವ ಸಾಮರ್ಥ್ಯವಾಗಿತ್ತು. ಅವರು ತಮ್ಮ ಬಲ ಮತ್ತು ಎಡಗೈ ಎರಡನ್ನೂ ಬಳಸಿಕೊಂಡು ಕಲ್ಲುಗಳನ್ನು ಪರಿಣಾಮಕಾರಿಯಾಗಿ ಎಸೆಯುತ್ತಾ ಹೇಗೆ ಯುದ್ಧ ಮಾಡಬೇಕೆಂಬುದನ್ನು ಕಲಿತಿದ್ದರು.
ನೀವು ಎಂದಾದರೂ ಚೆಂಡನ್ನು ಎಸೆದಿದ್ದರೆ, ನಿಮ್ಮಲ್ಲಿ ಯಾವ ಕೈ ಬಲವುಳ್ಳದ್ದೋ ಆ ಕೈಯಿಂದ ನಿಖರವಾಗಿ ಗುರಿಯಿಟ್ಟು ಒಡೆಯುವುದು ನಿಮಗೆ ಸುಲಭ ಎಂಬುದು ನಿಮಗೆ ತಿಳಿದಿರುತ್ತದೆ, ಆದರೆ ನಿಮ್ಮ ಬಲವಿಲ್ಲದ ಕೈಯನ್ನು ಬಳಸಿಕೊಂಡು ಏನನ್ನಾದರೂ ನಿಖರವಾಗಿ ಎಸೆಯುವುದು ನಿಮಗೆ ಹೆಚ್ಚು ಸವಾಲಿನ ಸಂಗತಿಯಾಗಿರುತ್ತದೆ ಸರಿ ತಾನೇ.
ಆದಾಗ್ಯೂ, ದಾವೀದನನ್ನು ಹಿಂಬಾಲಿಸಿದ ಪುರುಷರು ಎರಡೂ ಕೈಗಳಿಂದಲೂ ಪರಿಣಾಮಕಾರಿಯಾಗಿ ಕಲ್ಲನ್ನು ಎಸೆಯುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಂಡಿದ್ದರು! ಅಂತಹ ಕೌಶಲ್ಯಗಳನ್ನು ಪಡೆಯಲು ತಿಂಗಳುಗಳ ಕಾಲದ ತರಬೇತಿ ಮತ್ತು ಅಭ್ಯಾಸವನ್ನು ಅವರು ತೆಗೆದುಕೊಂಡಿರಬೇಕಾಗಿರುತ್ತದೆ.
"ಆಟಗಳಲ್ಲಿ ಪಂದ್ಯಕ್ಕೆ ಭಾಗವಹಿಸುವವರೆಲ್ಲರೂ, ಕಠಿಣವಾದ ತರಬೇತಿಯನ್ನು ಹೊಂದುತ್ತಾರೆ. ಅವರು ಬಹುದಿನ ಉಳಿಯದೇ ಇರುವ ಕಿರೀಟವನ್ನು ಪಡೆಯುವುದಕ್ಕೆ ಇದನ್ನು ಮಾಡುತ್ತಾರೆ. ಆದರೆ ನಾವು ಎಂದೆಂದಿಗೂ ಉಳಿಯುವ ಕಿರೀಟ ಹೊಂದಲು ಹೋರಾಡುವವರಾಗಿದ್ದೇವೆ." ಎಂದು ಅಪೊಸ್ತಲನಾದ ಪೌಲನು 1 ಕೊರಿಂಥ 9:25 ರಲ್ಲಿ ಬರೆಯುತ್ತಾನೆ.
ರಿಯೊದಲ್ಲಿ ನಡೆದ 2016 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಅಮೇರಿಕನ್ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ರವರು ದಿನಕ್ಕೆ ಹಲವಾರು ಗಂಟೆಗಳ ಕಾಲ, ಅಂದರೆ ವಾರದಲ್ಲಿ ಆರು ದಿನಗಳು, ಹೀಗೆ ನಾಲ್ಕು ವರ್ಷಗಳವರೆಗೂ ತರಬೇತಿ ಪಡೆದರು. ಅವರ ತರಬೇತಿಯಲ್ಲಿ ಶಕ್ತಿ ವರ್ದಿಸುವ ಮತ್ತು ದೇಹವನ್ನು ನಮನೀಯಗೊಳಿಸುವ ವ್ಯಾಯಾಮಗಳು ಮತ್ತು ಮಾನಸಿಕ ಸಿದ್ಧತೆಯ ತಂತ್ರಗಳು ಸೇರಿತ್ತು .
ಅದೇ ರೀತಿ, ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಜಮೈಕಾದ ಓಟಗಾರ ಉಸೇನ್ ಬೋಲ್ಟ್, ತನ್ನ ದೇಹವನ್ನು ಸಧೃಡಪಡಿಸಿಕೊಳ್ಳಲು ಮತ್ತು ಪುನರ್ನಿರ್ಮಿಸಿ ಕೊಳ್ಳಲು ಗಂಟೆಗಳ ಸ್ಪ್ರಿಂಟ್ ತರಬೇತಿ, ತೂಕ ಎತ್ತುವಿಕೆ ಮತ್ತು ಚೇತರಿಕೆಯ ಸಮಯವನ್ನು ಒಳಗೊಂಡಿರುವ ಕಟ್ಟುನಿಟ್ಟಾದ ತರಬೇತಿ ನಿಯಮವನ್ನು ಅನುಸರಿಸಿದರು.
ಒಲಿಂಪಿಕ್ ಕ್ರೀಡಾಪಟುಗಳು ತಮ್ಮ ಗರಿಷ್ಠ ಕಾರ್ಯಕ್ಷಮತೆಯನ್ನು ತಲುಪಲು ತಮ್ಮ ತರಬೇತಿಯಲ್ಲಿ ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡಿದಂತೆ, ಆತ್ಮೀಕ ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಯೋಧರಾಗಲು ನಾವು ನಮ್ಮ ಆತ್ಮೀಕ ತರಬೇತಿಯಲ್ಲಿಯೂ ನಮ್ಮ ಪರಿಶ್ರಮ ಹಾಗೂ ಸಮಯವನ್ನು ಹೂಡಿಕೆ ಮಾಡಬೇಕು. ಇಬ್ರಿಯ 12:11 ಹೇಳುವಂತೆ " ಯಾವ ಶಿಕ್ಷೆಯಾದರೂ ಆ ಸಮಯಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ. ತರುವಾಯ, ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನವುಳ್ಳ ನೀತಿಯ ಫಲವನ್ನು ಕೊಡುತ್ತದೆ."
ದೇವರ ವಾಕ್ಯವು ಹರಿತವಾದ ಕತ್ತಿಯಂತಿದ್ದು, ಅದನ್ನು ಕೌಶಲ್ಯ ಮತ್ತು ಆತ್ಮೀಕ ಅಧಿಕಾರದೊಂದಿಗೆ ಬಳಸಿದಾಗ ಅಪಾರವಾದ ಸ್ವಸ್ಥತೆಯನ್ನು ಮತ್ತು ವಿಮೋಚನೆಯನ್ನು ತರುತ್ತದೆ. ಆದಾಗ್ಯೂ, ಒಂದು ಸನ್ನಿವೇಶಕ್ಕೆ ಸರಿಯಾದ ದೇವರವಾಕ್ಯವನ್ನು ಬಳಸಲು, ನಾವು ಆ ವಾಕ್ಯದ ಆಳವಾದ ಜ್ಞಾನವನ್ನು ಹೊಂದಿರಬೇಕು ಮತ್ತು ಆತ್ಮನಲ್ಲಿ ನಡೆಸಲ್ಪಡುತ್ತಿರಬೇಕು.
ಇದಲ್ಲದೆ, ಪ್ರತಿಯೊಬ್ಬ ಸಮರ್ಪಿತ ಮಧ್ಯಸ್ಥಿಕೆ ಪ್ರಾರ್ಥನಾ ವೀರರು ಆತ್ಮೀಕ ಯುದ್ಧದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ ತಮ್ಮ ಮನಸ್ಸು ಮತ್ತು ಬಯಕೆಗಳ ಮೇಲೆ ತೀವ್ರವಾಗಿ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಬೇಕಾದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ.ಆದ್ದರಿಂದ ಪರಿಣಾಮಕಾರಿಯಾದ ಆತ್ಮೀಕ ಯೋಧರಾಗಲು, ನಮ್ಮ ಪ್ರಾರ್ಥನೆಗಳು ಲೇಸರ್‌ಗಳಂತೆ ಆತ್ಮೀಕ ಕ್ಷೇತ್ರದಲ್ಲಿ ಭೇದಿಸಬಹುದಾದ ಶಕ್ತಿಶಾಲಿ ಆಯುಧಗಳಾಗುವಂತೆ ನಮ್ಮ ಮನಸ್ಸು ಮತ್ತು ಇಚ್ಛೆಗಳನ್ನು ಕೇಂದ್ರೀಕರಿಸಲು ನಾವು ತರಬೇತಿ ಹೊಂದಿಕೊಳ್ಳಬೇಕು.
ಈ ಲೋಕದಲ್ಲಿ , ಕರ್ತನಾದ ಯೇಸು ಆತ್ಮೀಕ ಯುದ್ಧದಲ್ಲಿ ತೊಡಗಿಸಿಕೊಳ್ಳುವಂತೆ ನಮ್ಮನ್ನು ಕರೆದಿದ್ದು ನಮ್ಮ ತರಬೇತಿಯು ಗೆಲುವು ಮತ್ತು ಯಶಸ್ಸನ್ನು ಸಾಧಿಸಲು ಅದು ನಿರ್ಣಾಯಕವಾದ್ದದ್ದಾಗಿದೆ. ಅದಕ್ಕಾಗಿ ನಾವು ವಾಕ್ಯದ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು ಮತ್ತು ಅದನ್ನು ವಿವೇಕದಿಂದ ನಿಖರವಾಗಿ ಬಳಸುವುದನ್ನು ಕಲಿಯಬೇಕು.
ಇದಲ್ಲದೆ, ನಾವು ಪ್ರಾರ್ಥನೆಗೆ ಹೆಚ್ಚು ಗಮನಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ನಮ್ಮನ್ನು ಕರೆಯಲಾಗಿರುವ ಆತ್ಮೀಕ ಉದ್ದೇಶಗಳ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಬೇಕು. ಆದ್ದರಿಂದ ಅಂಧಕಾರದ ಶಕ್ತಿಗಳ ವಿರುದ್ಧದ ಯುದ್ಧದಲ್ಲಿ ನಿಖರವಾಗಿ ಗುರಿಯಿಡುವುದಕೋಸ್ಕರ ಶ್ರದ್ಧೆಯಿಂದ ತರಬೇತಿ ಪಡೆದ ದಾವೀದನನ್ನು ಹಿಂಬಾಲಿಸಿದ ಪ್ರಬಲ ಪುರುಷರಿಂದ ನಾವು ಸ್ಫೂರ್ತಿ ಪಡೆಯೋಣ!
Bible Reading: 2 Samuel 6-8
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀನು ನನ್ನ ಬಂಡೆಯಾಗಿರುವುದಕ್ಕಾಗಿಯೂ ಮತ್ತು ಯುದ್ಧಕ್ಕಾಗಿ ನನ್ನ ಕೈಗಳನ್ನು ಮತ್ತು ಕಾಳಗಕ್ಕಾಗಿ ನನ್ನ ಕೈ ಬೆರಳುಗಳನ್ನು ಸಿದ್ದ ಮಾಡಿದ್ದಕ್ಕಾಗಿ ಯೇಸುನಾಮದಲ್ಲಿ ನಿನಗೆ ಸ್ತೋತ್ರ .
ನೀನು ನನ್ನನ್ನು ಹೋರಾಡಲು ಕರೆದಂತ ಯುದ್ಧಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ನನಗೆ ಅಗತ್ಯವಿರುವ ಆತ್ಮೀಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ದಯವಿಟ್ಟು ನನಗೆ ಯೇಸುನಾಮದಲ್ಲಿ ಸಹಾಯ ಮಾಡು.
ನಿನ್ನ ವಾಕ್ಯವನ್ನು ಕೌಶಲ್ಯದಿಂದಲೂ ಮತ್ತು ಪರಿಣಾಮಕಾರಿಯಾಗಿಯೂ ಬಳಸುವಂತೆ ನನಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಗಮನವನ್ನು ಅನುಗ್ರಹಿಸು , ಇದರಿಂದ ನಾನು ನಿನ್ನ ರಾಜ್ಯಕ್ಕಾಗಿ ಹೋರಾಡುವ ಪ್ರಬಲ ಯೋಧನಾಗುತ್ತೇನೆ ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ಆಮೆನ್.
ನೀನು ನನ್ನನ್ನು ಹೋರಾಡಲು ಕರೆದಂತ ಯುದ್ಧಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ನನಗೆ ಅಗತ್ಯವಿರುವ ಆತ್ಮೀಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ದಯವಿಟ್ಟು ನನಗೆ ಯೇಸುನಾಮದಲ್ಲಿ ಸಹಾಯ ಮಾಡು.
ನಿನ್ನ ವಾಕ್ಯವನ್ನು ಕೌಶಲ್ಯದಿಂದಲೂ ಮತ್ತು ಪರಿಣಾಮಕಾರಿಯಾಗಿಯೂ ಬಳಸುವಂತೆ ನನಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಗಮನವನ್ನು ಅನುಗ್ರಹಿಸು , ಇದರಿಂದ ನಾನು ನಿನ್ನ ರಾಜ್ಯಕ್ಕಾಗಿ ಹೋರಾಡುವ ಪ್ರಬಲ ಯೋಧನಾಗುತ್ತೇನೆ ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ಆಮೆನ್.
Join our WhatsApp Channel

Most Read
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ದರ್ಶನ ಹಾಗೂ ಸಾಕಾರದ ನಡುವೆ...
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಶತ್ರುವಿನ ಮಾರ್ಗ ರಹಸ್ಯವಾಗಿದೆ
● ಹೋರಾಡಿ
● ಕ್ರಿಸ್ತನ ಮೂಲಕ ಜಯಶಾಲಿಗಳು
ಅನಿಸಿಕೆಗಳು