ಅನುದಿನದ ಮನ್ನಾ
1
1
71
ಯುದ್ಧಕ್ಕಾಗಿ ತರಬೇತಿ - II
Tuesday, 15th of April 2025
Categories :
ತಯಾರಿ (Preparation)
ಬದಲಾವಣೆ (Change)
"ಯುದ್ಧಕ್ಕೆ ಹೋಗುವ ಸೈನಿಕನು ಲೋಕ ವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸ ಪಡುತ್ತಿರುವನಲ್ಲವೇ." (2 ತಿಮೊಥೆಯ 2:4)
ಸಿಕ್ಕಿಹಾಕಿಕೊಳ್ಳುವುದರ ಅರ್ಥವೇನು?
ಸಿಕ್ಕಿಹಾಕಿಕೊಳ್ಳುವುದು ಎಂದರೆ ಸಂಕೀರ್ಣವಾಗಿ ನೇಯುವುದು, ಸುತ್ತುವರೆಯುವುದು ಅಥವಾ ಒಟ್ಟಿಗೆ ತಿರುಚುವುದು, ಇದರಿಂದ ಆ ಸಿಕ್ಕು ಬಿಡಿಸುವುದು ಅಥವಾ ಹೊರತೆಗೆಯುವುದು ಕಷ್ಟವಾಗುತ್ತದೆ.
ಬ್ರೆಜಿಲಿಯನ್ ಕಾಡಿನಲ್ಲಿ ಮ್ಯಾಟಡೋರ್ ಅಥವಾ "ಕೊಲೆಗಾರ" ಎಂದು ಕರೆಯಲ್ಪಡುವ ಅಪಾಯಕಾರಿ ಸಸ್ಯವಿದೆ. ಇದು ನೆಲದ ಮೇಲೆ ತೆಳುವಾದ ಕಾಂಡವಾಗಿ ಪ್ರಾರಂಭವಾಗುತ್ತದೆ ಮತ್ತು ಅದು ಆರೋಗ್ಯಕರ ಮರವನ್ನು ಕಂಡುಕೊಂಡಾಗ, ಅದು ಕಾಂಡದ ಸುತ್ತಲೂ ಸುತ್ತುವ ಗ್ರಹಣಾಂಗವನ್ನು ಹೊರಹಾಕುತ್ತದೆ. ಸಸ್ಯವು ಬೆಳೆದಂತೆ, ಅದು ಮರದ ಸುತ್ತಲೂ ಸುತ್ತುವ ತೋಳಿನಂತಹ ವಸ್ತುಗಳನ್ನು ಹೊರಹಾಕುತ್ತದೆ, ಅದು ಇನ್ನಷ್ಟು ಆ ಮರವನ್ನು ಬಿಗಿಯಾಗಿ ಸುತ್ತುವರೆದುಬಿಡುತ್ತದೆ. ಸಸ್ಯವು ಮರದ ತುದಿಯನ್ನು ತಲುಪುವವರೆಗೆ ಅದೂ ಸಹ ಏರುತ್ತಲೇ ಇರುತ್ತದೆ ನಂತರ ಅದು ಹೂವುಗಳನ್ನು ಬಿಡುತ್ತದೆ . ಆ ಹೂವುಗಳು ಈ ಮರವು ಬದುಕಲು ಕಷ್ಟಕರವಾಗಿಸಿಬಿಟ್ಟು ನಂತರ ಈ ಸಸ್ಯವು ಇತರ ಮರಗಳಿಗೆ ಹರಡುತ್ತಾ ಹೋಗುತ್ತದೆ.
ಮ್ಯಾಟಡೋರ್‌ನಂತೆಯೇ, ನಮ್ಮ ಜೀವನದ ದೈನಂದಿನ ವ್ಯವಹಾರಗಳು ಸಹ ನಮ್ಮನ್ನು ಸೂಕ್ಷ್ಮವಾಗಿ ಸಿಕ್ಕಿಸಬಹುದು , ಲೋಕ, ಶರೀರ ಮತ್ತು ಸೈತಾನನ ವಿರುದ್ಧ ನಡೆಯುತ್ತಿರುವ ಆತ್ಮೀಕ ಯುದ್ಧದಲ್ಲಿ ಕ್ರಿಸ್ತನ ಸೈನಿಕರಾಗಿ ನಮ್ಮ ಪರಿಣಾಮಕಾರಿತ್ವವನ್ನು ಅವು ತಟಸ್ಥಗೊಳಿಸಬಹುದು. ಆದ್ದರಿಂದ ನಾವು ಜಾಗರೂಕರಾಗಿದ್ದು , ಕ್ರಿಸ್ತನ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ ಮತ್ತು ಲೋಕದಲ್ಲಿ ಸಿಕ್ಕಿಹಾಕಿಸುವಂತ ಆಕರ್ಷಣೆಗಳನ್ನು ವಿರೋಧಿಸುವುದು ಬಹಳ ಮುಖ್ಯ. ಆಗ ಮಾತ್ರ ನಾವು ಕ್ರಿಸ್ತನಲ್ಲಿ ಅಂತಿಮ ವಿಜಯದ ಕಡೆಗೆ ನಮ್ಮ ಆರೋಹಣವನ್ನು ನಾವು ಮುಂದುವರಿಸಬಹುದು.
"ಎಂಟ್ಯಾಂಗಲ್" ಎಂಬ ಪದವನ್ನು ಮುಳ್ಳುಗಳಲ್ಲಿ ಸಿಲುಕಿದ ಕುರಿಗಳನ್ನು ವಿವರಿಸಲು ಸಹ ಬಳಸಲಾಗುತ್ತಿತ್ತು. ತೊಡಗಿಸಿಕೊಳ್ಳುವುದಕ್ಕೂ ಮತ್ತು ಸಿಕ್ಕಿಹಾಕಿಕೊಳ್ಳುವುದಕ್ಕೂ ನಡುವೆ ವ್ಯತ್ಯಾಸ ಇರುತ್ತದೆ. ಈ ಜೀವನದ ಸಾಮಾನ್ಯ ವ್ಯವಹಾರಗಳು ನಮ್ಮನ್ನು ತುಂಬಾ ಬಿಗಿಯಾಗಿ ನಿರ್ಬಂಧಿಸಿದಾಗ, ನಾವು ನಮ್ಮನ್ನು ಮುಕ್ತಗೊಳಿಸಿಕೊಳ್ಳಲು ಮತ್ತು ನಮ್ಮ ಕಮಾಂಡರ್ ಆದ ಕ್ರಿಸ್ತನ ಕರೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ, ಆಗ ನಾವು ನಶ್ವರವಾದ ಹುಡುಕಾಟದ "ಮುಳ್ಳುಗಳಲ್ಲಿ" ಸಿಕ್ಕಿಹಾಕಿಕೊಳ್ಳುತ್ತೇವೆ! ಆದರೆ ನಮ್ಮ ಮುಖ್ಯ ಗುರಿಯು ನಮ್ಮ ಕಮಾಂಡರ್ ಅನ್ನು ಮೆಚ್ಚಿಸುವುದಾಗಿದೆ.
ಇತಿಹಾಸದ ದಂತಕಥೆಯಾದ "ಅಲೆಕ್ಸಾಂಡರ್ ದಿ ಗ್ರೇಟ್" ಗೆ ಒಂದು ರಾತ್ರಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ, ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.
ಆಗ ಅವನು ಶಿಬಿರದ ಮೈದಾನಗಳಲ್ಲಿ ಅಡ್ಡಾಡುತ್ತಿದ್ದಾಗ, ಕರ್ತವ್ಯದ ಮೇಲಿದ್ದರೂ ಗಾಢವಾಗಿ ನಿದ್ರಿಸುತ್ತಿದ್ದ ಸೈನಿಕನನ್ನು ಕಂಡನು, ಇದು ಗಂಭೀರ ಅಪರಾಧವೆಂದು ಪರಿಗಣಿಸಲಾಗಿತ್ತು.
ಕೆಲವು ಸಂದರ್ಭಗಳಲ್ಲಿ, ಕಾವಲುಕಾಯಬೇಕಾದ ಕರ್ತವ್ಯದ ಸಮಯದಲ್ಲಿ ಯಾರಾದರೂ ನಿದ್ರಿಸುವುದು ಕಂಡು ಬಂದರೆ ಅದಕ್ಕೆ ಶಿಕ್ಷೆಯು ತಕ್ಷಣವೇ ಮರಣ ದಂಡನೆ . ಕಮಾಂಡಿಂಗ್ ಅಧಿಕಾರಿಗಳು ಕೆಲವೊಮ್ಮೆ ನಿದ್ರಿಸುತ್ತಿರುವ ಸೈನಿಕರನ್ನು ಕಂಡರೆ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೊತ್ತಿಸುತ್ತಿದ್ದರು, ಇದು ನೋಡಲು ಭಯಾನಕ.
ಆ ಯುವ ಸೈನಿಕನು ಎಚ್ಚರಗೊಂಡಾಗ , ತನ್ನನ್ನು ಯಾರು ಎಚ್ಚರಿಸಿದರು ಎಂಬುದನ್ನು ಅರಿತುಕೊಂಡು ಭಯದಿಂದ ನಡುಗಿಹೋದನು. "ಕಾವಲು ಕಾಯಬೇಕಾದ ಕರ್ತವ್ಯದ ಸಮಯದಲ್ಲಿ ನಿದ್ರಿಸುವುದಕ್ಕೆ ಏನು ಶಿಕ್ಷೆ ಎಂದು ನಿಮಗೆ ತಿಳಿದಿದೆಯೇ?" ಎಂದು ಅಲೆಕ್ಸಾಂಡರ್ ದಿ ಗ್ರೇಟ್ ಕಠಿಣ ಧ್ವನಿಯಲ್ಲಿ ಆ ಕಾವಲು ಗಾರನನ್ನು ಕೇಳಿದನು. "ಹೌದು, ಸ್ವಾಮಿ ," ಎಂದು ಆ ಸೈನಿಕನು ಭಯದಿಂದ ನಡುಗುವ ಧ್ವನಿಯಲ್ಲಿ ಉತ್ತರಿಸಿದನು. ನಂತರ ಜನರಲ್ ಸೈನಿಕನಿಂದ ಅವನ ಹೆಸರನ್ನು ತಿಳಿದುಕೊಳ್ಳಲು ಒತ್ತಾಯಿಸಿದನು, ಅದಕ್ಕೆ ಅವನು "ಅಲೆಕ್ಸಾಂಡರ್, ಸರ್" ಎಂದು ಉತ್ತರಿಸಿದನು. ಗೊಂದಲಕ್ಕೊಳಗಾದ ಅಲೆಕ್ಸಾಂಡರ್ ದಿ ಗ್ರೇಟ್ ಮತ್ತೆ, "ನಿನ್ನ ಹೆಸರೇನು?" ಎಂದು ಕೇಳಿದನು ಆಗ ಆ ಸೈನಿಕನು "ನನ್ನ ಹೆಸರು ಅಲೆಕ್ಸಾಂಡರ್, ಸರ್," ಎಂದು ಎರಡನೇ ಬಾರಿಗೂ ಉತ್ತರಿಸಿದ.
ಒಂದು ವಿಷಯವನ್ನು ಸ್ಪಷ್ಟಪಡಿಸಲು ನಿರ್ಧರಿಸಿದ ಅಲೆಕ್ಸಾಂಡರ್ ದಿ ಗ್ರೇಟ್ ತನ್ನ ಧ್ವನಿಯನ್ನು ಎತ್ತಿರಿಸುತ್ತಾ ಸೈನಿಕನನ್ನು "ನಿನ್ನ ಹೆಸರೇನು"ಎಂದು ಮತ್ತೊಮ್ಮೆ ಕೇಳಿದನು. "ನನ್ನ ಹೆಸರು ಅಲೆಕ್ಸಾಂಡರ್, ಸರ್," ಎಂದು ಸೈನಿಕನು ಮೆಲುದನಿಯಲ್ಲಿ ಹೇಳಿದನು. ಅವನ ಕಣ್ಣನ್ನು ನೇರವಾಗಿ ನೋಡುತ್ತಾ, ಅಲೆಕ್ಸಾಂಡರ್ ದಿ ಗ್ರೇಟ್ ಅಚಲವಾದ ತೀವ್ರತೆಯಿಂದ, "ಸೈನಿಕ, ನಿನ್ನ ಹೆಸರನ್ನು ಬದಲಾಯಿಸು ಅಥವಾ ನಿನ್ನ ನಡವಳಿಕೆಯನ್ನು ಬದಲಾಯಿಸು" ಎಂದು ಹೇಳಿದನು.
ಈ ಭೇಟಿಯು ಆ ಯುವ ಸೈನಿಕನ ಮೇಲೆ ಆಳವಾದ ಪ್ರಭಾವ ಬೀರಿತು, ಅವನು ಮತ್ತೆಂದೂ ತನ್ನ ಕರ್ತವ್ಯದಲ್ಲಿ ನಿದ್ರಿಸಲಿಲ್ಲ. ನಮ್ಮ ಹೆಸರು (ಕ್ರಿಶ್ಚಿಯನ್) ನಾವು ಯಾರು ಮತ್ತು ನಾವು ಯಾವುದಕ್ಕಾಗಿ ನಿಲ್ಲುತ್ತೇವೆ ಎಂಬುದನ್ನು ಪ್ರತಿನಿಧಿಸುತ್ತದೆ ಮತ್ತು ನಮ್ಮ ನಡವಳಿಕೆಯು ಯಾವಾಗಲೂ ಅದನ್ನೇ ಪ್ರತಿಬಿಂಬಿಸಬೇಕು ಎಂಬುದಕ್ಕೆ ಇದು ಪ್ರಬಲವಾದ ಜ್ಞಾಪನೆಯಾಗಿದೆ.
ಅಲ್ಲದೆ, ಮತ್ತಾಯ 6:24 ರಲ್ಲಿ, " ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ." ಎಂದು ಯೇಸು ನಮಗೆ ಎಚ್ಚರಿಸುತ್ತಾನೆ, ನಾವು ದೇವರ ಸೇವೆಯತ್ತ ಗಮನಹರಿಸುವುದನ್ನೇ ಆರಿಸಿಕೊಳ್ಳಬೇಕೇ ವಿನಃ ಲೌಕಿಕ ಸಂಗತಿಗಳ ಅನ್ವೇಷಣೆಯಲ್ಲಿ ಸಿಕ್ಕಿಹಾಕಿಕೊಳ್ಳಲು ನಮ್ಮನ್ನು ಬಿಟ್ಟುಕೊಡಬಾರದು.
Bible Reading: 2 Samuel 9-11
ಪ್ರಾರ್ಥನೆಗಳು
ತಂದೆಯೇ, ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಹಾಕಿಕೊಳ್ಳದಂತೆ, ನನ್ನ ಕಮಾಂಡರ್ ಆಗಿ ನಿನ್ನನ್ನು ಮೆಚ್ಚಿಸುವ ಕಡೆಗೇ ನನ್ನ ಗಮನವನ್ನು ಕೇಂದ್ರೀಕರಿಸಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡು. ದೇವರ ರಾಜ್ಯದಲ್ಲಿ ನನ್ನ ಆತ್ಮೀಕ ಬೆಳವಣಿಗೆ ಮತ್ತು ಪರಿಣಾಮಕಾರಿತ್ವಕ್ಕೆ ಅಡ್ಡಿಯಾಗುವ ಗೊಂದಲಗಳನ್ನು ತಪ್ಪಿಸಲು ನನಗೆ ಬಲವನ್ನೂ ಮತ್ತುವಿವೇಕವನ್ನೂ ಯೇಸುನಾಮದಲ್ಲಿ ಅನುಗ್ರಹಿಸು . ಆಮೆನ್!
Join our WhatsApp Channel

Most Read
● ಇತರರಿಗಾಗಿ ಪ್ರಾರ್ಥಿಸುವುದು● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ಪ್ರಾರ್ಥನಾ ಹೀನತೆ ಎಂಬ ಪಾಪ
● ಮನುಷ್ಯನ ಹೃದಯ
● ನಂಬಿಕೆ- ನಿರೀಕ್ಷೆ -ಪ್ರೀತಿ
● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
● ಮೂರು ನಿರ್ಣಾಯಕ ಪರೀಕ್ಷೆಗಳು
ಅನಿಸಿಕೆಗಳು