ಅನುದಿನದ ಮನ್ನಾ
2
1
58
ತಾಳ್ಮೆಯನ್ನು ಅಳವಡಿಸಿಕೊಳ್ಳುವುದು
Friday, 2nd of May 2025
Categories :
ನಂಬಿಕೆ (Faith)
ಪರಿಶೋಧನೆ (Trials)
ದೇವರ ಜ್ಞಾನವು ನಮ್ಮ ಗ್ರಹಿಕೆಗೆ ಮೀರಿದ್ದು, ಮತ್ತು ಆತನು ಮಾಡುವ ಎಲ್ಲದರಲ್ಲೂ ಆತನಲ್ಲಿ ಯಾವಾಗಲೂ ಒಂದು ಉದ್ದೇಶವಿರುತ್ತದೆ. "ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನುಂಟುಮಾಡಿದ್ದಾನೆಎಂದು (ಜ್ಞಾನೋಕ್ತಿ 16:4) ನಮಗೆ ನೆನಪಿಸುತ್ತದೆ, ನೀವು ಜೀವನದಲ್ಲಿ ಎದುರಿಸುವ ಭಾವನಾತ್ಮಕ, ಶಾರೀರಿಕ ಅಥವಾ ಆತ್ಮೀಕ ಬಿರುಗಾಳಿಗಳು, ನೀವು ಅರಿತುಕೊಳ್ಳುವುದಕ್ಕಿಂತ ಹೆಚ್ಚಿನ ಉದ್ದೇಶವನ್ನು ಹೊಂದಿರುತ್ತವೆ. ಈ ಬಿರುಗಾಳಿಗಳಿಗೆ ಒಂದು ಉದ್ದೇಶವಿರುತ್ತದೆ.
ನಿಮ್ಮೊಂದಿಗೆ ಕೆಲವು ಜೀವನದ ಪಾಠಗಳನ್ನು ಹಂಚಿಕೊಳ್ಳಲು ನನಗೆ ಅನುಮತಿಸಿ.
a). ಬಿರುಗಾಳಿಗಳು ಬೆಳವಣಿಗೆ ಮತ್ತು ಪರಿಷ್ಕರಣೆಯನ್ನು ತರುತ್ತವೆ:
ನಾನು ರೈತನ ಮಗ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ನನ್ನ ತಂದೆ ನೇಗಿಲಿನ ಹಿಂದೆ ನಿಂತು ಎತ್ತು ಅದನ್ನು ಎಳೆಯುತಿದ್ದದ್ದನ್ನು ನಾನು ನೋಡಿದ್ದೇನೆ. ಮಕ್ಕಳಾಗಿ, ನನ್ನ ತಮ್ಮ ಮತ್ತು ನಾನು ನೇಗಿಲಿನ ಮೇಲೆ ನಿಲ್ಲುತ್ತಿದ್ದೆವು ಮತ್ತು ಆ ಎತ್ತುಗಳು ನಮ್ಮನ್ನು ಎಳೆಯುತ್ತಿತ್ತು. ರೈತನ ಮಗನಾಗಿ ಬೆಳೆದ ನಾನು, ಜೀವನದ ಅತ್ಯಂತ ಫಲವತ್ತಾದ ಕ್ಷಣಗಳು ಹೆಚ್ಚಾಗಿ ಪರ್ವತಗಳ ತುದಿಗಳಲ್ಲಿ ಅಲ್ಲ, ಕಣಿವೆಗಳಲ್ಲಿಯೇ ಸಂಭವಿಸುತ್ತವೆ ಎಂಬುದನ್ನು ಕಲಿತಿದ್ದೇನೆ. ಕಣಿವೆಗಳು ಫಲವತ್ತತೆಯಿಂದ ಕೂಡಿದ ಮಣ್ಣಿರುವ ಸ್ಥಳಗಳಾಗಿದ್ದು, ಸವೆದುಹೋದ ಪರ್ವತ ಬಂಡೆಗಳು ಮತ್ತು ಸಾವಯವ ವಸ್ತುಗಳಿಂದ ಅದು ರೂಪುಗೊಂಡಿರುತ್ತದೆ. ಇಲ್ಲಿಯೇ ಉತ್ತಮ ಬೆಳವಣಿಗೆ ಸಂಭವಿಸಿ ಇದು ನಮ್ಮ ಜೀವನಕ್ಕೆ ಒಂದು ರೂಪಕವಾಗಿ ಕಾರ್ಯನಿರ್ವಹಿಸುತ್ತದೆ.
ಕಣಿವೆಯಲ್ಲಿ ಫಲವತ್ತಾದ ಮಣ್ಣು ಸವೆತ ಮತ್ತು ಕೊಳೆಯುವಿಕೆಯಂತಹ ಸವಾಲಿನ ಪ್ರಕ್ರಿಯೆಗಳಿಂದ ಸೃಷ್ಟಿಯಾಗುವಂತೆಯೇ, ವೈಯಕ್ತಿಕ ಬೆಳವಣಿಗೆಯು ಹೆಚ್ಚಾಗಿ ಪ್ರತಿಕೂಲತೆಯನ್ನು ನಿವಾರಿಸುವುದರಿಂದಲೇ ಉಂಟಾಗುತ್ತದೆ. ನಮ್ಮ ಜೀವನದಲ್ಲಿ ಗರಿಷ್ಠ ಬೆಳವಣಿಗೆ ಪರ್ವತಗಳ ತುದಿಗಳಲ್ಲಿ ಅಲ್ಲ, ಬದಲಾಗಿ ನಾವು ಜೀವನದ ಕಣಿವೆಗಳಲ್ಲಿ ಸಾಗುವಾಗ ಸಂಭವಿಸುತ್ತದೆ. ವಿಪರ್ಯಾಸವೆಂದರೆ ನೀವು ಕಣಿವೆಯಲ್ಲಿ ಹೊಂದಿದ ನಿಮ್ಮ ಬೆಳವಣಿಗೆ ಮತ್ತು ಪರಿಷ್ಕರಣೆಯ ಮೂಲಕ ಪರ್ವತದ ತುದಿಗೆ ಏರಿ ಹೋಗುತ್ತೀರಿ.
ನಮ್ಮ ಜೀವನದಲ್ಲಿ ಬಿರುಗಾಳಿಗಳು ನಮ್ಮ ಚಾರಿತ್ರ್ಯವನ್ನು ರೂಪಿಸಿ ಪರಿಷ್ಕರಿಸಬಲ್ಲವು. ಅವು ಸ್ಥಿರತೆ , ತಾಳ್ಮೆ ಮತ್ತು ನಂಬಿಕೆಯನ್ನು ಬೆಳೆಸುವಲ್ಲಿ ನಮಗೆ ಸಹಾಯ ಮಾಡುತ್ತವೆ. ಆದಾಗ್ಯೂ, ಬಿರುಗಾಳಿಯಲ್ಲಿ ಹಾದು ಹೋಗುವ ವ್ಯಕ್ತಿ ಮತ್ತು ಆ ಬಿರುಗಾಳಿಯಿಂದ ಹೊರಬಂದ ವ್ಯಕ್ತಿ ಇಬ್ಬರೂ ವಿಭಿನ್ನ ವ್ಯಕ್ತಿಗಳಾಗಿರುತ್ತಾರೆ.
ಬಹುಶಃ ನೀವು ಈಗ ಇವುಗಳಲ್ಲಿ ಒಂದರ ಮಧ್ಯದಲ್ಲಿರುತ್ತೀರಿ ಬಹುಶಃ ಅದು ಅನಾರೋಗ್ಯ ಅಥವಾ ಖಿನ್ನತೆಯ ಬಿರುಗಾಳಿಯಾಗಿರಬಹುದು. ಅದು ಆರ್ಥಿಕ ಪರಿಸ್ಥಿತಿ ಅಥವಾ ಸಂಬಂಧದಲ್ಲಿನ ಒಂದು ರೀತಿಯ ಕಲಹವಾಗಿರಬಹುದು.ಒಂದು ಕೆಟ್ಟ ಸುದ್ದಿ ಏನೆಂದರೆ, ಯಾವುದೇ ಸುದ್ದಿ ಚಾನೆಲ್ ಅಂತಹ ಬಿರುಗಾಳಿಗಳ ಬಗ್ಗೆ ನಮಗೆ ಮುನ್ಸೂಚನೆ ನೀಡುವುದಿಲ್ಲ. ಬಿರುಗಾಳಿಗೆ ಸಿಲುಕುವ ವ್ಯಕ್ತಿಯು ನಂಬಿಕೆಯ ಬಗ್ಗೆ ಮಾತನಾಡುತ್ತಾನೆ ಮತ್ತು ಬಿರುಗಾಳಿಯಿಂದ ಹೊರಬರುವ ವ್ಯಕ್ತಿಯು ನಂಬಿಕೆಯಲ್ಲಿ ಜೀವಿಸುತ್ತಾನೆ. "ನೀತಿವಂತನು ನಂಬಿಕೆಯಿಂದಲೇ ಬದುಕುವನು."ಎಂದು ಹಬಕ್ಕೂಕ 2:4 ಹೇಳುತ್ತದೆ.
ಇಂದಿನ ವೇಗದ ಜಗತ್ತಿನಲ್ಲಿ, ತಾಳ್ಮೆಯು ನಿಜಕ್ಕೂ ಒಂದು ಸದ್ಗುಣವಾಗಿದ್ದು ಅದನ್ನು ಹೆಚ್ಚಾಗಿ ಕಡೆಗಣಿಸಲಾಗಿದೆ. ಇಂದಿನ ಪೀಳಿಗೆಗೆ ಒಂದು ಕೊರತೆಯಿದ್ದರೆ, ಅದು ತಾಳ್ಮೆಯ ಕೊರತೆಯೇ ಆಗಿದೆ."ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ."ಎಂದು ಯಾಕೋಬ 1:2-4 ಹೇಳುತ್ತದೆ. ನಮ್ಮ ನಂಬಿಕೆಯ ಪ್ರಯಾಣವು ನಾವು ಎದುರಿಸುವ ಬಿರುಗಾಳಿಗಳ ಎದುರು ಪರಿಶ್ರಮ ಮತ್ತು ತಾಳ್ಮೆಯನ್ನು ಬಯಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಒಬ್ಬ ಸ್ತ್ರೀಯು ಒಂದು ಸಭಾಸೇವೆ ಮುಗಿದ ನಂತರ ನನ್ನ ಬಳಿಗೆ ಬಂದು, "ಪಾಸ್ಟರ್ ಮೈಕೆಲ್, ನಾನು ಮೂರು ಭಾನುವಾರಗಳಿಂದ ಚರ್ಚ್‌ಗೆ ಹೋಗುತ್ತಿದ್ದೇನೆ ಆದರೆ ದೇವರು ಇನ್ನೂ ನನ್ನ ಪ್ರಾರ್ಥನೆಗಳಿಗೆ ಉತ್ತರಿಸಿಲ್ಲ" ಎಂದು ಹೇಳಿದಳು. ನಾನು ಆಕೆಗೆ ಉತ್ತರವಾಗಿ , "ಸ್ತ್ರೀಯೇ , ನಾಲ್ಕನೇ ಭಾನುವಾರ, ಐದನೇ ಭಾನುವಾರ ಮತ್ತು ಇನ್ನೂ ಹಲವು ಭಾನುವಾರಗಳು ಬರಲಿವೆ." ಎಂದು ಹೇಳಿದೆ. ನಾನು ನಿಜವಾಗಿಯೂ ಹೇಳಿದ್ದು: ದೇವರ ಮಾರ್ಗದರ್ಶನ ಮತ್ತು ಆಶೀರ್ವಾದಗಳನ್ನು ಪಡೆಯಲು ಪ್ರಯತ್ನಿಸುವಾಗ ತಾಳ್ಮೆ ಅತ್ಯಗತ್ಯ ಎಂಬುದಾಗಿಯೇ.
ನಮ್ಮ ಸಮಸ್ಯೆಗಳಿಗೆ ತಕ್ಷಣದ ಉತ್ತರಗಳು ಮತ್ತು ಪರಿಹಾರಗಳನ್ನು ನೀಡಲು ದೇವರು ಎಟಿಎಂ ಯಂತ್ರವಲ್ಲ. ಬದಲಾಗಿ, ಆತನು ಪ್ರೀತಿಯ ತಂದೆ, ನಮ್ಮ ಜೀವನದಲ್ಲಿ ಎಚ್ಚರಿಕೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಾನೆ, ನಮ್ಮ ಚಾರಿತ್ರ್ಯವನ್ನು ಪರಿಷ್ಕರಿಸಿ ನಮ್ಮನ್ನು ನಮ್ಮ ಅತ್ಯುತ್ತಮ ಆವೃತ್ತಿಗಳಾಗಿ ರೂಪಿಸುತ್ತಾನೆ.ಬಿರುಗಾಳಿಗಳ ಸಂದರ್ಭದಲ್ಲಿ ಈ ಪ್ರಕ್ರಿಯೆಯು ನಿಧಾನವಾಗಿದೆ ಎನಿಸಬಹುದು ಮತ್ತು ಆಗಾಗ್ಗೆ ಸವಾಲಿನದ್ದಾಗಿರಲೂ ಬಹುದು, ಆದರೆ ತಾಳ್ಮೆಯ ಮೂಲಕ, ನಾವು ದೇವರ ಪರಿಪೂರ್ಣ ಸಮಯವನ್ನು ನಂಬಲು ಮತ್ತು ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ಆತನ ಕೈಯನ್ನು ಗುರುತಿಸಲು ಕಲಿಯುವವರಾಗುತ್ತೇವೆ.
Bible Reading: 1 Kings 21-22
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಾನು ದೀನ ಹೃದಯದಿಂದ ನಿನ್ನ ಮಾರ್ಗದರ್ಶನ ಮತ್ತು ಜ್ಞಾನವನ್ನು ಅಪೇಕ್ಷಿಸಿ ನಿಮ್ಮ ಸನ್ನಿದಾನಕ್ಕೆ ಬರುತ್ತೇನೆ. ತ್ವರಿತ ತೃಪ್ತಿಯನ್ನು ಬೇಡುವ ಈ ಜಗತ್ತಿನಲ್ಲಿ, ತಾಳ್ಮೆಯನ್ನೂ ಮತ್ತು ನಿಮ್ಮ ಪರಿಪೂರ್ಣ ಸಮಯವನ್ನು ನಂಬಲು ನನಗೆ ಸಹಾಯ ಮಾಡಿ. ನಿನ್ನ ಮೇಲೆಯೇ ಸಂಪೂರ್ಣವಾಗಿ ಆಧಾರಗೊಳ್ಳಲು ಮತ್ತು ನನ್ನ ಜೀವನಕ್ಕಾಗಿ ನಿನ್ನ ಯೋಜನೆ ನಾನು ಊಹಿಸಬಹುದಾದ ಎಲ್ಲಕ್ಕಿಂತಲೂ ದೊಡ್ಡದಾಗಿದೆ ಎಂಬುದನ್ನು ನಾನು ನಂಬುವಂತೆ ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್.
Join our WhatsApp Channel

Most Read
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ನಿಮ್ಮ ಗತಿಯನ್ನು ಬದಲಾಯಿಸಿ
● ಒಂದು ಹೊಸ ಪ್ರಭೇದ
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
ಅನಿಸಿಕೆಗಳು