ಅನುದಿನದ ಮನ್ನಾ
1
0
35
ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
Saturday, 3rd of May 2025
Categories :
ದೇವರ ಉಪಸ್ಥಿತಿ (Presence of God)
ಅನೇಕ ವಿಶ್ವಾಸಿಗಳು ತಮ್ಮ ಜೀವನದಲ್ಲಿ ದೇವರು "ದೊಡ್ಡ ದೊಡ್ಡ ವಿಚಾರಗಳಲ್ಲಿ" -ಅಂದರೆ ವಿಶ್ವ ಮಟ್ಟದ ಘಟನೆಗಳು, ನೈಸರ್ಗಿಕ ವಿಕೋಪಗಳು, ಯುದ್ಧಗಳು ಮತ್ತು ಜಾಗತಿಕ ಪುನರುಜ್ಜೀವನದ ಕುರಿತು ಮಾತ್ರವೇ ಕಾಳಜಿ ವಹಿಸುತ್ತಾನೆ ಎಂದು ಭಾವಿಸುತ್ತಾರೆ. ಆತನು ನಿಜವಾಗಿಯೂ ರಾಷ್ಟ್ರಗಳು ಮತ್ತು ನಕ್ಷತ್ರಪುಂಜಗಳ ಮೇಲೆ ಸಾರ್ವಭೌಮನಾಗಿದ್ದರೂ, ಆತನು ನಿಮ್ಮ ಹೃದಯದ ಮೆಲುವಾದ ಕೂಗುಗಳಿಗೂ ಪ್ರೀತಿಯಿಂದ ಗಮನ ಹರಿಸುತ್ತಾನೆ. ನೀವು ಹೊತ್ತಿರುವ ಆ ಸಣ್ಣ ಹೊರೆ ಯಾವುದು ?ಪ್ರಾರ್ಥನೆಗೆ ತರಲು ತುಂಬಾ ಚಿಕ್ಕದಾಗಿ ಕಾಣುವ ಆ ಹೊರೆ ಯಾವುದು? ಅದು ಸಹ ದೇವರಿಗೆ ಮುಖ್ಯವಾಗಿದೆ.
🔹ನಿಮ್ಮ ಸ್ವರ್ಗೀಯ ತಂದೆಗೆ ಯಾವುದೂ ಸಹ ಸಣ್ಣ ವಿಚಾರವಲ್ಲ.
ತಂದೆಯ ಚಿತ್ತವಿಲ್ಲದೆ ಒಂದೇ ಒಂದು ಗುಬ್ಬಚ್ಚಿಯೂ ಕೂಡ ನೆಲಕ್ಕೆ ಬೀಳುವುದಿಲ್ಲ ಎಂದು ಕರ್ತನಾದ ಯೇಸು ಒಮ್ಮೆ ಹೇಳಿದನು (ಮತ್ತಾಯ 10:29). ಅದರ ನಂತರ, ಆತನು ಇನ್ನೂ ಹೆಚ್ಚು ವೈಯಕ್ತಿಕವಾದದ್ದನ್ನು ಸೇರಿಸಿ : "ನಿಮ್ಮ ತಲೆಯ ಕೂದಲುಗಳೆಲ್ಲವೂ ಎಣಿಸಲ್ಪಟ್ಟಿವೆ." (ಮತ್ತಾಯ 10:30). ಈಗ ಇದರ ಕುರಿತು ಯೋಚಿಸಿ - ಈ ಕ್ಷಣದಲ್ಲಿ ನಿಮ್ಮ ತಲೆಯ ಮೇಲೆ ಎಷ್ಟು ಕೂದಲುಗಳಿವೆ ಎಂದು ದೇವರಿಗೆ ತಿಳಿದಿದೆ. ನಿಮ್ಮ ಅಸ್ತಿತ್ವದ ಸಣ್ಣ ಸಣ್ಣ ವಿವರಗಳಲ್ಲಿಯೂ ಇಷ್ಟೊಂದು ತನ್ನನ್ನು ತೊಡಗಿಸಿಕೊಂಡಿರುವ ದೇವರು ನಿಮ್ಮ ಕಾಳಜಿಯನ್ನು ನಿರ್ಲಕ್ಷಿಸುತ್ತಾನೆಯೇ?
"ಇದು ಪ್ರಾರ್ಥಿಸಲು ಯೋಗ್ಯವಾಗಿದೆ. ಇದು ಯೋಗ್ಯವಾದದ್ದಲ್ಲ "ಎಂದು ನಾವು ಸಮಸ್ಯೆಗಳನ್ನು ವರ್ಗೀಕರಿಸುತ್ತೇವೆ: " ಆದರೆ ದೇವರು ಅದನ್ನು ಆ ರೀತಿ ಎಂದಿಗೂ ನೋಡುವುದಿಲ್ಲ. ಅದು ನಿಮ್ಮ ಹೃದಯವನ್ನು ಮುಟ್ಟಿದ್ದರೆ, ಅದು ಆತನ ಹೃದಯವನ್ನೂ ಮುಟ್ಟುತ್ತದೆ. ಅದು ಶಾಲೆಯ ಆತಂಕದಿಂದ ಹೋರಾಡುತ್ತಿರುವ ಮಗುವಾಗಿರಬಹುದು, ರಿಪೇರಿ ಮಾಡಲು ಸಾಧ್ಯವಾಗದಿದ್ದಾಗ ಮುರಿದ ಉಪಕರಣವಾಗಿರಬಹುದು ಅಥವಾ ಇದ್ದಕ್ಕಿದ್ದಂತೆ ಮೌನವಾದ ಒಬ್ಬ ಸ್ನೇಹಿತನಾಗಿರಬಹುದು - ಆತನು ಅದನ್ನು ನೋಡುತ್ತಿರುತ್ತಾನೆ, ಆತನಿಗೆ ಅದು ತಿಳಿದಿದ್ದು ಆತನು ಕಾಳಜಿ ವಹಿಸುವವನಾಗಿದ್ದಾನೆ.
🔹ಒಂದು ಸಾಕ್ಸ್ ಮತ್ತು ಪ್ರೀತಿಯುಳ್ಳ ತಂದೆಯ ಕಥೆ.
ಒಂದು ಸಂಜೆ, ನಾವು ಚರ್ಚ್‌ಗೆ ಹೋಗಲು ಸಿದ್ಧರಾಗುತ್ತಿದ್ದಾಗ, ನನ್ನ ಮಗಳು ಅಬಿಗೈಲ್ (ಆಗ ಸುಮಾರು ನಾಲ್ಕು ವರ್ಷ ವಯಸ್ಸಿನವಳು) ತನ್ನ ನೆಚ್ಚಿನ ಸಾಕ್ಸ್‌ಗಳನ್ನು ಹುಡುಕಲು ಅವಳಿಗೆ ಸಾಧ್ಯವಾಗಲಿಲ್ಲ. ದೊಡ್ಡವರಿಗೆ ಅದು ಕ್ಷುಲ್ಲಕವೆಂದು ತೋರುತ್ತದೆ, ಆದರೆ ಅವಳಿಗೆ ಅದುವೇ ಆ ಕ್ಷಣಕ್ಕೆ ಎಲ್ಲಾ ಆಗಿತ್ತು. ಅವಳು ಮೂಲೆಯಲ್ಲಿನಿಂತು , ಕಣ್ಣೀರಿಡುತ್ತಿದ್ದಳು . ಆ ಕ್ಷಣದಲ್ಲಿ, ನಾನು ನಿಂತು "ಪ್ರಾರ್ಥನೆ ಮಾಡೋಣ ಮತ್ತು ಸಾಕ್ಸ್‌ಗಳನ್ನು ಹುಡುಕಲು ನಮಗೆ ಸಹಾಯ ಮಾಡುವಂತೆ ಯೇಸುವನ್ನು ಕೇಳೋಣ" ಎಂದು ಹೇಳಿದೆ. ಒಂದು ನಿಮಿಷದೊಳಗೆ, ಅವುಗಳನ್ನು ಕುಶನ್ ಅಡಿಯಲ್ಲಿ ಇಟ್ಟಿರುವುದನ್ನು ನಾವು ಕಂಡುಕೊಂಡೆವು. ಅವಳ ಕಣ್ಣುಗಳು ಬೆಳಗಿದವು - ಸಾಕ್ಸ್‌ಗಳು ಸಿಕ್ಕಿದ್ದರಿಂದ ಮಾತ್ರವಲ್ಲ, ಕರ್ತನಾದ ಯೇಸು ತನ್ನ ಸಾಕ್ಸ್‌ಗಳ ಬಗ್ಗೆ ಕಾಳಜಿ ವಹಿಸುತ್ತಾನೆಂದು ಅವಳು ಅರಿತುಕೊಂಡಿದ್ದರಿಂದ. ಆ ಸಂಜೆ, ಅವಳು ಚರ್ಚ್‌ನಲ್ಲಿರುವ ಎಲ್ಲರಿಗೂ, "ಯೇಸು ನನ್ನ ಸಾಕ್ಸ್‌ಗಳನ್ನು ಹುಡುಕಲು ನನಗೆ ಸಹಾಯ ಮಾಡಿದನು!" ಎಂದು ಹೇಳಿದಳು, ನೋಡಿ, ನಿಮ್ಮ ಸ್ವರ್ಗೀಯ ತಂದೆ ಹೀಗಿದ್ದಾರೆ. ಆತನು ನಿಮ್ಮ ಸಮಸ್ಯೆಗಳು ಒಂದು ನಿರ್ದಿಷ್ಟ ಮಟ್ಟದ ತೀವ್ರತೆಯನ್ನು ತಲುಪುವವರೆಗೂ ಕಾಯುವುದಿಲ್ಲ, ಆತನು ನಿಮ್ಮ ಜೀವನದ ಪ್ರತಿಯೊಂದು ವಿವರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾನೆ.
🔹ನೀವು ಯಾವಾಗಲೂ ಆತನ ಮನಸ್ಸಿನಲ್ಲಿಯೇ ಇರುತ್ತೀರಿ.
ಕೀರ್ತನೆ 139:17 ಹೇಳುತ್ತದೆ, “ಓ ದೇವರೇ, ನನ್ನ ಕುರಿತಾದ ನಿನ್ನ ಆಲೋಚನೆಗಳು ಎಷ್ಟು ಅಮೂಲ್ಯವಾಗಿವೆ. ಅವುಗಳನ್ನು ಎಣಿಸಲು ಸಾಧ್ಯವಿಲ್ಲ!” ನಿಮ್ಮ ಕುರಿತು ದೇವರ ಆಲೋಚನೆಗಳು ಸ್ಥಿರವಾಗಿರುತ್ತವೆ. ನೀವು ಸಂತೋಷವಾಗಿರುವಾಗ, ಆತನು ನಿಮ್ಮೊಂದಿಗೆ ಅದನ್ನು ಸಂಭ್ರಮಿಸುತ್ತಾನೆ . ನೀವು ಚಿಂತಿತರಾದಾಗ, ಆತನು ನಿಮ್ಮನ್ನು ಸಾಂತ್ವನಗೊಳಿಸಲು ನಿಮ್ಮೆಡೆ ಒಲವು ತೋರುತ್ತಾನೆ. ನೀವು ಅತ್ಯಲ್ಪರು ಎಂದು ಭಾವಿಸಿದಾಗ, ನೀವು ಭಯಂಕರವಾಗಿ ಮತ್ತು ಅದ್ಭುತವಾಗಿ ರಚಿಸಲ್ಪಟ್ಟಿದ್ದೀರಿ ಎಂದು ಆತನು ನಿಮಗೆ ನೆನಪಿಸುತ್ತಾನೆ. ಯೆರೆಮೀಯ 29:11ರ ವಾಕ್ಯವು ಕೇವಲ ಒಂದು ಒಳ್ಳೆಯ ವಾಕ್ಯವಲ್ಲ. ಇದು ಒಂದು ವಾಗ್ದಾನವಾಗಿದೆ:
"ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು(ಯೋಜನೆಗಳನ್ನು) ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ." ಈ ಯೋಜನೆಗಳು ನಿಮ್ಮ ಜೀವನದ ಪ್ರಮುಖ ಮೈಲಿಗಲ್ಲುಗಳು ಮತ್ತು ನಿಮ್ಮ ದಿನದ ಸಣ್ಣ ಸಣ್ಣ ಕ್ಷಣಗಳನ್ನು ಸಹ ಒಳಗೊಂಡಿದೆ.
🔹ಆತನನ್ನು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಆಹ್ವಾನಿಸಿ
ನಾವು ದೇವರನ್ನು ಕೆಲವು ವಿಚಾರಗಳಿಂದ ಹೊರಗಿಟ್ಟು ನಾವು ಅನಗತ್ಯವಾಗಿ ಕಷ್ಟಪಡುತ್ತೇವೆ. ಆದ್ದರಿಂದ ಆತನನ್ನು ಒಳಗೆ ಬಿಡಿರಿ. ನಿಮ್ಮ ದೈನಂದಿನ ದಿನಚರಿಗಳಲ್ಲಿ, ನಿಮ್ಮ ಭಾವನಾತ್ಮಕ ಹೋರಾಟಗಳಲ್ಲಿ, ನಿಮ್ಮ ವ್ಯವಹಾರ ನಿರ್ಧಾರಗಳಲ್ಲಿ ಮತ್ತು ನಿಮ್ಮ ವಾರ್ಡ್ರೋಬ್ ಆಯ್ಕೆಗಳಲ್ಲಿಯೂ ಸಹ ಅವು ನಿಮಗೆ ಒತ್ತಡವನ್ನು ಉಂಟುಮಾಡಿದರೆ ಆತನನ್ನು ಆಹ್ವಾನಿಸಿ! ಆತನಿಗೆ ಯಾವುದೂ ಮಿತಿಯಿಲ್ಲ. ಮಗುವು ತನ್ನ ಪ್ರೀತಿಯ ತಂದೆತಾಯಿಗಳ ಮೇಲೆ ಆತುಕೊಳ್ಳುವಂತೆ ನೀವು ಆತನ ಮೇಲೆ ಆತುಕೊಳ್ಳಬೇಕೆಂದು ಆತನು ಬಯಸುತ್ತಾನೆ.
Bible Reading 2 Kings: 1-3
ಪ್ರಾರ್ಥನೆಗಳು
ಪರಲೋಕದ ತಂದೆಯೇ,
ಬಿರುಗಾಳಿಗಳಲ್ಲಿ ಮಾತ್ರವಲ್ಲ, ಮೌನದಲ್ಲಿಯೂ ನನ್ನನ್ನು ನೋಡುವ ದೇವರಾಗಿರುವುದಕ್ಕೆ ನಿನಗೇ ಸ್ತೋತ್ರ. ಕರ್ತನೇ ನಾನು ನಿನ್ನನ್ನು ಪ್ರೀತಿಸುತ್ತೇನೆ . ನನ್ನ ಹೊರೆಗಳನ್ನು ನಾನು ಒಂಟಿಯಾಗಿ ಹೊರಲು ಪ್ರಯತ್ನಿಸಿದ ಎಲ್ಲಾ ಸಮಯಗಳಿಗಾಗಿ ನನ್ನನ್ನು ಕ್ಷಮಿಸು . ಇಂದು, ನಾನು ಅವೆಲ್ಲವನ್ನೂ ನಿನಗೇ ಒಪ್ಪಿಸುತ್ತೇನೆ. ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್!!
ಬಿರುಗಾಳಿಗಳಲ್ಲಿ ಮಾತ್ರವಲ್ಲ, ಮೌನದಲ್ಲಿಯೂ ನನ್ನನ್ನು ನೋಡುವ ದೇವರಾಗಿರುವುದಕ್ಕೆ ನಿನಗೇ ಸ್ತೋತ್ರ. ಕರ್ತನೇ ನಾನು ನಿನ್ನನ್ನು ಪ್ರೀತಿಸುತ್ತೇನೆ . ನನ್ನ ಹೊರೆಗಳನ್ನು ನಾನು ಒಂಟಿಯಾಗಿ ಹೊರಲು ಪ್ರಯತ್ನಿಸಿದ ಎಲ್ಲಾ ಸಮಯಗಳಿಗಾಗಿ ನನ್ನನ್ನು ಕ್ಷಮಿಸು . ಇಂದು, ನಾನು ಅವೆಲ್ಲವನ್ನೂ ನಿನಗೇ ಒಪ್ಪಿಸುತ್ತೇನೆ. ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್!!
Join our WhatsApp Channel

Most Read
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.● ಪುರುಷರು ಯಾಕೆ ಪತನಗೊಳ್ಳುವರು -2
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಜೀವಬಾದ್ಯರ ಪುಸ್ತಕ
● ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ
ಅನಿಸಿಕೆಗಳು