ಅನುದಿನದ ಮನ್ನಾ
1
0
87
ನಿರಾಶೆಯನ್ನು ಜಯಿಸುವುದು ಹೇಗೆ?
Friday, 16th of May 2025
Categories :
ಜಯಿಸುವವನು (Overcomer)
ವಯಸ್ಸು, ಹಿನ್ನೆಲೆ ಅಥವಾ ಆತ್ಮೀಕ ನಂಬಿಕೆಗಳು ಎಲ್ಲವನ್ನೂ ಮೀರಿ ಪ್ರತಿಯೊಬ್ಬರೂ ಅನುಭವಿಸುವ ಒಂದು ಸಾರ್ವತ್ರಿಕ ಭಾವನೆ, ನಿರಾಶೆ. ನಿರಾಶೆ ಎಲ್ಲಾ ಆಕಾರಗಳಲ್ಲೂ ಮತ್ತು ಪ್ರಮಾಣದಲ್ಲೂ ಬರುವಂತದ್ದೇ: ನಿರೀಕ್ಷೆಗಳು ಈಡೇರದಿದ್ದಾಗ, ನಂಬಿಕೆಯು ಮುರಿದುಹೋದಾಗ ಅಥವಾ ಸಂವಹನ ಮುರಿದುಹೋದಾಗ ಸಂಬಂಧಗಳಲ್ಲಿ ನಿರಾಶೆ ಪ್ರಕಟವಾಗಬಹುದಾಗಿದೆ.
ಕೆಲವೊಮ್ಮೆ, ನಮ್ಮ ವೃತ್ತಿಪರ ಜೀವನದಲ್ಲಿ ಬಡ್ತಿ ಸಿಗದಿರುವುದು, ಉದ್ಯೋಗ ನಷ್ಟವನ್ನು ಎದುರಿಸುವುದು ಅಥವಾ ನಾವು ಆಯ್ಕೆ ಮಾಡಿದ ವೃತ್ತಿ ಮಾರ್ಗವು ಸಾಫಲ್ಯ ತರದೇ ಹೋಗುವಂತದ್ದು ಎಂದು ತಿಳಿದುಬರುವಾಗ ನಿರಾಶೆಯನ್ನು ನಾವು ಎದುರಿಸಬಹುದು. ಅನಿರೀಕ್ಷಿತ ವೆಚ್ಚಗಳು, ಸಾಲ ಅಥವಾ ಸ್ಥಿರ ಆದಾಯದ ನಷ್ಟದಿಂದ ಆರ್ಥಿಕ ನಿರಾಶೆಗಳು ಉಂಟಾಗಬಹುದು. ಸ್ವಯಂ ನಮಗೆ ಅಥವಾ ನಮ್ಮ ಪ್ರೀತಿಪಾತ್ರರ ಆರೋಗ್ಯ ಸಮಸ್ಯೆಗಳಿಂದಲೂ ನಿರಾಶೆ ಉಂಟಾಗಬಹುದು. ಈ ಸಂದರ್ಭಗಳು ಭಾವನಾತ್ಮಕವಾಗಿಯೂ ಮತ್ತು ದೈಹಿಕವಾಗಿಯೂ ನಮಗೆ ಭಾರ ಎನಿಸಬಹುದು.
ಸತ್ಯವೇದದಲ್ಲಿ , ನಾವು ಸಾರಾ (ಆದಿಕಾಂಡ 21:1-3),
ರೆಬೆಕ್ಕ (ಆದಿಕಾಂಡ 25:21),
ರಾಹೇಲಳು (ಆದಿಕಾಂಡ 30:22-24), ಮತ್ತು ಹನ್ನಾ (1 ಸಮುವೇಲ 1:19-20) ಅವರ ಕಥೆಗಳನ್ನು ನೋಡುತ್ತೇವೆ. ಈ ಎಲ್ಲಾ ಸ್ತ್ರೀಯರು ಅನೇಕ ವರ್ಷಗಳ ಕಾಲ ಮಕ್ಕಳಿಲ್ಲದೆ ನಿರಾಶೆಗೊಂಡಿದ್ದರು. ಪ್ರವಾದಿಯಾದ ಎಲೀಯನು ಸಹ ತೀವ್ರ ನಿರಾಶೆಯನ್ನು ಅನುಭವಿಸಿದನು. ಅವನು ಬಹಳವಾಗಿ ನಿರುತ್ಸಾಹಗೊಂಡು, ಅವನು ತನ್ನ ಪ್ರಾಣವನ್ನು ತೆಗೆದುಕೊಳ್ಳುವಂತೆ ದೇವರ ಬಳಿ ಬೇಡಿದನು (1 ಅರಸುಗಳು 19:4).
ನಿರಾಶೆ ಅನುಭವಿಸುವುದು ಪಾಪವಲ್ಲ:
ನಿರಾಶೆ ಅನುಭವಿಸುವುದು ಪಾಪವಲ್ಲ; ನಾವು ಅದನ್ನು ಹೇಗೆ ಜಯಿಸುತ್ತೇವೆ ಎಂಬುದೇ ನಿರ್ಣಾಯಕ ವಿಷಯ. ನಿರಾಶೆಗೆ ಸಂಬಂಧಿಸಿದ ಭಾವನೆಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ ಎಂಬುದು ನಿಜವಾಗಿಯೂ ಪ್ರಾಮುಖ್ಯವಾದದ್ದು.
ನಿಮಗೆ ನಿರಾಷೆಯಾದಾಗ ಅದುವೇ ನಿಮ್ಮ ಜೀವನದ ಅಂತ್ಯವೆಂದು ನೋಡಬೇಡಿ. ನಿರಾಶೆಯು ನೋವಿನಿಂದ ಕೂಡಿದ್ದರೂ, ಅದು ನಿಮ್ಮ ಆತ್ಮೀಕ ಬೆಳವಣಿಗೆಗೂ ಮತ್ತು ನೀವು ಆಳವಾದ ತಿಳುವಳಿಕೆ ಹೊಂದಲೂ ಅವಕಾಶವಾಗಿಯೂ ಸಹ ಅದು ಕಾರ್ಯನಿರ್ವಹಿಸಬಲ್ಲದು.
ಜೀವನದಲ್ಲಿ ನಿರಾಶೆಯನ್ನು ನಿಭಾಯಿಸಲು ಮತ್ತು ಜಯಿಸಲು ಇರುವ ಕೆಲವು ಸತ್ಯವೇದದ ಮಾರ್ಗಗಳು ಇಲ್ಲಿವೆ
1. "ಅವರು" ನಿಮ್ಮನ್ನು ಇಷ್ಟ ಪಡುತ್ತಿಲ್ಲ ಎಂಬ ಕಾರಣಕ್ಕಾಗಿ, ಯೇಸು ನಿಮ್ಮನ್ನು ಕೈಬಿಟ್ಟಿದ್ದಾನೆ ಎಂದರ್ಥವಲ್ಲ.
ವಿಶೇಷವಾಗಿ ನಿರಾಶೆಯನ್ನು ಎದುರಿಸುವಾಗಲೇ ಯೇಸು ಕ್ರಿಸ್ತನಲ್ಲಿ ನಮ್ಮ ಬೆಲೆ ಏನು ಎಂದು ಅರ್ಥಮಾಡಿಕೊಳ್ಳುವಂತದ್ದು ಅತ್ಯಂತ ಮಹತ್ವದ್ದಾಗಿದೆ. ಆಗಾಗ್ಗೆ, ನಾವು ನಮ್ಮ ಮುರಿದು ಬಿದ್ದ ಸಂದರ್ಭಗಳನ್ನು ಪರಿಶೀಲಿಸುತ್ತಾ ಅವುಗಳನ್ನೇ ಅತಿಯಾಗಿ ವಿಶ್ಲೇಷಿಸುತ್ತಾ ಇರುತ್ತೇವೆ, ಮತ್ತು "ನಾನು ನಿಷ್ಪ್ರಯೋಜಕ" ಅಥವಾ "ಬಹುಶಃ ನನ್ನ ಜೀವಿತದಲ್ಲೆಲ್ಲಾ ಬರೀ ನಿರಾಶೆಯನ್ನೆ ಅನುಭವಿಸಬೇಕು " ಎಂಬಂತಹ ಆಲೋಚನೆಗಳ ಕಡೆಗೇ ನಮ್ಮನ್ನು ಕರೆದೊಯ್ಯುತ್ತೇವೆ.
ಆದಾಗಿಯೂ , ಇಂಥ ಆಲೋಚನೆಗಳು ನಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳದಂತೆ ನಮ್ಮನ್ನು ತಡೆಯುವಂತದ್ದಾಗಿವೆ. ನಿರಾಶೆಯನ್ನು ಜಯಿಸಬೇಕೆಂದರೆ, ಮೊದಲು "ದೇವರು ನಮ್ಮನ್ನು ಎಂದಿಗೂ ಆಶಾಭಂಗ ಪಡಿಸುವುದಿಲ್ಲ "ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಅನುಭವಿಸಿದ ನಿರಾಶೆಗಳು ನಮ್ಮಲ್ಲಿ ದುಃಖ ತರುವತಂದ್ದು ಮತ್ತು ನೋವಲ್ಲಿ ಸಾಗಿಸುವುದು ಸಂಪೂರ್ಣವಾಗಿ ಸಹಜವೇ, ಆದರೆ ನಿರೀಕ್ಷೆಯನ್ನೇ ಬಿಟ್ಟುಬಿಡುವುದು ಧೈರ್ಯಕಳೆದುಕೊಳ್ಳುವುದು ಒಂದು ಆಯ್ಕೆಯಲ್ಲ. ಬದಲಾಗಿ, ನಾವು ದೇವರ ವಾಕ್ಯದ ಬಲವನ್ನು ಬಳಸಿಕೊಂಡು ನಮ್ಮನ್ನು ಮುನ್ನಡೆಸುವಂತೆ ಅದನ್ನು ವೇಗವರ್ಧಕವಾಗಿ ಬಳಸಬೇಕು.
ಮತ್ತು "ನಾನು ಯುಗದ ಅಂತ್ಯದವರೆಗೂ ಯಾವಾಗಲೂ ನಿಮ್ಮೊಂದಿಗಿರುತ್ತೇನೆ ."ಎಂದು ಯೇಸು ಹೇಳಿದ್ದಾನೆ. (ಮತ್ತಾಯ 28:20 )ಇದನ್ನು ಖಚಿತವಾಗಿ ನಂಬಬೇಕು.
ದೇವರ ಅಚಲ ಪ್ರೀತಿ ಮತ್ತು ಬೆಂಬಲ ನಮಗಿರುವಾಗ ಅದು ಜೀವನದ ಸವಾಲುಗಳ ಮೂಲಕ ನಮಗೆ ಮಾರ್ಗದರ್ಶನ ನೀಡಿ, ನಮ್ಮ ಹಿನ್ನಡೆಗಳನ್ನೇ ಬೆಳವಣಿಗೆ ಮತ್ತು ಸ್ವಯಂ-ಅನ್ವೇಷಣೆಗೆ ಅವಕಾಶಗಳಾಗಿ ಮಾರ್ಪಡಿಸುತ್ತದೆ. ನಿರಾಶೆಯ ನಕಾರಾತ್ಮಕತೆಯಿಂದ ಯೇಸು ಕ್ರಿಸ್ತನಲ್ಲಿ ಕಂಡುಬರುವ ನಿರೀಕ್ಷೆ ಮತ್ತು ಶಕ್ತಿಯ ಕಡೆಗೆ ನಮ್ಮ ಗಮನವನ್ನು ಬದಲಾಯಿಸುವ ಮೂಲಕ, ನಾವು ನಮ್ಮ ಭಯ ಮತ್ತು ಅನುಮಾನಗಳನ್ನು ಜಯಿಸಬಹುದು, ಅಂತಿಮವಾಗಿ ನಮ್ಮನ್ನುಅದು ಹೆಚ್ಚು ಉತ್ಪಾದಕತೆಯ ಮತ್ತು ಉದ್ದೇಶ-ಚಾಲಿತ ಜೀವನಕ್ಕೆ ಕರೆದೊಯ್ಯಬಹುದು.
2. ನಿರಾಶೆಗಳು ನಿಮ್ಮ ಜೀವನದಲ್ಲಿ ಒಂದು ತಿರುವು ಆಗಿರಬಹುದು
ದೇವರು ನಿಮ್ಮ ಕಥೆಯನ್ನು ತನ್ನ ಮಹಿಮೆಗಾಗಿ ಬಳಸುವಾಗ ನಿರಾಶೆಗಳು ನಿಮ್ಮ ಜೀವನದಲ್ಲಿ ಒಂದು ತಿರುವು ಆಗಿರಬಹುದು. ಪ್ರಪಂಚದ ಮೇಲೆ ಪ್ರಭಾವ ಬೀರಿದಂತ ಮತ್ತು ಮಹಿಮೆ ಪಡಿಸಿದಂತ ಸಾಕ್ಷ್ಯದೊಂದಿಗೆ ಅನೇಕರು ಚಿತಾಭಸ್ಮದಿಂದ ಎದ್ದಿದ್ದಾರೆ.
ಯೋಸೆಫನು ತನ್ನನ್ನು ನಿರಾಶೆಗೆ ತಳ್ಳಿದ ತನ್ನ ಸಹೋದರರಿಗೆ,
" - ಹೆದರಬೇಡಿರಿ; ನಾನೇನು ದೇವರ ಪ್ರತಿನಿಧಿಯೇ? ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದ್ದಿರಿ; ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು. ಈಗ ಅನುಭವಕ್ಕೆ ಬಂದ ಪ್ರಕಾರವೇ ಅನೇಕ ಪ್ರಾಣಿಗಳಿಗೆ ಸಂರಕ್ಷಣೆಯುಂಟಾಗುವಂತೆ ಮಾಡಿದನು. " ಎಂದು ಹೇಳಿದನು. (ಆದಿಕಾಂಡ 50:19,20)
3. ನಿಮ್ಮ ನಿರಾಶೆಯನ್ನು ಗುರುತಿಸಿ ಮತ್ತು ಯೇಸುವಿನೊಂದಿಗೆ ಭೇಟಿಯಾಗಲು ಸಮಯವನ್ನು ತೆಗೆದುಕೊಳ್ಳಿ
"ಆತನು ಮುರಿದ ಹೃದಯದವರನ್ನು ಗುಣಪಡಿಸುತ್ತಾನೆ ಮತ್ತು ಅವರ ಗಾಯಗಳನ್ನು ಕಟ್ಟುತ್ತಾನೆ." (ಕೀರ್ತನೆ 147:3)
ನಿಮ್ಮ ನಿರಾಶೆಯ ನೋವುಗಳನ್ನು ಹಾಗೇ ತೆರೆದ ಗಾಯಗಳಾಗಿ ಹುದುಗಲು ಬಿಡದಿರುವುದು ಮುಖ್ಯವಾದ ಒಂದು ಕಾರ್ಯವಾಗಿದೆ. ನಾವು ನಮ್ಮ ನಿರಾಶೆಗಳನ್ನು ಒಪ್ಪಿಕೊಳ್ಳುವುದು ಮತ್ತು ಮಹಾನ್ ವೈದ್ಯನಾದ ಯೇಸು ಕ್ರಿಸ್ತನ ಸಾಂತ್ವನದಾಯಕ ಉಪಸ್ಥಿತಿಯಲ್ಲಿ ಸಾಂತ್ವನವನ್ನು ಪಡೆಯುವುದು ಅತ್ಯಗತ್ಯವಾಗಿದೆ. ಆತನ ಮಾರ್ಗದರ್ಶನವಿಲ್ಲದೆ, ಜೀವನದ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಲು ಪ್ರಯತ್ನಿಸುವುದು ವ್ಯರ್ಥ ಪ್ರಯತ್ನವಾಗಿದ್ದು, ಅದು ನಮ್ಮನ್ನು ಇನ್ನಷ್ಟು ನೋವು ಮತ್ತು ನಿರಾಶೆಗೆ ದೂಡುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟು ಕೊಳ್ಳಬೇಕು.
ನಿರಾಶೆಯ ಸಮಯದಲ್ಲಿ ನಾವು ಯೇಸುವಿನ ಕಡೆಗೆ ತಿರುಗಿಕೊಳ್ಳುವಾಗ, ನಾವು ಆತನ ಗುಣಪಡಿಸುವ ಸ್ಪರ್ಶಕ್ಕೆ ನಮ್ಮನ್ನು ತೆರೆದುಕೊಳ್ಳುತ್ತೇವೆ, ನಮ್ಮ ಮುರಿದ ಹೃದಯಗಳನ್ನು ಸರಿಪಡಿಸಲು ಮತ್ತು ನಮ್ಮ ಆತ್ಮಗಳನ್ನು ಪುನಃಸ್ಥಾಪಿಸಲು ಆತನಿಗೆ ಅವಕಾಶ ನೀಡುತ್ತೇವೆ. ಆತನ ಉಪಸ್ಥಿತಿಯನ್ನು ಅಪ್ಪಿಕೊಳ್ಳುವ ಮೂಲಕ, ನಾವು ಒಬ್ಬಂಟಿಯಾಗಿ ಬದುಕಲು ಸಾಧ್ಯವಿಲ್ಲ ಎಂದು ನಾವು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ಆತನ ಉತ್ತೇಜನದ ಮೂಲಕ ಮಾತ್ರವೇ ನಾವು ನಿಜವಾಗಿಯೂ ಅಭಿವೃದ್ಧಿ ಹೊಂದಬಹುದು.
Bible Reading: 1 Chronicles 7-8
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀನು ನನಗಾಗಿ ಮಾಡಿಟ್ಟುಕೊಂಡಿರುವ ಎಲ್ಲಾ ಆಲೋಚನೆಗಳು ನನ್ನ ಮೇಲಿಗಾಗಿಯೇ ಮತ್ತು ನನ್ನನ್ನು ಅಭಿವೃದ್ಧಿ ಪಡಿಸುವುದಕ್ಕಾಗಿಯೇ ಎಂದು ತಿಳಿದುಕೊಂಡು ನಾನು ದೀನತೆಯಿಂದ ನಿನ್ನ ಮುಂದೆ ಬರುತ್ತೇನೆ. ನೀನು ಯಾವಾಗಲೂ ನನ್ನೊಂದಿಗಿದ್ದೀಯ ಎಂದು ಭರವಸೆಯಿಟ್ಟು ಅಚಲವಾದ ನಂಬಿಕೆಯೊಂದಿಗೆ ಜೀವನದ ಎಲ್ಲಾ ನಿರಾಶೆಗಳನ್ನು ಎದುರಿಸಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡು. ಆಮೆನ್!
Join our WhatsApp Channel

Most Read
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ಪುರುಷರು ಯಾಕೆ ಪತನಗೊಳ್ಳುವರು -2
● ದೇವರು ಹೇಗೆ ಒದಗಿಸುತ್ತಾನೆ #4
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
ಅನಿಸಿಕೆಗಳು