ಅನುದಿನದ ಮನ್ನಾ
1
0
118
ನಿಮ್ಮ ಮನೋಭಾವವು ನಿಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತದೆ
Saturday, 17th of May 2025
Categories :
ನಡವಳಿಕೆಯ (Attitude)
"ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." (2 ಕೊರಿಂಥ 9:7)
"ನಿಮ್ಮ ಮನೋಭಾವವು ನಿಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತದೆ" ಎಂದು ಯಾರೋ ಒಬ್ಬರು ಹೇಳಿದ್ದಾರೆ. ದೇವರ ರಾಜ್ಯದಲ್ಲಿ ನೀವು ಎಷ್ಟು ಪ್ರಗತಿ ಸಾಧಿಸುತ್ತೀರಿ ಎಂಬುದು ನಿಮ್ಮ ಮನೋಭಾವದ ಮೇಲೆ ನಿರ್ಧರಿತವಾಗುತ್ತದೆ.
ಕರ್ತನಿಗೆ ನಾವು ಕಾಣಿಕೆಗಳನ್ನು ಕೊಡುವಾಗ ನಮ್ಮ ಮನೋಭಾವ ಹೇಗಿರಬೇಕು? ಕೊಡುವ ವಿಷಯದಲ್ಲಿ ಅಪೊಸ್ತಲ ಪೌಲನು ನಾಲ್ಕು ರೀತಿಯ ಹೃದಯ ಮನೋಭಾವಗಳನ್ನು ವಿವರಿಸುತ್ತಾನೆ.
1. ಪ್ರತಿಯೊಬ್ಬನು ತನ್ನ ಸ್ವಂತ ಮನಸ್ಸನ್ನು ನಿರ್ಣಯಿಸಿ ಕೊಂಡ ಪ್ರಕಾರ ತನ್ನ ಹೃದಯದಲ್ಲಿ ಉದ್ದೇಶಿಸಿದಂತೆ
2. ದುಃಖವಿಲ್ಲದೆ (ಇಷ್ಟಪಟ್ಟು )
3. ಬಲಾತ್ಕಾರವಿಲ್ಲದೆ (ಕಡ್ಡಾಯ ಅಂದುಕೊಳ್ಳದೆ)
4. ಸಂತೋಷದಿಂದ ನೀಡಬೇಕು.
ನಾವು ದೇವರಿಗೆ ಕೊಡುವುದು ದೇವರು ನಮ್ಮ ಕಾಣಿಕೆಗಳಿಗಾಗಿಯೇ ಕಾಯುತ್ತಿರುವುದರಿಂದಲ್ಲ. ಮನುಷ್ಯನು ಹುಟ್ಟಿನಿಂದಲೇ ಕೇವಲ ಸ್ವೀಕರಿಸುವವನಾಗಿಯೇ ಇರುತ್ತಾನೆ. ಆದರೆ ಕೊಡುವಂತದ್ದೇ ಯಾವಾಗಲೂ ನಮ್ಮ ಹೃದಯಗಳೊಂದಿಗೆ ಆಮೂಲಾಗ್ರವಾಗಿ ವ್ಯವಹರಿಸುವಂಥದ್ದು.
ನಾವು ಪ್ರತಿ ಬಾರಿ ನೀಡುವಾಗ ನಮ್ಮೊಳಗಿನ ಯಾವುದೊ ಒಂದು ಸಾಯುತ್ತಿರುತ್ತದೆ. ಒಳಗಿನ ಯಾವುದೊ ಸತ್ತಾಗ ಅದು ದೇವರ ಜೀವ ಮತ್ತು ಶಕ್ತಿಯನ್ನು ನಮ್ಮಲ್ಲಿ ಬಿಡುಗಡೆ ಮಾಡುತ್ತದೆ.
ಎಲ್ಲೋ ಯಾರಿಂದಲೋ ನೋವುಂಟಾದ ಕಾರಣ ಕೆಲವರು ತಾವು ಕಾಣಿಕೆ ಕೊಡುವುದನ್ನು ನಿಲ್ಲಿಸಿಬಿಡುತ್ತಾರೆ . ಬಹುಶಃ ಯಾರೂ ಅವರನ್ನು ಮೆಚ್ಚಲಿಲ್ಲವೆಂದೊ ಅಥವಾ ಅದನ್ನು ಸನ್ಮಾನಿಸಲಿಲ್ಲವೆಂದೋ ಕಾಣಿಕೆ ಕೊಡುವುದನ್ನೇ ಬಿಟ್ಟುಬಿಟ್ಟಿರುತ್ತಾರೆ. ಆದ್ದರಿಂದ ದೇವರ ಕೆಲಸಕ್ಕೆ ಕಾಣಿಕೆ ನೀಡುವುದು ನಿಂತು ಹೋಗಿರುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ದಾನದ ಬಗ್ಗೆ ನಕಾರಾತ್ಮಕವಾಗಿ ಓದಿದ ಕಾರಣ ಕಾಣಿಕೆ ನೀಡುವುದನ್ನು ನಿಲ್ಲಿಸಿದವರು ಇನ್ನೂ ಕೆಲವರು. ಯಾವುದೊ ಒಂದು ಚರ್ಚ್ ತನ್ನ ಹಣಕಾಸು ನಿರ್ವಹಿಸುವಲ್ಲಿ ನಂಬಿಗಸ್ತರಾಗಿರಲಿಲ್ಲ ಎಂಬ ಕಾರಣಕ್ಕಾಗಿ ಎಲ್ಲರೂ ಹಾಗೆಯೇ ಇರುತ್ತಾರೆ ಎಂದು ಅರ್ಥವಲ್ಲ - ಅದು ಧರ್ಮನಿಂಧನೆಯಾಗಿದೆ.ಇಂದಿಗೂ ಸಹ ದೇವರ ಸೇವೆಯನ್ನು ತ್ಯಾಗಮನೋಭಾವದಿಂದ ಮಾಡುವ ನಂಬಿಗಸ್ತ ಪಾಸ್ಟರ್ಗಳು , ನಾಯಕರು ಇದ್ದಾರೆ.
ಕೊನೆಯದಾಗಿ, ಚರ್ಚ್ಗಳು ತಾವು ನೀಡುವ ಕಾಣಿಕಗಾಗಿ ತಮಗೆ ಉಪಚಾರದಲ್ಲಿ ಆದ್ಯತೆಯನ್ನು ನಿರೀಕ್ಷಿಸುವ ಕೆಲವರು ಇದ್ದಾರೆ. ನೀವು ಕರ್ತನಿಗೆ ಕೊಟ್ಟಿದ್ದೀರಿ ಮತ್ತು ಆದ್ದರಿಂದ ನೀವು ಕರ್ತನಿಂದ ನಿಮ್ಮ ಆಶೀರ್ವಾದವನ್ನು ನಿರೀಕ್ಷಿಸಬೇಕು. ಆದರೆ ಅಂತಹ ಜನರು ತಾವು ನಿರೀಕ್ಷೆಸಿದಂತ ಆದ್ಯತೆಯ ಉಪಚಾರ ಪಡೆಯದಿದ್ದಾಗ, ಅವರು ಮನನೊಂದು ಕೊಳ್ಳುತ್ತಾರೆ.
ನಾವು ದೇವರು ನಮಗೆ ಅನುಗ್ರಹಿಸಿದ ಸಂಪನ್ಮೂಲಗಳ ಮೇಲ್ವಿಚಾರಕರು ಮಾತ್ರವಾಗಿದ್ದೇವೆಯೇ ಹೊರತು ನಾವೇ ಅದರ ಮಾಲೀಕರಲ್ಲ ಎಂಬುದನ್ನು ನಾವು ಅನೇಕ ಬಾರಿ ಮರೆತುಬಿಡುತ್ತೇವೆ.
"ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮಮಾಡಿದನು. ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು."(ಆದಿಕಾಂಡ 4:3-5)
ಒಂದೇ ಮನೆಯಲ್ಲಿ ಬೆಳೆದ ಇಬ್ಬರು ಸಹೋದರರ ಕಥೆಯನ್ನು ಮೇಲೆ ನೀಡಲಾಗಿದೆ, ಅವರು ಒಬ್ಬನೇ ದೇವರಿಗೆ ಕಾಣಿಕೆ ಅರ್ಪಿಸುತ್ತಾರೆ ಆದರೆ ಕಾಣಿಕೆ ನೀಡುವ ಕುರಿತು ಅವರಿಬ್ಬರಲ್ಲಿನ ಮನೋಭಾವವು ಬಹಳ ವಿಭಿನ್ನವಾಗಿತ್ತು. ಒಬ್ಬ ಸಹೋದರನು ತನ್ನಲ್ಲಿರುವ ಅತ್ಯುತ್ತಮವಾದದ್ದನ್ನು ಪ್ರೀತಿಯಿಂದ ಸರಿಯಾದ ಮನೋಭಾವದಿಂದ ಕೊಟ್ಟನು. ಆದರೆ ಮತ್ತೊಬ್ಬ ಸಹೋದರ ತನ್ನಲ್ಲಿ ಉಳಿದದ್ದನ್ನು ಕೊಟ್ಟನು.
Bible Reading: 1 Chronicles 9-11
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ವಿಷಯವನ್ನು ಕನಿಷ್ಠ 2 ನಿಮಿಷ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಪ್ರಾರ್ಥಿಸಬೇಕು.
ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆ
ತಂದೆಯೇ, ಯೇಸುವಿನ ಹೆಸರಿನಲ್ಲಿ, ನಾನು ಗೊಣಗುತ್ತಿದ್ದನ್ನು ಮತ್ತು ದೂರಿದ್ದನ್ನು ಕ್ಷಮಿಸಿ. ನೀವು ನನಗೆ ವಹಿಸಿಕೊಟ್ಟಿರುವ ಸಂಪನ್ಮೂಲಗಳಿಗಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನಿಮ್ಮ ದೃಷ್ಟಿಯಲ್ಲಿ ಉತ್ತಮ ಮೇಲ್ವಿಚಾರಕನಾಗಲು ನನಗೆ ಸಹಾಯ ಮಾಡಿ. ನನ್ನ ಬಳಿ ಯಾವಾಗಲೂ ಕೊಟ್ಟು ಮಿಕ್ಕುವಷ್ಟೇ ಇರುತ್ತದೆ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ.
ಕುಟುಂಬದ ರಕ್ಷಣೆಗಾಗಿ
ತಂದೆಯೇ, ನಿಮ್ಮ ವಾಕ್ಯವು ಹೇಳುತ್ತದೆ, "ತಂದೆಯು ಅವರನ್ನು ಸೆಳೆಯದ ಹೊರತು ಯಾರೂ [ಯೇಸುವಿನ] ಬಳಿಗೆ ಬರಲು ಸಾಧ್ಯವಿಲ್ಲ" (ಯೋಹಾನ 6:44)" ಎಂದು . ಹಾಗಾಗಿ ನನ್ನ ಎಲ್ಲಾ ಸದಸ್ಯರು ನಿಮ್ಮನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವಂತೆ ಮತ್ತು ನಿಮ್ಮೊಂದಿಗೆ ನಿತ್ಯತ್ವವನ್ನು ಕಳೆಯುವಂತೆ ನಿಮ್ಮ ಮಗನಾದ ಯೇಸುವಿನ ಬಳಿಗೆ ನೀವು ಸೆಳೆಯಬೇಕೆಂದು ನಾನು ಯೇಸುನಾಮದಲ್ಲಿ ಕೇಳಿಕೊಳ್ಳುತ್ತೇನೆ.
ಆರ್ಥಿಕ ಪ್ರಗತಿ
ಓ ಕರ್ತನೇ, ಯೇಸುವಿನ ಹೆಸರಿನಲ್ಲಿ ಲಾಭದಾಯಕವಲ್ಲದ ಮತ್ತು ಫಲಪ್ರದವಲ್ಲದ ಶ್ರಮದಿಂದ ನನ್ನನ್ನು ಬಿಡಿಸು. ದಯವಿಟ್ಟು ನನ್ನ ಕೈಗಳ ಕೆಲಸವನ್ನು ಆಶೀರ್ವದಿಸಿ. ಇಂದಿನಿಂದ ನನ್ನ ವೃತ್ತಿಜೀವನ ಮತ್ತು ಸೇವೆಯ ಆರಂಭದಿಂದಲೂ ನನ್ನ ಎಲ್ಲಾ ಹೂಡಿಕೆಗಳು ಮತ್ತು ಶ್ರಮವು ಯೇಸುವಿನ ಹೆಸರಿನಲ್ಲಿ ಪೂರ್ಣ ಲಾಭವನ್ನು ನೀಡಲು ಪ್ರಾರಂಭಿಸುತ್ತದೆ.
KSM ಚರ್ಚ್:
ತಂದೆಯೇ, ಯೇಸುವಿನ ಹೆಸರಿನಲ್ಲಿ, ಪಾಸ್ಟರ್ ಮೈಕೆಲ್ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಅವರ ಎಲ್ಲಾ ತಂಡದ ಎಲ್ಲಾ ಸದಸ್ಯರು ಉತ್ತಮ ಆರೋಗ್ಯದಿಂದ ಇರಬೇಕೆಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ನಿಮ್ಮ ಸಮಾಧಾನವು ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಯೇಸುನಾಮದಲ್ಲಿ ಸುತ್ತುವರೆದಿರಲಿ.
ದೇಶ:
ತಂದೆಯೇ, ಯೇಸುವಿನ ಹೆಸರಿನಲ್ಲಿ, ಈ ರಾಷ್ಟ್ರವನ್ನು ಆಳಲು ಬುದ್ಧಿವಂತ ಮತ್ತು ತಿಳುವಳಿಕೆಯುಳ್ಳ ನಾಯಕರು, ಪುರುಷರು ಮತ್ತು ಮಹಿಳೆಯರನ್ನು ಎಬ್ಬಿಸಿ.
Join our WhatsApp Channel

Most Read
● ಏಳು ಪಟ್ಟು ಆಶೀರ್ವಾದ● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ಎಚ್ಚರಿಕೆಯನ್ನು ಗಮನಿಸಿ
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
ಅನಿಸಿಕೆಗಳು