ಇಸ್ರೇಲ್‌ನ ಅಂಧಕಾರದ ದಿನಗಳಲ್ಲಿ, ಈಜೆಬೆಲ್ ಎಂಬ ದುಷ್ಟ ಹೆಂಗಸು ತನ್ನ ದುರ್ಬಲ ಗಂಡನಾದ ರಾಜ ಅಹಾಬನನ್ನು ತನಗೆ ಬೇಕಾದ ಹಾಗೇ ರಾಷ್ಟ್ರವನ್ನು ಆಳಲು ಕುಶಲತೆಯಿಂದ ಬಳಸಿಕೊಂಡಳು. ಈ ಭ್ರಷ್ಟ ದಂಪತಿಗಳು ಇಸ್ರೇಲ್ ಅನ್ನು ದಾರಿ ತಪ್ಪಿಸಿ ವಿಗ್ರಹಾರಾಧನೆ ಮತ್ತು ಅನ್ಯಾಯಕ್ಕೆ ಕೈಹಾಕಲು ಉತ್ತೇಜಿಸಿದರು.
ಇಂಥ ಅವ್ಯವಸ್ಥೆಯ ನಡುವೆ, ನಂಬಿಕೆಯನ್ನು ಪುನಃಸ್ಥಾಪಿಸಲು ಮತ್ತು ಜನರನ್ನು ತನ್ನ ಕಡೆಗೆ ನೀತಿ ಮತ್ತು ಭಕ್ತಿಗೆ ಮರಳಿ ಬರುವಂತೆ ಮಾರ್ಗದರ್ಶನ ಮಾಡಲು ದೇವರು ಪ್ರವಾದಿಯಾದ ಎಲೀಯನನ್ನು ಅವರ ಬಳಿಗೆ ಕಳುಹಿಸಿದನು. ಎಲೀಯನು ಬಾಳನ ಸುಳ್ಳು ಪ್ರವಾದಿಗಳಿಗೆ ಸವಾಲು ಹಾಕುತ್ತಾ, "ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದು ನಿಶ್ಚಯಿಸೋಣ ಅಂದನು. ಎಲ್ಲಾ ಜನರೂ - ಸರಿ, ನೀನು ಹೇಳಿದಂತೆಯೇ ಆಗಲಿ ಎಂದು ಉತ್ತರಕೊಟ್ಟರು. (1 ಅರಸುಗಳು 18:24)
ದಿನವಿಡೀ, ಮುಂಜಾನೆಯಿಂದ ಸಂಜೆಯವರೆಗೆ, ಬಾಳನ ಸುಳ್ಳು ಪ್ರವಾದಿಗಳು ಪ್ರತಿಕ್ರಿಯೆಗಾಗಿ ಆಶಿಸುತ್ತಾ ತಮ್ಮ ದೇವರನ್ನು ಆಸಕ್ತಿಯಿಂದ ಪ್ರಾರ್ಥಿಸಿದರು. ಆದಾಗ್ಯೂ, ಅವರ ಕೂಗುಗಳಿಗೆ ಸಂಪೂರ್ಣ ಮೌನ ಬಿಟ್ಟು ಬೇರೆ ಯಾವ ಉತ್ತರಸಿಗದೆ ಅದು ಬಾಳನ ಶಕ್ತಿಹೀನತೆಯನ್ನು ಪ್ರದರ್ಶಿಸಿದವು.
"ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿನ ಯೆಹೋವವೇದಿಯನ್ನು ತಿರಿಗಿ ಕಟ್ಟಿಸಿದನು.(1 ಅರಸುಗಳು 18:30)
ತಾನು ಕರ್ತನ ಪ್ರಬಲ ಪ್ರವಾದಿಯಾಗಿದ್ದಾಗಲೂ, ಕರ್ತನು ಬೆಂಕಿಯಿಂದ ಉತ್ತರಿಸಬೇಕಾದರೆ, ಮುರಿದುಬಿದ್ದಿರುವ ಕರ್ತನ ಯಜ್ಞವೇಧಿಯನ್ನು ದುರಸ್ತಿ ಮಾಡಬೇಕು ಎಂಬುದು ಎಲೀಯನಿಗೆ ತಿಳಿದಿತ್ತು. ಇದನ್ನು ನೆನಪಿಡಿ: ದೇವರ ಬೆಂಕಿ ಎಂದಿಗೂ ಮುರಿದ ಯಜ್ಞವೇಧಿಯ ಮೇಲೆ ಬೀಳುವುದಿಲ್ಲ. ಬೆಂಕಿ ಬೀಳುವ ಮೊದಲು ಯಜ್ಞವೇಧಿಯನ್ನು ದುರಸ್ತಿ ಮಾಡಲೇಬೇಕು. ಪರಲೋಕದಿಂದ ಬೆಂಕಿಯು ತಮ್ಮ ಮೇಲೆ ಬೀಳುವ ಮೊದಲು ಅಪೊಸ್ತಲರು ಸಹ ಸುಮಾರು ಹತ್ತು ದಿನಗಳ ಕಾಲ ಕಾಯಬೇಕಾಯಿತು.
"ನಾನು ಪ್ರಾರ್ಥಿಸಿದೆ, ಆದರೆ ಏನೂ ಆಗಲಿಲ್ಲ. ದೇವರು ಏಕೆ ಉತ್ತರಿಸಲಿಲ್ಲ?" ಎಂದು ನನಗೆ ಬರೆಯುವ ಅನೇಕರಿದ್ದಾರೆ. ಅದರ ಹಿಂದಿನ ಎಲ್ಲಾ ಕಾರಣಗಳು ನನಗೆ ತಿಳಿದಿಲ್ಲವಾದರೂ, ನನಗೆ ತಿಳಿದಿರುವ ಒಂದು ವಿಷಯವೆಂದರೆ ಯಜ್ಞವೇಧಿಯು ಮುರಿದು ಹೋಗಿದ್ದರೆ ಬೆಂಕಿ ಬೀಳುವುದೂ ಇಲ್ಲಾ - ದೇವರಿಂದ ಯಾವುದೇ ಉತ್ತರವೂ ಬರುವುದಿಲ್ಲ.
ಕರ್ತನ ಯಜ್ಞವೇಧಿಯನ್ನು ದುರಸ್ತಿ ಮಾಡದಂತೆ ತಡೆಯುವ ಕೆಲವು ವಿಷಯಗಳಿವೆ. ನೀವು ಅಸೂಯೆ, ಕಹಿತನ ಮತ್ತು ಹೆಮ್ಮೆಯನ್ನು ಹೊಂದಿರುವವರೆಗೂ , ಯಜ್ಞವೇಧಿಯನ್ನು ಎಂದಿಗೂ ದುರಸ್ತಿ ಮಾಡಲು ಸಾಧ್ಯವಿಲ್ಲ. ಹೃದಯದ ಈ ಗುಪ್ತ ಸಮಸ್ಯೆಗಳನ್ನು ನಿಭಾಯಿಸಲು ಕರ್ತನಲ್ಲಿ ಬೇಡಿಕೊಳ್ಳಿ. ಉಪವಾಸ ಮಾಡಿ ಪ್ರಾರ್ಥಿಸಿ ಮತ್ತು ಈ ವಿಷಯಗಳನ್ನು ನಿಮ್ಮಿಂದ ಕಿತ್ತುಹಾಕುವಂತೆ ಕರ್ತನನ್ನು ಬೇಡಿಕೊಳ್ಳಿ . ಆಗ ದೇವರ ಬೆಂಕಿ ಬೀಳುತ್ತದೆ.
ದೇವರ ಹೆಸರಿನಲ್ಲಿ ಜನರು ದೇವಸೇವಕರನ್ನು ಬಹಿರಂಗವಾಗಿ ಟೀಕಿಸುವುದನ್ನು, ಸಭೆಗಳನ್ನು ಮತ್ತು ಇತರ ವಿಶ್ವಾಸಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸುವುದನ್ನು ನಾನು ನೋಡಿದ್ದೇನೆ. ನಿಮಗೆ ನೆನಪಿದ್ದರೆ, ಬೆಂಕಿ ಬೀಳುವ ಮೊದಲು, ಎಲೀಯ ಜನರನ್ನು ತನ್ನ ಬಳಿಗೆ ಕರೆದನು. ಪ್ರೀತಿಯಲ್ಲಿ ನಡೆಯದ ಯಾವುದೇ ಪುರುಷ ಅಥವಾ ಸ್ತ್ರೀ ಎಂದಿಗೂ ಕರ್ತನಿಗೆ ಸರಿಯಾದ ಯಜ್ಞವೇಧಿಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ದೇವರಿಂದ ಯಾವುದೇ ಉತ್ತರ ಪಡೆಯಲೂ ಆಗುವುದಿಲ್ಲ.
"ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ. (2 ಕೊರಿಂಥ 7:1)
"ನೀತಿವಂತ ಮನುಷ್ಯನ ಪರಿಣಾಮಕಾರಿ, ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹಳ ಪ್ರಯೋಜನಕಾರಿಯಾಗಿದೆ. ಎಲೀಯನು ನಮ್ಮಂತೆಯೇ ಸ್ವಭಾವವನ್ನು ಹೊಂದಿದ್ದ ಮನುಷ್ಯನಾಗಿದ್ದನು..." (ಯಾಕೋಬ 5:16-17);
ನಮ್ಮ ಜೀವನವನ್ನು ಸಂಪೂರ್ಣವಾಗಿ ಕರ್ತನಿಗೆ ಅರ್ಪಿಸುವ ಮೂಲಕ ನಾವು ಕರ್ತನ ಯಜ್ಞವೇದಿಯನ್ನು ದುರಸ್ತಿ ಮಾಡಿದಾಗ ಏನು ಬೇಕಾದರೂ ಸಾಧ್ಯವಾಗುತ್ತದೆ. ನಿಮ್ಮ ಜೀವನ, ನಿಮ್ಮ ಕುಟುಂಬ, ನಿಮ್ಮ ಸೇವೆ, ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರವು ಎಂದಿಗೂ ಹೀಗೆ ಇರುವುದಿಲ್ಲ. ಬೆಂಕಿಯಿಂದ ಉತ್ತರಿಸುವ ದೇವರು ಖಂಡಿತವಾಗಿಯೂ ನಿಮಗೆ ಉತ್ತರಿಸುವನು.
Bible Reading: 1 Chronicles 19-22
ಅರಿಕೆಗಳು
ತನ್ನ ಅಮೂಲ್ಯ ರಕ್ತದಿಂದ ಕಲ್ವಾರಿಯ ಶಿಲುಬೆಯಲ್ಲಿ ನನಗಾಗಿ ಕ್ರಯವನ್ನು ಪಾವತಿಸಿದ ಯೇಸುನಾಮದಲ್ಲಿ, ನಾನು ದುರಾತ್ಮನ ಲೋಕದೊಂದಿಗೆ ಹೊಂದಿದ್ದ ಪ್ರತಿಯೊಂದು ಸಂಬಂಧ ಅಥವಾ ಸಂಪರ್ಕವನ್ನು ಧೈರ್ಯದಿಂದ ಮುರಿದು ಹಾಕುತ್ತೇನೆ.
ಕರ್ತನೇ, ನಾನು ನನ್ನ ಜೀವನವನ್ನು ಸಂಪೂರ್ಣವಾಗಿ ನಿನಗೆ ಅರ್ಪಿಸುತ್ತೇನೆ ಮತ್ತು ನಿನ್ನನ್ನೇ ನನ್ನ ಕರ್ತನು , ನನ್ನ ರಕ್ಷಕನು ಮತ್ತು ದೇವರು ಎಂದು ಒಪ್ಪಿಕೊಳ್ಳುತ್ತೇನೆ.
ಸ್ವಲ್ಪ ಮೃದುವಾದ ಆರಾಧನಾ ಸಂಗೀತವನ್ನು ಹಾಕಿಕೊಂಡು ಕರ್ತನ ಆರಾಧನೆಯಲ್ಲಿ ಮೌಲ್ಯಯುತ ಸಮಯವನ್ನು ಕಳೆಯಿರಿ. (ನೀವು ಈಗ ನಿಮ್ಮ ಯಜ್ಞವೇಧಿಯನ್ನು ದುರಸ್ತಿ ಮಾಡುತ್ತಿದ್ದೀರಿ)
Join our WhatsApp Channel

Most Read
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ತಾವಾಗಿಯೇ ಹೇರಿಕೊಂಡ ಶಾಪಗಳಿಂದ ವಿಮೋಚನೆ
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ದೇವರ ಪ್ರೀತಿಯನ್ನು ಅನುಭವಿಸುವುದು
● ಕರ್ತನ ಆನಂದ
● ಬೇರಿನೊಂದಿಗೆ ವ್ಯವಹರಿಸುವುದು
ಅನಿಸಿಕೆಗಳು