ಅನುದಿನದ ಮನ್ನಾ
1
0
82
ಉಪವಾಸದಲ್ಲಿರುವ ಜೀವನವನ್ನು ಬದಲಾಯಿಸುವ ಪ್ರಯೋಜನಗಳು
Saturday, 24th of May 2025
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನಾನು ಭೇಟಿಯಾದ ಪ್ರತಿಯೊಬ್ಬ ಕ್ರೈಸ್ತನಿಗೂ ಉಪವಾಸದ ಕುರಿತು ಕೆಲವು ತಪ್ಪು ಕಲ್ಪನೆಗಳಿದ್ದವು. ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ವಿಷಯಗಳಲ್ಲಿ ಉಪವಾಸವು ಒಂದಾಗಿದೆ.
ವಾಸ್ತವವೆಂದರೆ, ನೀವು ದೇವರ ವಾಕ್ಯದ ಪ್ರಕಾರ ಉಪವಾಸ ಮಾಡುವಾಗ ನೀವು ಪಡೆಯುವ ನಂಬಲಾಗದ ಪ್ರಯೋಜನಗಳಿವೆ. "ದೇವರು ಆರಿಸಿಕೊಂಡ ಉಪವಾಸ"ದ ಹನ್ನೆರಡು ನಿರ್ದಿಷ್ಟ ಪ್ರಯೋಜನಗಳನ್ನು ಯೆಶಾಯನ ಪುಸ್ತಕದ ಅಧ್ಯಾಯ 58 ರಲ್ಲಿ ಪಟ್ಟಿ ಮಾಡಲಾಗಿದೆ.ಆದಾಗ್ಯೂ, ಇಂದು, ಸರಿಯಾದ ಉಪವಾಸದ 5 ಪ್ರಯೋಜನಗಳನ್ನು ಮಾತ್ರ ನಾನು ಪ್ರಸ್ತುತ ಪಡಿಸಲಿದ್ದೇನೆ.
"ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವದು, ನಿಮ್ಮ ಕ್ಷೇಮವು ಬೇಗನೆ ವಿಕಸಿಸುವದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿ ಮುಂದರಿಯುವದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವದು.ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ ಇಗೋ, ಇದ್ದೇನೆ, ಅನ್ನುವನು..." (ಯೆಶಾಯ 58:8-9)
1.ಆಗ ನಿಮ್ಮ ಬೆಳಕು ಉದಯದಂತೆ ಹೊರಹೊಮ್ಮುತ್ತದೆ.
ದೇವರ ವಾಕ್ಯದ ಪ್ರಕಟನೆಯು ನಿಮ್ಮ ಜೀವನದಲ್ಲಿ ಹರಿಯುತ್ತದೆ. ನೀವು ಮೊದಲು ನೋಡದ ವಿಷಯಗಳನ್ನು ವಾಕ್ಯದಲ್ಲಿ ನೋಡಲು ಪ್ರಾರಂಭಿಸುತ್ತೀರಿ.
2.ನಿಮ್ಮ ಸ್ವಸ್ತತೆಯು ಬೇಗನೆ ಹೊರಹೊಮ್ಮುತ್ತದೆ.
ಸ್ವಸ್ಥತೆ ಮತ್ತು ಸಂಪೂರ್ಣತೆ. ಸರಿಯಾದ ಉಪವಾಸವು ನಿಮಗೆ ಆರೋಗ್ಯವನ್ನೂ ಮತ್ತು ಸ್ವಸ್ಥತೆಯನ್ನು ತರುತ್ತದೆ. ಉಪವಾಸವು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕುವಂತದ್ದಾಗಿದೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ.
3.ನಿಮ್ಮ ನೀತಿಯು ನಿಮ್ಮ ಮುಂದೆ ಹೋಗುವುದು
ನೀವು ಕರ್ತನೊಂದಿಗೆ ನಡೆಯುವಾಗ, ನೀತಿಯಾದದ್ದನ್ನು ಮಾಡುವ ವ್ಯಕ್ತಿ ಎಂಬ ಖ್ಯಾತಿಯನ್ನು ನೀವು ಪಡೆಯುತ್ತೀರಿ.
4.ಕರ್ತನ ಮಹಿಮೆಯು ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ.
ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ಹೊರಟು ಬರುವಾಗ, ದೇವರು ಮೇಘ ಸ್ಥಂಭವಾಗಿಯೂ ಮತ್ತು ಅಗ್ನಿ ಸ್ತಂಭವಾಗಿಯೂ ಇಸ್ರೇಲ್ ಮತ್ತು ಅವರ ಹಿಂದೆ ಬಿದ್ದಿದ್ದ ಈಜಿಪ್ಟಿನ ಸೈನ್ಯದ ನಡುವೆ ಗೋಡೆಯನ್ನು ರೂಪಿಸಿ ಅವರು ಕೆಂಪು ಸಮುದ್ರವನ್ನು ದಾಟುವಾಗ ಅವರನ್ನು ರಕ್ಷಿಸಿದನು (ವಿಮೋಚನಕಾಂಡ 14:19-20)
ಆದಾಗ್ಯೂ, ಅಮಾಲೇಕ್ಯರು ಹಿಂದೆಯಿಂದ ಬಂದು ಜನರ ಮೇಲೆ ದಾಳಿ ಮಾಡಿದರು. ನೀವು ಉಪವಾಸ ಮಾಡಿ ಪ್ರಾರ್ಥಿಸುವಾಗ, ನಿಮ್ಮ ಬೆನ್ನಿನ ಹಿಂದೆ ಏನಾಗುತ್ತಿದೆ ಎನ್ನುವ ಕುರಿತು ಚಿಂತಿಸಬೇಕಾಗಿಲ್ಲ. ಕರ್ತನ ಸಾನ್ನಿಧ್ಯವು ನಿಮ್ಮನ್ನು ಕಾಪಾಡುತ್ತದೆ.
5.ನಂತರ ನೀವು ಕರೆಯುವಿರಿ ಆಗ ಕರ್ತನು ಉತ್ತರಿಸುವನು.
ಇದು ಉಪವಾಸದ ಪರಿಣಾಮಕಾರಿ ಪ್ರಾರ್ಥನೆಯಾಗಿದ್ದು ಉಪವಾಸದ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ದೇವರು ನಿಮ್ಮ ಪ್ರಾರ್ಥನೆಗಳಿಗೆ ಬೇಗನೆ ಉತ್ತರಿಸಬೇಕೆಂದು ನೀವು ಬಯಸುತ್ತೀರಾ? ಉಪವಾಸವನ್ನು ಪರಿಗಣಿಸಿ.
ನಿಮ್ಮ ಉಪವಾಸವು ಮೇಲೆ ತಿಳಿಸಿದ ಪ್ರಯೋಜನಗಳನ್ನು ನಿಮಗೆ ತಂದು ಕೊಡುತ್ತದೆ. ಇದಲ್ಲದೆ, ನಿಮ್ಮ ಆತ್ಮೀಕ ಜೀವನವು ಬಲಗೊಂಡು ನಿಮ್ಮ ಉಪವಾಸವು ನೂರಾರು ಜೀವಗಳನ್ನು ಮುಟ್ಟುತ್ತದೆ. ಅದರ ಕುರಿತು ಯೋಚಿಸಿ.
Bible Reading: 2 Chronicles 3-5
ಅರಿಕೆಗಳು
1. ನಾನು ನನ್ನನ್ನು, ನನ್ನ ಕುಟುಂಬ ಸದಸ್ಯರನ್ನು ಮತ್ತು ಕರುಣಾ ಸದನ ಸೇವೆಯೊಂದಿಗೆ ಸಂಪರ್ಕ ಹೊಂದಿದ ಎಲ್ಲರನ್ನೂ ಯೇಸುವಿನ ರಕ್ತದಿಂದ ಮರೆಮಾಡುತ್ತೇನೆ.
2. ನನ್ನ ಜೀವನದ ಮೇಲೆ, ನನ್ನ ಕುಟುಂಬ ಮತ್ತು ಕರುಣಾ ಸದನ ಸೇವೆಯ ಮೇಲೆ ದಾಳಿ ಮಾಡುವ ಪ್ರತಿಯೊಂದು ಶಕ್ತಿಯು ದೇವರ ಬೆಂಕಿಯಿಂದ ಯೇಸು ನಾಮದಲ್ಲಿ ನಾಶವಾಗಲಿ.
3. ಮಹಾನ್ ಪುನಃಸ್ಥಾಪಕನಾದ ಕರ್ತನಾದ ಯೇಸು ಕ್ರಿಸ್ತನೇ, ನನ್ನ ಆರ್ಥಿಕ ಸಮೃದ್ಧಿಯನ್ನು ಪುನಃಸ್ಥಾಪಿಸು
4. ತಂದೆಯೇ, ಯೇಸುನಾಮದಲ್ಲಿ, ನಿಮ್ಮ ಆರ್ಥಿಕ ಪ್ರಗತಿಯ ದೇವದೂತರು ನನ್ನ ಜೀವನದಲ್ಲಿ ಪ್ರಕಟವಾಗಲಿ.
5. ನನ್ನ ಕುಟುಂಬದ ತಲತಲಾಂತರದಿಂದ ನನ್ನ ಹಣಕಾಸಿನ ಮೇಲೆ ಪರಿಣಾಮ ಬೀರುವ ಆರ್ಥಿಕ ಬಂಧನಗಳು, ಯೇಸುನಾಮದಲ್ಲಿ ಮುರಿಯಲ್ಪಡಲಿ
6. ಅನ್ಯಜನರ ಸಂಪತ್ತನ್ನು ಯೇಸುನಾಮದಲ್ಲಿ ನನಗೆ ವರ್ಗಾಯಿಸಲಿ.
7. ನಾನು ಕರ್ತನಿಗೆ ಭಯಪಡುವ ಧನ್ಯನಾದ ಮನುಷ್ಯನೂ, ಆತನ ಆಜ್ಞೆಗಳಲ್ಲಿ ಬಹಳವಾಗಿ ಆನಂದಿಸುವವನು ಆಗಿದ್ದೇನೆ.ಆದರಿಂದ ಸಕಲ ಸಂಪತ್ತು ಮತ್ತು ಐಶ್ವರ್ಯ ನನ್ನ ಮನೆಯಲ್ಲಿರುತ್ತದೆ
8. ನನ್ನ ಜೀವನದಲ್ಲಿ ಶತ್ರುಗಳಿಂದ ಬಿತ್ತಲ್ಪಟ್ಟ ಪ್ರತಿಯೊಂದು ದುಷ್ಟ ಬೀಜವು ಯೇಸುನಾಮದಲ್ಲಿ ಬೆಂಕಿಯಿಂದ ಬೇರುಸಹಿತ ನಿರ್ಮೂಲವಾಗಲಿ.
Join our WhatsApp Channel

Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಕರ್ತನೊಂದಿಗೆ ನಡೆಯುವುದು
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ದ್ವಾರ ಪಾಲಕರು / ಕೋವರ ಕಾಯುವವರು
ಅನಿಸಿಕೆಗಳು