Daily Manna
1
0
151
ದೇವರ 7 ಆತ್ಮಗಳು: ಜ್ಞಾನದ ಆತ್ಮ
Saturday, 23rd of August 2025
Categories :
ದೇವರ ಆತ್ಮ ( Spirit of God)
ವರ್ಷಗಳಿಂದ, ಜಯಶಾಲಿಯಾದ ಕ್ರೈಸ್ತರು ಮತ್ತು ಜಯಶಾಲಿ ಕ್ರೈಸ್ತನಲ್ಲದವನ ನಡುವಿನ ವ್ಯತ್ಯಾಸವನ್ನು ಅವರು ಹೊಂದಿರುವ ಜ್ಞಾನಕ್ಕನುಸಾರವಾಗಿರುವುದನ್ನು ನಾನು ಗಮನಿಸಿದ್ದೇನೆ.
ಹೋಶೇಯ 4:6 ರಲ್ಲಿ, ದೇವರು ಹೇಳುತ್ತಾನೆ, "ನನ್ನ ಜನರು ಜ್ಞಾನದ ಕೊರತೆಯಿಂದ ನಾಶವಾಗುತ್ತಾರೆ." ದುಃಖಕರವೆಂದರೆ, ದೇವರ ಜನರು ಹಣ ಅಥವಾ ಸಾಮರ್ಥ್ಯವಿಲ್ಲದ ಕಾರಣ ನಾಶವಾಗುವುದಿಲ್ಲ; ಅವರು ಜ್ಞಾನವಿಲ್ಲದ ಕಾರಣ ನಾಶವಾಗುತ್ತಾರೆ. ನಮ್ಮ ಪ್ರಸ್ತುತ ಮಿತಿಗಳು ಮತ್ತು ಸಾಧನೆಗಳು ನಮ್ಮ ಜ್ಞಾನದ ಮಟ್ಟ ಅಥವಾ ಅದರ ಕೊರತೆಗೆ ನೇರವಾಗಿ ಸಂಬಂಧಿಸಿರುತ್ತವೆ.
ನೀವು ಸರಿಯಾದ ರೀತಿಯ ಜ್ಞಾನವನ್ನು ಹೊಂದಿದ್ದರೆ ನೀವು ಇಂದು ನೀವು ಇರುವುದಕ್ಕಿಂತ ಉನ್ನತವರಾಗಿರಬಹುದು ಮತ್ತು ಉತ್ತಮರಾಗಿರಬಹುದು. ದೇವರ ಆತ್ಮದಿಂದ ಬರುವ ದೈವಿಕ ಜ್ಞಾನವನ್ನು ದೈವೀಕ ಪ್ರಕಟಣೆಯ ಜ್ಞಾನ ಎಂದು ಕರೆಯಲಾಗುತ್ತದೆ.
ಪ್ರಕಟಣೆಯ ಜ್ಞಾನವು ದೇವರ ಕುರಿತ ಸರಳ ಸಂಗತಿಗಳಿಗಿಂತ ಹೆಚ್ಚಿನದಾಗಿದ್ದು; ದೇವರು ತನ್ನ ಆತ್ಮನ ಮೂಲಕ ನಮ್ಮಲ್ಲಿ ಅದ್ಭುತವಾಗಿ ಅಗ್ನಿಯನ್ನು ಸುರಿಸಿ ನಮ್ಮ ಆತ್ಮಗಳಿಗೆ ಕೊಟ್ಟಿರುತ್ತಾನೆ. ದೇವರ ಜ್ಞಾನ ಅದು.
ಒಂದು ದಿನ ಕರ್ತನಾದ ಯೇಸು ತನ್ನ ಶಿಷ್ಯರನ್ನು, "ನಾನು ಯಾರೆಂದು ನೀವು ಹೇಳುತ್ತೀರಿ?" ಎಂದು ಕೇಳಿದ್ದನು. ಪೇತ್ರನು, "ನೀನು ಕ್ರಿಸ್ತನು, ಜೀವಸ್ವರೂಪನಾದ ದೇವರ ಮಗ" ಎಂದು ಘೋಷಿಸುವ ಮೂಲಕ ಆತನಿಗೆ ಉತ್ತರಿಸಿದನು (ಮತ್ತಾಯ 16:15-16) ಅದಕ್ಕೆ ಯೇಸು - ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಈ ಗುಟ್ಟು ನಿನಗೆ ತಿಳಿಸಿದವನು ನರಮನುಷ್ಯನಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ತಿಳಿಸಿದನು. (ಮತ್ತಾಯ 16:17)
ಬೇರೆ ರೀತಿಯಲ್ಲಿ ಹೇಳುವುದಾದರೆ, ಯೇಸು ಹೇಳುತ್ತಿದ್ದದ್ದು, "ಪೇತ್ರನೇ, ನೀನು ಈ ಮಾಹಿತಿಯನ್ನು ನಿನ್ನ ಶಾರೀರಿಕವಾಗಿ ಇಂದ್ರಿಯಗಳ ಮೂಲಕ ಕಲಿತಿಲ್ಲ. ನೀನು ಅದನ್ನು ದೇವರ ಆತ್ಮನ ಮೂಲಕ ನೇರವಾಗಿ ನಿನ್ನ ಮನುಷ್ಯನ ಆತ್ಮಕ್ಕೆ ಪಡೆದಿದ್ದೀಯ."ಎಂದು.
ನಂಬಿಕೆಯ ವೈಫಲ್ಯಕ್ಕೆ ಸಾಮಾನ್ಯ ಕಾರಣವೆಂದರೆ ದೈವೀಕ ಪ್ರಕಟಣೆ ಜ್ಞಾನದ ಕೊರತೆ.
ಹೆಚ್ಚಿನ ಕ್ರೈಸ್ತರು ದೇವರ ವಾಕ್ಯವನ್ನು ತಮ್ಮ ಮಿದುಳಿನಿಂದ ನಂಬುತ್ತಾರೆ ಆದರೆ ಜ್ಞಾನದ ಆತ್ಮವು ಅವರ ಹೃದಯಗಳಲ್ಲಿ ಅದನ್ನು "ಬೆಳಗಿಸುವ"ಷ್ಟು ಕಾಲ ಅದರ ಮೇಲೆ ನೆಲೆಗೊಳ್ಳುವುದಿಲ್ಲ.
ಅವರು ಹಾಗೆ ಮಾಡಿದ್ದರೆ, ಆ ವಾಕ್ಯವು ಅವರ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತಿತ್ತು. ಕ್ರಿಸ್ತನಲ್ಲಿ ಅವರ ನಂಬಿಕೆಯಿಂದ ಅವರನ್ನು ಯಾವುದೂ ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆತ್ಮದಲ್ಲಿ ದೈವೀಕ ಪ್ರಕಟಣೆಯ ಜ್ಞಾನವಿರುವಾಗ, ನೀವು ಕಾರ್ಯನಿರ್ವಹಿಸುತ್ತೀರಿ ಮತ್ತು ಆ ಕಾರ್ಯವನ್ನು ಪೂರ್ಣಗೊಳಿಸುತ್ತೀರಿ. ಆದರೆ ನೀವು ಪೂರ್ಣಗೊಳಿಸದೇ ಹೋಗಿದ್ದರೆ , ನಿಮಗೆ ಇನ್ನೂ ಏನೂ ತಿಳಿದಿಲ್ಲ ಎಂಬುದಕ್ಕೆ ಅದು ದೃಢೀಕರಣವಾಗಿದೆ. ನಿಮ್ಮ ಆತ್ಮದಲ್ಲಿ ಉಂಟಾಗುವ ದೈವೀಕ ಪ್ರಕಟಣೆಯ ಮಾಹಿತಿಯು ನಿಮ್ಮನ್ನು ಮಹಿಮೆಯ ಮತ್ತು ಬಲದ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
ಜ್ಞಾನದ ಆತ್ಮನು ನಿಮ್ಮ ಆತ್ಮನಲ್ಲಿ ಜ್ಞಾನವನ್ನು ತುಂಬುತ್ತಾನೆ.
"ನಾವು ಇಹಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದವರಾಗಿದ್ದೇವೆ" (1 ಕೊರಿಂಥ 2:12).
"ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಗೊಳಿಸುತ್ತದೆ." (ಯೋಹಾನ 8:32)
ಸೈತಾನನು ಸುಳ್ಳುಗಾರ ಮತ್ತು ಎಲ್ಲಾ ಸುಳ್ಳಿಗೂ ತಂದೆಯಾಗಿದ್ದಾನೆ. (ಯೋಹಾನ 8:44)
ಸತ್ಯಕ್ಕಾಗಿ ಹೋರಾಟವನ್ನು ಗೆಲ್ಲುವ ಏಕೈಕ ಮಾರ್ಗವೆಂದರೆ ದೈವೀಕ ಪ್ರಕಟಣೆ ಜ್ಞಾನವನ್ನು ಹೊಂದಿರುವುದಾಗಿದೆ. ಜ್ಞಾನದ ಆತ್ಮನೊಂದಿಗೆ ನಿಕಟ ಅನ್ಯೋನ್ಯತೆ ಬೆಳೆಸಿಕೊಳ್ಳುವ ಸಮಯ ಇದು. ನೀವು ಯಾರೆಂಬುದರ ಅತ್ಯುತ್ತಮತೆಯು ಆತನೊಂದಿಗಿನ ನಿಮ್ಮ ಅನ್ಯೋನ್ಯತೆಯ ಮೂಲಕ ಮಾತ್ರ ಅನಾವರಣಗೊಳ್ಳುತ್ತದೆ.
Bible Reading: Jeremiah 34-36
Prayer
ಪರಿಶುದ್ಧ ಪವಿತ್ರಾತ್ಮನೇ, ನನ್ನಲ್ಲಿ ಜೀವಿಸು. ನನ್ನ ಜೀವನದ ಪ್ರತಿಯೊಂದು ಕ್ಷೇತ್ರವನ್ನು ತುಂಬು. ನಿನ್ನ ಜ್ಞಾನ, ಶಕ್ತಿ ಮತ್ತು ಮಹಿಮೆಯಲ್ಲಿ ನನ್ನನ್ನು ನಡೆಯುವಂತೆ ಮಾಡುವ ನಿನ್ನ ವಾಕ್ಯದ ಪ್ರಕಟಣೆಯನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel

Most Read
● ಗತಕಾಲದ ಸಮಾಧಿಯಲ್ಲಿಯೇ ಹೂತುಹೋಗಬೇಡಿರಿ● ಬೇರಿನೊಂದಿಗೆ ವ್ಯವಹರಿಸುವುದು
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
● ಆಟ ಬದಲಿಸುವವ
Comments