"ಇಸ್ರಾಯೇಲ್ಯರು ಶಿಟ್ಟೀವಿುನಲ್ಲಿ ವಾಸವಾಗಿದ್ದಾಗ ಅವರು ಮೋವಾಬ್ ಸ್ತ್ರೀಯರೊಡನೆ ಸಹವಾಸ ಮಾಡುವವರಾದರು. ಆ ಸ್ತ್ರೀಯರು ತಮ್ಮ ದೇವತೆಗಳಿಗೆ ಮಾಡಿದ ಔತಣದ ಯಜ್ಞಗಳಿಗೆ ಇಸ್ರಾಯೇಲ್ಯರನ್ನು ಕರಿಸಲು ಇವರು ಆ ಭೋಜನವನ್ನು ಮಾಡಿ ಅವರ ದೇವತೆಗಳಿಗೆ ನಮಸ್ಕರಿಸುವವರಾದರು.ಹೀಗೆ ಇಸ್ರಾಯೇಲ್ಯರು ಪೆಗೋರದ ಬಾಳನ ಭಕ್ತರಾದ ಹಾಗಾಯಿತು. ಆದದರಿಂದ ಅವರ ಮೇಲೆ ಯೆಹೋವನು ಕೋಪಗೊಂಡನು..(ಅರಣ್ಯಕಾಂಡ 25:1-3)
ಬಿಳಾಮನು ಇಸ್ರೇಲ್ ಅನ್ನು ಶಪಿಸಲು ಪ್ರಯತ್ನಿಸಿದನು ಆದರೆ ಅದು ಸಾಧ್ಯವಾಗಲಿಲ್ಲ, ಆದರೆ ಈಗ ಅವರು ಕರ್ತನ ವಿರುದ್ಧ ಮಾಡಿದ ಪಾಪದಿಂದಾಗಿ ತಾವೇ ಶಾಪಗ್ರಸ್ತರಾದರು. ಹಿಂದಿ ಭಾಷೆಯಲ್ಲಿ ಒಂದು ಜನಪ್ರಿಯ ನುಡಿಗಟ್ಟು ಇದೆ, ಅದು "ನಿಮ್ಮ ಕಾಲುಗಳ ಮೇಲೆ ನೀವೇ ಕೊಡಲಿ ಬೀಸಿಕೊಳ್ಳಬೇಡಿ" ಎಂದು .
ಯಾವುದು ಇಸ್ರೇಲ್ ಮಕ್ಕಳ ವಿರುದ್ಧ ಶತ್ರು ಸಾಧಿಸಲು ಸಾಧ್ಯವಾಗಲಿಲ್ಲವೋ ಅದನ್ನು, ಇಸ್ರೇಲರು ತಾವೇ ತಮ್ಮ ಅವಿಧೇಯತೆಯ ಮೂಲಕ ತಮ್ಮ ಮೇಲೆ ತಂದುಕೊಂಡರು. ಇಂದಿಗೂ ದೇವಜನರ ವಿರುದ್ಧವೂ ಅದೇ ತತ್ವವಿದೆ. ನಮ್ಮ ವಿರುದ್ಧ ಸೈತಾನನ ಅತ್ಯಂತ ಪ್ರಬಲ ದಾಳಿಯಿಂದ ಆಗುವ ಹಾನಿಗಿಂತ ನಾವು ನಮ್ಮ ಕೈಯಾರೆ ಮಾಡುವ ಪಾಪ ಮತ್ತು ಕರ್ತನ ವಿರುದ್ಧ ತಿರುಗಿಬೀಳುವಂತದ್ದರಿಂದ ಆಗುವ ಹಾನಿಯೇ ಹೆಚ್ಚು.
ಬಿಳಾಮನು ಇಸ್ರೇಲ್ ಅನ್ನು ಶಪಿಸಲು ತನ್ನ ಕೈಲಾದಷ್ಟು ಪ್ರಯತ್ನಿಸಿದ್ದನು - ಆದರೆ ಅದು ವಿಫಲವಾಯಿತು. ಆದರೂ, ಅವನ ಹಣದ ಮೇಲಿನ ವ್ಯಾಮೋಹ, ಅವನನ್ನು ನೇಮಿಸಿಕೊಂಡ ಮೋವಾಬಿನ ರಾಜ ಬಾಲಾಕನನ್ನು ಸಂತೋಷಪಡಿಸದೆ ವಿಷಯವನ್ನು ಕೊನೆಗೊಳಿಸಲು ಅವನನ್ನು ಬಿಡಲಿಲ್ಲ.
"ಆದರೂ ಕೆಲವು ವಿಷಯಗಳಲ್ಲಿ ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ; ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವದರಲ್ಲಿಯೂ ಜಾರತ್ವ[ಲೈಂಗಿಕ ದುರಾಚಾರಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಳ್ಳಲು] ಮಾಡುವದರಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ(ಅವರನ್ನು ಪ್ರಲೋಭಿಸಲು) ಬೀಳಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿದ್ದಾರೆ." [ಪ್ರಕಟನೆ 2:14 ವರ್ಧಿತ]
ಮೂಲಭೂತವಾಗಿ, ಇಸ್ರಾಯೇಲ್ಯರನ್ನು ಶಪಿಸಲು ವಿಫಲವಾದ ನಂತರ, ಬಿಳಾಮನು ಬಾಲಾಕನಿಗೆ : "ನಾನು ಈ ಜನರನ್ನು ಶಪಿಸಲಾರೆ. ಆದರೆ ನೀವು ಅವರ ದೇವರ ವಿರುದ್ಧ ತಿರುಗಿ ಬೀಳುವಂತೆ ಅವರನ್ನು ಅವರ ದೇವರಿಗೆ ಇಷ್ಟವಿಲ್ಲದ ಕಾರ್ಯ ಮಾಡಲು ಆಕರ್ಷಿಸುವ ಮೂಲಕ ಅವರು ತಮ್ಮನ್ನು ತಾವೇ ಶಪಿಸಿಕೊಳ್ಳುವಂತೆ ಮಾಡಬಹುದು. ಅವರ ಬಳಿ ನಿಮ್ಮಲ್ಲಿರುವ ಅತ್ಯಂತ ಸುಂದರ ಹುಡುಗಿಯರನ್ನು ಕಳುಹಿಸಿಕೊಟ್ಟು ಇಸ್ರಾಯೇಲ್ಯ ಪುರುಷರನ್ನು ಅನೈತಿಕತೆ ಮತ್ತು ವಿಗ್ರಹಾರಾಧನೆಗೆ ಆಕರ್ಷಿಸುವಂತೆ ಹೇಳಿ ಎಂದು ಹೇಳಿಕೊಟ್ಟನು." ಈ ತಂತ್ರ ಕಾರ್ಯ ಮಾಡಿತು.
ಬಿಳಾಮನು ಬಾಲಾಕನಿಗೆ ತನ್ನ ದುಷ್ಟ ಸಲಹೆಯ ನೀಡುವ ಮೂಲಕ ತಾನು ಬಯಸಿದ್ದನ್ನು ಪಡೆದುಕೊಂಡನು - ಆದರೆ ಅವನು ದೇವರ ಶತ್ರುಗಳ ನಡುವೆ ಸತ್ತನು (ಅರಣ್ಯಕಾಂಡ 31:7-8). ಅವನು ಆ ಹಣವನ್ನು ಆನಂದಿಸಿದ್ದು ಸ್ವಲ್ಪ ಸಮಯದವರೆಗೆ ಮಾತ್ರವೇ
Bible Reading: Ezekiel 17-18
Prayer
ತಂದೆಯೇ, ಯೇಸುವಿನ ಹೆಸರಿನಲ್ಲಿ, ನನ್ನ ಅವಿಧೇಯತೆಯ ಕ್ಷೇತ್ರಗಳನ್ನು ಪಾಪವೆಂದು ನಾನು ಒಪ್ಪಿಕೊಳ್ಳುತ್ತೇನೆ. (ಅವಿಧೇಯತೆಯ ಆ ಕ್ಷೇತ್ರಗಳು ಯಾವುವು ಎಂದು ಕರ್ತನಿಗೆ ಹೇಳಿಕೊಳ್ಳಿ) ಕರ್ತನೇ, ನನ್ನನ್ನು ಕ್ಷಮಿಸು ಮತ್ತು ನಿನ್ನ ಆಗಮನದವರೆಗೆ ನನ್ನನ್ನು ಪರಿಶುದ್ಧತೆಯಲ್ಲಿ ಕಾಪಾಡು. ಆಮೆನ್. [1 ಥೆಸಲೋನಿಕ 5:23-24]
Join our WhatsApp Channel

Most Read
● ನೀವು ಒಂಟಿತನದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೀರಾ?● ಹಣಕಾಸಿನ ಅದ್ಭುತ ಬಿಡುಗಡೆ.
● ಪ್ರಾರ್ಥನಾ ಹೀನತೆ ಎಂಬ ಪಾಪ
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ನಿಮ್ಮನ್ನು ನಡೆಸುತ್ತಿರುವವರು ಯಾರು?
Comments