हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
Daily Manna

ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I

Sunday, 17th of March 2024
1 0 551
Categories : ಪಾಪ (sin)
ಪ್ರತಿಯೊಂದೂ ಕುಟುಂಬವು ತಮ್ಮ ಕುಟುಂಬದಲ್ಲಿ ಯಾವುದಾದರೂ ಅಪರಾಧಗಳೋ ಅಧರ್ಮಗಳೋ ನಡೆದ ಇತಿಹಾಸವನ್ನು ಹೊಂದಿರುತ್ತವೆ.

ಅಧರ್ಮ ಎಂದರೇನು?

 ಅಧರ್ಮವು ಕುಟುಂಬಗಳಲ್ಲಿ ಪೂರ್ವಜರ ಕಾಲದಿಂದಲೂ ಕಾರ್ಯ ಮಾಡುತ್ತಿರುವ ಪಾಪಗಳ ಪರಿಣಾಮವಾಗಿವೆ. ಇದರ ಪರಿಣಾಮ ಕುಟುಂಬದಲ್ಲಿ ಯಾರಾದರೂ ಒಬ್ಬರಾದರೂ ತಲೆ-ತಲೆಮಾರುಗಳಲ್ಲಿ ಅದೇ ಪಾಪಗಳನ್ನು ಮಾಡುತ್ತಲೇ ಬರುತ್ತಿರುತ್ತಾರೆ.

ಸತ್ಯವೇದದಲ್ಲಿ ಪಾಪ ಎನ್ನುವುದಕ್ಕೆ ಅನೇಕ ಪದಗಳಿವೆ. ಆದರೆ ಮೂರು ಮುಖ್ಯವಾದ ಪದಗಳನ್ನು ಕುರಿತು ನಾನಿಂದು ಚರ್ಚಿಸಲು ಬಯಸುತ್ತೇನೆ.

#1. ಹಮಾರ್ಟಿಯ ಅದರರ್ಥ ಗುರಿತಪ್ಪುವುದು.
 ಬಿಲ್ಲುಗಾರಿಕೆ ಸ್ಪರ್ಧೆ ನಡೆಯುವಾಗ ಯಾರಾದರೂ ಎತ್ತಿನ ಕಣ್ಣಿಗೆ ಗುರಿ ಹೊಡೆಯುವುದಕ್ಕೆ ವಿಫಲವಾದರೆ ಅವರು ಬಹುಮಾನದಿಂದ ಅಥವಾ ಆಶೀರ್ವಾದದಿಂದ ವಂಚಿತರಾಗುತ್ತಾರೆ. ಆಗ ಗ್ರೀಕ್ ನಲ್ಲಿ ಈ ಪಾಪಕ್ಕೆ ಸಾಮಾನ್ಯವಾಗಿ ಬಳಸುವ ಪದ ಇದಾಗಿದೆ.ಮತ್ತು ಹೊಸ ಒಡಂಬಡಿಕೆಯಲ್ಲಿ ಈ ಪದವನ್ನು ಸುಮಾರು 221 ಸಾರಿ ಉಪಯೋಗಿಸಲಾಗಿದೆ.

"ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ *ಹತ್ತಿಕೊಳ್ಳುವ ಪಾಪವನ್ನೂ*(ಹಮರ್ಟಿಯ )ನಾವು ಸಹ ತೆಗೆದಿಟ್ಟು "(ಇಬ್ರಿಯರಿಗೆ‬ ‭12:1‬).

ನಾವೂ ಸಹ ನಮಗಾಗಿ ದೇವರು ಇಟ್ಟಿರುವಂತಹ ಅತ್ಯುತ್ತಮವಾದದ್ದಕ್ಕೆ ಗುರಿ ಇಡುತ್ತೇವೆ ಆದರೆ ಅದನ್ನು ತಪ್ಪಿ ವಿಫಲರಾಗಿ ಬಿಡುತ್ತೇವೆ.

#2. ಪ್ಯಾರಾಬೇಸಿಸ್ ಅದರರ್ಥ "ಅಪರಾಧ".
 ಆಜ್ಞೆಯನ್ನು ಬೇಕೆಂದೇ ಅತಿಕ್ರಮಿಸುವುದೇ ಅಪರಾಧವಾಗಿದೆ.ದೇವರು ಮಣ್ಣಿನ ಮೇಲೆ ಒಂದು ಎಲ್ಲೆಯ ಗೆರೆಯನ್ನು ಬರೆದಿದ್ದರೂ ಅದನ್ನು ದಾಟಿ ಹೋದರೆ ನಾವು ನಿಶ್ಚಿತವಾಗಿ ನಮಗೆ ಬರಬೇಕಾದ ಬಹುದೊಡ್ಡ ಬಹುಮಾನಗಳನ್ನು/ ಆಶೀರ್ವಾದಗಳನ್ನು ಕಳೆದುಕೊಂಡು ನರಳ ಬೇಕಾಗುತ್ತದೆ.

"ಯಾಕಂದರೆ ದೇವದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ(ಪ್ಯಾರಬೇಸಿಸ್ ) ಅವಿಧೇಯತ್ವಕ್ಕೂ ನ್ಯಾಯವಾದ ಪ್ರತಿಫಲವುಂಟಾದ ಮೇಲೆ [ನಮ್ಮ ಮುಂದಿಟ್ಟಿರುವ].."(ಇಬ್ರಿಯರಿಗೆ‬ ‭2:2‬)

#3. ಅನೋಮಿಯ ಅಂದರೆ ಅಧರ್ಮ.
" ಆತನು ನಮ್ಮನ್ನು ಸಕಲ ಅಧರ್ಮದಿಂದ(ಅನೋಮಿಯ)ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು."(ತೀತನಿಗೆ‬ ‭2:14‬ )

" ಆ ದೇಶದಲ್ಲಿ ಘೋರ ಕ್ಷಾಮವಿದ್ದದರಿಂದ ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದುಹೋದನು. [11] ಅವನು ಐಗುಪ್ತದೇಶದ ಹತ್ತಿರಕ್ಕೆ ಬಂದಾಗ, ತನ್ನ ಹೆಂಡತಿಯಾದ ಸಾರಯಳಿಗೆ - [12] ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ; ಐಗುಪ್ತದೇಶದವರು ನಿನ್ನನ್ನು ಕಂಡು - ಈಕೆಯು ಇವನ ಹೆಂಡತಿ ಎಂದು ನನ್ನನ್ನು ಕೊಂದು ನಿನ್ನನ್ನು ಉಳಿಸಾರು. [13] ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿವಿುತ್ತ ನನಗೆ ಹಿತವಾಗುವದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು ಎಂದು ಹೇಳಿದನು."(ಆದಿಕಾಂಡ‬ ‭12:10‭-‬13‬)

ಅಬ್ರಹಾಮನು ತನ್ನ ಹೆಂಡತಿಯಾದ ಸಾರಾಯಳಿಗೆ ನಾವು ಹೋಗುವ ಕಡೆಯಲ್ಲ ನಿನ್ನನ್ನು ನನ್ನ ತಂಗಿ ಎಂದು ಸುಳ್ಳು ಹೇಳು ಇದರಿಂದ ಅವರು ನನ್ನನ್ನು ಕೊಲ್ಲದೆ ಉಳಿಸುವರು ಎಂದು ಯುಕ್ತಿಯ ಆಲೋಚನೆ ಒಂದನ್ನು ಸಾರಾಯಳಿಗೆ ಅಬ್ರಾಮಾನು ಹೇಳಿಕೊಟ್ಟನು. ಇದು ಕೇವಲ ಒಂದು ಸಾರಿ ಅಲ್ಲ ಅಬ್ರಹಾಮನು ಅದನ್ನೇ ಮತ್ತೊಮ್ಮೆ ಪುನರಾವರ್ತಿಸಿದನು.

"ಅವನು ತನ್ನ ಹೆಂಡತಿಯಾದ ಸಾರಳನ್ನು ತಂಗಿಯೆಂದು ಹೇಳಿದನಾದ್ದರಿಂದ ಗೆರಾರಿನ ಅರಸನಾದ ಅಬೀಮೆಲೆಕನು ಕರೇಕಳುಹಿಸಿ ಆಕೆಯನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡನು."(ಆದಿಕಾಂಡ‬ ‭20:2‬)

ಅಬ್ರಾಮನಲ್ಲಿದ್ದಂಥ ಭಯವು ಅವನನ್ನು ಈ ರೀತಿ ಮಾಡಲು ಪ್ರೇರೇಪಿಸಿತು. ಆದರೆ ಇದರಂತೆ ಮಾಡಲು ಹೋಗಿ ಸಾರಾಯಳು ಅಪಾಯಕ್ಕೆ ಸಿಲುಕಿದಳು. ಹೇಗೆಂದರೆ ಅಲ್ಲಿನ ಜನರು ಅಬ್ರಾಹಮನನ್ನು ಉಳಿಸಿ ಸಾರಾಳನ್ನು ಅರಸನ ಹೆಂಡತಿಯಾಗುವುದಕ್ಕೋಸ್ಕರ ಅರಮನೆಗೆ ಕೊಂಡೊಯ್ದರು.

ಸಾರಾಳು ಆ ದಿನ ಸಂರಕ್ಷಿಸಲ್ಪಡದಿದ್ದರೆ ಅವಳ ಸಂತಾನವು ಕಲುಷಿತಗೊಳ್ಳುತ್ತಿತ್ತು. ಹೇಗೂ ಕರ್ತನೇ ಸಾರಳನ್ನು ಎಲ್ಲಾ ಕೇಡಿನಿಂದ ತಪ್ಪಿಸಿದನು. ಕರ್ತನೇ ಅಬ್ರಹಾಮಾನ ವೈವಾವಿಕ ಜೀವಿತವನ್ನು ಕೂಡ ಸಂರಕ್ಷಿಸಿದನು.

ಅನೇಕ ವರ್ಷಗಳಾದ ಮೇಲೆ ಇಸಾಕನು ಹುಟ್ಟಿದನು ಅವನು ಸಹ ಇದೇ ಪಾಪವನ್ನು ಮಾಡುವುದನ್ನು ನಾವು ಕಾಣುತ್ತೇವೆ.

ಆಸಕ್ತಿಕರ ವಿಷಯವೇನೆಂದರೆ ಅಬ್ರಾಹಾಮನು ಈ ಪಾಪವನ್ನು ಮಾಡಿದಾಗ ಇಸಾಕನು ಇನ್ನೂ ಹುಟ್ಟಿಯೇ ಇರಲಿಲ್ಲ ಆದರೂ ಅದೇ ತಪ್ಪನ್ನು ಇವನೂ ಕೂಡ ಪುನರಾವರ್ತಿಸಿದನು.

ಸ್ವಾಭಾವಿಕವಾಗಿ ಯಾರೂ ಕೂಡ ಹೇಳಿಕೊಡದೆ, ಯಾವ ಪ್ರೇರೇಪಣೆಯೂ ಇಲ್ಲದೆ ಸರ್ವೇಸಾಧಾರಣವಾಗಿ ಯಾವುದೇ ರೀತಿಯಲ್ಲಿ ಈ ವಿಚಾರವೇ ಅವನಿಗೆ ತಿಳಿಯದೇ ಹೋದರೂ ಇಸಾಕನು ತನ್ನ ತಂದೆ ಮಾಡಿದ ಅದೇ ಪಾಪಕ್ಕೆ ತಾನೂ ಕೈಹಚ್ಚಿದನು. ತನ್ನ ತಂದೆ ಮಾಡಿದ ಅದೇ ಪಾಪವನ್ನು ಇವನೂ ಸಹ ಪುನರಾವತಿಸಿದನು.

ಇದುವೇ ಅಧರ್ಮವು ಮಾಡುವ ಕಾರ್ಯ. ತಂದೆಯ ನಂತರ ಮಕ್ಕಳು ಹೀಗೆ ತಲೆತಲೆ ಮಾರುಗಳಲ್ಲೂ ಸಹ ಪಾಪವು ಆಳ್ವಿಕೆ ಮಾಡುತ್ತಾ ಬರುತ್ತದೆ. ತಂದೆ ಮಾಡಿದ ಅದೇ ಪಾಪವನ್ನು ಮಕ್ಕಳು ಮಾಡುವ ಹಾಗೆ ಪ್ರೇರೇಪಿಸಲು ಸೈತಾನನಿಗೆ ಇದು ಕಾನೂನು ಬದ್ಧ ಅಧಿಕಾರವನ್ನು ಕೊಟ್ಟುಬಿಡುತ್ತದೆ.

ಇಂದು ನಿಮ್ಮ ಜೀವಿತದಲ್ಲಿರುವಂತಹ ಆ ಧರ್ಮದ ಆಳ್ವಿಕೆಯು ಯೇಸು ನಾಮದಲ್ಲಿ ಮುರಿಯಲ್ಪಡಲಿ
Confession
ತಂದೆಯೇ, ನನ್ನ ಪಾಪ ಅಪರಾಧಕ್ಕಾಗಿ ಕಲ್ವಾರಿ ಶಿಲುಬೆಯ ಮೇಲೆ ನಮ್ಮ ಪರವಾಗಿ ಆತನು ದಂಡನೆಯನ್ನು ಹಿಂಸೆಯನ್ನು ಅನುಭವಿಸಲೂ,ನಮಗಾಗಿ ರಕ್ತಸುರಿಸಲೂ, ಮರಣವನ್ನು ಅನುಭವಿಸಲೂ ನಿನ್ನ ಪ್ರಿಯ ಕುಮಾರನಾದ ಯೇಸುಕ್ರಿಸ್ತನನ್ನು ನಮಗಾಗಿ ಕಳುಹಿಸಿಕೊಟ್ಟದ್ದಾಕ್ಕಾಗಿ ನಿಮಗೆ ವಂದನೆ ಸಲ್ಲಿಸುತ್ತೇನೆ.

ನಾನೀಗ ನನ್ನನ್ನು ಮತ್ತು ನನ್ನ ಕುಟುಂಬದವರೆಲ್ಲರನ್ನು ಯೇಸುವಿನ ಪರಿಶುದ್ಧ ರಕ್ತದಿಂದ ಮರೆಮಾಚತ್ತೇನೆ.

ನನಗೆ ತಿಳಿದ, ತಿಳಿಯದೇ ಇದ್ದ ನನ್ನ ಪೂರ್ವಜರು ಮಾಡಿದ ಎಲ್ಲಾ ರೀತಿಯ ವಿಗ್ರಹ ಆರಾಧನೆಗಳಾಗಲೀ -ಅಂಧಕಾರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳಾಗಲೀ ಅವುಗಳೆಲ್ಲಾವನ್ನೂ ತ್ಯಜಿಸಿ ಅದಕ್ಕಾಗಿ ನಿನ್ನಲ್ಲಿ ಕ್ಷಮೆಯನ್ನು ಅರಿಕೆ ಮಾಡುತ್ತೇನೆ.

ನಾನಾಗಲಿ ನನ್ನ ಕುಟುಂಬದ ಯಾರೇ ಆಗಲಿ ಸೈತಾನನೊಂದಿಗೆ ಮಾಡಿಕೊಂಡಿರುವ ಯಾವುದೇ ದುಷ್ಟ ಪ್ರತಿಜ್ಞೆಗಳಾಗಲೀ ರಕ್ತದ ಒಡಂಬಡಿಕೆಗಳಾಗಲೀ ದುಷ್ಟ ಹರಕೆಗಳಾಗಲೀ ಯೇಸುಕ್ರಿಸ್ತನ ನಾಮದಲ್ಲಿ ಈಗಲೇ ಅವುಗಳನ್ನು ಮುರಿದು ಹಾಕಿ ತ್ಯಜಿಸುತ್ತೇನೆ.



Join our WhatsApp Channel


Most Read
● ಪ್ರೀತಿಯ ಭಾಷೆ
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login