हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
Daily Manna

ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು

Tuesday, 14th of January 2025
4 1 184
Categories : ಪವಿತ್ರ ಆತ್ಮ (Holy spirit)
ಬಿರುದುಗಳು ಎಂಬುದು ವ್ಯಕ್ತಿಯ ಸ್ಥಾನವನ್ನು  ಮತ್ತು  ಕಾರ್ಯವನ್ನು ವಿವರಿಸುವ ವಿವರಣಾತ್ಮಕ ಪದಗುಚ್ಛವಾಗಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ದೇಶದ "ಅಧ್ಯಕ್ಷ" ಎಂಬ ಬಿರುದನ್ನು ಹೊಂದಿದ್ದರೆ, ಅದು ಸರ್ಕಾರದಲ್ಲಿ ಆ ವ್ಯಕ್ತಿಯ ಸ್ಥಾನವನ್ನು ಮತ್ತು ರಾಷ್ಟ್ರದ ನಾಯಕನಾಗಿ ಆ ವ್ಯಕ್ತಿ ಮಾಡುವ ಕಾರ್ಯವನ್ನು ವಿವರಿಸುತ್ತದೆ. 

ಹಾಗೆಯೇ , ಸತ್ಯವೇದಾದ್ಯಂತ, ಪವಿತ್ರಾತ್ಮನ ವಿವಿಧ ಹೆಸರುಗಳನ್ನು  ಅಥವಾ ಬಿರುದುಗಳನ್ನು ನಾವು ನೋಡಬಹುದು. ಈ ಹೆಸರುಗಳು ಅಥವಾ ಬಿರುದುಗಳು:
 1. ಆತನು ನಿಜವಾಗಿಯೂ ಯಾರಾಗಿದ್ದಾನೆ 
 2. ಆತನ ವ್ಯಕ್ತಿತ್ವ ಎಂತದ್ದು ಎಂದು  -  ಆತನನ್ನು  ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತವೆ: 

"ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ."
(ಕೀರ್ತನೆಗಳು  51:11) 

ಪ್ರಾಯಶಃ ನೀವು ಆತ್ಮನ  ಕುರಿತು ನೀವು ಕೇಳಿರುವ ಅತ್ಯಂತ ಸಾಮಾನ್ಯ ಹೆಸರು - ಪರಿಶುದ್ದಾತ್ಮನು . ಹೌದು ಆತನು ಪರಿಶುದ್ಧನು - ಅಪವಿತ್ರನಲ್ಲ  ಅಥವಾ ಸಾಮಾನ್ಯನಲ್ಲ, ಆದರೆ ದೇವರ ಸಕಲ ಶುದ್ಧತೆಯಲ್ಲೂ   ಮತ್ತು ಪವಿತ್ರತೆಯಲ್ಲೂ  ಪಾಲುಗಾರನಾಗಿದ್ದಾನೆ . 

ಆತನು ಆತ್ಮನಾಗಿದ್ದಾನೆ-ಮಾನವರಂತೆ ಶರೀರಿಯಲ್ಲ; ಆತನಿಗೆ  ಭೌತಿಕ ದೇಹವಿಲ್ಲ , ಆದರೆ ಆತನು  ದೇವರ ಅತ್ಯಂತ ಅಗೋಚರವಾದ ಸ್ವಭಾವ ಮತ್ತು ಸಾರದಲ್ಲಿ  ಪಾಲುಗಾರನಾಗಿದ್ದಾನೆ. 

ಪವಿತ್ರಾತ್ಮನು  ಸಾಮಾನ್ಯ ಎನಿಸುವ ಮತ್ತು ಅತ್ಯಲ್ಪ-ಎಂದು ಎಣಿಸುವ ಸ್ಥಳವನ್ನೇ  ಉಪಯೋಗಿಸಿಕೊಂಡು ಅದನ್ನು ಅತ್ಯಂತ ಪವಿತ್ರವಾದ ಅತ್ಯಂತ ಪರಿಶುದ್ಧವಾದ ಸ್ಥಳವನ್ನಾಗಿ ಪರಿವರ್ತಿಸಿ -ದೇವರ ಪ್ರಸನ್ನತೆಯಿಂದ ತುಂಬಿಸಿ ದೇವರ ಪ್ರಸನ್ನತೆಯನ್ನು  ಸ್ಪಷ್ಟವಾಗಿ ಪ್ರಕಟ ಪಡಿಸುವ ಸ್ಥಳವನ್ನಾಗಿ ಮಾಡುತ್ತಾನೆ.

ತ್ರಯೇಕತ್ವದಲ್ಲಿ ಪವಿತ್ರಾತ್ಮನನ್ನು ಮೂರನೇ ವ್ಯಕ್ತಿಯಾಗಿ    ಉಲ್ಲೇಖಿಸಲಾಗಿರುವ ಧರ್ಮಗ್ರಂಥದಾದ್ಯಂತ ಕೆಲವು ನಿರ್ದಿಷ್ಟ ಸ್ಥಳಗಳು: 

"ಯೇಸು  ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು." (ಮತ್ತಾಯ  1:18)

" ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನೇ ಕೊಡುವನಲ್ಲವೇ?” ಅಂದನು."(ಲೂಕ 11:13)

"ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.(ಎಫೆಸ್ಸೆ  4:30)

"ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು? ಯಾರೂ ತರಲಾರರು!" (ಯೋಬ 14:4)

ನಾವು ಪವಿತ್ರಾತ್ಮನ  ಹೆಸರುಗಳನ್ನು ಧ್ಯಾನಿಸುವಾಗ, ನಮ್ಮೊಳಗೆ  ವಾಸಿಸುವ ಮತ್ತು ನಮ್ಮಲ್ಲಿ ವಾಕ್ಯವು ಜೀವಿಸುವಂತೆ ನಮಗೆ ಅಧಿಕಾರ ನೀಡುವ ಒಬ್ಬನನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬಹುದು.

Bible Reading: Genesis 40-41
Prayer
ಧನ್ಯ ಪವಿತ್ರಾತ್ಮನೇ , ನಿನ್ನ  ಪವಿತ್ರ ಸ್ವಭಾವದ ಆಳವಾದ ತಿಳುವಳಿಕೆಯನ್ನು ನನಗೆ ಯೇಸುನಾಮದಲ್ಲಿ ಅನುಗ್ರಹಿಸಿ
(ಇದು ನಿಮ್ಮ ಹೃದಯದಿಂದ ಬರುವವರೆಗೆ ಈ ಪ್ರಾರ್ಥನೆಯನ್ನು ಪುನರಾವರ್ತಿಸಿ. ನೀವು ಅದಕ್ಕೆ ನಿಮ್ಮ ಸ್ವಂತ ಮಾತುಗಳನ್ನೂ ಕೂಡ ಸೇರಿಸಬಹುದು. ನಂತರ ಮಾತ್ರ ಮುಂದುವರಿಯಿರಿ)

Join our WhatsApp Channel


Most Read
● ಸಫಲತೆ ಎಂದರೇನು?
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login