ಅನುದಿನದ ಮನ್ನಾ
2
0
100
ದೇವರನ್ನು ವೈಭವೀಕರಿಸಿ ಮತ್ತು ನಿಮ್ಮ ನಂಬಿಕೆಯನ್ನು ಉತ್ತೇಜನಪಡಿಸಿಕೊಳ್ಳಿ.
Monday, 30th of June 2025
Categories :
ಅನ್ಯಭಾಷೆಗಳಲ್ಲಿ ಮಾತನಾಡುವುದು (Speaking in Tongues)
"ಏಕೆಂದರೆ ಅವರು ಇತರ ಭಾಷೆಗಳಲ್ಲಿ ಮಾತನಾಡುವುದನ್ನು ಮತ್ತು ದೇವರನ್ನು ಮಹಿಮೆಪಡಿಸುವುದನ್ನು ಅವರು ಕೇಳಿದರು (ಅ. ಕೃ 10:46)
ನಾವು ಯಾವುದನ್ನಾದರೂ ವೈಭವೀಕರಿಸಿ ಹೇಳುವಾಗ ನಾವು ಅದನ್ನು ಮಹಿಮೆ ಪಡಿಸುವವರಾಗುತ್ತೇವೆ. ಆದರೂ, ನಾವು ದೇವರನ್ನು ವೈಭವೀಕರಿಸುವಾಗ ದೇವರು ಮಾರ್ಪಡುವವನಲ್ಲ, ಅಥವಾ ಆತನು ಇರುವುದಕ್ಕಿಂತಲೂ ದೊಡ್ಡವವನಾಗುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ.
ದೇವರ ಕುರಿತ ನಮ್ಮ ಗ್ರಹಿಕೆ ಬದಲಾಗುತ್ತದೆ, ಹೊರತು ದೇವರು ಹೇಗಿದ್ದಾನೋ ಹಾಗೆಯೇ ಇರುತ್ತಾನೆ. ಆದಾಗ್ಯೂ, ಅನ್ಯಭಾಷೆಗಳಲ್ಲಿ ಮಾತನಾಡುವುದು ದೇವರ ಕುರಿತ ನಮ್ಮ ಗ್ರಹಿಕೆಯನ್ನು ಬದಲಾಯಿಸುತ್ತದೆ, ಅದು ನಮಗೆ ಒಳ್ಳೆಯದು.
ಕೆಲವರು ಈ ಜೀವನದ ಕಾಳಜಿಗಳು ಮತ್ತು ಹೋರಾಟಗಳ ಕುರಿತು ಸಮಸ್ಯೆಗಳನ್ನು ವೈಭವೀಕರಿಸುವಾಗ ಆ ಸಮಸ್ಯೆಯನ್ನು ದೊಡ್ಡದಾಗಿ ಮಾಡಿ ತೋರಿಸಲು ಪ್ರಾರಂಭಿಸುತ್ತಾರೆ. ಅವರಿಗೆ ಒದಗಿದ ಪರಿಸ್ಥಿತಿ ಎಷ್ಟು ದೊಡ್ಡದಾಗಿತ್ತು ಎಷ್ಟು ಕೆಟ್ಟದಾಗಿತ್ತು, ಎಷ್ಟು ಹತಾಶವಾಗಿತ್ತು ಎಂದೆಲ್ಲಾ ಅವರು ಮಾತನಾಡುತ್ತಾರೆ. ಅವರು ಕರ್ತನನ್ನು ವೈಭವೀಕರಿಸುವ ಬದಲು ಸಮಸ್ಯೆಯನ್ನು ದೊಡ್ಡದಾಗಿ ತೋರಿಸುತ್ತಾರೆ. ಆದರೆ ನಾವು ಅನ್ಯಭಾಷೆಗಳಲ್ಲಿ ಮಾತನಾಡುವಾಗ, ದೇವರು ದೊಡ್ಡದಾಗಿ ನಮಗೆ ಕಾಣಿಸಿಕೊಳ್ಳುತ್ತಾನೆ.
1 ತಿಮೊಥೆಯ 4:8 ಹೇಳುತ್ತದೆ, “ದೈಹಿಕ ವ್ಯಾಯಾಮವು ಸ್ವಲ್ಪ ಮಟ್ಟಿಗೆ ಪ್ರಯೋಜನವನ್ನು ನೀಡುತ್ತದೆ” ನಮ್ಮ ದೇಹವು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವ್ಯಾಯಾಮ ಅಗತ್ಯವಿರುವಂತೆಯೇ, ನಮ್ಮ ನಂಬಿಕೆಗೂ ದೈನಂದಿನ ವ್ಯಾಯಾಮಗಳು ಬೇಕಾಗುತ್ತವೆ.
ವ್ಯಾಯಾಮದ ಮೂಲಕ ಒಬ್ಬ ವ್ಯಕ್ತಿಯು ತನ್ನ ದೇಹವನ್ನು ಸಧೃಡ ಗೊಳಿಸಿಕೊಳ್ಳಬಹುದು. ಅದೇ ರೀತಿ, ನಿಮ್ಮ ನಂಬಿಕೆಯನ್ನು ಉಪಯೋಗಿಸಿಕೊಳ್ಳುವ ಅಭ್ಯಾಸದಿಂದ ಅದು ಅಭಿವೃದ್ಧಿ ಹೊಂದುತ್ತಾ ವೃದ್ಧಿಯಾಗುತ್ತಾ ಹೋಗುತ್ತದೆ.
"ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ. (ಯೂದ 1:20)
ನಾವು ಅನ್ಯಭಾಷೆಗಳಲ್ಲಿ ಪ್ರಾರ್ಥಿಸುವಾಗ, ನಾವು ನಮ್ಮ ನಂಬಿಕೆಯನ್ನು ಉತ್ತೇಜಿಸುವ ಮತ್ತು ಸಕ್ರಿಯಗೊಳಿಸುವ ಮೂಲಕ ನಮ್ಮ ಅತ್ಯುನ್ನತ ಮಟ್ಟದ ನಂಬಿಕೆಗೆ ನಮ್ಮನ್ನು ನಾವು ಕರೆದೋಯ್ಯುವವರಾಗುತ್ತೇವೆ.
Bible Reading: Psalms 48-55
ಅರಿಕೆಗಳು
ನನ್ನಲ್ಲಿ ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದ ಕರ್ತನು ಯೇಸುಕ್ರಿಸ್ತನು ಬರುವ ದಿನದರೊಳಗಾಗಿ ಅದನ್ನು ಪೂರ್ಣಗೊಳಿಸುತ್ತಾನೆ ಎಂದು ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ನಾನು ಅನ್ಯಭಾಷೆಗಳಲ್ಲಿ ಮಾತನಾಡುವಾಗ, ನಾನು ಅತೀ ಶ್ರೇಷ್ಠನಾದ ಮತ್ತು ಸ್ತುತಿಗೆ ಅರ್ಹನಾದ ಕರ್ತನನ್ನು ಮಹಿಮೆಪಡಿಸುತ್ತೇನೆ.
Join our WhatsApp Channel

Most Read
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.● ಮಹಾತ್ತಾದ ಕಾರ್ಯಗಳು
● ಕರ್ತನಿಗೆ ಮೊರೆಯಿಡಿರಿ.
● ಆರ್ಥಿಕ ಸಂಕಷ್ಟದಿಂದ ಹೊರಬರುವುದು ಹೇಗೆ#1
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇದು ಅಧಿಕಾರ ವರ್ಗಾವಣೆಯ ಸಮಯ
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
ಅನಿಸಿಕೆಗಳು