ಅನುದಿನದ ಮನ್ನಾ
1
0
33
ರಕ್ತದಲ್ಲಿ ಜೀವವಿದೆ
Monday, 25th of August 2025
Categories :
ಯೇಸುವಿನ ರಕ್ತ (Blood of Jesus)
“ ‘ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ, ಯಾವುದೇ ತರದ ರಕ್ತವನ್ನು ತಿಂದರೆ, ರಕ್ತವನ್ನು ತಿನ್ನುವ ಆ ಪ್ರಾಣಕ್ಕೆ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. (ಯಾಜಕಕಾಂಡ 17:10)
ಇದು ಇಸ್ರಾಯೇಲ್ ಮಕ್ಕಳಿಗೆ ಕರ್ತನಿಂದ ಬಂದ ಕಟ್ಟುನಿಟ್ಟಿನ ಆಜ್ಞೆಯಾಗಿತ್ತು, ಆದರೆ ಅದಕ್ಕಿದ್ದ ಕಾರಣಗಳು ಸರಳವಾಗಿದ್ದವು
'ಏಕೆಂದರೆ ದೇಹದ ಜೀವವು ರಕ್ತದೊಳಗೆ ಇರುತ್ತದೆ ಮತ್ತು ನಾನು ಅದನ್ನು ನಿಮ್ಮ ಆತ್ಮಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಬಲಿಪೀಠದ ಮೇಲೆ ನಿಮಗೆ ಕೊಟ್ಟಿದ್ದೇನೆ. ಪ್ರಾಣಕ್ಕೆ ಪ್ರಾಯಶ್ಚಿತ್ತ ಮಾಡುವುದು ರಕ್ತವೇ. ( ಯಾಜಕ ಕಾಂಡ 17:11)
1. ದೇಹದ ಜೀವವು ರಕ್ತದಲ್ಲಿದೆ.
ಎಲ್ಲಾ ಜೀವವು ದೇವರಿಗೆ ಸೇರಿದ್ದು, ಮತ್ತು ರಕ್ತವು ಜೀವದ ಸಂಕೇತವಾಗಿರುವುದರಿಂದ, ಅದು ವಿಶೇಷವಾಗಿ ದೇವರಿಗೆ ಸೇರಿದೆ ಎಂಬುದು ಇದರ ಕಲ್ಪನೆಯಾಗಿದೆ.
"ಜೀವ"ವು ರಕ್ತದಲ್ಲಿದೆ ಎಂದು ಸತ್ಯವೇದ ಒತ್ತಿ ಹೇಳುತ್ತದೆ. ನಿಮ್ಮ ದೇಹದಲ್ಲಿ ರಕ್ತವು ಚಲಿಸುವುದು ನಿಂತಾಗ ನೀವು ಸಂಪೂರ್ಣವಾಗಿ ಮತ್ತು ತಕ್ಷಣವೇ ಸತ್ತು ಹೋಗುತ್ತೀರಿ. ಅದೇ ರೀತಿ, ಒಂದು ದೇವತಾಶಾಸ್ತ್ರ, ಸಭೆ, ಪ್ರಾರ್ಥನಾ ಗುಂಪು ಅಥವಾ ಕ್ರಿಸ್ತನ ರಕ್ತವಿಲ್ಲದ ವ್ಯಕ್ತಿ ಸತ್ತು ಹೋಗಿದ್ದಾನೆ ಎಂದರ್ಥ. ನೀವು ನಂಬಿಕೆಯಿಂದ ಆತನ ರಕ್ತಕ್ಕೆ ಸಂಬಂಧಿಸಿರುವುದರಿಂದ ಕ್ರಿಸ್ತನ ಜೀವವು ಅದರ ಎಲ್ಲಾ ಶಕ್ತಿ ಮತ್ತು ಆಶೀರ್ವಾದಗಳೊಂದಿಗೆ ಅದು ನಿಮ್ಮದಾಗಿದೆ.
2. ನಾನು ಅದನ್ನು ನಿಮ್ಮ ಆತ್ಮಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಬಲಿಪೀಠದ ಮೇಲೆ ನಿಮಗೆ ಕೊಟ್ಟಿದ್ದೇನೆ:
ಹೆಚ್ಚಾಗಿ, ರಕ್ತವು ಪ್ರಾಯಶ್ಚಿತ್ತವನ್ನು ಮಾಡುವ ಸಾಧನವಾಗಿತ್ತು - ಆದ್ದರಿಂದ, ರಕ್ತವನ್ನು ತಿನ್ನುವುದು ಅದನ್ನು ಅಪವಿತ್ರಗೊಳಿಸುವ ಕಾರ್ಯವಾಗಿತ್ತು. ಅಲ್ಲದೆ, ಪಾಪದ ಗಂಭೀರತೆಯು ಪ್ರಾಯಶ್ಚಿತ್ತದ ಸ್ಮಾರಕ ವೆಚ್ಚದಿಂದ ಪ್ರಕಟಗೊಳ್ಳುತ್ತದೆ - ಅದು ಮರಣವಾಗಿದೆ.
3. ಸಹಜವಾಗಿ, ಅನೇಕ ಅನ್ಯಜನರ ಆಚರಣೆಗಳು ರಕ್ತವನ್ನು ಕುಡಿಯುವುದನ್ನು ಆಚರಿಸುತ್ತಿದ್ದು, ದೇವರು ಈ ಅನ್ಯಜನರ ಆಚರಣೆಗಳಿಂದ ತನ್ನ ಜನರು ಬೇರ್ಪಡ ಬೇಕೆಂದೂ ಸಹ ಬಯಸಿದನು.
“ ‘ಇದಲ್ಲದೆ ಇಸ್ರಾಯೇಲರು ಯಾವ ಮನುಷ್ಯನಾದರೂ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವುದಕ್ಕಾಗಿ ಬೇಟೆಯಾಡಿ, ಯಾವುದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ, ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿನಿಂದ ಮುಚ್ಚಬೇಕು. ಏಕೆಂದರೆ ಅದು ಎಲ್ಲಾ ಶರೀರಗಳ ಜೀವವಾಗಿದೆ. ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ. ಆದ್ದರಿಂದ ನಾನು ಇಸ್ರಾಯೇಲರಿಗೆ, “ನೀವು ಯಾವ ತರಹದ ರಕ್ತವನ್ನೂ ತಿನ್ನಬಾರದು,” ಎಂದು ಹೇಳಿದ್ದೇನೆ. ಏಕೆಂದರೆ ಎಲ್ಲಾ ಶರೀರಗಳ ಜೀವವೂ ಅದರ ರಕ್ತದಲ್ಲಿಯೇ ಇದೆ. ಅದನ್ನು ತಿನ್ನುವ ಯಾವನನ್ನಾದರೂ ಬಹಿಷ್ಕರಿಸಬೇಕು. (ಯಾಜಕಕಾಂಡ 17:13-14)
ಹಳೆಯ ಒಡಂಬಡಿಕೆಯಲ್ಲಿ ಪ್ರಾಣಿಗಳ ರಕ್ತದ ಕುರಿತಾದ ಈ ಗೌರವವು ನಾವು ಯೇಸುವಿನ ರಕ್ತವನ್ನು ಹೇಗೆ ಪರಿಗಣಿಸುತ್ತೇವೆ ಎಂಬುದನ್ನು ಪರಿಗಣಿಸುವಂತೆ ಮಾಡಬೇಕು. ಹಳೆಯ ಒಡಂಬಡಿಕೆಯಡಿಯಲ್ಲಿ ಪ್ರಾಣಿಗಳ ರಕ್ತವನ್ನೇ ಅಷ್ಟು ಗೌರವಿಸಬೇಕಾದರೆ, ಹೊಸ ಒಡಂಬಡಿಕೆಯನ್ನು ರೂಪಿಸುವ ಯೇಸುವಿನ ಅಮೂಲ್ಯ ರಕ್ತದ ಕುರಿತು ಇನ್ನೇನು ಹೇಳಬೇಕು?
"ಯಾವನು ದೇವಪುತ್ರನನ್ನೇ ತುಳಿದು ತನ್ನನ್ನು ಶುದ್ಧೀಕರಿಸಿದ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಪವಿತ್ರಾತ್ಮ ದೇವರನ್ನು ತಿರಸ್ಕಾರ ಮಾಡಿದ್ದಾನೋ, ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗುವನೆಂಬುದನ್ನು ಯೋಚಿಸಿರಿ". (ಇಬ್ರಿಯ 10:29)
Bible Reading: Jeremiah 40-42
ಪ್ರಾರ್ಥನೆಗಳು
ಪರಿಶುದ್ಧನಾದ ತಂದೆಯೇ, ಎಲ್ಲಾ ಜೀವವು ನಿನ್ನದೇ ಆಗಿದ್ದು ನಿಮಗೆ ಮಾತ್ರ ಸೇರಿದ್ದಾಗಿರುವುದರಿಂದ ನಿನಗೇ ಸ್ತೋತ್ರ ಸಲ್ಲಿಸುತ್ತೇನೆ. ನಾನು ನನ್ನ ಜೀವವನ್ನು ನಿಮ್ಮ ಕೈಯಲ್ಲಿಯೇ ಒಪ್ಪಿಸುತ್ತೇನೆ. ಕರ್ತನಾದ ಯೇಸುವೇ, ನನ್ನ ವಿಮೋಚನೆಗಾಗಿ ಸುರಿಸಲ್ಪಟ್ಟ ನಿಮ್ಮ ಅಮೂಲ್ಯ ರಕ್ತಕ್ಕಾಗಿ ನಾನು ನಿಮಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ.
ಯೇಸು ನಾಮ ಮತ್ತು ಯೇಸು ರಕ್ತದಿಂದ, ಪಾಪದ, ಸೈತಾನನ ಮತ್ತು ಅವನ ದುರಾತ್ಮಗಳ ಸೇನೆಯ ಮೇಲೆ ನನ್ನ ಸಂಪೂರ್ಣ ವಿಜಯವನ್ನು ನಾನು ಯೇಸುನಾಮದಲ್ಲಿ ಘೋಷಿಸುತ್ತೇನೆ.
Join our WhatsApp Channel

Most Read
● ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ಯೇಸು ಅಂಜೂರದ ಮರವನ್ನು ಏಕೆ ಶಪಿಸಿದನು?
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ದೇವರು ನಿಮ್ಮಿಂದ ದೂರವಾಗಿದ್ದಾನೆ ಎಂದು ಎನಿಸುವಾಗ ಹೇಗೆ ಪ್ರಾರ್ಥಿಸಬೇಕು?
● ನೀವೇ ಮಾದರಿಯಾಗಿರ್ರಿ
ಅನಿಸಿಕೆಗಳು