ಅನುದಿನದ ಮನ್ನಾ
1
1
57
ನೀವು ಅವರ ಮೇಲೆ ಪ್ರಭಾವ ಬೀರಬೇಕು
Tuesday, 26th of August 2025
Categories :
ನಾಯಕತ್ವ (leadership)
"ನೀವು ವಾಸವಾಗಿದ್ದ ಐಗುಪ್ತದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್‍ದೇಶದ ಆಚರಣೆಗಳನ್ನೂ ನೀವು ಅನುಸರಿಸಬಾರದು; ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು."
(ಯಾಜಕಕಾಂಡ 18:3)
ಇಲ್ಲಿ ದೇವರು ತನ್ನ ದೇವಜನರು ತಮ್ಮ ಜೀವನವನ್ನು ವಿಭಿನ್ನವಾಗಿ ನಡೆಸಬೇಕೆಂಬುದನ್ನು ಮೋಶೆಯ ಮೂಲಕ ಸೂಚಿಸುತ್ತಿದ್ದಾನೆ. ಐಗುಪ್ತದವರ ಬಳಿ ಅವರು ಗುಲಾಮರಾಗಿದ್ದಾಗ ಐಗುಪ್ತರ ಜೀವನ ಶೈಲಿಯನ್ನು ಅವರು ನೋಡಿದಂತೆ ಅವರು ಬದುಕಬಾರದು.ಮತ್ತು ದೇವರು ಅವರನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ವಾಗ್ದಾನ ಮಾಡಿಕೊಟ್ಟ ಭೂಮಿಯಾದ ಕಾನಾನ್‌ನಲ್ಲಿ ವಾಸಿಸುತ್ತಿದ್ದ ಜನರಂತೆ ಕೂಡ ಅವರು ಬದುಕಲು ಪ್ರಾರಂಭಿಸಬಾರದು.
ತತ್ವ ಸ್ಪಷ್ಟವಾಗಿದೆ. ನೀವು ವಾಸಿಸುವ ಸ್ಥಳ ಮತ್ತು ನೀವು ವಾಸಿಸುವ ಜನರು ನಿಮ್ಮ ಮೇಲೆ ಪ್ರಭಾವ ಬೀರಬಾರದು, ಬದಲಿಗೆ ನೀವು ಅವರ ಮೇಲೆ ಸಕಾರಾತ್ಮಕ ಪ್ರಭಾವ ಬೀರಬೇಕು. ಕರ್ತನಾದ ಯೇಸು, "ನೀವು ಭೂಮಿಗೆ ಉಪ್ಪಾಗಿದ್ದೀರಿ" (ಮತ್ತಾಯ 5:13) ಎಂದು ಹೇಳಿದ್ದಾನೆ.
ಸರಿಯಾದ ಪ್ರಮಾಣದಲ್ಲಿ ಹಾಕಿದ ಉಪ್ಪು ಆಹಾರಕ್ಕೆ ರುಚಿಯನ್ನು ತರುತ್ತದೆ ಮತ್ತು ಆಹಾರದ ಮೌಲ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಸುತ್ತಲಿನ ಜನರನ್ನು ನೀವು ಹಾಗೇ ಸಕಾರಾತ್ಮಕವಾಗಿ ಪ್ರಭಾವಿಸಬೇಕು.
ದುಃಖಕರವೆಂದರೆ, ಇಂದಿನ ಕ್ರೈಸ್ತರು ತಮ್ಮ ನಡವಳಿಕೆಯ ಮಾನದಂಡವನ್ನು ದೇವರ ಮತ್ತು ಆತನ ವಾಕ್ಯದಿಂದಲ್ಲ, ಲೋಕದಿಂದ ತೆಗೆದುಕೊಳ್ಳುತ್ತಿದ್ದಾರೆ. ಸ್ಪಷ್ಟವಾಗಿ, ಕ್ರೈಸ್ತರು ತಮ್ಮ ನೈತಿಕತೆಯಲ್ಲಿ ಲೋಕದಿಂದ ಭಿನ್ನರಾಗಿರಬೇಕು ಮತ್ತು ಅವರು ಬೈಬಲ್‌ನ ನೈತಿಕ ಮಾನದಂಡವನ್ನು ಅನುಸರಿಸಬೇಕು.
ನಾವು ಥರ್ಮಾಮೀಟರ್‌ಗಳಲ್ಲ, ಥರ್ಮಾಸ್ಟಾಟ್ ಗಳಾಗಿರಬೇಕು. ಥರ್ಮಾಮೀಟರ್ ತನ್ನ ಸುತ್ತಮುತ್ತಲಿನ ಪ್ರಸ್ತುತ ತಾಪಮಾನವನ್ನು ಹೇಗಿದೆಯೋ ಹಾಗೇ ಪ್ರತಿಬಿಂಬಿಸುತ್ತದೆ. ಆದರೆ ಥರ್ಮೋಸ್ಟಾಟ್ ತಾಪಮಾನವನ್ನು ಕಂಡುಹಿಡಿದು ನಂತರ ಅದನ್ನು ನಿಗದಿತ ಮಾನದಂಡಕ್ಕೆ ಬದಲಾಯಿಸಲು ಪ್ರಯತ್ನಿಸುತ್ತದೆ.
ಕರ್ತನು ಪ್ರವಾದಿ ಯೆರೆಮೀಯನಿಗೆ, "ನೀವು ಅವರ ಮೇಲೆ ಪ್ರಭಾವ ಬೀರಬೇಕು; ಅವರು ನಿಮ್ಮ ಮೇಲೆ ಪ್ರಭಾವ ಬೀರಲು ಬಿಡಬಾರದು" (ಯೆರೆಮೀಯ 15:19 NLT) ಆದಿ ಸಭೆಯಲ್ಲಿ, ಕ್ರೈಸ್ತ ಧರ್ಮದ ಸತ್ಯಕ್ಕಾಗಿ ಕ್ರೈಸ್ತರು ನೀಡುತ್ತಿದ್ದ ಒಂದು ಹೇಳಿಕೆಯೆಂದರೆ, "ನಮ್ಮ ಜೀವನವನ್ನು ನೋಡುವ ಮೂಲಕ ನೀವು ಅದು ನಿಜವೆಂದು ತಿಳಿದುಕೊಳ್ಳಬಹುದು." ಎಂದು ಆದರೆ ಇಂದು, ಕ್ರೈಸ್ತ ಜಗತ್ತು ಹೇಳುತ್ತದೆ, "ನನ್ನನ್ನು ನೋಡಬೇಡಿ; ಯೇಸುವನ್ನು ನೋಡಿ."ಎಂದು.
ಅಪೊಸ್ತಲ ಪೌಲನು ರೋಮನ್ನರಿಗೆ ಬರೆದದ್ದು ಏನೆಂದರೆ, “ಈ ಲೋಕದ ನಡವಳಿಕೆ ಮತ್ತು ಪದ್ಧತಿಗಳನ್ನು ಅನುಕರಿಸಬೇಡಿ, ಆದರೆ ದೇವರು ನಿಮ್ಮ ಆಲೋಚನೆಯ ವಿಧಾನವನ್ನು ಬದಲಾಯಿಸುವ ಮೂಲಕ ನಿಮ್ಮನ್ನು ಹೊಸ ವ್ಯಕ್ತಿಯಾಗಿ ಪರಿವರ್ತಿಸಲಿ. ಆಗ ನೀವು ನಿಮಗಾಗಿ ದೇವರ ಚಿತ್ತವನ್ನು ತಿಳಿದುಕೊಳ್ಳಲು ಕಲಿಯುವಿರಿ,ಏಕೆಂದರೆ ಅದು ಒಳ್ಳೆಯದು ಮತ್ತು ಸಂತೋಷಕರವಾದದ್ದೂ ಮತ್ತು ಪರಿಪೂರ್ಣವಾದದ್ದೂ ಆಗಿದೆ. (ರೋಮನ್ನರು 12:2 MSG)
Bible Reading: Jeremiah 43-45
ಪ್ರಾರ್ಥನೆಗಳು
ತಂದೆಯೇ, ಈ ಲೋಕದ ಹರಿವಿನೊಂದಿಗೆ ನಾನು ಹೋಗದೆ ಬದಲಾಗಿ ನಿಮ್ಮ ಮಾನದಂಡದ ಪ್ರಕಾರ ಬದುಕಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಪವಿತ್ರಾತ್ಮನೇ, ನನ್ನ ಸುತ್ತಲಿನವರಿಗೆ ಕ್ರಿಸ್ತನ ಮಾದರಿಯಾಗಿ ನಾನಿರುವಂತೆ ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್.
Join our WhatsApp Channel

Most Read
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ● ಯಾಬೇಚನ ಪ್ರಾರ್ಥನೆ
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ವಿವೇಕಿಯಾಗಿರಿ
● ಪರಲೋಕದ ವಾಗ್ದಾನ
● ಸಾಧನೆಯ ಪರೀಕ್ಷೆ.
ಅನಿಸಿಕೆಗಳು