english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಅರಣ್ಯದ ಮನಸ್ಥಿತಿಯನ್ನು ಜಯಿಸುವುದು
ಅನುದಿನದ ಮನ್ನಾ

ಅರಣ್ಯದ ಮನಸ್ಥಿತಿಯನ್ನು ಜಯಿಸುವುದು

Tuesday, 9th of September 2025
1 1 92
Categories : ಬಿಡುಗಡೆ (Deliverance) ಶಿಸ್ತು ( Discipline)
ಹೋರೇಬ್ (ಸಿನೈ ಪರ್ವತದ ಇನ್ನೊಂದು ಹೆಸರು) ನಿಂದ ಸೇಯಿರ್ ಪರ್ವತದ ಮಾರ್ಗವಾಗಿ ಕಾದೇಶ್-ಬರ್ನೇಯಕ್ಕೆ [ಕೇವಲ] ಹನ್ನೊಂದು ದಿನಗಳ ಪ್ರಯಾಣ [ಕಾನಾನ್ ಗಡಿಯಲ್ಲಿ; ಆದರೂ ಇಸ್ರೇಲ್ ಅದನ್ನು ಮೀರಿ ಹೋಗಲು ನಲವತ್ತು ವರ್ಷಗಳನ್ನು ತೆಗೆದುಕೊಂಡಿತು]. (ಧರ್ಮೋಪದೇಶಕಾಂಡ 1:2 ವರ್ಧಿತ) 

ಇದು ಒಂದು ದುರಂತವೇ ಸರಿ. ಅವರ ಆಗಮನವನ್ನು ವಿಳಂಬಗೊಳಿಸಿದ್ದು ಪ್ರಯಾಣದ ದೂರವಲ್ಲ. ಪ್ರಯಾಣದಲ್ಲಿರುವಾಗ ಅವರ ವರ್ತನೆಯೇ ಅವರ ಆಗಮನವನ್ನು ವಿಳಂಬಗೊಳಿಸಿತು. ದೇವರ ವಾಕ್ಯದ ಕಡೆಗೆ ನಿಮ್ಮ ಮನೋಭಾವವು ನೀವು ಜೀವನದಲ್ಲಿ ನೀವು ಎಷ್ಟು ಎತ್ತರ ಮತ್ತು ಎಷ್ಟು ದೂರ ಹೋಗುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ.

ಮನಸ್ಥಿತಿ ಎಂದರೇನು? 
ದೇವರ ವಾಕ್ಯದ ಕಡೆಗೆ ಇರುವ ನಮ್ಮ ಮನೋಭಾವವನ್ನು ಮನಸ್ಥಿತಿ ಎಂದು ಕರೆಯಲಾಗುತ್ತದೆ. ಮನಸ್ಥಿತಿಯು ಒಂದು ನಿರ್ದಿಷ್ಟ ಆಲೋಚನಾ ವಿಧಾನವಾಗಿದೆ.

ನಾವು ಮನಸ್ಥಿತಿಯನ್ನು ಹೇಗೆ ಬೆಳೆಸಿಕೊಳ್ಳುತ್ತೇವೆ? 
ಸಾಮಾನ್ಯವಾಗಿ, ನಮ್ಮ ಸುತ್ತಲಿನ ಸಂಸ್ಕೃತಿ, ನಾವು ಹಾದುಹೋಗುವ ಸಂದರ್ಭಗಳು, ನಾವು ಸಂಯೋಜನೆ ಹೊಂದುವ ಜನರು ನಮ್ಮ ಮನಸ್ಥಿತಿಯನ್ನು ರೂಪಿಸುತ್ತಾರೆ. ಅದಕ್ಕಾಗಿಯೇ ನಾವು ಯಾವುದನ್ನಾದರೂ ಮಾಡುತ್ತೇವೆ. ಅದಕ್ಕಾಗಿಯೇ ನಾವು ಹೇಗೋ ವರ್ತಿಸುತ್ತೇವೆ. ಇಸ್ರೇಲ್ ಮಕ್ಕಳು ಅರಣ್ಯದ ಮೂಲಕ ಹೋಗುತ್ತಿರುವಾಗ, ನಾವು ಈಗ 'ಅರಣ್ಯದ ಮನಸ್ಥಿತಿ' ಎಂದು ಕರೆಯುವುದನ್ನು ಅವರು ಬೆಳೆಸಿಕೊಂಡರು.

ನಮ್ಮ ಜೀವನದಲ್ಲಿ ದೇವರ ಕರೆಯನ್ನು ಪೂರೈಸಲು, ಫಲಪ್ರದರಾಗಲು, ನಾವು ಸರಿಯಾದ ಮನಸ್ಥಿತಿಯನ್ನು ಹೊಂದಿರುವುದು ಬಹಳ ಮುಖ್ಯ. ಅಪೊಸ್ತಲ ಪೌಲನು ರೋಮ್‌ನಲ್ಲಿರುವ ಸಭೆಗೆ ಹೀಗೆ ಬರೆದ ಕಾರಣ ಇದುವೇ:

ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.(ರೋಮನ್ನರು 12:2 )


 ಪವಿತ್ರಾತ್ಮನು ನನಗೆ ಅರಣ್ಯ ಮನಸ್ಥಿತಿಯನ್ನು ಜಯಿಸಲು ನಮಗೆ ಸಹಾಯ ಮಾಡುವ ಮೂರು ಪ್ರಮುಖ ತತ್ವಗಳನ್ನು ಬಹಿರಂಗಪಡಿಸಿದನು.

"ಹೋರೇಬಿನಲ್ಲಿ ನಮ್ಮ ದೇವರಾದ ಯೆಹೋವನು ನಮಗೆ - ನೀವು ಈ ಬೆಟ್ಟದ ಬಳಿಯಲ್ಲಿ ವಾಸಿಸಿದ್ದು ಸಾಕು;] ಈಗ ಹಿಂದಿರುಗಿ ಅಮೋರಿಯರು ಇರುವ ಬೆಟ್ಟದ ಸೀಮೆಗೂ ಅದಕ್ಕೆ ಸೇರಿದ ಪ್ರದೇಶವೆಲ್ಲಕ್ಕೂ ಪ್ರಯಾಣಮಾಡಿರಿ. ಅವು ಯಾವವಂದರೆ - ತಗ್ಗಾದ ಪ್ರದೇಶ, ಬೆಟ್ಟದ ಮೇಲಿನ ಪ್ರದೇಶ, ಇಳಕಲಿನ ಪ್ರದೇಶ, ದಕ್ಷಿಣಸೀಮೆ, ಸಮುದ್ರತೀರ ಎಂಬ ನಾಡುಗಳನ್ನು ಒಳಗೊಂಡಿರುವ ಕಾನಾನ್ಯರ ದೇಶ, ಲೆಬನೋನ್ ಪರ್ವತ ಮತ್ತು ಯೂಫ್ರೇಟೀಸ್ ಎಂಬ ಮಹಾನದಿಯವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶ ಇವುಗಳೇ. ಆ ದೇಶವನ್ನು ನಿಮಗೇ ಕೊಟ್ಟಿದ್ದೇನೆ; ಯೆಹೋವನೆಂಬ ನಾನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೂ ಅವರ ಸಂತತಿಯವರಿಗೂ ಆ ದೇಶವನ್ನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದೆನಲ್ಲಾ. ಅದರಲ್ಲಿ ಪ್ರವೇಶಮಾಡಿ ಸ್ವಾಧೀನಮಾಡಿಕೊಳ್ಳಿರಿ ಎಂದು ಆಜ್ಞಾಪಿಸಿದನು.'” (ಧರ್ಮೋಪದೇಶಕಾಂಡ 1:6-8)

 1. ನೀವು ಈ ಪರ್ವತದಲ್ಲಿ ಸಾಕಷ್ಟು ಸಮಯದಿಂದ ಇಲ್ಲೇ ಇದ್ದೀರಿ.

ನಾವು ಪ್ರಗತಿ ಸಾಧಿಸುವ ಬದಲು ಒಂದೇ ಪರ್ವತದ ಸುತ್ತಲೂ ಸುತ್ತುತ್ತಾ ಇದ್ದೇವೆ. ಒಂದೇ ಪರ್ವತವನ್ನು ಮತ್ತೆ ಮತ್ತೆ ಸುತ್ತುವುದರ ಅರ್ಥವೇನು? ನೀವು ತುಂಬಾ ಆರಾಮದಾಯಕವಾಗಿರುವ ಸ್ಥಳದಲ್ಲಿ ಅಥವಾ ನೀವು ಬಿಡಲು ಭಯಪಡುವ ಸ್ಥಳದಲ್ಲಿ ಸಿಲುಕಿಕೊಳ್ಳುವುದು. ಇದು ಒಂದು ನಿರ್ದಿಷ್ಟ ಅಭ್ಯಾಸ, ವ್ಯಸನ ಅಥವಾ ಸರಳವಾಗಿ ಸಡಿಲ ಜೀವನಶೈಲಿಯನ್ನು ಸಹ ಅರ್ಥೈಸಬಹುದು. ಅನೇಕರಿಗೆ, ತ್ವರಿತವಾಗಿ ನಿಭಾಯಿಸಬಹುದಾದ ಮತ್ತು ನಮ್ಮ ಎದುರಿಸಲು ಅಸಾಧ್ಯವಾದದೆಂದು ಅಂದುಕೊಂಡಂತ ಸಂಗತಿಗಳಾಗಿರುತ್ತವೆ.. ಕೆಲವರು ತಮ್ಮ ಪ್ರಗತಿಯನ್ನು ಪ್ರವೇಶಿಸದಿರಲು ಅಥವಾ ಪವಾಡಗಳನ್ನು ಅವರು ನೋಡಬೇಕಾದಷ್ಟು ವೇಗವಾಗಿ ನೋಡದಿರಲು ಇದು ಒಂದು ಪ್ರಮುಖ ಕಾರಣವಾಗಿದೆ. ಆದಾಗ್ಯೂ, ದೇವರು ನಂಬಿಗಸ್ತನಾಗಿದ್ದಾನೆ ಮತ್ತು ತನ್ನ ಮಕ್ಕಳಿಂದ ಆತನು ಯಾವುದನ್ನೂ ತಡೆಹಿಡಿಯುವುದಿಲ್ಲ.

ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; (ಯೇಸುವನ್ನು) ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?(ರೋಮಾಪುರದವರಿಗೆ 8:32)


 2. ಇದು ಗುಡಾರವನ್ನು ಮುರಿಯುವ ಸಮಯ 

ದೇವರು ಇಸ್ರಾಯೇಲ್ಯರಿಗೆ ಗುಡಾರದ ಗೂಟಗಳನ್ನು ಮುರಿಯುವ ಸಮಯ ಎಂದು ಹೇಳಿದನು. ಇದರರ್ಥ ಆ ಚಕ್ರದ ಮಾದರಿಗಳನ್ನು, ಈ ಎಲ್ಲಾ ವರ್ಷಗಳು ಮತ್ತು ತಿಂಗಳುಗಳಲ್ಲಿ ನಮ್ಮನ್ನು ಬಂಧಿಸಿರುವ ಆ ದುಷ್ಟ ಮಾದರಿಗಳನ್ನು ಮುರಿಯುವುದು. ಇದರರ್ಥ ನೀವು ಪರ್ವತದಿಂದ ದೂರ ಸರಿಯುವ ಕೆಲವು ಲಕ್ಷಣಗಳನ್ನು ತೋರಿಸಬೇಕಾದ ಸಮಯ. 

ನೀವು ಇರಲು ಬಯಸುವ ಸ್ಥಳಕ್ಕೆ ಮುನ್ನಡೆಯಲು ನೀವು ಏನು ಮಾಡುತ್ತಿದ್ದೀರೋ ಅದನ್ನು ನಿಲ್ಲಿಸಲು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸುವ ಸಮಯ. ಆ ಮಾದರಿಗಳನ್ನು ಮುರಿಯಲು ಇದು ಉಪವಾಸ ಮತ್ತು ಪ್ರಾರ್ಥನೆಯನ್ನು ಒಳಗೊಂಡಿರಬಹುದು. ಇದು ನಿಮ್ಮನ್ನು ಕೆಲವು ನಾಯಕರಿಗೆ ಅಧೀನ ರನ್ನಾಗಿ ಮಾಡಿಕೊಳ್ಳುವುದನ್ನು ಒಳಗೊಂಡಿರಬಹುದು. ಇದು ನಿಮ್ಮ ಫೋನ್ ಅಥವಾ ಕೆಲವು ಫೋನ್ ಸಂಖ್ಯೆಗಳಲ್ಲಿ ಕೆಲವು ಅಪ್ಲಿಕೇಶನ್‌ಗಳನ್ನು ಅಳಿಸುವುದನ್ನು ಒಳಗೊಂಡಿರಬಹುದು. ನಿಮ್ಮನ್ನು ನಿಶ್ಚಲತೆಯಲ್ಲಿ ಇರಿಸುತ್ತಿರುವ ಆ ವಿನಾಶಕಾರಿ ಮಾದರಿಗಳನ್ನು ಮುರಿಯಲು ಯಾವುದನ್ನಾದರೂ ಮಾಡಿ.

 3. ಎದ್ದು ಹೋಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಿ.

 ಇದರರ್ಥ ನೀವು ವಾಕ್ಯದ ಮೇಲೆ ಕಾರ್ಯನಿರ್ವಹಿಸಬೇಕು. ನೀವು ಏನನ್ನೂ ಅನುಭವಿಸದಿರಬಹುದು, ನೀವು ಏನನ್ನೂ ನೋಡದಿರಬಹುದು, ಆದರೆ ನೀವು ವಾಕ್ಯದ ಆಧಾರದ ಮೇಲೆ ಮಾತ್ರ ಮುಂದುವರಿಯಬೇಕು. ದೇವರ ಮನುಷ್ಯನಿಂದ ವೈಯಕ್ತಿಕ ಪ್ರವಾದನಾ ವಾಕ್ಯವನ್ನು ಸ್ವೀಕರಿಸದಿದ್ದಾಗ ಅನೇಕ ಜನರು ನಿರಾಶೆಗೊಳ್ಳುತ್ತಾರೆ.

 ನೀವು ನಿಜವಾಗಿಯೂ ಹಾಗೆ ಮಾಡಬೇಕಾಗಿಲ್ಲ. ದೇವರ ಮನುಷ್ಯನು ಸಾರುವ ಸಂದೇಶವನ್ನು ನೀವು ಕೇಳಿದಾಗ, ಆ ವಾಕ್ಯವು ಸ್ವತಃ ಪ್ರವಾದನೆಯೇ ಆಗಿರುತ್ತದೆ. ಪ್ರತಿಯೊಂದು ಸೇವೆಯಲ್ಲಿ ಸಾರಲ್ಪಡುತ್ತಿರುವ ವಾಕ್ಯದ ಮೇಲೆ ಕ್ರಮ ಕೈಗೊಳ್ಳಿ.


ನಾನು ಪ್ರವಾದನೆಯ ವಿರೋಧಿಯಲ್ಲ (ಮತ್ತು ಅದು ನಿಮಗೆ ತಿಳಿದಿದೆ). ಅನೇಕರು ವೈಯಕ್ತಿಕ ಪ್ರವಾದನಾ ವಾಕ್ಯಕ್ಕಾಗಿ ಕಾಯುತ್ತಾರೆ, ಮತ್ತು ವಾಕ್ಯವನ್ನು ಸ್ವೀಕರಿಸಿದ ನಂತರ, ಅವರು ತಮ್ಮ ಜೀವನದುದ್ದಕ್ಕೂ ಇನ್ನೊಬ್ಬ ದೇವರ ಮನುಷ್ಯನು ಏನನ್ನಾದರೂ ಹೇಳಬೇಕೆಂದು ಕಾಯುತ್ತಿರುತ್ತಾರೆ. ಅದಕ್ಕಾಗಿ ಅವರು ಬಹಳ ದೂರ ಪ್ರಯಾಣಿಸುತ್ತಾರೆ, ಹಣವನ್ನು ಖರ್ಚು ಮಾಡುತ್ತಾರೆ (ಮತ್ತು ನಾನು ಅದನ್ನೂ ವಿರೋಧಿಸುವುದಿಲ್ಲ).

 ಆದರೆ ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ: ನೀವು ಸ್ವೀಕರಿಸಿದ ಮೊದಲ ವಾಕ್ಯದೊಂದಿಗೆ ನೀವು ಏನು ಮಾಡಿದ್ದೀರಿ? ನಾವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೀವು ಮತ್ತು ನಾನು ಮಾಡಬೇಕಾದ ಒಂದು ವಿಷಯವೆಂದರೆ "ನಮ್ಮ ಮನಸ್ಸನ್ನು ಭೂಮಿಯ ಮೇಲಿನ ವಿಷಯಗಳ ಮೇಲೆ ಅಲ್ಲ, ಮೇಲಿನವುಗಳ ಮೇಲೆ (ಉನ್ನತ ವಿಷಯಗಳ ಮೇಲೆ) ಇಡುವುದಾಗಿದೆ." (ಕೊಲೊಸ್ಸೆಯವರಿಗೆ 3:2 ವರ್ಧಿತ) ನಾವು ಮೇಲಿನವುಗಳ ಮೇಲೆ ನಮ್ಮ ಮನಸ್ಸನ್ನು ಇಡುವ ವಿಧಾನವು ದೇವರ ವಾಕ್ಯವನ್ನು ಓದುವುದು ಮತ್ತು ಧ್ಯಾನಿಸುವುದು ಆಗಿದೆ.


 ಕೊನೆಯದಾಗಿ, ನಾನು ನಿಮಗೆ ಎಚ್ಚರಿಕೆ ನೀಡುವುದೇನೆಂದರೆ, ಸ್ನೇಹಿತನೇ. "ನನ್ನ ಜನರಿಗೆ, ನಿಮ್ಮ ವಾಗ್ದತ್ತ ದೇಶವನ್ನು ಕಳೆದುಕೊಳ್ಳಬೇಡಿ ಎಂದು ಹೇಳು ಎಂದು ಪವಿತ್ರಾತ್ಮನು ಹೇಳುವುದನ್ನು ನಾನು ಕೇಳುತ್ತಿದ್ದೇನೆ,. ವಾಸ್ತವವಾಗಿ, 11 ದಿನಗಳ ಪ್ರಯಾಣದಲ್ಲಿ ಪ್ರಾರಂಭಿಸಿದ ಹೆಚ್ಚಿನ ಇಸ್ರೇಲೀಯರು ಸತ್ತರು ಮತ್ತು 40 ವರ್ಷಗಳ ನಂತರ ಇಲ್ಲದೇ ಹೋದರು. ಅವರು ಎಂದಿಗೂ ವಾಗ್ದತ್ತ ದೇಶಕ್ಕೆ ತಲುಪಲೇ ಇಲ್ಲ. 

ಇಷ್ಟೊಂದು ಸೌಲಭ್ಯವಿದ್ದರೂ ಅದನ್ನು ಆನಂದಿಸಲು ಅವರಿಗೆ ಸಾಧ್ಯವಾಗದಿರುವುದು-ನನಗೆ ವೈಯಕ್ತಿಕ ವಾಗಿ ಇದು ಯಾರಿಗಾದರೂ ಸಂಭವಿಸಬಹುದಾದ ಅತ್ಯಂತ ದುಃಖಕರ ಸಂಗತಿಗಳಲ್ಲಿ ಒಂದಾಗಿದೆ.

ಕೇವಲ ಐಗುಪ್ತದಿಂದ ಹೊರಬಂದರೆ ಸಾಲದು; ನೀವು ಕಾನಾನ್‌ಗೆ ಹೋಗಬೇಕು. ಬಿಡುಗಡೆ ಮತ್ತು ಗುಣಪಡಿಸುವಿಕೆಯನ್ನು ಪಡೆಯುವಂತದ್ದು ಅಷ್ಟೇ ಸಾಕಾಗುವುದಿಲ್ಲ; ನೀವು ದೇವರ ವಾಗ್ದಾನಗಳನ್ನು ಪ್ರವೇಶಿಸಬೇಕು.

 ನಿಮ್ಮಲ್ಲಿ ಕೆಲವರು ಅರಣ್ಯದ ಮೂಲಕ ಹೋಗುತ್ತಿದ್ದೀರಿ. ಅರಣ್ಯವು ಕೆಟ್ಟದ್ದಲ್ಲ, ಆದರೆ ಅದೇ ನಿಮ್ಮ ಅಂತಿಮ ತಾಣ ಅಲ್ಲ.

Bible Reading: Ezekiel 23-24
ಅರಿಕೆಗಳು
ನಾನು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದರಿಂದ, ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತಿರುವುದರಿಂದ ಮೇಲಿನ ವಸ್ತುಗಳನ್ನು ನಾನು ಶ್ರದ್ಧೆಯಿಂದಲೂ ಮತ್ತು ಆಸಕ್ತಿಯಿಂದಲೂ ಹುಡುಕುತ್ತೇನೆ. ನಾನು ಉದ್ದೇಶಪೂರ್ವಕವಾಗಿ ನನ್ನ ಮನಸ್ಸನ್ನು ಯೇಸುನಾಮದಲ್ಲಿ ಮೇಲಿನ ಅನೇಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೇನೆ ಹೊರತು ಭೂಮಿಯ ಮೇಲಿನ ತಾತ್ಕಾಲಿಕ ವಿಷಯಗಳ ಕುರಿತು ಕೆಳಮಟ್ಟದ ಚಿಂತನೆಯಲ್ಲಿ ಸಿಲುಕಿಕೊಳ್ಳುವುದಿಲ್ಲ. . ಆಮೆನ್.

Join our WhatsApp Channel


Most Read
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ದೇವರು ಹೇಗೆ ಒದಗಿಸುತ್ತಾನೆ #1
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
● ನಂಬಿಕೆಯ ಜೀವಿತ
● ಆರ್ಥಿಕ ಸಂಕಷ್ಟದಿಂದ ಹೊರಬರುವುದು ಹೇಗೆ#1
● ಸಮೃದ್ಧಿಗಾಗಿರುವ ಮರೆತುಹೋದ ಒಂದು ಕೀಲಿಕೈ
● ಸಮರುವಿಕೆಯ ಕಾಲ - 2
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್