ಅನುದಿನದ ಮನ್ನಾ
1
0
136
ಆತನ ಚಿತ್ತವನ್ನು ಮಾಡುವುದರಲ್ಲಿರುವ ಮಹತ್ವ
Wednesday, 10th of September 2025
Categories :
ದೇವರ ಇಚ್ಛೆ (Will of God)
ಶಿಷ್ಯತ್ವ (Discipleship)
ಒಬ್ಬ ವ್ಯಕ್ತಿ ದೇವರ ಚಿತ್ತವನ್ನು ಅರ್ಥಮಾಡಿಕೊಳ್ಳುವುದು ಏಕೆ ಮಹತ್ವವಾಗಿದೆ?
"ನನ್ನನ್ನು 'ಕರ್ತನೇ, ಕರ್ತನೇ' ಎಂದು ಹೇಳುವ ಪ್ರತಿಯೊಬ್ಬನೂ ಪರಲೋಕ ರಾಜ್ಯವನ್ನು ಪ್ರವೇಶಿಸುವನಲ್ಲ, ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಅದನ್ನು ಪ್ರವೇಶಿಸುವನು" ಎಂದು ಶಾಸ್ತ್ರವು ಸ್ಪಷ್ಟವಾಗಿ ಹೇಳುತ್ತದೆ. (ಮತ್ತಾಯ 7:21)
ದೇವರ ಚಿತ್ತವನ್ನು ಅರ್ಥಮಾಡಿಕೊಳ್ಳುವುದು ಭೂಮಿಯ ಮೇಲೆಯೂ ಮತ್ತು ನಿತ್ಯತ್ವದಲ್ಲಿಯೂ ನಮ್ಮ ಸಂತೋಷವನ್ನು ನಿರ್ಧರಿಸುತ್ತದೆ. ಕೇವಲ ತುಟಿಗಳಿಂದ ಮಾಡುವ ಸೇವೆಯು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ನಿಜವಾಗಿಯೂ ಅಗತ್ಯವಿರುವುದು ನಮ್ಮ ಪ್ರತಿಯೊಬ್ಬರ ಜೀವನಕ್ಕೂ ದೇವರ ಚಿತ್ತದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯುವುದಾಗಿದೆ.
ಪ್ರಪಂಚದ ಬದಲಾಗುತ್ತಿರುವ ತತ್ವಶಾಸ್ತ್ರಗಳು ಮತ್ತು ಮನುಷ್ಯರ ಅಭಿಪ್ರಾಯಗಳ ಪ್ರಕಾರ ನಮ್ಮ ಜೀವನವು ನಮ್ಮ ಮೇಲೆ ಆಧಾರಗೊಂಡಿಲ್ಲ ಎಂಬುದನ್ನು ಮೊದಲು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಜ್ಞಾನವಂತರಾಗಿ ಕರ್ತನ ಚಿತ್ತ ಏನೆಂದು ಅರ್ಥಮಾಡಿಕೊಳ್ಳಬೇಕು. (ಎಫೆಸ 5:17)
ಕರ್ತನ ಚಿತ್ತವನ್ನು ಅರ್ಥಮಾಡಿಕೊಳ್ಳುವುದು ಎಂದರೆ ನಾವು ದೇವರ ವಾಕ್ಯದ ಸರಿಯಾದ ತಿಳುವಳಿಕೆಯನ್ನು ಹೊಂದಿರುವಂತದ್ದಾಗಿದೆ. ದೇವರ ವಾಕ್ಯ ಮತ್ತು ಆತನ ಚಿತ್ತವು ಸಮಾನಾರ್ಥಕ ಪದಗಳಾಗಿವೆ (ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ).
ನೀವು ಇಬ್ಬರು ಸಹೋದರರಾದ ಕಾಯಿನ ಮತ್ತು ಹೇಬೆಲರನ್ನು ನೆನಪಿಸಿಕೊಂಡರೆ. ದೇವರು ಬಯಸಿದ್ದನ್ನು ಹೇಬೆಲನು ದೇವರ ಬಳಿಗೆ ತಂದನು, ಮತ್ತು ಕಾಯಿನನು ತನಗೆ ಸರಿ ಎಂದು ಅನಿಸಿದ್ದನ್ನು ತಂದನು. ಇದರ ಪರಿಣಾಮವಾಗಿ ದೇವರು ಹೇಬೆಲನ ಯಜ್ಞವನ್ನು ಗೌರವಿಸಿದನು ಮತ್ತು ಕಾಯಿನನ ಯಜ್ಞವನ್ನು ತಿರಸ್ಕರಿಸಿದನು. (ಆದಿಕಾಂಡ 4:3-5 ಓದಿ)
ಹೇಬೆಲನು ಕಾಯಿನನಿಗಿಂತ ಶ್ರೇಷ್ಠವಾದ ಯಜ್ಞವನ್ನು ಅರ್ಪಿಸಿದನೆಂಬ ಅಂಶವನ್ನು ಇಬ್ರಿಯರ ಪುಸ್ತಕವು ಒತ್ತಿಹೇಳುತ್ತದೆ.
ನಂಬಿಕೆಯಿಂದಲೇ ಹೇಬೆಲನು ಕಾಯಿನನಿಗಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಅರ್ಪಿಸಿದನು (ಇಬ್ರಿಯ 11:4)
ನಾವೆಲ್ಲರೂ ಈ ಭೂಮಿಯಲ್ಲಿರುವುದು ದೇವರ ಯೋಜನೆಗಳನ್ನು ಪೂರೈಸಲು ಮತ್ತು ಆತನ ಚಿತ್ತವನ್ನು ನೆರವೇರಿಸಲೇ ಹೊರತು, ನಮ್ಮ ಚಿತ್ತವನ್ನಲ್ಲ. ಆದರಿಂದಲೇ ಕರ್ತನಾದ ಯೇಸು ತನ್ನ ಶಿಷ್ಯರಿಗೆ "ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ" ಎಂದು ಪ್ರಾರ್ಥಿಸಬೇಕೆಂದು ಕಲಿಸಿಕೊಟ್ಟನು. (ಮತ್ತಾಯ 6:10)
ನಾವು ಏನನ್ನು ನಿರ್ಮಿಸುತ್ತಿದ್ದರೂ, ಏನನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದರೂ, ಅದು ಆತನ ಚಿತ್ತ ಮತ್ತು ಮಾದರಿಯ ಪ್ರಕಾರವೇ ಆಗಿರಬೇಕು. "ಇಸ್ರಾಯೇಲ್ ಜನರು ನನಗೆ ಒಂದು ಪವಿತ್ರ ಗುಡಾರವನ್ನು ನಿರ್ಮಿಸಲಿ, ಆಗ ನಾನು ಅವರ ಮಧ್ಯದಲ್ಲಿ ವಾಸಿಸಲು ಸಾಧ್ಯವಾಗುತ್ತದೆ. ನೀವು ಈ ಗುಡಾರವನ್ನು ಮತ್ತು ಅದರಲ್ಲಿರುವ ಉಪಕರಣಗಳನ್ನು ನಾನು ನಿಮಗೆ ತೋರಿಸುವ ಮಾದರಿಯ ಪ್ರಕಾರವೇ ನಿರ್ಮಿಸಬೇಕು." (ವಿಮೋಚನಕಾಂಡ 25:8-9)
ಮೋಶೆಯು ಬೆಟ್ಟದ ಮೇಲೆ ಅವನಿಗೆ ತೋರಿಸಿದ ಮಾದರಿಯ ಪ್ರಕಾರವೇ ಗುಡಾರವನ್ನು ಕಟ್ಟುವಷ್ಟು ಬುದ್ಧಿವಂತನಾಗಿದ್ದನು. ಅವನು ಹಾಗೆ ಮಾಡಿದ ನಂತರ, ಸತ್ಯವೇದ ಹೇಳುತ್ತದೆ, "ಕರ್ತನ ಮಹಿಮೆಯು ಗುಡಾರವನ್ನು ಎಷ್ಟು ಬಲವಾಗಿ ತುಂಬಿತ್ತೆಂದರೆ ಮೋಶೆಯು ಇನ್ನು ಮುಂದೆ ಅದರೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ." (ವಿಮೋಚನಕಾಂಡ 40:34-35)ಎಂದು.
ನೀವು ಈ ಇಡೀ ಅಧ್ಯಾಯವನ್ನು (ವಿಮೋಚನಕಾಂಡ 40) ಓದಿನೋಡಿದರೆ, ಮೋಶೆಯು ಗುಡಾರವನ್ನು ಆತನ ಪ್ರಸನ್ನತೆ ಯಿಂದ ತುಂಬಿಸಬೇಕೆಂದು ಕರ್ತನ ಮಹಿಮೆಗಾಗಿ ಪ್ರಾರ್ಥಿಸಲಿಲ್ಲ ಎಂಬುದನ್ನು ನೀವು ಗಮನಿಸಬಹುದು. ನಾನು ನಿಮ್ಮೊಂದಿಗೆ ಒಂದು ಆಳವಾದ ರಹಸ್ಯವನ್ನು ಹಂಚಿಕೊಳ್ಳುತ್ತೇನೆ: ಕರ್ತನು ನಿಮಗೆ ತೋರಿಸಿದ ಮಾದರಿಯ ಪ್ರಕಾರವೇ ಕೆಲಸಗಳನ್ನು ಮಾಡಿದಾಗ, ದೇವರ ಚಿತ್ತದ ಪ್ರಕಾರ ಕೆಲಸಗಳನ್ನು ಮಾಡಿದಾಗ, ದೇವರ ಮಹಿಮೆಯು ಅಕ್ಷರಶಃ ಅಂತಹ ಯೋಜನೆ, ಒಂದು ಉದ್ಯಮ, ಒಂದು ಸೇವೆ, ಒಬ್ಬ ವ್ಯಕ್ತಿಯನ್ನು ಹಿಂಬಾಲಿಸುತ್ತದೆ.
Bible Reading: Ezekiel 25-27
ಪ್ರಾರ್ಥನೆಗಳು
ನಾನು ತಂದೆಯನ್ನು ಆತ್ಮದಿಂದಲೂ ಮತ್ತು ಸತ್ಯದಲ್ಲಿಯೂ ಆರಾಧಿಸುತ್ತೇನೆ. ಕ್ರಿಸ್ತ ಯೇಸು ನನಗಾಗಿ ಮಾಡಿದ್ದರ ಮೇಲೆಯೇ ನಾನು ಸಂಪೂರ್ಣವಾಗಿ ಯೇಸುವಿನ ಹೆಸರಿನಲ್ಲಿ ಆಧಾರಾಗೊಳ್ಳುತ್ತೇನೆಯೇ ಹೊರತು ಮಾನವ ಪ್ರಯತ್ನದಲ್ಲಿ ನಾನು ಯಾವುದೇ ರೀತಿ ಭರವಸೆಯನ್ನು ಇಡುವುದಿಲ್ಲ. (ಫಿಲಿಪ್ಪಿ 3:3)
Join our WhatsApp Channel

Most Read
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದಿನ 26:40ದಿನಗಳ ಉಪವಾಸ ಪ್ರಾರ್ಥನೆ
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ದೈವಿಕ ಅನುಕ್ರಮ - 1
● ಭಸ್ಮವಾಗುವಿಕೆಯ ( ಅತಿಯಾದ ಆಯಾಸದಿಂದಾಗುವ ದೈಹಿಕ ಬಳಲಿಕೆ ಮತ್ತು ಮಾನಸಿಕ ಖಿನ್ನತೆ) ವ್ಯಾಖ್ಯಾನ
● ನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಿ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು