ಅನುದಿನದ ಮನ್ನಾ
1
0
87
ಗೊಂದಲದ ಬಿರುಗಾಳಿಯ ನಡುವೆಯೂ ಇರಬೇಕಾದ ಧೃಡತೆ.
Sunday, 26th of October 2025
Categories :
ಪ್ರಬುದ್ಧತೆ (Maturity)
ಶಿಷ್ಯತ್ವ (Discipleship)
ಜೀವನವು ಆಕಾಂಕ್ಷೆಗಳು, ಕನಸುಗಳು, ಬದ್ಧತೆಗಳು ಮತ್ತು ಜವಾಬ್ದಾರಿಗಳ ಒಂದು ವರ್ಣಚಿತ್ತಾರದ ಕಲ್ಲು ಹಾಸಿನಂತಿರುತ್ತದೆ. ಅದರ ವಿಶಾಲವಾದ ಸ್ತರದಲ್ಲಿ, ಗೊಂದಲಗಳು ಯಾವಾಗಲೂ ಉದ್ಭವಿಸುವಂತದಾಗಿದ್ದು ಅವು ಕೆಲವೊಮ್ಮೆ, ಸೂಕ್ಷ್ಮವಾಗಿಯೂ ಕೆಲವೊಮ್ಮೆ ಸ್ಪಷ್ಟವಾಗಿಯೂ ಕಾಣುತ್ತದೆ ಯಾದರೂ ನಮ್ಮ ದೇವರು ನಮಗೆ ನೀಡಿದ ಉದ್ದೇಶ ಮತ್ತು ಕರೆಯಿಂದ ನಮ್ಮನ್ನು ದೂರವಿಡುವಂತವುಗಳಾಗಿರುತ್ತವೆ. ವಿಶ್ವಾಸಿಗಳಾದ, ನಾವು ಅವುಗಳ ಆಕರ್ಷಣೆಗೆ ನಿರೋಧಕರಲ್ಲ, ಆದರೆ ಅವುಗಳಲ್ಲೂ ದೃಢವಾಗಿರಲು ನಮಗೆ ದೇವರವಾಕ್ಯಗಳು ಮತ್ತು ಆತ್ಮನ ಬಲ ಇದೆ.
"ನಿನ್ನ ದೃಷ್ಟಿ ನೇರವಾಗಿಯೇ ನೋಡಲಿ; ಜೀವನದ ಗೊಂದಲಗಳಿಂದ ವಿಚಲನಾಗದೇ ನಿನ್ನ ನೋಟವು ನೇರವಾಗಿ ನಿನ್ನ ಮುಂದೆಯೇ ನಾಟಿರಲಿ" (ಜ್ಞಾನೋಕ್ತಿ 4:25)
ವಿಚಲಿತತೆಗಳನ್ನು ಅರ್ಥಮಾಡಿಕೊಳ್ಳುವುದು ವ್ಯಾಖ್ಯಾನದ ಪ್ರಕಾರ, ವಿಚಲತೆ ಎಂದರೆ ನಮ್ಮ ಗಮನವನ್ನು ಅತ್ಯಂತ ಮುಖ್ಯವಾದ ವಿಷಯದಿಂದ ಬೇರೆಡೆಗೆ ಸೆಳೆಯುವ ವಿಷಯ. ಸತ್ಯವೇದದ ಅರ್ಥದಲ್ಲಿ, ವಿಚಲಿತತೆಗಳು ಎಂದರೆ ನಮ್ಮ ದೇವರು ನಮಗಾಗಿ ನೇಮಿಸಿದ ಮಾರ್ಗದಿಂದ ತಪ್ಪಿಸುವ ವಿಚಲನಗಳಾಗಿವೆ. ಅವು - ಜನರು, ಆಲೋಚನೆಗಳು, ಪ್ರಲೋಭನೆಗಳು, ಸಂದರ್ಭಗಳಾಗಿರಬಹುದು. ವಿಚಲಿತತೆಗಳ ಆಕರ್ಷಣೆ ಯಾವಾಗಲೂ ಪಾಪ ಅಥವಾ ಹಾನಿಕಾರಕವಲ್ಲ. ಹೆಚ್ಚಾಗಿ, ಅವು ದೇವರ 'ಅತ್ಯುತ್ತಮ'ದಿಂದ ನಮ್ಮನ್ನು ದೂರವಿಡುವ 'ಒಳ್ಳೆಯದು ಎನಿಸಿಕೊಳ್ಳುವ ಸಂಗತಿಗಳಾಗಿರಬಹುದು'.
ದೂರದರ್ಶನ ಧಾರಾವಾಹಿಯ ಧ್ವನಿ ಅಥವಾ ಕೆಫೆಯಲ್ಲಿನ ವಟಗುಟ್ಟುವಿಕೆಯಂತಹ ಕೆಲವು ವಿಚಲಿತತೆಗಳು ಒಬ್ಬ ವ್ಯಕ್ತಿಗೆ ಅತ್ಯಲ್ಪ ಸಂಗತಿ ಎಂದು ಎನಿಸಿದರೂ, ಇನ್ನೊಬ್ಬರನ್ನು ಅವು ಸಂಪೂರ್ಣವಾಗಿ ವಿಚಲಿತಗೊಳಿಸಬಹುದು. ನಮ್ಮ ವೈಯಕ್ತಿಕ ವಿಚಲಿತತೆಯ ಮೂಲಗಳನ್ನು ಗುರುತಿಸುವುದು ಅವುಗಳನ್ನು ಕರಗತ ಮಾಡಿಕೊಳ್ಳುವ ಮೊದಲ ಹೆಜ್ಜೆಯಾಗಿದೆ.
"ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು".(2 ಕೊರಿಂಥ 11:3)
ಗೊಂದಲಗಳ ಮೂಲಕ ಸಂಚರಿಸುವುದು
ನೀವು ನಿಮ್ಮ ಪ್ರಾರ್ಥನಾ ಜೀವನವನ್ನು ಆಳಗೊಳಿಸಲು ನಿರ್ಧರಿಸಿದ್ದೀರಿ ಎಂದು ಕೊಳ್ಳೋಣ, ಆದರೆ ಒಬ್ಬ ಸ್ನೇಹಿತ ಇತ್ತೀಚೆಗೆ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದಾನೆಂದು ತಿಳಿದುಬರುತ್ತದೆ ಎಂದು ಕೊಳ್ಳಿ. ಈಗೇನಾಗುತ್ತದೆ ಅದು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಾರಾಂಭಿಸುತ್ತದೆ. ಸ್ನೇಹವು ಸ್ವತಃ ಆಶೀರ್ವಾದವಾಗಿದ್ದರೂ, ಪ್ರಾರ್ಥನೆ ಎಂಬ ಪ್ರಾಥಮಿಕ ಕರೆಗೆ ಅಡ್ಡಿಯಾದಾಗ ಅದು ಗೊಂದಲವಾಗುತ್ತದೆ.
ನೀವು ಕರ್ತನ ಸೇವೆ ಮಾಡಲು ಉತ್ಸುಕರಾಗಿದ್ದೀರಿ ಎಂದುಕೊಳ್ಳಿ. ನೀವು ಅಂತಿಮವಾಗಿ ಅದರಲ್ಲಿ ಧುಮುಕಿ ಕರ್ತನ ಸೇವೆ ಮಾಡಲು ಪ್ರಾರಂಭಿಸುತ್ತೀರಿ, ಟೀಕೆ ಅಥವಾ ಪ್ರಮಾದಗಳ ಮೊದಲ ಸೂಚನೆಗಳನ್ನು ಮಾತ್ರ ಹಿಮ್ಮೆಟ್ಟುತ್ತೀರಿ. ನಿರುತ್ಸಾಹವು ವಾಸ್ತವವಾದರೂ, ಅದು ದೇವರ ಕರೆಯನ್ನು ಪೂರೈಸದಂತೆ ತಡೆಯುವ ಗೊಂದಲವಾಗಿದೆ.
"ಆದಕಾರಣ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಇರುವುದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನೂ ನಾವು ಎಸೆದುಬಿಟ್ಟು, ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವನೂ ಅದನ್ನು ಪರಿಪೂರ್ಣಗೊಳಿಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾನೆ. (ಇಬ್ರಿಯ 12:1-2)
ಗೊಂದಲಗಳು vs. ಬಳಸುಮಾರ್ಗ
ಗೊಂದಲಗಳು ಮತ್ತು ದೈವಿಕ ಬಳಸುಮಾರ್ಗಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ. ಕೆಲವೊಮ್ಮೆ, ನಾವು ಗೊಂದಲ ಎಂದು ಗ್ರಹಿಸುವುದು - ಅನಿರೀಕ್ಷಿತ ಸನ್ನಿವೇಶ ಅಥವಾ 'ದೈವಿಕ ಅಡಚಣೆ ಯಾಗಿದ್ದು ' - ದೇವರು ನಮ್ಮನ್ನು ಬೆಳೆಸಲು, ಬೋದಿಸಲು ಅಥವಾ ಆಳವಾದ ಪ್ರಕಟಣೆ ಹೊಂದುವ ಸಮಯಕ್ಕೆ ಕರೆದೊಯ್ಯುತ್ತಿರಬಹುದು.
ಅರಮನೆಯಲ್ಲಿ ದೈವಿಕ ನೇಮಕಾತಿಗೆ ಮೊದಲು, ಹಳ್ಳದಿಂದ ಸೆರೆಮನೆಯವರೆಗೆ - ಹಲವಾರು ಬಳಸು ದಾರಿಯನ್ನು ಎದುರಿಸಿದ ಯೋಸೆಫನನ್ನು ನೆನಪಿಸಿಕೊಳ್ಳಿ. ಅನೇಕ ಸಂದರ್ಭಗಳಲ್ಲಿ, ಅವನು ತನ್ನ ಸನ್ನಿವೇಶಗಳನ್ನು ಬಳಸು ಮಾರ್ಗಗಳು ಎಂದು ನೋಡಬಹುದಿತ್ತು, ಆದರೆ ಅವನು ಅದರಲ್ಲಿಯೂ ನಂಬಿಗಸ್ತನಾಗಿರಬೇಕೆಂಬುದನ್ನೇ ಆರಿಸಿಕೊಂಡು, ಆ ಬಳಸುಮಾರ್ಗಾವನ್ನೇ ಅವಕಾಶಗಳಾಗಿ ಪರಿವರ್ತಿಸಿದನು.
"ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ; ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು. (ಜ್ಞಾನೋಕ್ತಿ 19:21)
ಬಳಸುಮಾರ್ಗವನ್ನು ನೇರವಾಗಿ ನಿಭಾಯಿಸುವುದು.
ವಿವೇಚನೆಯಿಂದ ಶಸ್ತ್ರಸಜ್ಜಿತರಾಗಿ, ನಾವು ಬಳಸುಮಾರ್ಗಗಳನ್ನು ಹೇಗೆ ನಿಭಾಯಿಸಬಹುದು?
1. ಆದ್ಯತೆ ನೀಡಿ:
ಯಾವುದೇ ಕಾರ್ಯ ಅಥವಾ ಬದ್ಧತೆಯನ್ನು ಪ್ರಾರಂಭಿಸುವ ಮೊದಲು, ದೇವರ ಮಾರ್ಗದರ್ಶನವನ್ನು ಹುಡುಕಿ. ಆತನ ಚಿತ್ತವನ್ನು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಆದ್ಯತೆ ನೀಡಿ. "ಮೊದಲು ದೇವರ ರಾಜ್ಯವನ್ನು ಮತ್ತು ಆತನ ನೀತಿಯನ್ನು ಹುಡುಕಿ, ಆಗ ಇವೆಲ್ಲವೂ ನಿಮಗೆ ಸೇರಿಸಲ್ಪಡುತ್ತವೆ." (ಮತ್ತಾಯ 6:33)
2. ಗಡಿಗಳನ್ನು ರಚಿಸಿ:
ನಿಮ್ಮ ಜೀವನದಲ್ಲಿ ಸಂಭಾವ್ಯ ಎಣಿಸುವ ಬಳಸುಮಾರ್ಗಗಳನ್ನು ಗುರುತಿಸಿ ಅದರ ಗಡಿಗಳನ್ನು ಹೊಂದಿಸಿ. ಇದರರ್ಥ ಪ್ರಾರ್ಥನೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವುದು, ಅನಗತ್ಯ ಸಾಮಾಜಿಕ ತೊಡಗಿಸಿಕೊಳ್ಳುವಿಕೆಗಳನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ದೇವರವಾಕ್ಯವನ್ನು ಅಧ್ಯಯನ ಮಾಡುವಾಗ ಅಧಿಸೂಚನೆಗಳನ್ನು ಆಫ್ ಮಾಡುವುದು ಇತ್ಯಾದಿ.
" ಎಲ್ಲಕ್ಕಿಂತ ಹೆಚ್ಚಾಗಿ ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ." (ಜ್ಞಾನೋಕ್ತಿ 4:23)
3. ಜವಾಬ್ದಾರಿಯುತವಾಗಿರಿ:
ನಿಮ್ಮ ಗುರಿಗಳನ್ನು ಮತ್ತು ಯೋಜನೆಗಳನ್ನು ವಿಶ್ವಾಸಾರ್ಹ ಸ್ನೇಹಿತ ಅಥವಾ ಮಾರ್ಗದರ್ಶಕರೊಂದಿಗೆ ಹಂಚಿಕೊಳ್ಳಿ. ಅವರು ನಿಮ್ಮನ್ನು ಪರಿಶೀಲಿಸಿ ನೀವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೀರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಿ. "ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವಂತೆ, ಒಬ್ಬ ವ್ಯಕ್ತಿಯು ಇನ್ನೊಬ್ಬನನ್ನು ಹರಿತಗೊಳಿಸುತ್ತಾನೆ." (ಜ್ಞಾನೋಕ್ತಿ 27:17)
ಯಾವಾಗಲೂ ಒಂದನ್ನು ನೆನಪಿಡಿ, ಗೊಂದಲದ ಬಿರುಗಾಳಿ ಬಲವಾಗಿ ಮತ್ತು ನಿರಂತರವಾಗಿ ಬೀಸುತ್ತಿದ್ದರೂ ಕ್ರಿಸ್ತನ ಮೇಲೆ ನಮ್ಮ ಅವಲಂಬನೆ ಮತ್ತು ದೇವರ ವಾಕ್ಯದಲ್ಲಿನ ತಿಳುವಳಿಕೆಯು ನಮ್ಮನ್ನು ಸ್ಥಿರವಾಗಿ ಇರಿಸಬಹುದು. ಪ್ರಯಾಣವನ್ನು ಸ್ವೀಕರಿಸಿ, ಗೊಂದಲಗಳನ್ನು ಒಪ್ಪಿಕೊಳ್ಳಿ ಮತ್ತು ದೇವರು ನಿಮ್ಮನ್ನು ಇನ್ನೂ ಉತ್ತಮವಾದದ್ದಕ್ಕೆ ಕರೆಯುವಾಗ ಒಳ್ಳೆಯದು ಎಂಬುವಕ್ಕೆ 'ಇಲ್ಲ' ಎಂದು ಹೇಳುವ ಅಧಿಕಾರ ಪಡೆಯಿರಿ. ದೇವರೊಂದಿಗಿನ ನಮ್ಮ ನಡಿಗೆಯಲ್ಲಿ, ನಮ್ಮ ಗಮನವು ಕೇವಲ ಒಂದು ಶಿಸ್ತು ಅಲ್ಲ; ಅದು ಭಕ್ತಿ.
Bible Reading: Mark 15-16
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಜೀವನಕ್ಕೆ ಸುತ್ತುಕೊಂಡಿರುವ ಗೊಂದಲಗಳ ನಡುವೆಯೂ, ನಮ್ಮ ಆತ್ಮಗಳನ್ನು ನಿಮ್ಮ ದೃಢ ಪ್ರೀತಿ ಮತ್ತು ವಾಕ್ಯದಲ್ಲಿ ಲಂಗರು ಹಾಕಿ ನಡೆಸಲಿ. ನಿಮ್ಮ ದೈವಿಕ ಮಾರ್ಗದ ಮೇಲೆ ನಮ್ಮ ಗಮನವನ್ನು ತೀಕ್ಷ್ಣಗೊಳಿಸಿ ಮತ್ತು ಪ್ರತಿ ಕ್ಷಣವನ್ನು ಉದ್ದೇಶದಿಂದಲೂ ಮತ್ತು ಉತ್ಸಾಹದಿಂದಲೂ ಸ್ವೀಕರಿಸಲು ಯೇಸುನಾಮದಲ್ಲಿ ನಮಗೆ ಅಧಿಕಾರ ನೀಡಿ. ಆಮೆನ್.
Join our WhatsApp Channel
Most Read
● ನಂಬಿಕೆಯಲ್ಲಿರುವ ಸ್ವಸ್ಥತೆಯ ಶಕ್ತಿ.● ನಿಮ್ಮ ಪದೋನ್ನತಿಗಾಗಿ ಸಿದ್ಧರಾಗಿ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಬಿಡುಗಡೆಯನ್ನು ಇನ್ನು ಮುಂದೆ ತಡೆಯಲು ಸಾಧ್ಯವಿಲ್ಲ.
● ಕನಸು ಕಾಣುವ ಧೈರ್ಯ
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ಅರಣ್ಯದ ಮನಸ್ಥಿತಿಯನ್ನು ಜಯಿಸುವುದು
ಅನಿಸಿಕೆಗಳು
