ಅನುದಿನದ ಮನ್ನಾ
1
1
95
ಸುತ್ತಲೂ ಚಾಲ್ತಿಯಲ್ಲಿರುವ ಅನೈತಿಕತೆಯ ನಡುವೆಯೂ ದೃಢವಾಗಿ ಉಳಿಯುವುದು
Friday, 7th of November 2025
".. ಲೋಟನ ದಿನಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. " (ಲೂಕ 17:28)
ಇಂದಿನ ಲೋಕದಲ್ಲಿ, ಹಿಂದಿನ ನಾಗರಿಕತೆಗಳು ಮತ್ತು ಅವುಗಳ ಉಲ್ಲಂಘನೆಗಳನ್ನೇ ಪ್ರತಿಧ್ವನಿಸುವ ಮಾದರಿಗಳು ಮತ್ತು ಪ್ರವೃತ್ತಿಗಳು ಜರುಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ನಮ್ಮ ಪ್ರಸ್ತುತ ಸಂಸ್ಕೃತಿ ಲೋಟನ ದಿನಗಳಿಗೆ ಸಮಾನಾಂತರವಾಗಿರುವಂತದ್ದಾಗಿ ದುಃಖಕರವಾಗಿದ್ದೂ, ವಿಶೇಷವಾಗಿ ಆ ಸಮಯದಲ್ಲಿ ಸೊದೋಮ್ ಮತ್ತು ಗೊಮೋರ ನಗರಗಳು ತಮ್ಮ ನೈತಿಕ ಅವನತಿಯಲ್ಲಿ ಬಿದ್ದುಹೋಗಿದ್ದವು.
ಆ ಸಮಯದಲ್ಲಿ ಸೂರ್ಯ ಬೆಳಗುತ್ತಿದ್ದನು, ಜನರು ತಮ್ಮ ದೈನಂದಿನ ಜೀವನವನ್ನು ನಡೆಸುತ್ತಿದ್ದರು ಮತ್ತು ಸನ್ನಿಹಿತವಾದ ವಿನಾಶದ ಯಾವುದೇ ತಕ್ಷಣದ ಲಕ್ಷಣಗಳು ಅಲ್ಲಿ ಕಾಣಿಸಿರಲಿಲ್ಲ ಎಂದು ಆದಿಕಾಂಡದಲ್ಲಿ ನಮಗೆ ನೆನಪಿಸಲಾಗಿದೆ. ಆದರೂ, ಅನೇಕರಿಗೆ ತಿಳಿಯುವ ಮುನ್ನವೇ, ತೀರ್ಪು ಅವರ ಮೇಲೆ ಎರಗಿತು. ಸೊದೋಮ್ ಪಟ್ಟಣವು ಅದರ ವ್ಯಾಪಕ ಲೈಂಗಿಕ ಅನೈತಿಕತೆಯಿಂದ ಗುರುತಿಸಲ್ಪಟ್ಟಿದ್ದು, ಆ ಜನರು ಲೋಟನನ್ನು ಭೇಟಿ ಮಾಡಲು ಬಂದ ದೇವದೂತರನ್ನು ಸಹ ನಿರ್ಲಜ್ಜವಾಗಿ ಕಾಮಅಪೇಕ್ಷೆಯಿಂದ ಹುಡುಕುವ ಹಂತಕ್ಕೆ ಹೋಗಿ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸಿದರು. (ಆದಿಕಾಂಡ 19:1-5).
ಅವರ ಈ ಮೊಂಡು ಧೈರ್ಯ ಮತ್ತು ನೈತಿಕ ಸಂಯಮದ ಕೊರತೆ ನಿಜಕ್ಕೂ ಆಘಾತಕಾರಿಯಾಗಿತ್ತು. ಇಂದಿನ ವಾತಾವರಣದಲ್ಲಿಯೂ, ಸಮಾಜವು ಹೆಚ್ಚಾಗಿ ಮಿತಿಗಳನ್ನು ತಳ್ಳಿ ಹಾಕುವ ಮತ್ತು ದೈಹಿಕ ಆಸೆಗಳಿಗಾಗಿ ಮೂಲಭೂತ ತತ್ವಗಳನ್ನು ನಿರ್ಲಕ್ಷಿಸುವ ಮೂಲಕ, ನಾವು ಸಹ ಆಗಾಗ್ಗೆ ದೈವಿಕ ಮೌಲ್ಯಗಳ ಬಗ್ಗೆ ಸ್ಪಷ್ಟವಾದ ನಿರ್ಲಕ್ಷ್ಯವನ್ನು ತೋರುವುದನ್ನು ನೋಡುತ್ತೇವೆ. ಆದರೂ, ಇದರ ನಡುವೆ, ಬೈಬಲ್ ದಾರೀದೀಪವಾಗಿ, ಜ್ಞಾನ ಮತ್ತು ನಿರೀಕ್ಷೆಯನ್ನು ಒದಗಿಸುತ್ತದೆ.
" ಆದರೆ ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ, ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು."ಎಂದು
ಅಪೊಸ್ತಲನಾದ ಪೌಲನು 2 ತಿಮೊಥೆಯ 3:1-5ರಲ್ಲಿ ಬರೆದಿದ್ದಾನೆ. ಪೌಲನ ಈ ಮಾತುಗಳು ಭಯವನ್ನು ಹುಟ್ಟುಹಾಕುವ ಉದ್ದೇಶವನ್ನು ಹೊಂದಿರದೇ, ಬದಲಾಗಿ ನಾವು ನಮ್ಮ ನಂಬಿಕೆಯಲ್ಲಿ ಜಾಗರೂಕರಾಗಿ ಮತ್ತು ಧೃಡತೆಯಿಂದ ಇರಲು ನಮ್ಮನ್ನು ಸಿದ್ಧಪಡಿಸುವುದಕ್ಕಾಗಿ ಇವೆ.
ಆದರೆ ನಾವು ಹೇಗೆ ಧೃಡತೆಯಲ್ಲಿ ಉಳಿಯಬಹುದು?
1. ವಾಕ್ಯದಲ್ಲಿ ನಿಮ್ಮನ್ನು ನೆಲೆಗೊಳಿಸಿ:
" ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ. (ಕೀರ್ತನೆ 119:105) ಲೋಕವು ಹೆಚ್ಚು ಹೆಚ್ಚು ಕತ್ತಲೆಯಾಗುತ್ತಿದ್ದಂತೆ, ದೇವರ ವಾಕ್ಯವು ನಮ್ಮ ಮಾರ್ಗದರ್ಶನಕ್ಕಾಗಿ ಬೆಳಕಾಗಿ ನಿಂತು, ನಮ್ಮ ಮಾರ್ಗವನ್ನು ಬೆಳಗಿಸಿ ನಾವು ಕತ್ತಲೆಯಲ್ಲಿ ಎಡವಿ ಬೀಳದಂತೆ ಕಾಯುತ್ತದೆ.
2. ದೈವಿಕ ಸಭೆಯ/ನಾಯಕತ್ವದ ಅಡಿಯಲ್ಲಿರಿ:
" ಒಬ್ಬಂಟಿಗನ ಮೇಲೆ ಜಯ ಸಾಧಿಸಲು, ಇಬ್ಬರು ಎದುರಾಗಿ ನಿಲ್ಲಬಹುದು. ಆದರೆ ಮೂರು ಹುರಿಯ ಹಗ್ಗವು ಬೇಗನೆ ಕಿತ್ತು ಹೋಗುವುದಿಲ್ಲ" ಎಂದು.ಪ್ರಸಂಗಿ 4:12 ಹೇಳುತ್ತದೆ. ಈ ಕೊನೆಯ ದಿನಗಳಲ್ಲಿ ದೇವರ ಮನೆಯೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ, ಇಲ್ಲದಿದ್ದರೆ ನೀವು ಕಲುಷಿತ ಪ್ರವಾಹದಿಂದ ಕೊಚ್ಚಿ ಹೋಗಬಹುದು. ಅಲ್ಲದೆ, ನೀವು ನಿಮ್ಮ ಚೈತನ್ಯವನ್ನು ನಿರ್ಮಿಸುವ ನಾಯಕತ್ವದೊಂದಿಗೆ ಸಂಪರ್ಕದಲ್ಲಿರಬೇಕು,ಅದು ನೈತಿಕ ಅವನತಿಯ ವಿರುದ್ಧ ನಾವು ದೃಢವಾಗಿ ನಿಲ್ಲಲು ಅನುವು ಮಾಡಿಕೊಡುತ್ತದೆ. ನೀವು ಕರುಣಾ ಸದನ ಚರ್ಚ್ ಸೇವೆಗಳಿಗೆ ಹಾಜರಾಗುತ್ತಿದ್ದರೆ, J-12 ನಾಯಕನೊಂದಿಗೆ ಸಂಪರ್ಕ ಹೊಂದಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.
3. ಪ್ರಾರ್ಥನೆ ಮತ್ತು ಉಪವಾಸದಲ್ಲಿ ಕರ್ತನನ್ನು ಎದುರುನೋಡಿ: ಈ ಕಡೆಯ ದಿನಗಳಲ್ಲಿ ಪ್ರಾರ್ಥನೆ ಮತ್ತು ಉಪವಾಸವು ಬಹುಮುಖ್ಯವಾದದ್ದು. ಇದು ನಿಮ್ಮ ಆತ್ಮೀಕ ಮನುಷ್ಯನಲ್ಲಿ ದೇವರ ಬೆಂಕಿಯನ್ನು ಉರಿಯುವಂತೆ ಮಾಡುತ್ತದೆ. 1 ಥೆಸಲೋನಿಕ 5:17 ರಲ್ಲಿ ಅಪೊಸ್ತಲ ಪೌಲನು ಪ್ರೋತ್ಸಾಹಿಸಿದಂತೆ, ನಾವು "ಎಡೆಬಿಡದೆ ಪ್ರಾರ್ಥಿಸಬೇಕು".
4. ಬೆಳಕಾಗಿರ್ರಿ: ಕತ್ತಲೆಯನ್ನು ಶಪಿಸುವ ಬದಲು, ನಾವು ಪ್ರಕಾಶಮಾನವಾಗಿ ಹೊಳೆಯಲು ಕರೆಯಲ್ಪಟ್ಟಿದ್ದೇವೆ.
“ನೀವು ಲೋಕಕ್ಕೆ ಬೆಳಕಾಗಿದ್ದೀರಿ; ಬೆಟ್ಟದ ಮೇಲಿರುವ ಊರು ಮರೆಯಾಗಿರಲಾರದು. ದೀಪವನ್ನು ಹಚ್ಚಿ ಯಾರೂ ಅಳೆಯುವ ಪಾತ್ರೆಯೊಳಗೆ ಇಡುವುದಿಲ್ಲ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುತ್ತದೆ. ಅದೇ ರೀತಿಯಲ್ಲಿ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಹೀಗಾದರೆ ಜನರು ನಿಮ್ಮ ಸತ್ಕ್ರಿಯೆಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು." ಎಂದು ಮತ್ತಾಯ 5:14-16 ನಮಗೆ ನೆನಪಿಸುತ್ತದೆ.
ಈ ಪ್ರಕ್ಷುಬ್ಧ ಕಾಲದಲ್ಲಿ ಸಾಗುವಾಗ, ನಾವು ಅನೈತಿಕತೆಯ ಪ್ರವಾಹದಲ್ಲಿ ಮುಳುಗಿಹೋಗಬಾರದು, ಬದಲಾಗಿ ಎಂದಿಗೂ ಮಂಕಾಗದ ಶಾಶ್ವತ ಬೆಳಕಿನ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಬೇಕು -ಅದುವೇ ಕರ್ತನಾದ ಯೇಸು ಕ್ರಿಸ್ತನು. ಇಬ್ರಿಯ 12:2 ನಮ್ಮನ್ನು " ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಇಡಬೇಕೆಂದು" ಪ್ರೋತ್ಸಾಹಿಸುತ್ತದೆ.
ಆತನು ಈ ಭೂಮಿಯ ಮೇಲೆ ನಡೆದನು, ನಮಗಿರುವಂತ ಪ್ರಲೋಭನೆಗಳನ್ನು ಅನುಭವಿಸಿದನು, ನಮಗೆ ಇರುವಂತ ಸವಾಲುಗಳನ್ನೇ ಎದುರಿಸಿದನು, ಆದರೆ ಪಾಪ ಮಾತ್ರ ಮಾಡಲಿಲ್ಲ. ಆತನಲ್ಲಿಯೇ, ನಾವು ನಮ್ಮ ಜೀವಿತಕ್ಕೆ ನೀಲನಕ್ಷೆಯನ್ನೂ ನಮ್ಮ ಶಕ್ತಿಯ ಮೂಲವನ್ನೂ ಮತ್ತು ನಮ್ಮ ಭರವಸೆಯ ದಾರಿದೀಪವನ್ನು ಕಂಡುಕೊಳ್ಳುತ್ತೇವೆ.
Bible Reading: Luke 24 ; John 1
ಪ್ರಾರ್ಥನೆಗಳು
ತಂದೆಯೇ, ಈ ಸವಾಲಿನ ಕಾಲದಲ್ಲಿ, ನಿಮ್ಮ ವಾಕ್ಯ ಮತ್ತು ಮಾರ್ಗಗಳಲ್ಲಿ ನಮ್ಮನ್ನು ನೆಲೆಗೊಳಿಸಿ. ನಮ್ಮ ಪ್ರಾರ್ಥನಾ ಜೀವನವನ್ನು ಬಲಪಡಿಸಿ ಮತ್ತು ನಾವು ಹೋಗುವ ಕಡೆಯೆಲ್ಲಾ ನಮ್ಮ ಬೆಳಕು ಪ್ರಕಾಶಮಾನವಾಗಿ ಬೆಳಗಲಿ. ನಾವು ಯಾವಾಗಲೂ ಪ್ರಪಂಚದ ಆಕರ್ಷಣೆಗಿಂತ ನಿಮ್ಮ ಮಾರ್ಗವನ್ನೇ ಯೇಸುನಾಮದಲ್ಲಿ ಆರಿಸಿಕೊಳ್ಳುವಂತಾಗಲಿ. ಆಮೆನ್.
Join our WhatsApp Channel
Most Read
● ಪ್ರಾಚೀನ ಇಸ್ರೇಲ್‌ನ ಮನೆಗಳಿಂದ ಕಲಿಯಬೇಕಾದ ಪಾಠಗಳು● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ಸುಮ್ಮನೆ ಓಡಬೇಡಿ.
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ಆಟ ಬದಲಿಸುವವ
ಅನಿಸಿಕೆಗಳು
