ಸತ್ಯವೇದದ ಗುಡಾರದ ವೃತ್ತಾಂತದಲ್ಲಿ ಮೂರನೇ ದಿನದ ಹೊತ್ತಿಗೆ, ಅಸಾಧಾರಣವಾದ ಏನೋ ಒಂದು ಸಂಗತಿ ಸಂಭವಿಸುತ್ತದೆ. ಮೋಶೆಯು ದೇವರಿಗೆ ಸಂಪೂರ್ಣವಾಗಿ ವಿಧೇಯನಾದ ನಂತರ - ಗುಡಾರವನ್ನು ಮೇಲಕ್ಕೆತ್ತಿ, ಪ್ರತಿಯೊಂದು ವಸ್ತುವನ್ನು ಕ್ರಮವಾಗಿ ಇರಿಸಿ, ಮತ್ತು ದೇವರ ಸೂಚನೆಯ ಪ್ರಕಾರ ಅದನ್ನು ಅಭಿಷೇಕಿಸಿದ ನಂತರ - ಧರ್ಮಗ್ರಂಥವು ಒಂದು ಉಸಿರು ಬಿಗಿಹಿಡಿಯುವ ಕ್ಷಣವನ್ನು ದಾಖಲಿಸುತ್ತದೆ:
"ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು." (ವಿಮೋಚನಕಾಂಡ 40:34).
ದೇವರು ಮೋಶೆಯ ವಿಧೇಯತೆಯನ್ನು ಕೇವಲ ಅಂಗೀಕರಿಸುವುದು ಮಾತ್ರವಲ್ಲದೆ - ಆತನು ತನ್ನ ಮಹಿಮೆಯ ಮೂಲಕ ಪ್ರತಿಕ್ರಿಯಿಸಿದನು. ಇದು ಪ್ರಬಲವಾದ ಸತ್ಯವನ್ನು ಬಹಿರಂಗಪಡಿಸುತ್ತದೆ: ಅದೇನೆಂದರೆ ದೇವರು ತನಗಾಗಿ ಸಿದ್ಧಪಡಿಸಿದ್ದನ್ನು ತನ್ನ ಮಹಿಮೆಯಿಂದ ತುಂಬಿಸುತ್ತಾನೆ.
ವಿಧೇಯತೆಯು ವಾಸಸ್ಥಳವನ್ನು ಸೃಷ್ಟಿಸುತ್ತದೆ
ಮೋಶೆಯು ತನ್ನ ಸೃಜನಶೀಲತೆ ಅಥವಾ ಆದ್ಯತೆಯ ಪ್ರಕಾರ ಗುಡಾರವನ್ನು ವಿನ್ಯಾಸಗೊಳಿಸಲಿಲ್ಲ. "ಕರ್ತನು ಆಜ್ಞಾಪಿಸಿದಂತೆ" ಅವನು ಎಲ್ಲವನ್ನೂ ಮಾಡಿದನೆಂದು ಧರ್ಮಗ್ರಂಥವು ಪದೇ ಪದೇ, ನಮಗೆ ಹೇಳುತ್ತದೆ (ವಿಮೋಚನಕಾಂಡ 40:16). ವಿಧೇಯತೆಯು ಪ್ರಕಟಣೆಯಾಗುವುದಕ್ಕೆ ಮುಂಚಿತವಾಗಿ ಹೊರಡುತ್ತದೆ.
ಕರ್ತನಾದ ಯೇಸು ಇದೇ ತತ್ವವನ್ನು ನಮಗೆ ಬೋದಿಸಿದನು,
“ ಯೇಸು ಅವನಿಗೆ - ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು; ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು.” (ಯೋಹಾನ 14:23).
ದೇವರ ಮಹಿಮೆಯು ಏನೋ ಶಬ್ದ ಅಥವಾ ಯಾವುದೋ ಚಟುವಟಿಕೆಯಿಂದ ಆಕರ್ಷಿತವಾಗುವುದಿಲ್ಲ - ಅದು ಆತನ ಮತ್ತು ಆತನ ವಾಕ್ಯದ ಪ್ರಕಾರ ನಡೆಯುವ ಯಾರನ್ನಾದರೂ ಆಕರ್ಷಿಸುತ್ತದೆ.
ಮಹಿಮೆಯು ಪ್ರವೇಶಾತಿಯನ್ನು ಬದಲಾಯಿಸುತ್ತದೆ.
ಮಹಿಮೆಯು ಗುಡಾರವನ್ನು ತುಂಬಿದಾಗ, ಅನಿರೀಕ್ಷಿತವಾದದ್ದೇನೋ ಅಲ್ಲಿ ಸಂಭವಿಸಿತು:
"ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿರುವದರಿಂದಲೂ ಯೆಹೋವನ ತೇಜಸ್ಸು ಗುಡಾರದೊಳಗೆ ತುಂಬಿರುವದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು.'(ವಿಮೋಚನಕಾಂಡ 40:35).
ಅದನ್ನು ನಿರ್ಮಿಸಿದ ಮನುಷ್ಯನಿಗೇ ಇನ್ನು ಮುಂದೆ ತನಗೆ ಬೇಕೆಂದಾಗ ಆ ಗುಡಾರದ ಒಳಗೆ ನಡೆಯಲು ಸಾಧ್ಯವಾಗದೇ ಹೋಯಿತು. ಏಕೆ? ಏಕೆಂದರೆ ಮಹಿಮೆಯು ನಾವು ದೇವರನ್ನು ಸಮೀಪಿಸುವ ವಿಧಾನವನ್ನು ಬದಲಾಯಿಸುತ್ತದೆ.
ಪರಿಚಿತತೆಯು ಗೌರವಕ್ಕೆ ದಾರಿ ಮಾಡಿಕೊಡಬೇಕು.
ಕೀರ್ತನೆ 24:3–4 ನಮಗೆ ನೆನಪಿಸುವುದೇನೆಂದರೆ:
"ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ ಆಧಾರ; ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ ಉಪಕರಣ."
ಈ ಹೊಸ ವರ್ಷದಲ್ಲಿ ಮುನ್ನಡೆಯುವಾಗ, ದೇವರು ನಿಮ್ಮಲ್ಲಿ ತನ್ನ ಕಾರ್ಯವನ್ನು ಆಳಗೊಳಿಸಬಲ್ಲನು - ವಿಷಯಗಳನ್ನು ಸುಲಭಗೊಳಿಸುವ ಮೂಲಕ ಅಲ್ಲ, ಆದರೆ ಅವುಗಳನ್ನು ಪವಿತ್ರಗೊಳಿಸುವ ಮೂಲಕ.
ಬಾಹ್ಯ ಮಹಿಮೆಯಿಂದ ಆಂತರಿಕ ವಾಸ್ತವಕ್ಕೆ
ಒಂದು ಕಾಲದಲ್ಲಿ ಗುಡಾರದಲ್ಲಿ ತುಂಬಿದ್ದ ವಸ್ತು ಈಗ ವಿಶ್ವಾಸಿಗಳಿಂದ ತುಂಬಲ್ಪಡುತ್ತದೆ:
“ನಿಮ್ಮಲಿರುವ ಕ್ರಿಸ್ತ ಯೇಸು ಮಹಿಮೆಯ ನಿರೀಕ್ಷೆ ಯಾಗಿದ್ದಾನೆ" (ಕೊಲೊಸ್ಸೆ 1:27).
2026 ರಲ್ಲಿ ದೇವರ ಬಯಕೆಯು ನಿಮ್ಮ ಜೀವನಕ್ಕೆ ಭೇಟಿ ನೀಡುವುದು ಮಾತ್ರವಲ್ಲದೇ,ನಿಮ್ಮ ಆಲೋಚನೆಗಳು, ನಿರ್ಧಾರಗಳು, ಮಾತುಗಳು, ಅಭ್ಯಾಸಗಳು ಮತ್ತು ಉದ್ದೇಶಗಳು ಎಲ್ಲದರಲ್ಲೂ ಸರ್ವ ಸಂಪೂರ್ಣವಾಗಿ ವಾಸಿಸಬೇಕೆನ್ನುವುದಾಗಿದೆ
"ನೀವು ದೇವರ ಆಲಯವಾಗಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲವೇ?" (1 ಕೊರಿಂಥ 3:16) ಎಂದು
ಅಪೊಸ್ತಲ ಪೌಲನು ನಮಗೆ ನೆನಪಿಸುತ್ತಾನೆ.
ಪ್ರಶ್ನೆ, ದೇವರು ತನ್ನ ಮಹಿಮೆಯನ್ನು ಸುರಿಸುತ್ತಾನಾ?
ಪ್ರಶ್ನೆ, ಅದನ್ನು ಹಿಡಿದಿಟ್ಟುಕೊಳ್ಳಲು ನಮ್ಮೊಳಗೆ ಸ್ಥಳ ಸಿದ್ಧವಾಗಿದೆಯೇ?
ಒಂದು ಪ್ರವಾದನಾ ಕರೆ
ಸಿದ್ಧತೆಯು ದೇವರ ಸಾನಿಧ್ಯವನ್ನು ಆಹ್ವಾನಿಸುತ್ತದೆ.ಆ ಸಾನ್ನಿಧ್ಯವು ಮಹಿಮೆಯನ್ನು ಬಿಡುಗಡೆ ಮಾಡುತ್ತದೆ.ಆ ಮಹಿಮೆಯು ಜೀವನವನ್ನು ಪರಿವರ್ತಿಸುತ್ತದೆ.
ದಾವೀದನು ಪ್ರಾರ್ಥಿಸುವಾಗ ಈ ಹಸಿವನ್ನು ಅರ್ಥಮಾಡಿಕೊಂಡನು,
" ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ.....ಯೆಹೋವನನ್ನು ಬೇಡಿಕೊಂಡು ಅದನ್ನೇ.ಎದುರುನೋಡುತ್ತಿರುವೆನು." ಎನ್ನುತ್ತಾನೆ.(ಕೀರ್ತನೆ 27:4).
ಹೊಸ ವರ್ಷವು ತೆರೆದುಕೊಳ್ಳುತ್ತಿರುವಾಗ, ನಿಮ್ಮ ಜೀವನವು ಕೇವಲ ಸಂಘಟಿತವಾಗಿರದೆ - ಪವಿತ್ರವಾಗಿರಲಿ.
ಸಕ್ರಿಯವಾಗಿರದೆ - ಜೋಡಿಸಲ್ಪಟ್ಟಿರಲಿ. ದೇವರು ಮನೆಯನ್ನು ತುಂಬಿದಾಗ, ಇವೆಲ್ಲವೂ ಹಾಗೆಯೇ ಉಳಿಯಲಿ.
Bible Reading: Genesis 8-11
ಪ್ರಾರ್ಥನೆಗಳು
ತಂದೆಯೇ, ಮಹಿಮೆಯಿಲ್ಲದ ರಚನೆಯನ್ನು ನಾನು ಬಯಸುವುದಿಲ್ಲ. ನಾನು ನಿಮಗಾಗಿ ಸಿದ್ಧಪಡಿಸಿದ ಪ್ರತಿಯೊಂದು ಸ್ಥಾನವನ್ನು ತುಂಬಿಸಿ. ನನ್ನ ಜೀವನವು ನಿಮ್ಮ ಸಾನ್ನಿಧ್ಯದಿಂದ ಯೇಸುನಾಮದಲ್ಲಿ ತುಂಬಲ್ಪಡಲಿ. ಆಮೆನ್!
Join our WhatsApp Channel
Most Read
● ಭಯಪಡಬೇಡ.● ಧನ್ಯನಾದ ಮನುಷ್ಯ
● ವಿವೇಕಿಯಾಗಿರಿ
● ವ್ಯಸನಗಳನ್ನು ನಿಲ್ಲಿಸುವುದು
● ಪವಿತ್ರಾತ್ಮನ ಇತರ ಪ್ರಕಟನಾತ್ಮಕ ವರಗಳಿಗೆ ಪ್ರವೇಶಹೊಂದಿ.
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
ಅನಿಸಿಕೆಗಳು
