ವಿಭಿನ್ನ ರೀತಿಯ ಅರಸನು
ಕರ್ತನಾದ ಯೇಸು ಯೆರೂಸಲೇಮಿನ ಹತ್ತಿರ ಬಂದಾಗ, ಅಸಾಧಾರಣವಾದದ್ದೇನೋ ಸಂಭವಿಸಿತು.
"ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೆಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯರ ಗುಂಪೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ, “ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಸಮಾಧಾನ, ಮೇಲಣಲೋಕಗಳಲ್ಲಿ ಮಹಿಮೆ” ಎಂದು ಮಹಾ ಶಬ್ದದಿಂದ ದೇವರನ್ನು ಕೊಂಡಾಡುವುದಕ್ಕೆ ತೊಡಗಿದರು."ಎಂದು ಸತ್ಯವೇದ ಹೇಳುತ್ತದೆ( ಲೂಕ 19:37–38)
ಇಂದು ಅನೇಕರ ಮನಸ್ಸಿನಲ್ಲಿ ಎದ್ದು ಕಾಣುವ ಒಂದು ಪ್ರಶ್ನೆಯೆಂದರೆ: ಯೇಸು ಕತ್ತೆಯ ಮೇಲೆ ಸವಾರಿ ಮಾಡಿದ್ದೇಕೆ?
ಕರ್ತನಾದ ಯೇಸು ಕತ್ತೆಯನ್ನು ಆಕಸ್ಮಿಕವಾಗಿ ಆರಿಸಿಕೊಳ್ಳಲಿಲ್ಲ. ನೂರಾರು ವರ್ಷಗಳ ಹಿಂದೆ ಜೆಕರ್ಯ 9:9 ರಲ್ಲಿ ಬರೆಯಲ್ಪಟ್ಟ ಒಂದು ಪ್ರವಾದನೆಯನ್ನು ಆತನು ಪೂರೈಸುತ್ತಿದ್ದನು:
“ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನೂ, ರಕ್ಷಿಸುವಾತನೂ, ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆ ಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ."
ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ, ಯೇಸು ತಾನು ಜನರು ನಿರೀಕ್ಷಿಸಿದ ರೀತಿಯ ಅರಸನಲ್ಲ ಆದರೆ ವಾಗ್ದಾನ ಮಾಡಲ್ಪಟ್ಟ ಅರಸನು ತಾನು ಎಂದು ಬಹಿರಂಗವಾಗಿ ಘೋಷಿಸಿದನು
ಯುದ್ಧದ ಅರಸನಲ್ಲ ಸಮಾಧಾನದ ಅರಸನು
ಸತ್ಯವೇದ ಕಾಲದಲ್ಲಿ, ಯುದ್ಧಕ್ಕಾಗಿ ಕುದುರೆಗಳನ್ನು ಬಳಸಲಾಗುತ್ತಿತ್ತು, ಆದರೆ ಶಾಂತಿಯ ಸಮಯದಲ್ಲಿ ಕತ್ತೆಗಳನ್ನು ಬಳಸಲಾಗುತ್ತಿತ್ತು. ರಾಜರು ಯುದ್ಧಕ್ಕೆ ಹೋಗುವಾಗ ಕುದುರೆಗಳ ಮೇಲೆ ಸವಾರಿ ಮಾಡುತ್ತಿದ್ದರು, ಆದರೆ ಶಾಂತಿ ಒಡಂಬಡಿಕೆಗೆ ಬರುವಾಗ ಕತ್ತೆಗಳ ಮೇಲೆ ಸವಾರಿ ಮಾಡುತ್ತಿದ್ದರು.
ಕರ್ತನಾದ ಯೇಸು ಸಮಾಧಾನವನ್ನು ಆರಿಸಿಕೊಂಡನು. ಪ್ರವಾದಿ ಯೆಶಾಯನು ಈಗಾಗಲೇ ಆತನನ್ನ
"ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು." ಎಂದು ವಿವರಿಸಿದ್ದನು. ಯೆಶಾಯ 9:6 (NIV)
ಯೇಸು ರೋಮ್ ಸಾಮ್ರಾಜ್ಯ ವಿರುದ್ಧ ಹೋರಾಡಲು ಬರದೇ, ತನ್ನ ಜನರನ್ನು ದೇವರೊಂದಿಗೆ ಸಂಧಾನಪಡಿಸಲು ಬಂದನು. ಕುತೂಹಲಕಾರಿಯಾಗಿ, ಅಲ್ಲಿನ ಜನರು ಸಂಕೇತವನ್ನು ಅರ್ಥಮಾಡಿಕೊಂಡರು. ಮತ್ತಾಯನು ಅವರ ಪ್ರತಿಕ್ರಿಯೆಯನ್ನು ದಾಖಲಿಸುತ್ತಾನೆ:
ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು. ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು,
“ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು." ಮತ್ತಾಯ 21:8–9 (NIV)
ಜನಸಮೂಹದ ಕಾರ್ಯಗಳು - ಮೇಲಂಗಿಗಳು ಮತ್ತು ತಾಳೆ ಕೊಂಬೆಗಳನ್ನು ಹರಡುವುದು - ಗೌರವದ ಸಂಕೇತಗಳಾಗಿದ್ದವು, ಯೇಸುವನ್ನು ತಾವು ಕಾಯುತ್ತಿದ್ದ ಮೆಸ್ಸೀಯನೆಂದು ಅಂಗೀಕರಿಸಿಕೊಂಡರು, ಆದರೂ ಅನೇಕರು ಆತನ ಧ್ಯೇಯದ ಸ್ವರೂಪವನ್ನು ತಪ್ಪಾಗಿ ಅರ್ಥೈಸಿಕೊಂಡರು.
ಪವಿತ್ರ ಕಾರ್ಯಕ್ಕಾಗಿ ಪ್ರತ್ಯೇಕಿಸಲ್ಪಟ್ಟ ಕತ್ತೆ ಮರಿ
ಆ ಕತ್ತೆಯ ಮರಿಯ ಮೇಲೆ ಯಾರೂ ಸಹ ಅಲ್ಲಿಯವರೆಗೆ ಸವಾರಿ ಮಾಡಿರಲಿಲ್ಲ. ಇದು ಗಮನಾರ್ಹವಾಗಿದೆ. ದೇವರವಾಕ್ಯದಲ್ಲಿ, ದೇವರಿಗಾಗಿ ಪ್ರತ್ಯೇಕಿಸಲಾದ ಪ್ರಾಣಿಗಳನ್ನು ಸಾಮಾನ್ಯ ಕೆಲಸಕ್ಕಾಗಿ ಬಳಸಲಾಗುತ್ತಿರಲಿಲ್ಲ.
"ಕರ್ತನಿಗಾಗಿ ಅದು ಬೇಕಾಗಿದೆ." — ಲೂಕ 19:31 (ESV)
ಯೇಸು ಶಿಲುಬೆಗೆ ತನ್ನ ಪ್ರಯಾಣವು ಪವಿತ್ರವಾಗಿದ್ದು ಉದ್ದೇಶಪೂರ್ವಕವಾಗಿದ್ದು ಮತ್ತು ದೇವರಿಂದಲೇ ನೇಮಿಸಲ್ಪಟ್ಟಿದ್ದು ಎಂದು ತೋರಿಸುತ್ತಿದ್ದನು.
ಸೇವೆಯ ಮೂಲಕ ರಾಜತ್ವ
ಯೇಸು ರಾಜನಾಗಿ ಹೊಗಳಿಕೆಯನ್ನು ಸ್ವೀಕರಿಸಿದನು - ಆದರೆ ಆದರೆ ಆ ರಾಜತ್ವವನ್ನು ಮರು ವ್ಯಾಖ್ಯಾನಿಸಿದನು:
"ಮನುಷ್ಯಕುಮಾರನು ಸಹ ಸೇವೆ ಮಾಡಿಸಿಕೊಳ್ಳಲು ಬಂದಿಲ್ಲ, ಆದರೆ ಸೇವೆ ಮಾಡಲು ಮತ್ತು ಅನೇಕರಿಗಾಗಿ ತನ್ನ ಪ್ರಾಣವನ್ನು ವಿಮೋಚನಾ ಕ್ರಯವಾಗಿ ನೀಡಲು ಬಂದನು." — ಮಾರ್ಕ 10:45 (NIV)
ಆತನ ಕಿರೀಟವು ಮುಳ್ಳುಗಳಾಗಿರುತ್ತದೆ, ಆತನ ಸಿಂಹಾಸನವು ಶಿಲುಬೆಯಾಗಿರುತ್ತದೆ. ಇಂದು ನಮಗೆ ಇದರ ಅರ್ಥವೇನೆಂದರೆ, ನಿಜವಾದ ಬಲವು ದೀನತ್ವದಲ್ಲಿ ಕಂಡುಬರುತ್ತದೆ ಎಂದು ಯೇಸು ನಮಗೆ ತೋರಿಸಿದನು.
" ಸಾತ್ವಿಕರು ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು" — ಮತ್ತಾಯ 5:5 (ESV)
ಆತನ ಅನುಯಾಯಿಗಳಾಗಿ, ನಾವೂ ಸಹ ಅದೇ ದೀನತೆ, ಶಾಂತತೆ ಮತ್ತು ವಿಧೇಯ ರೀತಿಯಲ್ಲಿ ಬದುಕಲು ಕರೆಯಲ್ಪಟ್ಟಿದ್ದೇವೆ -
“ ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,ಸಾತ್ತ್ವೀಕತೆ, ಸಂಯಮ — ಗಲಾತ್ಯ 5:22–23 (NIV)
ಯೇಸು ಕತ್ತೆಯ ಮೇಲೆ ಸವಾರಿ ಮಾಡುವುದು ದೇವರ ತಲೆಕೆಳಗಾದ ರಾಜ್ಯದ ಪ್ರಬಲ ಚಿತ್ರವಾಗಿದೆ. ಶ್ರೇಷ್ಠತೆಯು ಅಧಿಕಾರ, ಶಬ್ದ ಅಥವಾ ಬಲದ ಕುರಿತಾದದ್ದಲ್ಲ - ಆದರೆ ಪ್ರೀತಿ, ನಮ್ರತೆ ಮತ್ತು ದೇವರಿಗೆ ತೋರುವ ವಿಧೇಯತೆ ಕುರಿತಾದಾಗಿದೆ ಎಂದು ಅದು ನಮಗೆ ನೆನಪಿಸುತ್ತದೆ.
ಆ ಅರಸನು ಇಂದಿಗೂ ಬರಲಿದ್ದಾನೆ - ನಮ್ಮನ್ನು ನಾಶಪಡಿಸಲು ಅಲ್ಲ ಬದಲಾಗಿ ನಮ್ಮನ್ನು ರಕ್ಷಿಸಲು.
Bible Reading: Exodus 26-28
ಪ್ರಾರ್ಥನೆಗಳು
ನಮ್ಮ ಸಾತ್ತ್ವೀಕಾ ಕರ್ತನಾದ ಯೇಸುವೇ, ನಿನ್ನ ಸಮಾಧಾನದ ಹೆಜ್ಜೆಗಳಲ್ಲಿ ನಡೆಯಲು ನಮಗೆ ಕಲಿಸು. ನಾವು ನಿನ್ನನ್ನು ವೈಭವದಿಂದಲ್ಲ, ಆದರೆ ನಂಬಿಕೆಯಿಂದ ಗೌರವಿಸುವಂತಾಗಲಿ. ಸ್ತುತಿಯ ಮೆರವಣಿಗೆಯಲ್ಲಿ ನಮ್ಮ ಜೀವನದ ಕೊಂಬೆಯ ಚಿಗುರುಗಳನ್ನು ನಿನ್ನ ಮುಂದೆ ಹರಡುವಂತಾಗಲಿ. ಯೇಸುವಿನ ನಾಮದಲ್ಲಿ. ಆಮೆನ್.
Join our WhatsApp Channel
Most Read
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
● ನೀವು ದೇವರನ್ನು ಎದುರಿಸುತ್ತಿದ್ದೀರಾ?
ಅನಿಸಿಕೆಗಳು
