ಅನುದಿನದ ಮನ್ನಾ
ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
Tuesday, 12th of December 2023
0
1
533
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಸೈತಾನ ನಿರ್ಮಿತ ಮಿತಿಗಳನ್ನು ಮುರಿಯಲು.
"ಅದಕ್ಕೆ ಫರೋಹನು - ಒಳ್ಳೇದು, ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಮಾಡುವಂತೆ ನಿಮಗೆ ಅಪ್ಪಣೆ ಕೊಡುತ್ತೇನೆ; ಆದರೆ ದೂರ ಹೋಗಕೂಡದು; ನನಗೋಸ್ಕರ ಪ್ರಾರ್ಥನೆಮಾಡಿರಿ ಅಂದನು."(ವಿಮೋಚನಕಾಂಡ 8:28)
ಈ ದಿನದ ವಾಕ್ಯಧ್ಯಾನವು ನಮಗೆ ಫರೋಹನು ತನ್ನ ಬಳಿ ದಾಸತ್ವದಲ್ಲಿದ್ದ ಇಸ್ರಾಯೆಲ್ಯರ ಮೇಲೆ ತನ್ನ ಹಿಡಿತ ಇಟ್ಟುಕೊಂಡಿದ್ದ , ಇಷ್ಟೇ ದೂರ ಹೋಗಬೇಕು ಹೀಗೆ ಇರಬೇಕು ಎಂಬೆಲ್ಲಾ ತನ್ನ ಮಿತಿಯನ್ನು ಹೇಗೆ ಹೊರೆಸಿದ್ದ ಎಂಬುದನ್ನು ಪ್ರಕಟ ಪಡಿಸುತ್ತದೆ. ದುರಾದೃಷ್ಟವೇನೆಂದರೆ ಇಂದು ಎಷ್ಟೋ ಜನ ಕ್ರೈಸ್ತರು ಸೈತಾನನು ತಮ್ಮ ಮೇಲೆ ಮಿತಿ ಹೇರುವ ಕಾರ್ಯಚರಣೆ ಬಗ್ಗೆ ಉದಾಸೀನವಾಗಿದ್ದಾರೆ.
ಸೈತಾನ ನಿರ್ಮಿತ ಮಿತಿಗಳು ಎಂದರೇನು?
ಒಬ್ಬ ವ್ಯಕ್ತಿ /ಒಂದು ವಸ್ತು /ಒಂದು ಪ್ರದೇಶಗಳ ಮೇಲೆ ಹೇರುವ ನಿರ್ಬಂಧವೇ ಸೈತಾನ ನಿರ್ಮಿತ ಮಿತಿಗಳು.ಇದು ಒಬ್ಬ ವ್ಯಕ್ತಿಗೆ ಉಂಟಾಗುವ ಒಳಿತನ್ನು ತಡೆಯಬಹುದು, ಈ ಒಂದು ದುರಾತ್ಮನ ಕಾರ್ಯಚರಣೆಯು ಒಬ್ಬ ವ್ಯಕ್ತಿಯ ಉನ್ನತೀಕರಣವನ್ನು ತಡೆಯುವ ಅಥವಾ ಅದನ್ನು ನಿಲ್ಲಿಸುವ ಕಾರ್ಯವೂ ಆಗಿರಬಹುದು.
ನಾವು ಸೈತಾನನ ತಂತ್ರಗಳನ್ನು ಅರಿಯದವರಂತೆ ಇರಬಾರದು ಎಂಬ ವಾಕ್ಯವನ್ನು ಎಂದಿಗೂ ನಾವು ನೆನಪಿನಲ್ಲಿ ಇಟ್ಟು ಕೊಂಡಿರಬೇಕು (2ಕೊರಿಯಂತೆ 2:11) ಹಾಗೆಯೇ ಸೈತಾನನ ಕ್ರಿಯೆಗಳನ್ನು ನಾಶಪಡಿಸಲೆಂದೇ ಯೇಸುಕ್ರಿಸ್ತನು ಪ್ರತ್ಯಕ್ಷನಾದನು ಎಂಬುದನ್ನು ಮರೆಯ ಬಾರದು (1ಯೋಹನ 3:8).ಹಾಗಾಗಿ ನಾವು ಯಾವಾಗಲಾದರೂ ಪಿಶಾಚನ ಕಾರ್ಯಚರಣೆ ಬಗ್ಗೆ ಮಾತಾಡುತ್ತಿದ್ದೇವೆ ಎಂದರೆ ಅದರ ಉದ್ದೇಶ ಅವನನ್ನು ವೈಭವೀಕರಣ ಮಾಡುತ್ತಿದ್ದೇವೆ ಎಂದಲ್ಲ ಬದಲಾಗಿ ಕ್ರೈಸ್ತರು ಅವನ ಕಾರ್ಯಚರಣೆ ಕುರಿತು ತಿಳಿದವರಾಗಿ ಅದನ್ನು ನಾಶ ಪಡಿಸಲು ತಿಳಿದಿರಬೇಕೆಂಬುದೇ ಆಗಿದೆ.
ಈ ದಿನ ನಿಮ್ಮ ಕೆಲಸ,ಆರೋಗ್ಯ, ಕುಟುಂಬ ಅಥವಾ ಜೀವಿತದ ಗುಣಮಟ್ಟ ಯಾವುದೇ ಆಗಿರಲಿ ಅವುಗಳ ಮೇಲೆ ಸೈತಾನನು ಹೇರಿರುವ ಎಲ್ಲಾ ನಿರ್ಬಂಧಗಳು ಯೇಸುನಾಮದಲ್ಲಿ ಮುರಿದು ಬೀಳಲಿ.
3.ಸೈತಾನ ನಿರ್ಮಿತ ಮಿತಿಗಳಲ್ಲಿ ಇರುವ ಮುಖ್ಯವಾದ ವಿಧಗಳು.
1. ವೈಯಕ್ತಿಕ ಮಿತಿಗಳು.
ಒಬ್ಬ ವ್ಯಕ್ತಿಯು ವ್ಯಕ್ತಿಗತವಾಗಿ ನಿರ್ಬಂಧಿಸಲ್ಪಾಟ್ಟಾಗ ಆಗುವಂತದ್ದು.ಇದು ಆ ವ್ಯಕ್ತಿಯು ತನ್ನನ್ನು ತಾನೇ ನಿರ್ಭಂಧಿಸಿ ಕೊಳ್ಳುವುದರಿಂದಲೂ ಆಗಬಹುದು(ಉದಾಸೀನತೆಯಿಂದ ) ಅಥವಾ ದುರಾತ್ಮದ ಬಲಗಳಿಂದ ಹೇರಲ್ಪಟ್ಟು ಆಗಬಹುದು.
ಒಬ್ಬ ವ್ಯಕ್ತಿ ಒಮ್ಮೆ ಭಾರತದಲ್ಲಿನ ಮತ್ತೊಂದು ರಾಜ್ಯದಲ್ಲಿ ಸುವಾರ್ತೆ ಸಾರುವ ಪ್ರಯಾಣದಲ್ಲಿ ಭಾಗಿಯಾಗಿದ್ದರು . ನಾವು ಹೋಟೆಲ್ ನಲ್ಲಿ ಇಳುಕೊಳ್ಳುವ ವ್ಯವಸ್ಥೆಯೆಲ್ಲಾ ಮಾಡಿ ಮುಗಿಸಿ ವಿಮಾನ ಯಾನಕ್ಕಾಗಿ ಕಾಯುತ್ತಾ ಕುಳಿತಿದ್ದೆವು. ಇನ್ನೇನು ವಿಮಾನವನ್ನು ಹತ್ತಬೇಕು ಆ ವ್ಯಕ್ತಿಗೆ ಉಸಿರಾಟದ ತೊಂದರೆ ಆರಂಭವಾಗಿ ಒಂದು ರೀತಿ ವಿಚಿತ್ರವಾಗಿ ವರ್ತಿಸಲಾರಾಂಭಿಸಿದರು
ವಿಮಾನ ಆಗಲೇ ಹೊರಟ ಸಲುವಾಗಿ ನಾವು ಆ ವ್ಯಕ್ತಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರ ಪತ್ನಿಯೊಡನೆ ಬಿಟ್ಟು ಹೋದೆವು. ಅದೊಂದು ಅಲ್ಪಸಮಯದ ವಿಮಾನ ಯಾನ. ನಾವು ವಿಮಾನ ಇಳಿದ ಕೂಡಲೇ ಆ ವ್ಯಕ್ತಿಯ ಆರೋಗ್ಯ ವಿಚಾರಿಸಲು ಅವರ ಪತ್ನಿಗೆ ಕರೆ ಮಾಡಿದೆವು. ಆದರೆ ಆ ವ್ಯಕ್ತಿಯೇ ಕರೆಯನ್ನು ಸ್ವೀಕರಿಸಿ ಆ ವಿಮಾನ ಹೊರಟ ಕೂಡಲೇ ಆಶ್ಚರ್ಯ ಕರವಾಗಿ ನಾನು ಹುಷಾರಾದೆ ಎಂದರು.
ಆಮೇಲೆ ನಮ್ಮ ಒಂದು ಬಿಡುಗಡೆಯ ಕೂಟದಲ್ಲಿ ಅವರಿಗೆ ಸಂಪೂರ್ಣವಾದ ಬಿಡುಗಡೆ ದೊರಕಿತು. ಅವರ ಕುಟುಂಬದಲ್ಲಿ ಅದುವರೆಗೂ ಯಾರೂ ಸಹ ವಿಮಾನ ಪ್ರಯಾಣವನ್ನು ಮಾಡಿಯೇ ಇರಲಿಲ್ಲ ಇದೊಂದು ಅವರ ಜೀವಿತದಲ್ಲಿ ಸೈತಾನನು ಹೊರೆಸಿರುವ ನಿರ್ಬಂಧ ಎಂಬ ವಿಷಯವನ್ನು ದೇವರಾತ್ಮನು ಅಂದು ಪ್ರಕಟ ಪಡಿಸಿದನು.
2.ಸಾಮೂಹಿಕ ಮಿತಿ .
ಈ ಒಂದು ಮಿತಿಯು ಒಂದು ಗುಂಪಿನಜನರ ಮೇಲೆ ವಿಧಿಸಲ್ಪಟ್ಟ ನಿರ್ಬಂಧ. ಅಂದರೆ ಒಂದು ಕುಟುಂಬ, ಒಂದು ಹಳ್ಳಿ, ಪಟ್ಟಣ ಅಥವಾ ಒಂದು ದೇಶದ ಮೇಲೆಯೇ ಆಗಿರಬಹುದು.
"ಆಮೇಲೆ ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ಬಂದು ಸಮಾರ್ಯಕ್ಕೆ ಮುತ್ತಿಗೆಹಾಕಿದನು. ಆಗ ಸಮಾರ್ಯ ಪಟ್ಟಣದಲ್ಲಿ ಘೋರವಾದ ಬರವಿದ್ದಿತು."
(2 ಅರಸು 6:24-25)
ಉತ್ತರ ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಒಂದು ಸಣ್ಣ ಹಳ್ಳಿ ಇದೆ ಅದು ರೋಮಾಂಚನಕಾರಿಯಾದ ಸಂಸ್ಕೃತಿಗೂ ಮತ್ತು ಅಲ್ಲಿರುವ ಕುಶಲ ಕರ್ಮಿಗಳ ಕಲಾಕೃತಿಗಳಿಗೂ ಹೆಸರುವಾಸಿಯಾದ ಹಳ್ಳಿ.ಆದಾಗಿಯೂ ಅವರು ಎಷ್ಟೇ ಪ್ರತಿಭಾವಂತರಾಗಿದ್ದರೂ ಅವರು ತಮ್ಮ ಕಲಾಕೃತಿಗಳನ್ನು ತಮ್ಮ ಸೀಮೆ ಯನ್ನು ಬಿಟ್ಟು ಹೊರಗೆ ಮಾರಲು ಸಾಧ್ಯವಿರಲಿಲ್ಲ.ಕಾರಣ ಒಂದು ದಂತಕಥೆಯ ಪ್ರಕಾರ ಆ ಹಳ್ಳಿಗೆ ವಿರೋಧವಾಗಿರುವ (ಮೊದಲು ಇವರಿಂದ ಯುದ್ಧದಲ್ಲಿ ಸೋತುಹೋದಂತ)ಒಂದು ಪಟ್ಟಣದ ಶಾಪದ ದೆಸೆಯಿಂದ ಇವರು ಬೇರೆ ಪ್ರದೇಶಗಳಿಗೆ ಇವರ ಕಲಾಕೃತಿ ಗಳನ್ನು ಮಾರದಂತೆಯೂ ಇವರು ಸಂವೃದ್ಧಿ ಯಾಗದಂತೆಯೂ ತಡೆಯುತ್ತಿದೆ ಎಂಬ ವದಂತಿ ಇತ್ತು.
ವರ್ಷ ವರ್ಷವೂ ಅವರ ಹಳ್ಳಿಯ ಹಬ್ಬಗಳಲ್ಲಿ ಇವರ ಕೈಕೆಲಸದ ಕಲಾಕೃತಿಗಳು ಪ್ರದರ್ಶನದಲ್ಲಿ ಇಡಲ್ಪಡುತ್ತಿದ್ದವು ಆದರೂ ನಮ್ಮ ಕರ್ತನಾದ ಯೇಸುಕ್ರಿಸ್ತನ ಸುವಾರ್ತೆಯು ಅವರಿಗೆ ಸಾರುವ ವರೆಗೂ ಅವರಿಗಿದ್ದ ಆ ದಂತಕತೆಯ ಮೇಲಿನ ಮೂಢನಂಬಿಕೆಯಿಂದ ತಮಗೆ ಅರಿವೇ ಇಲ್ಲದೆ ತಮಗೆ ತಾವೇ ಅಗೋಚರವಾದ ಮಿತಿಯನ್ನು ಹಾಕಿಕೊಂಡು ಅದನ್ನೇ ಪಾಲಿಸುತ್ತಿದ್ದರು. ಈ ರೀತಿಯ ಸಾಮೂಹಿಕ ಮಿತಿಗಳು ಕೇವಲ ಒಂದು ಸಮುದಾಯದ ಆರ್ಥಿಕ ಬೆಳವಣಿಗೆಯ ಮೇಲೆ ಮಾತ್ರ ಪರಿಣಾಮ ಬೀರದೆ ಆತ್ಮೀಕ ಅಭಿವೃದ್ಧಿ ಮೇಲೂ ಒಂದು ಸಮುದಾಯದ ನಿರೀಕ್ಷೆ ಯ ಮೇಲೂ ಪರಿಣಾಮ ಬೀರುತ್ತದೆ.
3. ಆರ್ಥಿಕತೆ ಅಥವಾ ಹಣಕಾಸಿನ ಮೇಲಿನ ಮಿತಿಗಳು.
ಆರ್ಥಿಕತೆ ಮೇಲಿನ ಮಿತಿ ಎಂಬುದು ನಿರುದ್ಯೋಗ, ಬಡತನ, ಮರುಕಳಿಸುವ ಸಾಲಗಳು ಮತ್ತು ಆರ್ಥಿಕ ಬಿಕ್ಕಟ್ಟು ಇವುಗಳನ್ನು ಒಳಗೊಂಡಿರುತ್ತದೆ.
ನವೀನಯುಗದ ಉತ್ಸಾಹಿಯಾದ ಜಗತ್ತನ್ನೇ ಬದಲಿಸಲು ಆಸೆ ಪಟ್ಟ ಒಬ್ಬ ಯುವ ಉದ್ಯಮಿಯ ಪ್ರಕರಣದ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ. ಈ ವ್ಯಕ್ತಿ ಯಾವುದೇ ಹೊಸ ಉದ್ಯಮಕ್ಕೆ ಕೈಹಾಕಿದರೂ ಅದನ್ನು ಆರಂಭಿಸುತ್ತಲೇ ಆ ಉದ್ಯಮ ಚಿದ್ರ ಚಿದ್ರ ವಾಗಿಬಿಡುತ್ತಿತ್ತು. ಆ ವ್ಯಕ್ತಿ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ ಸಾಲಗಳು ಹೆಚ್ಚುತ್ತಾ ಹೋಗುತಿತ್ತು, ಹೂಡಿಕೆದಾರರು ಕಡೆ ಕ್ಷಣದಲ್ಲಿ ಹೂಡಿಕೆ ಮಾಡದೆ ಹಿಂದೆಗೆಯುತ್ತಿದ್ದರು, ಊಹಿಸಲು ಅಸಾಧ್ಯವಾದ ಮಾರುಕಟ್ಟೆಯ ಏರಿಳಿತಗಳುಉಂಟಾಗಿ ಆ ವ್ಯಕ್ತಿಯನ್ನು ಹಾಳು ಮಾಡುತ್ತಲೇ ಹೋಗುತಿತ್ತು.
ಇದು ಕೇವಲ ಸಾಮಾನ್ಯ ಹಣಕಾಸಿನ ಒತ್ತಡ ದಿಂದ ಆ ವ್ಯಕ್ತಿಗೆ ಉಂಟಾದ ಆರ್ಥಿಕ ಸುಭದ್ರತೆಯ ಸವಾಲಾಗಿರಲಿಲ್ಲ ಬದಲಾಗಿ ಒಂದು ದುರಾದೃಷ್ಟದ ಕೈ ಬೇಡಿಗಳು ಪಟ್ಟುಬಿಡದೆ ಅವನನ್ನು ಹಿಂಬಾಲಿಸುತ್ತಿತ್ತು. ಸ್ನೇಹಿತರು ಮತ್ತು ಅವರ ಮಾರ್ಗದರ್ಶಿಗಳು ಈ ವ್ಯಕ್ತಿಯ ಆರ್ಥಿಕ ಹಿನ್ನಡೆ ಕುರಿತು ಎತ್ತಿ ತೋರಿಸಬಹುದಾದ ಕಳೆದು ಹೋದ ದಿನಗಳಲ್ಲಿ ಆ ವ್ಯಕ್ತಿ ಮಾಡಿದ ತಪ್ಪು ಆಯ್ಕೆಗಳು ಅಥವಾ ಕಳಪೆ ಕಾಲಾವಧಿ ಇವುಗಳೆನ್ನೆಲ್ಲಾ ಮೀರಿದಂಥ ವಿಲಕ್ಷಣವಾದ ವ್ಯವಹಾರದ ಸ್ವಭಾವಕ್ಕೆ ಕಾರಣವಾದ ಆ ವ್ಯಕ್ತಿಯ ಆರ್ಥಿಕ ಸಾಮರ್ಥ್ಯಕ್ಕೆ ನಿಜವಾಗಲೂ ಸಿಗಬೇಕಾಗಿದ್ದ ಬಿಡುಗಡೆಯ ಮೇಲೆ ಆವರಿಸಿದ್ದ ಒಂದು ಆಗೋಚರ ಹೊದಿಕೆಯ ಬಗ್ಗೆ ಸುಳಿವು ಕಡೆಗೂ ಸಿಕ್ಕಿತು . ಇದು ನಡೆದದ್ದು 2017 ರಲ್ಲಿ ನಡೆದ 21 ದಿನದ ಉಪವಾಸ ಕೂಟದಲ್ಲಿ ಆ ಉದ್ಯಮಿಯು ಭಾಗಿಯಾದಾಗ. ಈಗ ಆ ಉದ್ಯಮಿಯು ದೇಶ ವಿದೇಶಗಳಲ್ಲಿ ತನ್ನ ವ್ಯವಹಾರವನ್ನು ಚೆನ್ನಾಗಿ ವಿಸ್ತರಿಸಿಕೊಂಡಿದ್ದಾರೆ.
ನಿಮ್ಮ ಮೇಲೆ ಹೇರಲ್ಪಟ್ಟಿರುವ ಯಾವುದೇ ಸೈತಾನನ ಮಿತಿಗಳಾಗಲಿ ಅವುಗಳೆಲ್ಲಾ ಯೇಸುನಾಮದಲ್ಲಿ ಪವಿತ್ರಾತ್ಮನ ಬೆಂಕಿಯಲ್ಲಿ ಸುಟ್ಟು ಬೂದಿಯಾಗಲಿ ಎಂದು ದೇವರ ಬಲದಲ್ಲಿ ಘೋಷಿಸುತ್ತೇನೆ.
ಸತ್ಯವೇದ ಆಧಾರಿತವಾದ ಸೈತಾನ ನಿರ್ಮಿತ ಮಿತಿಗಳು
1.ಯೆಹೋಶುವ ಮತ್ತು ಇಸ್ರಾಯೇಲ್ಯರು
"(ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ.) ಆಗ ಯೆಹೋವನು ಯೆಹೋಶುವನಿಗೆ - ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ... "(ಯೆಹೋಶುವ 6:1-2 )
ಯೆರಿಕೋ ಪಟ್ಟಣದ ಗೋಡೆಯು ಅಸಾಧಾರಣವಾಗಿದ್ದು ಅದರ ಬಾಗಿಲುಗಳು ಬೀಗ ಹಾಕಲ್ಪಟ್ಟಿದ್ದ ಕಾರಣ ಇಸ್ರಾಯೇಲ್ಯರು ಯೆರಿಕೊವನ್ನು ಸ್ವಾಧೀನ ಪಡಿಸಿಕೊಳ್ಳಲು ಆಗದಂತ ಗಮನಾರ್ಹವಾದ ಹಿನ್ನಡೆಯನ್ನು ಎದುರಿಸಿದರು. ದೇವರ ಸಹಾಯವಿಲ್ಲದೆ ಇಂಥ ಮಿತಿಯನ್ನು ನಾಶ ಪಡಿಸಲು ಸಾಧ್ಯವೇ ಇರಲಿಲ್ಲ. ಅದೊಂದು ಯುದ್ಧವಿದ್ಯೆಯನ್ನು ಮೀರಿದಂತದ್ದಾಗಿತ್ತು.
2 ಯಹೂದಕ್ಕೆ ವಿರೋಧವಾದ ಕೊಂಬುಗಳು.
"ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು. ಆಗ ನಾನು - ಇವರು ಏನು ಮಾಡುವದಕ್ಕೆ ಬಂದಿದ್ದಾರೆ ಎಂದು ಕೇಳಲು ಅವನು - ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡವುವದಕ್ಕೆ ಬಂದಿದ್ದಾರೆ ಎಂದು ಹೇಳಿದನು."
(ಜೆಕರ್ಯ 1:20-21)
ಪಿಶಾಚನ ಕೊಂಬುಗಳು ಜನರನ್ನು ಏಳಿಗೆಯಾಗದಂತೆ ತಡೆಯುತ್ತಿತ್ತು. ಈ ಮಿತಿಗಳು ಜನರಿಗೆ ಅವರಿಗಾಗಿ ನೇಮಕವಾದ ಸ್ಥಾನವನ್ನು ಅವರು ಹೊಂದದಂತೆ ನಿರ್ಬಂಧಿಸುವ ಮಿತಿಗಳಾಗಿವೆ. ದೇವರು ಪ್ರವಾದಿಗೆ ಆತ್ಮೀಕ ಆಯಾಮದಲ್ಲಿ ಏನು ನಡೆಯುತ್ತಿದೆ ಎಂದು ಮತ್ತು ಜನರು ಏಕೆ ಆರ್ಥಿಕವಾಗಿ, ಶಾರೀರಿಕವಾದ ಆರೋಗ್ಯದಲ್ಲಿಯೂ ಮತ್ತು ಔದ್ಯೋಗಿಕವಾಗಿಯೂ ಭೌತಿಕವಾಗಿ ಕಷ್ಟ ಪಡುತ್ತಿದ್ದಾರೆ ಎಂದು ದೈವೀಕವಾಗಿ ತೋರಿಸಿದನು.
ದೈವೀಕ ಪ್ರಕಟಣೆ ಇಲ್ಲದೆ ಸೈತಾನನು ಒಡ್ದುವ ಮಿತಿಗಳ ಕಾರ್ಯಚರಣೆಗಳನ್ನು ಅರಿಯಲು ಸಾಧ್ಯವಿಲ್ಲ.
ಪ್ರಾರ್ಥನೆಗಳು
ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.
1. ಯೆಹೋನನ್ನು ಸ್ತುತಿಸಿರಿ ಮತ್ತು ಆರಾಧಿಸಿರಿ (ಆರಾಧನೆಯಲ್ಲಿ ಮಗ್ನರಾಗಲು ಸಹಕಾರಿಯಾಗಿರುವ ಇಂಪಾದ ಹಾಡುಗಳನ್ನು ಹಾಡುತ್ತಿರಿ (ಕೀರ್ತನೆ 100:4)
2. ನನ್ನ ಆರೋಗ್ಯ, ಹಣಕಾಸು, ಮತ್ತು ನನ್ನ ಉನ್ನತಿಯನ್ನು ತಡೆಗಟ್ಟಲು ನನಗೆ ವಿರೋಧವಾಗಿ ಇಟ್ಟಿರುವ ಎಲ್ಲಾ ಮಿತಿಗಳನ್ನು ಯೇಸುನಾಮದಲ್ಲಿ ಪವಿತ್ರಾತ್ಮನ ಅಗ್ನಿಯು ದಹಿಸಿ ಬಿಡಲಿ. (ಯೇಶಾಯ 54:17)
3.ನನ್ನ ಜೀವಿತಕ್ಕೆ ವಿರೋಧವಾಗಿ ಗುಪ್ತವಾಗಿ ಕಾರ್ಯಮಾಡುತ್ತಿರುವ ಯಾವುದೇ ನಿರ್ಬಂಧಗಳನ್ನು ಕರ್ತನು ಯೇಸುನಾಮದಲ್ಲಿ ನನಗೆ ಬೈಲು ಪಡಿಸಿ ಅದನ್ನು ನಿರ್ಮೂಲ ಮಾಡುವನು (ಲೂಕ 8:17)
4. ನನ್ನ ಜೀವಿತದಲ್ಲಿ ನನಗಾಗಿ ನೇಮಕ ವಾಗಿರುವ ಸ್ಥಾನವನ್ನು ನಾನು ತಲುಪದಂತೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸೈತಾನ ನಿರ್ಮಿತ ಮಿತಿಗಳ ಸರಪಳಿಯನ್ನು ಯೇಸುವಿನ ರಕ್ತದ ಮೂಲಕ ಯೇಸುವಿನ ನಾಮದಲ್ಲಿ ಮುರಿದು ಹಾಕುತ್ತೇನೆ. (ಪ್ರಕಟಣೆ 12:11)
5. ಕರ್ತನ ಆತ್ಮದ ಮೂಲಕ ನನ್ನ ಉನ್ನತಿಗೆ ಬಂದೊದುಗುವ ಅಡೆತಡೆಗಳನ್ನು ಯೇಸುನಾಮದಲ್ಲಿ ಚದುರಿಸುತ್ತೇನೆ. (ಜೆಕರ್ಯ 4:6)
6. ನನಗೆ ಬರಬೇಕಾಗಿರುವ ಯಾವುದೇ ಒಳಿತನ್ನು ನನಗೆ ಬಾರದಂತೆ ತಡೆಯುವ ಯಾವುದೇ ಅಡ್ಡಿ ಆತಂಕಗಳ ಮೇಲೆ ಪರಲೋಕದ ಬೆಂಕಿಯು ಬೀಳಲೆಂದು ಯೇಸುನಾಮದಲ್ಲಿ ಆಜ್ಞಾಪಿಸುತ್ತೇನೆ.
7. ಯೆಹೋವನೇ ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವಂತೆ ]; ಓಡಿ ದಣಿಯದಂತೆ , ನಡೆದು ಬಳಲದಂತೆ ನನಗೆ ಯೇಸುನಾಮದಲ್ಲಿ ಹೊಸ ಬಲವನ್ನು ಅನುಗ್ರಹಿಸು (ಯೆಶಾಯ 40:31 )
8. ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲ ಅಡೆತಡೆ ಗಳನ್ನು ಎಲ್ಲಾ ಮಿತಿಗಳನ್ನು ಮುರಿದು ಹಾಕಲು ಯೇಸುನಾಮದಲ್ಲಿ ನಾನು ಶಕ್ತನಾಗಿದ್ದೇನೆ.
(ಫಿಲಿಪ್ಪಿಯವರಿಗೆ 4:13 )
9. ನನ್ನ ಉನ್ನತಿಗೆ ವಿರೋಧವಾಗಿ ಏಳುವ ಪ್ರತಿಯೊಂದು ವಿಚಿತ್ರ ದ್ವನಿಗಳು ವ್ಯತಿರಿಕ್ತ ಯಜ್ಞಗಳು ಯೇಸುವಿನ ರಕ್ತದ ಮೂಲಕ ಯೇಸುವಿನ ನಾಮದಲ್ಲಿ ನಿಶ್ಯಬ್ದಗೊಳ್ಳಲಿ. (ಧರ್ಮೋಪದೇಶ ಕಾಂಡ 28:7)
10. ಆತ್ಮದಿಂದ ಕನಿಷ್ಠ ಪಕ್ಷ ಹತ್ತು ನಿಮಿಷವಾದರೂ ಪ್ರಾರ್ಥಿಸಿ (1ಕೊರಿಯಂತೆ 14:2)
11. ತಂದೆಯೇ, ವೈರಿಯ ಬಲೆಗೆ ಬೀಳದಂತೆ ನನ್ನ ದಾರಿಗೆ ಬೆಳಕಾಗಿದ್ದು ನನ್ನ ಹೆಜ್ಜೆಗಳನ್ನು ಮಾರ್ಗದರ್ಶಿಸು ಮತ್ತು ನಿನ್ನ ಪರಿಪೂರ್ಣವಾದ ಚಿತ್ತವನ್ನು ನೆರವೇರಿಸುವಂತೆ ಯೇಸುನಾಮದಲ್ಲಿ ನನ್ನನ್ನು ನಿರ್ದೇಶಿಸು. (ಕೀರ್ತನೆ 119:10)
12. ಪರಲೋಕದ ತಂದೆಯೇ ನಿನ್ನ ಪರಲೋಕದ ದ್ವಾರಗಳನ್ನು ತೆರೆದು ಹಿಡಿಸಲಾರದಷ್ಟು ಸುವರಗಳನ್ನು ಸುರಿಸಿ ನನ್ನೆಲ್ಲ ಬಡತನವನ್ನು ಕೊರತೆಯನ್ನು ಯೇಸುನಾಮದಲ್ಲಿ ನೀಗಿಸು (ಮಲಾಕಿ 3:10)
Join our WhatsApp Channel
Most Read
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ದೇವರ ಪ್ರೀತಿಯನ್ನು ಅನುಭವಿಸುವುದು
● ದೇವರು ಹೇಗೆ ಒದಗಿಸುತ್ತಾನೆ #2
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ
ಅನಿಸಿಕೆಗಳು