ನಿಮ್ಮ ಜೀವನದಲ್ಲಿ ದುರಾತ್ಮವು ಕಾಲಿಟ್ಟಾಗ, ಅದು ಪಾಪವನ್ನು ನಿರಂತವಾಗಿ ಒತ್ತಡಕ್ಕೆ ತರುತ್ತದೆ, ಇದು ಬಾಹ್ಯವಾಗಿ ಬದಲಾಗಿ ಒಳಗಿನಿಂದ ಶೋಧನೆಯನ್ನು ಅನುಭವಿಸುವಂತೆ ಮಾಡುತ್ತದೆ. ಈ ಒಳಗಿನ ಶೋಧನೆಯ ಪಾಪವನ್ನು ಹೆಚ್ಚಿಸಿ ಹಾಗೆ ಮುಂದುವರಿಯುವುದರಿಂದ ಅದನ್ನು ವಿರೋಧಿಸಲು ಹೆಚ್ಚು ಕಷ್ಟಕರವಾಗಬಹುದು. ಕಾಮದಂತೆ, ಅಧರ್ಮವು ಹೆಚ್ಚು ಪಾಪವನ್ನು ಅನುಭವಿಸುವಂತೆ ಮಾಡಿ , ಅಂತಿಮವಾಗಿ ನಿಮ್ಮೊಳಗೆ ಒಬ್ಬ"ಗೋಲಿಯಾತನಂತೆ" ಅಸಾಧಾರಣ ಎದುರಾಳಿ ಸಿದ್ದವಾಗುವಂತೆ ಮಾಡುತ್ತದೆ.
14ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರಳುಗೊಂಡವನಾಗಿ ಪ್ರೆರೆeಪಿಸಲ್ಪಡುತ್ತಾನೆ (ಕಾಮ, ಭಾವೋದ್ರೇಕಗಳಿಂದ) 15ಆ ಮೇಲೆ ಆಶೆವು ಬಸುರಾಗಿ ಪಾಪವನ್ನು ಹೇರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ (ಯಾಕೋಬನು 1:14–15 AMPC)
ಯಾವಾಗ ದೆವ್ವದ ಆತ್ಮವು ಹೆಚ್ಚು ಪರಿಣಾಮಕಾರಿಯಾಗಿ ನಿಮ್ಮೊಳಗೆ ಬಂದಾಗ ಅದು ಗಮನಾರ್ಹವಾಗಿ ಹೆಚ್ಚು ಪ್ರಬಲವಾಗಿರುತ್ತದೆ, ಇದನ್ನು ಬಿಡುಗಡೆ ಮಾಡಲು ತುಂಬಾ ಕಷ್ಟಕರವಾಗುತ್ತದೆ. ಆದ್ದರಿಂದ, ಬಿಡುಗಡೆ ಮಾಡಲು ಸಾಧ್ಯ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಯಾವಾಗ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಿರಂತರ ಪಾಪ ಮಾಡಿದಾಗ, ಆ ದೆವ್ವಗಳು ಬಲಹೀನ ವ್ಯಕ್ತಿಯ ಗುಣಕ್ಷಣಗಳನ್ನು ಬಳಸಿಕೊಳ್ಳಲು ಮತ್ತು ಆ ನಿರ್ದಿಷ್ಟ ಅಂಶದ ಮೇಲೆ ನಿಯಂತ್ರಣವನ್ನು ಸಾಧಿಸಲು ಒಲವುವನ್ನು ಬಯಸುತ್ತವೆ. ಕೆಲವು ಸನ್ನಿವೇಶಗಳಲ್ಲಿ , ಒಂದೇ, ನಿರ್ಣಾಯಕ ಪಾಪವು ದೆವ್ವದ ಪ್ರವೇಶಕ್ಕೆ ಬಾಗಿಲು ತೆರೆಯುತ್ತದೆ. ಇಲ್ಲಿ ಇಸ್ಕರಿಯೂತ ಯುದನು ಉದಾಹರಣೆಯಾಗಿದ್ದನೆ, ಅವನು ಕರ್ತನಾದ ಯೇಸುವಿಗೆ ದ್ರೋಹ ಮಾಡಿದ ನಂತರ ,ಸೈತಾನನು ಅವನಲ್ಲಿ ಪ್ರವೇಶಿಸಿದನು.
2ಮಹಾಯಾಜಕರು ಶಾಸ್ತ್ರೀಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದು ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು 3ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರ ಲೆಕ್ಕದಲ್ಲಿ ಸೇರಿದವನಾದ ಇಸ್ಕರಿಯೊತೆಂಬ ಯುದನನ್ನು ಪ್ರವೇಶಿಸಲು 4. ಅವನು ಮಹಾಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ಕುರಿತು ಅವರ ಸಂಗಡ ಮಾತಾಡಿದನು.5 ಅವರು ಸಂತೋಷಪಟ್ಟು ನಿನಗೆ ಹಣ ಕೊಡುತ್ತೇವೆಂದು ಒಪ್ಪಂದ ಮಾಡಿಕೊಂಡರು. (ಲೂಕ 22:2-5 AMPC)
ಸತ್ಯವೇದದ ಅನುಸಾರವಾಗಿ ಯುದನ ವಿಷಯವು ಬಲವಾದ ಪಾಪದೊಂದಿಗೆ ಆಟವಾಡುವ ವಿಧಿ ಎಂದು ನೆನಪಿಗೆ ತಂದುಕೊಳ್ಳಬಹುದು, ಕಾಳಜಿ ಇಲ್ಲದೆ ಅಥವಾ ಅಭ್ಯಾಸದಿಂದ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು, ನಮ್ಮ ಭೌತಿಕ ಜೀವನ ಮತ್ತು ನಿತ್ಯಜೀವದ ರಕ್ಷಣೆ ಎರಡನ್ನೂ ಕಳೆದುಕೊಳ್ಳಬಹುದು (ಮತ್ತಾಯ 27:1-5 ನೋಡಿ).
ಅಭ್ಯಾಸದ ಪಾಪದಿಂದಾಗಿ ದೆವ್ವಗಳಿಗೆ ತೆರೆದಿರುವ ಪ್ರವೇಶದ ಅಂಶಗಳನ್ನು ತಡೆಯಲು, ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕು:
1. ದೇವರ ಮುಂದೆ ನಿಮ್ಮನ್ನು ನೀವೇ ತಗ್ಗಿಸಿಕೊಳ್ಳಿರಿ:
ನಿಮ್ಮ ಸ್ವಂತ ಪಾಪವನ್ನು ಜಯಿಸಲು ನಿಮ್ಮ ಅಸಮರ್ಥತೆಯನ್ನು ಒಪ್ಪಿಕೊಳ್ಳುವುದರ ಮೂಲಕ ದೇವರ ಸಹಾಯ ಮತ್ತು ಅನುಗ್ರಹದ ಅಗತ್ತ್ಯೇತೆಯನ್ನು ಗುರುತಿಸಿ. ಯಾಕೋಬನು 4:6 ರಲ್ಲಿ, "ದೇವರು ಅಹಂಕಾರಿಗಳನ್ನು ಹೆದರಿಸುಸುತ್ತಾನೆ,ಆದರೆ ದೀನಾರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ "ಎಂದು ಶಾಸ್ತ್ರವು ಹೇಳುತ್ತದೆ.ನಮ್ಮನ್ನು ತಗ್ಗಿಸಿಕೊಳ್ಳುವುದರ ಮೂಲಕ, ಶತ್ರುಗಳ ಶಕ್ತಿ ಜಯಿಸಲು ದೇವರ ಸಹಾಯವನ್ನು ಸ್ವೀಕರಿಸಲು ನಾವು ಸ್ಥಾನ ಪಡೆಯುತ್ತೇವೆ. ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವುದರ ಮೂಲಕ ದೀನತೆಯನ್ನು ತೋರಿಸಿದನು,ದೇವರ ಮಗನು ಸಹ ಸೇವಕನ ಪಾತ್ರವನ್ನು ತೆಗೆದುಕೊಳ್ಳಲು ಮನಸುವುಳ್ಳವನೆಂದು ತೋರಿಸಿದನು (ಯೋಹಾನ 13: 1-17).
2. ಪಶ್ಚಾತ್ತಾಪಪಡು:
ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಲು ಮತ್ತು ಪಾಪದಿಂದ ತಿರುಗಿಕೊಳ್ಳಲು ಒಂದು ಪ್ರಜ್ಞಾಪೂರ್ವಕ ನಿರ್ಧಾರವನ್ನು ಮಾಡಿ. ಅಪೋಸ್ತಲರ ಕೃತ್ಯಗಳು 3:19 "ಪಶ್ಚಾತ್ತಾಪಪಡಿರಿ ಮತ್ತು ದೇವರ ಕಡೆಗೆ ತಿರುಗಿಕೊಳ್ಳಿರಿ, ಇದರಿಂದ ನಿಮ್ಮ ಪಾಪಗಳು ಅಳಿದುಹೋಗಿ ದೇವರಿಂದ ವಿಶ್ರಾಂತಿಕಾಲಗಳು ಒದಗುವವು." ಪೋಲಿಹೋದ ಮಗನ ಕಥೆಯು ಪಶ್ಚಾತ್ತಾಪ ಮತ್ತು ತಂದೆಯ ಬಿಡುಗಡೆಯ ಪ್ರೀತಿಯ ಭಲವಾದ ಉದಾಹರಣೆಯಾಗಿದೆ (ಲೂಕ 15:11-32).
3. ಅರಿಕೆಮಾಡಿ ಮತ್ತು ಪಾಪವನ್ನು ತ್ಯಜಿಸಿ:
ನಿಮ್ಮ ಪಾಪವನ್ನು ದೇವರಿಗೆ ಒಪ್ಪಿಸಿಕೊಡಿ ಮತ್ತು ಅದನ್ನು ಬಹಿರಂಗವಾಗಿ ತಿರಸ್ಕರಿಸಿ, ಯಾವುದೇ ಪಾಪಪೂರ್ಣ ಸಂಬಂಧಗಳು ಅಥವಾ ನಡವಳಿಕೆಗಳೊಂದಿಗೆ ಸಂಬಂಧಗಳನ್ನು ಬಿಟ್ಟುಹಾಕಿ. 1 ಯೋಹಾನ 1:9 ವಾಗ್ದಾನ"ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು. ಕೀರ್ತನೆ 51 ರಲ್ಲಿ ರಾಜ ದಾವೀದನ ಉದಾಹರಣೆಯು ದೇವರ ಮುಂದೆ ಪಾಪವನ್ನು ಒಪ್ಪಿಕೊಳ್ಳುವ ಮತ್ತು ತ್ಯಜಿಸುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
4. ದೇವರಲ್ಲಿ ಕ್ಷಮೆಯನ್ನು ಕೇಳಿ:
ದೇವರ ಕರುಣೆ ಮತ್ತು ಶುದ್ಧೀಕರಣವನ್ನು ಹುಡುಕಿ ಪಶ್ಚಾತ್ತಾಪದ ಹೃದಯದಿಂದ ಆತನ ವಾಗ್ದದಾನನಲ್ಲಿ ಭರವಸೆ ಇಟ್ಟು ನಂಬುವವರನ್ನು ಕ್ಷಮಿಸುವನು .ಯೆಶಾಯ 1:18 ರಲ್ಲಿ, ದೇವರು ಹೇಳುತ್ತಾನೆ, "ನಿಮ್ಮ ಪಾಪಗಳು ಕಡುಕೆಂಪಾಗಿದ್ದರು ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣ ವಾಗಿದ್ದರು ಉಣ್ಣೆಯಂತೆ ಬೆಳ್ಳಗಾಗುವವು". ಅಂತೆಯೇ, ಕ್ಷಮಿಸದ ಸೇವಕನ ಸಾಮ್ಯ (ಮತ್ತಾಯ 18: 21-35) ಕ್ಷಮೆಯನ್ನು ಹುಡುಕುವ ಮತ್ತು ವಿಸ್ತರಿಸುವ ಪ್ರಾಮುಖ್ಯತೆಯನ್ನು ನಮ್ಮ ನೆನಪಿಗೆ ಬರುತ್ತದೆ.
5. ಯೇಸುವಿನ ನಾಮದಲ್ಲಿ ದುರಾತ್ಮವನ್ನು ತಿರಸ್ಕರಿಸಿ ಮತ್ತು ಗದರಿಸು:
ಕ್ರಿಸ್ತನಲ್ಲಿ ನಂಬಿಕೆಯುಳ್ಳವರಾಗಿ ನಿಮ್ಮ ಅಧಿಕಾರವನ್ನು ಪ್ರತಿಪಾದಿಸಲು ನಿಮ್ಮ ಜೀವಿತದಿಂದ ದೆವ್ವ ಬಿಟ್ಟು ಹೋಗಲು ಆಜ್ಞಾಪಿಸಿ ಲೂಕ 10:19 ಹೇಳುತ್ತದೆ, "ಹಾವುಗಳನ್ನು ಮತ್ತು ಚೇಳುಗಳನ್ನು ವೈರಿಯ ಸಮಸ್ತ ಬಲವನ್ನು ತುಳಿಯುವುದಕ್ಕೆ ನಿಮಗೆ ಅಧಿಕಾರವನ್ನು ಕೊಟ್ಟಿದ್ದೇನೆ; ಯಾವುದೂ ನಿಮಗೆ ಕೇಡುಮಾಡುವುದಿಲ್ಲ." ಯೇಸು ತನ್ನ ಈ ಲೋಕದ ಸೇವೆಯ ಸಮಯದಲ್ಲಿ ದೆವ್ವಗಳನ್ನು ಬಿಡಿಸಿದನು (ಉದಾಹರಣೆಗೆ, ಮಾರ್ಕ್ 1: 23-27) ಆತನ ಹೆಸರಿನಲ್ಲಿ ನಾವು ಹೊಂದಿರುವ ಶಕ್ತಿಯನ್ನು ಪ್ರದರ್ಶಿಸುತ್ತದೆ.
6. ನಿಮ್ಮನ್ನು ಆತನು ಪವಿತ್ರಾತ್ಮದಿಂದ ತುಂಬಿಸಲು ದೇವರನ್ನು ಕೇಳಿರಿ:
ಆತ್ಮಿಕ ಜಯವನ್ನು ಹೊಂದಲು ಮತ್ತು ವಿಧೇಯತೆಯಿಂದ ನಡೆಯಲು ಹೊಸ ಭಲ ಹೊಂದಲು ಪವಿತ್ರಾತ್ಮನ ಉಪಸ್ಥಿತಿಯನ್ನು ಆಹ್ವಾನಿಸಿ, ಎಫೆಸದವರಿಗೆ 5:18 ವಾಕ್ಯವು ನಮ್ಮನ್ನು "ಆತ್ಮದಿಂದ ತುಂಬಲು" ಪ್ರೋತ್ಸಾಹಿಸುತ್ತದೆ. ಅಂತೆಯೇ, ಅಪೋಸ್ತಲರ ಕೃತ್ಯೆಗಳು 2: 1-4 ರಲ್ಲಿ ಪೆಂತಕೋಸ್ತರ ಸನ್ನಿವೇಶವು ವಿಶ್ವಾಸಿಗಳ ಜೀವನದಲ್ಲಿ ಪವಿತ್ರ ಆತ್ಮನ ಮೂಲಕ ಪರಿವರ್ತನೆ ಶಕ್ತಿಯೂ ಉದಾಹರಣೆಯಾಗಿದೆ.
7. ಉಪವಾಸವನ್ನು ಪರಿಗಣಿಸಿ:
ಉಪವಾಸವನ್ನು ಮಾಡುವದು , ಸಾಧ್ಯವಾದರೆ, ನಿಮ್ಮ ಬಿಡುಗಡೆಯ ಪ್ರಯತ್ನಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಬಹುದು, ಏಕೆಂದರೆ ಇದು ದೇವರಲ್ಲಿ ಆಳವಾದ ಭಲ ಮತ್ತು ಶಕ್ತಿಯ ಮೇಲೆ ಅವಲಂಬನೆಯನ್ನು ಪ್ರದರ್ಶಿಸುತ್ತದೆ. ಮತ್ತಾಯ 17:21 ರಲ್ಲಿ, ಯೇಸು ಹೇಳಿದನು"ಆದರೆ ಈ ರೀತಿಯವು ಪ್ರಾರ್ಥನೆ ಮತ್ತು ಉಪವಾಸದಿಂದ ಹೊರಡುವುದಿಲ್ಲ" . ಎಸ್ತರ್ ಮತ್ತು ಯಹೂದಿಗಳು ತಮ್ಮ ಬಿಡುಗಡೆಗಾಗಿ ಉಪವಾಸ ಮಾಡುವ ಕಥೆ (ಎಸ್ತೆರಳು 4: 15-17) ಆತ್ಮಿಕ ಯುದ್ಧಗಳನ್ನು ಜಯಿಸುವಲ್ಲಿ ಉಪವಾಸದ ಪ್ರಾರ್ಥನೆ ಬಲವುಳ್ಳದ್ದಾಗಿದೆ.
ಈ ಹಂತಗಳನ್ನು ಅನುಸರಿಸುವ ಮೂಲಕ, ಅಭ್ಯಾಸದಿಂದ ಮಾಡಿದ ಪಾಪದ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ದೆವ್ವಗಳಪ್ರವೇಶವನ್ನು ಅನುಮತಿಸಿದ ಸ್ಥಳದ ಅಂಶಗಳನ್ನು ಮುಚ್ಚಲು ಅಥವಾ ತಡೆಯಲು ನೀವು ಸಕ್ರಿಯವಾಗಿ ಕೆಲಸ ಮಾಡಬಹುದು. ಹಾಗೆ ಮಾಡುವುದರಿಂದ, ನೀವು ವೈಯಕ್ತಿಕ ಬಿಡುಗಡೆಯನ್ನು ಅನುಭವಿಸುವುದಲ್ಲದೆ, ದೇವರೊಂದಿಗಿನ ನಿಮ್ಮ ಸಂಬಂಧದಲ್ಲಿ ಬೆಳೆಯುತ್ತದೆ ಮತ್ತು ನಿಮ್ಮ ಆತ್ಮಿಕ ಅಡಿಪಾಯವು ಬಲಗೊಳ್ಳುತ್ತದೆ.
ಕರ್ತನಾದ ಯೇಸು ನಮ್ಮನ್ನು ಬಿಡುಗಡೆಗೊಳಿಸಲು ಬಂದರು, ಆದರೆ ಕ್ರಿಸ್ತನ ಶಿಲುಬೆಯ ಶಕ್ತಿಯನ್ನು ಹೊಂದಿಕೊಳ್ಳಲು ನಾವು ಪ್ರತಿಯೊಂದು ಸಮಸ್ಯೆ ಮೂಲವನ್ನು ಅಥವಾ ಸತ್ಯವನ್ನು ತಿಳಿದಿರಬೇಕು.
31ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ--ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರದರೆ [ನನ್ನ ಬೋಧನೆಗಳನ್ನು ದೃಢವಾಗಿ ಹಿಡಿದುಕೊಂಡು ಅವುಗಳ ಪ್ರಕಾರ ನಡೆದರೆ] ನೀವು ನಿಜವಾಗಿಯೂ ನನ್ನ ಶಿಷ್ಯರು. 32ಮತ್ತು ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು. (ಯೋಹಾನ 8:31-32.)
ಪ್ರಾರ್ಥನೆಗಳು
1. ತಂದೆಯೇ, ನಾನು ನನ್ನ ಹೃದಯ ಮತ್ತು ಮನಸ್ಸನ್ನು ನಿನಗೆ ಒಪ್ಪಿಸುತ್ತೇನೆ ಮತ್ತು ನನ್ನ ಆಲೋಚನೆಗಳನ್ನು ನೂತನ ಪಡಿಸಲು ಮತ್ತು ನನ್ನ ನಡವಳಿಕೆಯನ್ನು ರುಪಾಂತಪಡಿಸುವಂತೆ ನಿನ್ನಲ್ಲಿ ಕೇಳಿಕೊಳ್ಳುತ್ತೇನೆ. ನಾನು ನಿನ್ನ ಇಚ್ಛೆಗೆ ನನ್ನನ್ನು ಒಪ್ಪಿಸಿದಂತೆ, ಈ ಕೆಟ್ಟ ಅಭ್ಯಾಸಗಳಿಂದ ಹೊರಬರಲು ಮತ್ತು ನಿನ್ನ ನಾಮವನ್ನು ಘನಪಡಿಸಲು ಜೀವನವನ್ನು ನಡೆಸಲು ನನಗೆ ಭಲವನ್ನು ನೀಡು. ಯೇಸುವಿನ ನಾಮದಲ್ಲಿ.
2. ಸರ್ವಶಕ್ತನಾದ ದೇವರೇ, ನನ್ನಲ್ಲಿ ಜ್ಞಾನ ಮತ್ತು ವಿವೇಚನೆಯಿಂದ ತುಂಬಿಸು ವೈರಿಯು ಹಾಕಿದ ಬಲೆಗಳನ್ನು ಗುರುತಿಸಲು ಮತ್ತು ತಪ್ಪಿಸಲು ನನ್ನನ್ನು ಅತ್ಮನಿಂದ ತುಂಬಿಸಿ ಎಂದು ಕೇಳಿಕೊಳ್ಳುತ್ತನೆ.ಪ್ರತಿ ದಾಳಿ ಮತ್ತು ಶೋಧನೆಗೆ ವಿರುದ್ಧ ದೃಢವಾಗಿ ನಿಲ್ಲಲು ಅಗತ್ಯವಾದ ಆತ್ಮಿಕ ರಕ್ಷಣ ಕವಚದಿಂದ ನನ್ನನ್ನು ಸಿದ್ದಪಡಿಸು. ಯೇಸುವಿನ ನಾಮದಲ್ಲಿ.
3. ತಂದೆಯೇ, ನಾನು ಈ ಕೆಟ್ಟ ಅಭ್ಯಾಸಗಳಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ಜೊತೆ ವಿಶ್ವಾಸಿಗಳ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಪ್ರೀತಿಯ ಸಮುದಾಯವು ಹೊಣೆಗಾರರನ್ನಾಗಿ ಮೇಲಕ್ಕೆತ್ತುವಂತೆ ಮಾಡಿ ಮತ್ತು ಪ್ರಾರ್ಥನೆಯಲ್ಲಿ ನನ್ನೊಂದಿಗೆ ಇರಲಿ ಎಂದು ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ.
Join our WhatsApp Channel
Most Read
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು● ಬೀಜದಲ್ಲಿರುವ ಶಕ್ತಿ -2
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ಹೊಗಳಿಕೆವಂಚಿತ ನಾಯಕರು
● ದೈವೀಕ ಅನುಕ್ರಮ -2
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು