ಅನುದಿನದ ಮನ್ನಾ
ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Monday, 15th of January 2024
2
0
586
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಮಧ್ಯರಾತ್ರಿಯ ಹೋರಾಟವನ್ನು ಜಯಿಸುವುದು.
"ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು.
27ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು - ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದಿಯಲ್ಲಾ; ಹಣಜಿ ಎಲ್ಲಿಂದ ಬಂತು ಎಂದು ಕೇಳಲು 28ಅವನು - ಇದು ಒಬ್ಬ ವೈರಿ ಮಾಡಿದ ಕೆಲಸ.. "(ಮತ್ತಾಯ 13:25,27-28)
ಜನರು ರಾತ್ರಿ ವೇಳೆಯಲ್ಲಿ ಮಲಗಿರುವಾಗ ಶತ್ರು ಅನೇಕ ಕ್ರಿಯೆಗಳನ್ನು ನಡೆಸುತ್ತಾನೆ. ಆದ್ದರಿಂದ ನಾವು ರಾತ್ರಿಯ ವೇಳೆಯಲ್ಲಿ ಎಚ್ಚರವಾಗಿದ್ದು ಅಂಧಕಾರ ಬಲಗಳೊಡನೆ ಹೋರಾಟ ನಡೆಸಬೇಕೆಂದು ದೇವರು ಬಯಸುತ್ತಾನೆ.
ಮಧ್ಯರಾತ್ರಿಯಲ್ಲಿ ನಿಮ್ಮ ಸುರಕ್ಷೆ ಎಂಬುದು ನೀವು ಆತ್ಮದಲ್ಲಿ ಎಷ್ಟರಮಟ್ಟಿಗೆ ಸುಸಜ್ಜಿತರಾಗಿದ್ದೀರಿ ಎಂಬುದರ ಮೇಲೆ ಆಧಾರಗೊಂಡಿದೆ. ನಿಮ್ಮ ಆತ್ಮವು ಬಲಹೀನವಾಗಿದ್ದು ಹಗುರವಾಗಿದ್ದರೆ ಸೈತಾನನು ದಾಳಿ ಮಾಡಲು ಅದು ಸುಲಭವಾಗಿ ಎಡೆ ಮಾಡಿಕೊಡುತ್ತದೆ.
ಕನಸುಗಳು ಶಕ್ತಿಯುತವಾಗಿದ್ದು ಏನು ನಡೆಯಲಿದೆ ಏನೆಲ್ಲ ನಡೆದಿದೆ ಅಥವಾ ಏನೆಲ್ಲಾ ಮುಂದೆ ನಡೆಯಲು ಹೋಗಲಿದೆ ಎಂಬುದನ್ನು ಪ್ರಕಟಿಸುತ್ತದೆ. ಶತ್ರು ಯಾವಾಗಲೂ ಯಾರನ್ನು ನುಂಗಲಿ ಎಂದು ಕಾಯುವ ವೇಳೆ ಅದು ಮಧ್ಯರಾತ್ರಿಯ ವೇಳೆಯಾಗಿದೆ.
ನಾವು ಇಂದು ಓದಿದ ವಾಕ್ಯವು, ಜನರು ಒಳ್ಳೆಯದನ್ನು ಬಿತ್ತಿರುವಾಗ ಇನ್ಯಾವುದೋ ಶಕ್ತಿ ರಾತ್ರಿಯಲ್ಲಿ ಕಾರ್ಯ ಮಾಡಿ ಅದರ ಫಲವನ್ನು ಹೊಂದಿ ಕೊಂಡು ಹೋದದ್ದನ್ನು ಪ್ರಕಟಿಸುತ್ತದೆ.
ಇಂದು ನಾವು ಅಂಧಕಾರ ಶಕ್ತಿಗಳ ವಿರುದ್ಧವಾಗಿ ಹೋರಾಡಿ ಅವುಗಳನ್ನು ನಾಶಪಡಿಸಿ ಜಯ ಹೊಂದುವುದಕ್ಕೋಸ್ಕರ ಪ್ರಾರ್ಥಿಸಲಿದ್ದೇವೆ ಮಧ್ಯರಾತ್ರಿ ಜಾವದಲ್ಲಿ ಹೋರಾಟಗಳು ಇರುತ್ತವೆ. ವಿಶ್ವಾಸಿಗಳಾಗಿ ನೀವು ರಾತ್ರಿ ಮಲಗುವುದಕ್ಕಿಂತ ಮುಂಚಿತವಾಗಿಯೋ, ಇಲ್ಲವೇ ಮಧ್ಯರಾತ್ರಿಯಲ್ಲಿ ಎದ್ದಾದರೋ, ಎಡಬಿಡದೆ ಪ್ರಾರ್ಥಿಸಬೇಕು. ನಿಮಗೆ ಈ ಕ್ಷೇತ್ರದಲ್ಲಿ ಏನಾದರೂ ಕೊರತೆ ಇದ್ದರೆ ನಿಮಗೆ ಬೇಕಾಗಿರುವ ಬಲಕ್ಕಾಗಿ ದೇವರಲ್ಲಿ ಪ್ರಾರ್ಥಿಸಿರಿ
ವಿಮೋಚನ ಕಾಂಡ 11:4 ಹೇಳುತ್ತದೆ..
"ಮೋಶೆ ಫರೋಹನಿಗೆ - ಯೆಹೋವನು ಅಪ್ಪಣೆ ಮಾಡುವದೇನಂದರೆ - ನಾನು ಮಧ್ಯರಾತ್ರಿಯಲ್ಲಿ ಐಗುಪ್ತ್ಯರ ನಡುವೆ ಹಾದುಹೋಗುವೆನು" ಎಂದು
ಇಲ್ಲಿ ದೇವರು ಸಹ ಮಧ್ಯರಾತ್ರಿಯಲ್ಲಿಯೇ ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. ಆತನು ಮಧ್ಯರಾತ್ರಿಯಲ್ಲಿಯೇ ಐಗುಪ್ತಕ್ಕೆ ನ್ಯಾಯ ತೀರಿಸಿದನು.
ಮಧ್ಯರಾತ್ರಿಯಲ್ಲಿಯೇ ಶತ್ರು ಕನಸುಗಳ ಮೂಲಕ ಕೊಲ್ಲುತ್ತಾನೆ ಅಥವಾ ಜನರ ದೇಹದಲ್ಲಿ ರೋಗಗಳನ್ನು ಬಿತ್ತುತ್ತಾನೆ
ನೀವು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವಂತೆಯೂ ಇಲ್ಲವೇ ತಿನ್ನುತ್ತಲೇ ಇರುವಂತೆಯೋ ಬೀಳುವ ಕನಸುಗಳ ಮೂಲಕ ಮಧ್ಯ ರಾತ್ರಿಯ ದಾಳಿಗಳು ಉಂಟಾಗುತ್ತವೆ. ಇವು ಆತ್ಮಿಕ ದಾಳಿಯನ್ನು ಸೂಚಿಸುತ್ತದೆ ಹಾಗಾಗಿ ನೀವು ನಿಮ್ಮ ಜೀವಿತಕ್ಕೂ ಕುಟುಂಬಕ್ಕೂ ಮತ್ತು ಮಕ್ಕಳಿಗೂ ವಿರೋಧವಾಗಿ ಚಟುವಟಿಕೆ ನಡೆಸುವ ದುಷ್ಟನ ಕಾರ್ಯಗಳನ್ನು ನಾಶಪಡಿಸಲು ಪ್ರಾರ್ಥಿಸಿ ಹೋರಾಡಿ ಇದರಿಂದ ಬಿಡುಗಡೆ ಹೊಂದುಕೊಳ್ಳುವ ಕಡೆಗೆ ನೀವು ನಿಮ್ಮ ಗಮನವನ್ನು ಹರಿಸಬೇಕೆಂದು ನಾನು ನಿಮಗೆ ಕರೆ ನೀಡುತ್ತೇನೆ.
ಕೀರ್ತನೆಗಳು 119:62 ಹೇಳುತ್ತದೆ
" ದೇವರೇ,ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡಲು ಮಧ್ಯರಾತ್ರಿಯಲ್ಲಿ ಏಳುವೆನು."ಎಂದು
ಇಲ್ಲಿ ಮಧ್ಯರಾತ್ರಿಯ ಬಲವೇನು ಎಂಬುದನ್ನು ಎಂಬುದನ್ನು ಕೀರ್ತನೆಗಾರನು ಅರ್ಥಮಾಡಿಕೊಂಡಿದ್ದನು. ಹಾಗಾಗಿ ನೀವು ದೇವರನ್ನು ಸ್ತುತಿಸಲು ಆರಾಧಿಸಲು ದೇವರಿಗೆ ಕೃತಜ್ಞತೆ ಸಲ್ಲಿಸಲು ಮಧ್ಯರಾತ್ರಿಯಲ್ಲಿ ಏಳಬಹುದು.ಅಪೋಸ್ತಲರ ಕೃತ್ಯಗಳು 16:25-26 ನಮಗೆ ಹೇಳುವುದೇನೆಂದರೆ, ಪೌಲ ಸೀಲರು ಮಧ್ಯರಾತ್ರಿಯಲ್ಲಿ ಹಾಡುತ್ತಾ, ದೇವರನ್ನು ಸ್ತುತಿಸುತ್ತಿದ್ದರು. ಅದರ ಫಲವಾಗಿ ಅವರು ಸೆರೆಮನೆಯಿಂದ ಬಿಡುಗಡೆ ಹೊಂದಿದರು ಎಂದು.
ನೀವು ಈವರೆಗೂ ಮಧ್ಯರಾತ್ರಿಯಲ್ಲಿ ಎದ್ದು ಪ್ರಾರ್ಥಿಸದಿದ್ದರೆ ನೀವು ಅದನ್ನು ಇಂದಿನಿಂದ ಆರಂಭಿಸಿರಿ ಎಂದು ನಿಮ್ಮನ್ನು ನಾನು ಉತ್ತೇಜಿಸುತ್ತೇನೆ.ನಿಮ್ಮ ಪ್ರಾರ್ಥನೆಯು 30 ನಿಮಿಷಗಳದ್ದಾಗಿರಬಹುದು ಇಲ್ಲವೇ 15 ನಿಮಿಷಗಳದ್ದಾಗಿರಬಹುದು ಅದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟದ್ದು.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1.ಮಧ್ಯರಾತ್ರಿಯಲ್ಲಿ ನನ್ನ ವಿರುದ್ಧವಾಗಿ ಏಳುವ ಪ್ರತಿಯೊಂದು ಬಾಣಗಳು ಯೇಸು ನಾಮದಲ್ಲಿ ಸುಟ್ಟು ಬೂದಿಯಾಗಲಿ. (ಕೀರ್ತನೆಗಳು 91:5)
2. ನನ್ನ ಗೌರವದ ಮೇಲೆ ದಾಳಿ ಮಾಡುವ ಎಲ್ಲಾ ಮಧ್ಯರಾತ್ರಿ ಬಲಗಳು ಯೇಸು ನಾಮದಲ್ಲಿ ಲಯವಾಗಿ ಹೋಗಲಿ (ವಿಮೋಚನ ಕಾಂಡ 12 :29).
3. ನನ್ನನ್ನು ಕೊಲ್ಲಲು ರೂಪಿಸಿರುವ ಎಲ್ಲಾ ಕೆಡುಕನ ಯೋಜನೆಗಳು ಯೇಸು ನಾಮದಲ್ಲಿ ನಿಷ್ಫಲವಾಗಲಿ. ಯೇಸು ನಾಮದಲ್ಲಿ ನಾನು ಸಾಯುವುದಿಲ್ಲ. (ಕೀರ್ತನೆಗಳು 118:17)
4. ನನ್ನ ದೇಹದಲ್ಲಿ ಬಿತ್ತಲಾಗಿರುವ ಯಾವುದೇ ಅನಾರೋಗ್ಯದ ಬೀಜವಾಗಲಿ ಯೇಸು ನಾಮದಲ್ಲಿ ಪವಿತ್ರಾತ್ಮನ ಅಗ್ನಿಯು ಅದನ್ನು ಸುಟ್ಟು ಬೂದಿ ಮಾಡಲಿ.(1ಕೊರಿಯಂತೆ 3:16-17)
5.ಕನಸುಗಳ ಮೂಲಕ ನನ್ನ ದೇಹದ ಮೇಲೆ ಯೋಜಿಸಿರುವ ಎಲ್ಲಾ ವ್ಯಾಧಿಗಳು ಯೇಸು ನಾಮದಲ್ಲಿ ಸುಟ್ಟು ಬೂದಿ ಆಗಲಿ.(ಯೆರೆಮಿಯ 17:14)
6. ದೇವರ ಬಲವೇ, ನನ್ನನ್ನು ನನ್ನ ಕುಟುಂಬವನ್ನು ಗುರಿ ಮಾಡಿಟ್ಟುಕೊಂಡಿರುವ ಪ್ರತಿಯೊಂದು ಅಂಧಕಾರದ ಬಲದಿಂದ ಯೇಸು ನಾಮದಲ್ಲಿ ನನ್ನನ್ನು ಬಿಡಿಸು. (2ತಿಮೋತಿ 4:18)
7.ಪರಲೋಕದ ತಂದೆಯಿಂದ ನನ್ನೊಳಗೆ ಬಿತ್ತಲ್ಪಡದಂತಹ ಪ್ರತಿಯೊಂದು ಯೇಸು ನಾಮದಲ್ಲಿ ನಿರ್ಮೂಲವಾಗಲಿ ನಾಶವಾಗಿ ಹೋಗಲಿ (ಮತ್ತಾಯ 15:13)
8. ಓ ಕರ್ತನೇ,ಮಧ್ಯರಾತ್ರಿಯಲ್ಲಿ ಎದ್ದು ನಿನ್ನನ್ನು ಸ್ತುತಿಸುವಂತೆಯೂ ಆರಾಧಿಸುವಂತೆಯೂ ಕೃಪೆಯನ್ನು ಯೇಸು ನಾಮದಲ್ಲಿ ನನಗ ಅನುಗ್ರಹಿಸು (ಅಪೋಸ್ತಲರ ಕೃತ್ಯಗಳು 16:25)
9. ನಾನು ಮಲಗಿರುವಾಗ ಮಧ್ಯರಾತ್ರಿಯಲ್ಲಿ ನನ್ನ ಆತ್ಮೀಕ ಮನುಷ್ಯನನ್ನು ಗುರಿ ಮಾಡುವ ಸೈತಾನನ ಎಲ್ಲಾ ಬಲವನ್ನು ಯೇಸು ನಾಮದಲ್ಲಿ ಜಯಿಸಿದ್ದೇನೆ. (ಲೂಕ 10:19)
10.ದೇವರ ಅಗ್ನಿಯೇ, ನನ್ನ ಪ್ರಾಣಾತ್ಮ ಶರೀರಗಳಲ್ಲಿ ಹರಿದು ಬನ್ನಿ ರಾತ್ರಿ ವೇಳೆಯಲ್ಲಿ ಎದ್ದು ನಾನು ಪ್ರಾರ್ಥಿಸುವಂತೆ ನನ್ನನ್ನು ಯೇಸು ನಾಮದಲ್ಲಿ ಬಲಗೊಳಿಸಿ, ನಾನು ಮಲಗಿರುವಾಗ ನನ್ನನ್ನು ಮತ್ತು ನನ್ನ ಪ್ರಿಯರನ್ನು ಯೇಸುನಾಮದಲ್ಲಿ ನಮ್ಮನ್ನು ರಕ್ಷಿಸಿ ಕಾಪಾಡಿ (1ಥೆಸಲೋನಿಕ 5:23)
Join our WhatsApp Channel
Most Read
● ಕೊರತೆಯಿಲ್ಲ● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ಅಪ್ಪನ ಮಗಳು - ಅಕ್ಷಾ
● ಬೀಜದಲ್ಲಿರುವ ಶಕ್ತಿ -3
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು