ಅನುದಿನದ ಮನ್ನಾ
ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Wednesday, 17th of January 2024
0
0
410
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ರೋಗಗಳ ಮತ್ತು ವ್ಯಾದಿಗಳ ವಿರುದ್ಧವಾಗಿ ಪ್ರಾರ್ಥನೆ.
" ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. [15] ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು."(ಯಾಕೋಬನು 5:14-15).
ರೋಗಗಳು ಮತ್ತು ವ್ಯಾಧಿಗಳು ತಮ್ಮ ಜೀವಿತದಲ್ಲಿ ಇರಲಿ ಎಂದು ಯಾರೂ ಸಹ ಬಯಸದ ಕೆಟ್ಟ ಸಂಗತಿಗಳಾಗಿವೆ. ದುರದೃಷ್ಟವಶಾತ್ ಎಲ್ಲರ ಜೀವಿತದಲ್ಲಿ ಇದು ಬರುವಂತದ್ದಾಗಿದೆ. ಆದರೆ ಅವಿಶ್ವಾಸಿಗಳಿಗೆ ಯಾವುದೇ ನಿರೀಕ್ಷೆ ಇರುವುದಿಲ್ಲ. ಏಕೆ? ಅವಿಶ್ವಾಸಿಯಾದಂತಹ ವ್ಯಕ್ತಿಗಳು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾ ತಮ್ಮ ರೋಗಗಳನ್ನು ವಾಸಿ ಮಾಡಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.ಆದರೆ ವಿಶ್ವಾಸಿಗಳಿಗಾದರೂ ಒಂದು ನಿರೀಕ್ಷೆ ಇದೆ. ಏಕೆಂದರೆ ಕ್ರಿಸ್ತನೊಂದಿಗೆ ಅವರಿಗೆ ಇರುವ ಒಡಂಬಡಿಕೆ ಪ್ರಕಾರ ಯಾವ ವ್ಯಾಧಿಗಳು ಅವರಿಗೆ ತಟ್ಟಬಾರದು. ಆದರೆ ಪರಿಸ್ಥಿತಿಗಳಿಗನುಗುಣವಾಗಿ ಸೈತಾನನು ಪ್ರವಾಹೊಪಾದಿಯಲ್ಲಿ ನಿಮ್ಮ ಮೇಲೆ ದಾಳಿ ಮಾಡುತ್ತಾ ರೋಗಗಳನ್ನು ತಂದು ಹಾಕುತ್ತಾನೆ. ನೀವಾದರೂ ದೇವರ ವಾಕ್ಯವನ್ನು ಹಿಡಿದು ಅವನನ್ನು ಪ್ರತಿರೋಧಿಸಬೇಕು.
ಸೈತಾನನನ್ನು ಎದುರಿಸಲು ನಿಮಗೆ ಹಕ್ಕಿದೆ. (ಯಾಕೋಬ 4:7). ರೋಗಗಳು ವ್ಯಾಧಿಗಳು ನಿಮಗೆ ಉಂಟಾಗಬೇಕೆಂಬುದು ದೇವರ ಚಿತ್ತವಲ್ಲ. ನೀವು ಅದನ್ನು ನಿರಾಕರಿಸಬೇಕು,ಪ್ರತಿರೋಧಿಸಬೇಕು ಮತ್ತು ಅವುಗಳನ್ನು ನಾಶಪಡಿಸಬೇಕು.
ರೋಗಗಳು ಮತ್ತು ವ್ಯಾಧಿಗಳು ನಿಮಗೆ ಒಂದು ರೀತಿಯ ನಾಚಿಕೆಯನ್ನು ತಂದೊಡ್ದುತ್ತದೆ ರಕ್ತಕುಸುಮ ರೋಗಿಯಾಗಿದ್ದ ಸ್ತ್ರೀಯು ಬಾದೆ ಪಡುವವಳಾಗಿದ್ದಳು. ಜೊತೆಗೆ ಆಕೆಯು ನಾಚಿಕೆಗೆ ಈಡಾದವಳಾಗಿದ್ದಳು. ಆಕೆಯು ತಲೆತಗ್ಗಿಸಿಕೊಂಡಿದ್ದಳು.(ಲೂಕ 8:43:48). ಏಕೆಂದರೆ ಆಕೆಗೆ ರಕ್ತಸ್ರಾವ ಆಗುತ್ತಲೇ ಇದ್ದದರಿಂದ ಆಕೆಯು ಸಾರ್ವಜನಿಕ ಪ್ರದೇಶಗಳಲ್ಲಿ ಮುಕ್ತವಾಗಿ ಓಡಾಡುವ ಹಾಗೆ ಇರಲಿಲ್ಲ.
ರೋಗಗಳು ಮತ್ತು ವ್ಯಾಧಿಗಳು ಜನರನ್ನು ಉದ್ದಾರವಾಗದಂತೆ ಅವರ ಗತಿಯನ್ನು ಸೀಮಿತಗೊಳಿಸುತ್ತದೆ. ಕೆಲವರನ್ನು ನೋಡುವಾಗ ದೀರ್ಘಕಾಲಿಕ ರೋಗಗಳಿಗೆ ಅವರ ತುತ್ತಾಗಿದ್ದರೂ ಅವರು ಬದುಕಲು ಪಡುವ ಪ್ರಯಾಸವನ್ನು ನೋಡುವುದು ನಿಜಕ್ಕೂ ಕಷ್ಟಕರ. ಏಕೆಂದರೆ ರೋಗಗಳು ವ್ಯಕ್ತಿಯನ್ನು ನೆಲಕ್ಕೆ ದೊಬ್ಬಿ ಬಿಡುತ್ತದೆ. ಇದರಿಂದಾಗಿ ಸೈತಾನನು ಜನರು ಉದ್ದಾರವಾಗದಂತೆ ತಡೆಯಲು ರೋಗಗಳನ್ನು ವ್ಯಾಧಿಗಳನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡು ಭಾದಿಸುತ್ತಲೇ ಇರುತ್ತಾನೆ. ಸಾಧ್ಯವಾದರೆ ಅಂತ ವ್ಯಕ್ತಿಗಳನ್ನು ಅವರ ಆಯಸ್ಸಿಗೆ ಮೊದಲೇ ಸಾಯಿಸಲು ಯತ್ನಿಸುತ್ತಾನೆ.
ಆದ್ದರಿಂದ ನೀವು ಆತ್ಮದಲ್ಲಿ ರೋಷ ಉಳ್ಳವರಾಗಿರಬೇಕೆಂದು ನಾನು ಬಯಸುತ್ತೇನೆ.ಇಂದಿನ ದಿನವು ನಿಮ್ಮ ದೇಹಗಳಲ್ಲಿ ಅಡಗಿ ಕೂತಿರುವ ಪ್ರತಿಯೊಂದು ರೋಗಗಳನ್ನು ವ್ಯಾಧಿಗಳನ್ನು ನಾಶ ಮಾಡಲೆಂದು ಪ್ರಾರ್ಥಿಸುವ ದಿನವಾಗಿದೆ. ಕೆಲವೊಮ್ಮೆ ಜನರಿಗೆ ತಮ್ಮ ದೇಹದಲ್ಲಿ ಸೈತಾನನು ರೋಗಗಳನ್ನು ವ್ಯಾದಿಗಳನ್ನು ತಂದು ಹಾಕುವ ಯೋಜನೆ ಮಾಡಿದ್ದಾನೆ ಎಂಬುದೇ ತಿಳಿದಿರುವುದಿಲ್ಲ. ಈ ಕಾರ್ಯಗಳು ಮೊದಲು ಆತ್ಮಿಕ ಆಯಾಮದಲ್ಲಿ ರೂಪುಗೊಳ್ಳುತ್ತವೆ. ಆದ್ದರಿಂದಲೇ ಕೆಲವರಿಗೆ ಕನಸುಗಳು ಬೀಳುತ್ತವೆ ಆದರೆ ಅವು ಒಂದು ವರ್ಷವೋ ಎರಡು ವರ್ಷವೋ ಕಳೆದ ನಂತರ ನಿಜ ಜೀವನದಲ್ಲಿ ಜರಗುತ್ತವೆ. ಈ ಎಲ್ಲಾ ಕಾರ್ಯಗಳು ಪ್ರಪ್ರಥಮವಾಗಿ ಆತ್ಮಿಕ ಆಯಾಮದಲ್ಲಿ ಯೋಜನೆ ಗೊಂಡಿರುತ್ತದೆ ಆದರೆ ಭೌತಿಕ ಆಯಾಮದಲ್ಲಿ ಜರುಗಲು ಸಮಯ ತೆಗೆದುಕೊಳ್ಳುತ್ತದೆ
ಹೀಗಿರುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ನಾಟಲ್ಪಟ್ಟಿದೆಯೋ ಅದನ್ನು ನಾಶಪಡಿಸಲು ನೀವಿನ್ನು ಆರೋಗ್ಯದಿಂದ ಇರುವಾಗಲೇ ಅದುನಾಶವಾಗಲೆಂದು ಪ್ರಾರ್ಥಿಸಬೇಕು. ಈಗಲೇ ಸುಸಮಯವಾಗಿದೆ. ಭೌತಿಕ ಆಯಾಮದಲ್ಲಿ ಆ ರೋಗಗಳು ವ್ಯಾಧಿಗಳು ನಿಮ್ಮ ದೇಹದಲ್ಲಿ ಬರುವವರೆಗೂ ಕಾಯುತ್ತಾ ಕುಳಿತಿರಬೇಡಿರಿ.
"ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವದಷ್ಟೆ."(ಅಪೊಸ್ತಲರ ಕೃತ್ಯಗಳು10:38).
ಸೈತಾನನು ಜನರನ್ನು ರೋಗಗಳಿಂದಲೂ ವ್ಯಾಧಿಗಳಿಂದಲೂ ಎದುರಿಸುತ್ತಾನೆ. ಈ ಕಾರಣದಿಂದಲೇ ದೇವ ಕುಮಾರನಾದ ಯೇಸುಕ್ರಿಸ್ತನು ಸೈತಾನನ ಕಾರ್ಯಗಳನ್ನು ನಾಶಮಾಡಲು ಪ್ರತ್ಯಕ್ಷನಾದನು.(1ಯೋಹಾನ 3:8).ಸೈತಾನನ ಆ ಕಾರ್ಯಗಳಾವುವು? ರೋಗಗಳು ಮತ್ತು ವ್ಯಾಧಿಗಳು ಸಹ ಆ ಕಾರ್ಯಗಳ ಒಂದು ಭಾಗವೇ. ಯೇಸು ಸ್ವಾಮಿಯು ಭಾದೆ ಪಡುತ್ತಿರುವವರೆಲ್ಲರನ್ನು ವಾಸಿ ಮಾಡುತ್ತಾ ಇದ್ದನು.
"ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. [24] ಆತನ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹಬ್ಬಿದ್ದರಿಂದ ಮೈಯಲ್ಲಿ ನೆಟ್ಟಗಿಲ್ಲದವರನ್ನು, ಅಂದರೆ ತರತರದ ರೋಗಬಾಧೆಗಳಿಂದ ಕಷ್ಟಪಡುವವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು."(ಮತ್ತಾಯ 4:23-24).
ಇಂದು ಜನರು ಅನೇಕ ವಿಧವಾಗಿ ಬಾಧಿಸಲ್ಪಡುತ್ತಿದ್ದಾರೆ ಅನೇಕ ಜನರ ಆರೋಗ್ಯವು ದಾಳಿಗೆ ಒಳಗಾಗಿದೆ. ಅನೇಕರು ಅನೇಕ ವಿಧವಾದ ಆತ್ಮಿಕ ದಾಳಿಗೆ ಈಡಾಗಿದ್ದಾರೆ. ಯೇಸುವಿನ ಕಾಲದಲ್ಲಿ ಯೇಸು ಸ್ವಾಮಿಯು ಅವರೆಲ್ಲರನ್ನೂ ಗುಣಪಡಿಸಿದನು.ಯೇಸುವಿನ ಬಳಿ ಬರುವ ಜನರನ್ನು ವೈದ್ಯರು ಗುಣಪಡಿಸಬಹುದಾಗಿತ್ತು. ಆದರೆ ನಾನು ಖಂಡಿತವಾಗಿ ಹೇಳುವುದೇನೆಂದರೆ ಯೇಸುವಿನ ಬಳಿ ಅವರುಗಳು ಬರುವ ಮೊದಲು ಖಂಡಿತವಾಗಿಯೂ ಆ ವೈದ್ಯರುಗಳನ್ನು ಆಸ್ಪತ್ರೆಗಳಲ್ಲಿ ಅವರು ಭೇಟಿ ಮಾಡಿಯೇ ಇರುತ್ತಾರೆ. ಆದರೂ ಅವರು ಗುಣಕಾಣದ ಕಾರಣ ಯೇಸುವಿನ ಬಳಿಗೆ ಬಂದಿರುತ್ತಾರೆ.ಏಕೆಂದರೆ ವೈದ್ಯಕೀಯ ವಿವರಣೆಗೂ ಮೀರಿದಂತ ಕೆಲವು ರೋಗಗಳಿವೆ.
ಶತ್ರುವಾದ ಸೈತಾನನು ಯಾರನ್ನು ನುಂಗಲಿ ಎಂದು ತಿರುಗಾಡುತ್ತಿರುತ್ತಾನೆ. ಸ್ವಲ್ಪ ಸ್ಥಳಾವಕಾಶ ಸಿಕ್ಕರೆ ಸಾಕು ಅವನು ರೋಗಗಳ ಮತ್ತು ವ್ಯಾಧಿಗಳ ಮೂಲಕ ದಾಳಿ ಮಾಡಿಬಿಡುತ್ತಾನೆ ಆದುದರಿಂದಲೇ ನಾನಿಂದು ಅಂತಹ ಯಾವುದೇ ಸ್ಥಳಾವಕಾಶ ಇದ್ದರೂ ಪ್ರಾರ್ಥನೆಯಲ್ಲಿ ಅವುಗಳನ್ನೆಲ್ಲವನ್ನು ಮುಚ್ಚಬೇಕೆಂದು ನೀವು ಪ್ರಾರ್ಥಿಸಬೇಕೆಂದು ಬಯಸುತ್ತೇನೆ
ರೋಗಗಳು ಮತ್ತು ವ್ಯಾಧಿಗಳು ಉಂಟಾಗಲು ಕಾರಣಗಳೇನು?
1.ಪಾಪ : ಯೇಸು ಸ್ವಾಮಿಯು ಒಬ್ಬ ವ್ಯಕ್ತಿಯನ್ನು ಗುಣಪಡಿಸಿದಾಗ ಅವನಿಗೆ ಆತನು" ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪಮಾಡಬೇಡ; ನಿನಗೆ ಹೆಚ್ಚಿನ ಕೇಡು ಬಂದೀತು ಅಂದನು."(ಯೋಹಾನ 5:14). ಪಾಪವು ಸೈತಾನನನ್ನು, ದುರಾತ್ಮಗಳನ್ನು, ರೋಗಗಳನ್ನು ಜನರ ಜೀವಿತದಲ್ಲಿ ಬರುವಂತೆ ಆಕರ್ಷಿಸುತ್ತದೆ.
2.ತಪ್ಪಾದ ಬಾಯಿಂದ ಮಾಡುವ ಅರಿಕೆಗಳು.
ಜೀವನ್ಮರಣಗಳು ನಾಲಿಗೆ ವಶದಲ್ಲಿದೆ ಆದ್ದರಿಂದ ನೀವು ತಪ್ಪಾದ ಮಾತುಗಳನ್ನು ಆಡಿದರೆ ತಪ್ಪಾದ ಆತ್ಮಗಳನ್ನೇ ಜೀವನದಲ್ಲಿ ಆಕರ್ಷಿಸುತ್ತೀರಿ. ಇದು ತದನಂತರದಲ್ಲಿ ರೋಗಗಳಿಗೂ ವ್ಯಾದಿಗಳಿಗೂ ನಡೆಸುತ್ತದೆ. (ಜ್ಞಾನೊಕ್ತಿ 18:21)
3. ಆತ್ಮೀಕ ದಾಳಿಗಳು: ಮಾಟ ಮಂತ್ರಗಳಿಂದಲೂ ಸಹ ರೋಗಗಳು ವ್ಯಾಧಿಗಳು ಉಂಟಾಗುತ್ತವೆ ಆದ್ದರಿಂದಲೇ ನಾವು ಪ್ರಾರ್ಥಿಸಿ ಅವುಗಳನ್ನು ನಾಶಪಡಿಸಲೇಬೇಕು.
4.ಅನೈತಿಕ ಲೈಂಗಿಕ ಸಂಬಂಧಗಳು. ಇಂದು ಕೆಲವು ಜನರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಮಲಗುವ ಲೈಂಗಿಕ ಸಂಬಂಧ ಹೊಂದುವ ಅನೈತಿಕ ಕಾರ್ಯಗಳಲ್ಲಿದ್ದಾರೆ. ಅವರು ತಮಗೆ ಏನು ಕೇಡು ಮಾಡಿಕೊಳ್ಳುತ್ತಿದ್ದಾರೆಂದು ಅವರಿಗೆ ತಿಳಿಯುತ್ತಿಲ್ಲ. ಅವರು ತಾವಾಗಿಯೇ ತಮ್ಮ ಮೇಲೆ ವಿವಿಧ ದುರಾತ್ಮಾಗಳು ವಿವಿಧ ರೀತಿಯಲ್ಲಿ ದಾಳಿ ಮಾಡಲು ಅವಕಾಶ ಮಾಡಿಕೊಡುತ್ತಿರುತ್ತಾರೆ. ಅದು ಈಗ ಅವರಿಗೆ ಸವಿಯಾದ ಅನುಭವ ನೀಡುತ್ತಿರಬಹುದು. ಆದರೆ ಆನಂತರದಲ್ಲಿ ನೋವು ತರುವಂತದ್ದಾಗಿದೆ. ಆದಾಮ ಹವ್ವರು ಏದೇನು ತೋಟದಲ್ಲಿ ಹಣ್ಣನ್ನು ತಿನ್ನುವಾಗ ಅದು ಕಹಿಯಾಗಿರಲಿಲ್ಲ. ಅವರು ಆ ಹಣ್ಣು ಕಹಿಯಾದದ್ದು ಎಂದು ದೂರಲೂ ಇಲ್ಲ. ಅದು ಅವರ ಬಾಯಿಗೆ ಸಿಹಿಯಾಗಿಯೇ ಇತ್ತು. ಆದರೆ ತದನಂತರದಲ್ಲಿ ಅವರನ್ನು ಅದು ನಿತ್ಯ ಖಂಡನೆಗೆ ನಡೆಸಿತು.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.
1.ಯೇಸುವಿನ ನಾಮದಲ್ಲಿ ನನ್ನ ದೇಹದಲ್ಲಿರುವ ಪ್ರತಿಯೊಂದು ರೋಗಗಳು ವ್ಯಾಧಿಗಳು ದುರಾತ್ಮಗಳನ್ನು ಯೇಸು ನಾಮದಲ್ಲಿ ನನ್ನ ಜೀವಿತದಿಂದ ಬೇರು ಸಮೇತ ಕಿತ್ತು ಹಾಕುತ್ತೇನೆ. (ಯೆಶಾಯ 53:5).
2.ಯೇಸುವಿನ ರಕ್ತವೇ, ನನ್ನ ದೇಹದಲ್ಲೆಲ್ಲಾ ಹರಿದು ನನ್ನ ದೇಹದ ರಕ್ತದಲ್ಲಿರುವ ಯಾವುದೇ ಕಲಬೆರಕೆಯನ್ನು ಮಲಿನತೆಯನ್ನು ಯೇಸುನಾಮದಲ್ಲಿ ಹೊರಗೆ ಹಾಕಿ. (1ಯೋಹಾನ 1:7).
3. ದೇವರ ಆಗ್ನಿಯೇ,ನನ್ನ ದೇಹದಲ್ಲಿ ಹರಿದು ನನ್ನ ಜೀವಿತದಲ್ಲಿರುವ ಪ್ರತಿಯೊಂದು ಅಂಧಕಾರದ ಸಂಚಯನಗಳನ್ನು ಯೇಸು ನಾಮದಲ್ಲಿ ನಾಶಪಡಿಸಿ (ಎಫಸ್ಸೆ 5:11).
4.ನಾನು ಸಾಯುವುದಿಲ್ಲ, ನಾನು ಜೀವದಿಂದಿದ್ದು ಜೇವಿತರ ದೇಶದಲ್ಲಿ ನನ್ನ ದೇವರ ಮಹಿಮೆಯನ್ನು ಯೇಸುನಾಮದಲ್ಲಿ ಸಾರುವೇನು. (ಕೀರ್ತನೆ 118:17).
5.ನನ್ನ ದೇಹದಲ್ಲಿ ನನ್ನ ವಿರೋಧವಾಗಿ ಯೋಜನೆಗೊಂಡು ನನ್ನಲ್ಲಿ ರೋಗಗಳನ್ನು ವ್ಯಾದಿಗಳನ್ನು ಉಂಟುಮಾಡಲು ಅವಿತು ಕುಳಿತಿರುವ ಏ ದುರಾತ್ಮವೇ ಯೇಸುನಾಮದಲ್ಲಿ ನಾಶವಾಗಿ ಹೋಗು. (ಲೂಕ 13:11-13)
6.ನಾನು ಯೇಸುನಾಮದಲ್ಲಿ ಸಾಯುವುದಿಲ್ಲ (ಧರ್ಮೋಪದೇಶಕಾಂಡ 30:19)
7. ಓ ಕರ್ತನೇ,ರೋಗಗಳಿಂದ ಬಳಲುತ್ತಿರುವವರನ್ನು ವಾಸಿ ಮಾಡುವಂತೆ ನಿನ್ನ ರಾಜ್ಯವನ್ನು ಭೂಲೋಕದಲ್ಲಿ ವಿಸ್ತರಿಸುವಂತೆ ಸ್ವಸ್ಥತೆ ಪಡಿಸುವ ವರವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. (ಮಾರ್ಕ 16:17-18)
8. ಓ ಕರ್ತನೇ ನನ್ನ ಆತ್ಮಿಕ ಮನುಷ್ಯನನ್ನು ಯೇಸು ನಾಮದಲ್ಲಿ ಬಲಪಡಿಸು. (ಎಫೆಸ್ಸೆ 3:16).
9.ನನಗೆ ವಿರೋಧವಾಗಿ ಹೂಡಲಾಗಿರುವ ರೋಗಗಳ ಬಾಣವೇ ಯೇಸು ನಾಮದಲ್ಲಿ ನಿನ್ನನ್ನು ಕಳುಹಿಸಿದವರ ಬಳಿಗೆ ಹಿಂದಿರುಗಿ ಹೋಗು. (ಕೀರ್ತನೆ 35:8)
10. ತಂದೆಯೇ, ನಿನ್ನ ಪರಿಶುದ್ಧವಾದ ರಕ್ತವನ್ನು ನನ್ನ ಜೀವಿತದ ಸುತ್ತಲೂ ಹಚ್ಚು ಅದು ಗುರಾಣಿಯಂತೆ ಯೇಸು ನಾಮದಲ್ಲಿ ನಮ್ಮನ್ನು ಕಾಯಲಿ. (ಕೀರ್ತನೆಗಳು 91:4).
Join our WhatsApp Channel
Most Read
● ಬೇರಿನೊಂದಿಗೆ ವ್ಯವಹರಿಸುವುದು● ದೇವರು ಹೇಗೆ ಒದಗಿಸುತ್ತಾನೆ #2
● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸರ್ವಬೀಗದ ಕೈ
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ
ಅನಿಸಿಕೆಗಳು