ಅನುದಿನದ ಮನ್ನಾ
ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
Wednesday, 24th of January 2024
0
0
438
Categories :
ದೇವದೂತರು (Angels)
"ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ."(ಯೋಬನು 22:27).
ನೀವು ಯಥಾರ್ಥವಾಗಿ ದೇವರಿಗೆ ಪ್ರಾರ್ಥನೆಯಲ್ಲಿ ಮೊರೆ ಇಡುವುದಾದರೆ ನಿಮ್ಮ ಕಷ್ಟಕಾಲದಲ್ಲಿ ಆತನು ನಿಮಗೆ ನಿಜವಾಗಿಯೂ ಸಹಾಯ ಮಾಡುವನು. ನಿಮ್ಮ ಜೀವಿತದಲ್ಲಿ ನಿಜವಾಗಿ ಒಂದು ತಿರುವು ಉಂಟಾಗುತ್ತದೆ. ಕೆಲವು ಜನರಿದ್ದಾರೆ ಅವರು ಸೂರ್ಯನ ಕೆಳಗೆ ಈ ಭೂಮಿಯ ಮೇಲೆ ಎಲ್ಲವನ್ನು ಮಾಡುತ್ತಾರೆ ಆದರೆ ಪ್ರಾರ್ಥನೆ ಒಂದನ್ನು ಮಾತ್ರ ಮಾಡುವುದಿಲ್ಲ. ನೀವು ಪ್ರಾರ್ಥಿಸುವಾಗ ದೇವರು ಕೇವಲ ಕೇಳುವ ತನ್ನ ಕಿವಿಗಳನ್ನು ಅಷ್ಟೇ ಅಲ್ಲದೆ ಅದ್ಭುತವಾಗಿ ಮಾರ್ಗದರ್ಶನ ನೀಡುವ ತನ್ನ ಕರಗಳನ್ನು ಸಹ ನಿಮಗಾಗಿ ತೆರೆಯುತ್ತಾನೆ. ಈ ಸಮಯವು ನೀವು ಮನಪೂರ್ವಕವಾಗಿ ಪ್ರಾರ್ಥನೆಯನ್ನು ಆರಂಭಿಸ ಬೇಕಾಗಿರುವ ಸಮಯವಾಗಿದೆ.
"ಯಾವದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವದು, ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವದು."(ಯೋಬನು 22:28)
ನಾವು ಮಾತನಾಡುವ ನಮ್ಮ ಬಾಯ ಮಾತುಗಳೇ ನಮ್ಮ ಜೀವಿತದ ಮೇಲೆಯೂ ಮತ್ತು ನಮಗೆ ಸಂಬಂಧಿಸಿದ ನಮ್ಮ ಕಣ್ಣಿಗೆ ಕಾಣದ ಆತ್ಮಿಕ ಲೋಕದ ಮೇಲೆಯೂ ಪ್ರಭಾವ ಬೀರುವಂತದ್ದಾಗಿದೆ. ಜ್ಞಾನೋಕ್ತಿ 18:21 ರಲ್ಲಿ ನಾವು ಹೀಗೆ ಓದುತ್ತೇವೆ "ಜೀವನ್ಮರಣಗಳು ನಾಲಿಗೆಯ ವಶ ವಚನಪ್ರಿಯರು ಅದರ ಫಲವನ್ನು ಅನುಭವಿಸುವರು"ಎಂದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಮಾತನಾಡುವ ಮಾತುಗಳಿಂದಲೇ ಪರಿಣಾಮಗಳು ಉಂಟಾಗುತ್ತವೆ ಎಂದು. ಫ್ಯಾಶನ್ ಭಾಷಾಂತರವು ಹೀಗೆ ಹೇಳುತ್ತದೆ "ನಿಮ್ಮ ಮಾತುಗಳು ಕೊಲ್ಲುವಷ್ಟು ಜೀವ ತುಂಬವಷ್ಟು ಶಕ್ತಿಶಾಲಿಯಾಗಿವೆ". ಎಂದು ಇನ್ನೂ ಹೆಚ್ಚಾಗಿ ಹೊಸ ಒಡಂಬಡಿಕೆಯಲ್ಲಿ 1ಪೇತ್ರ 3:10ರಲ್ಲಿ ಹೀಗೆ ಓದುತ್ತೇವೆ " ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವುದಕ್ಕೆ ಇಷ್ಟ ಉಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನೂ ಬಿಗಿ ಹಿಡಿಯಲಿ" ಎಂದು ನಮ್ಮ ಜೀವನದ ಗುಣಮಟ್ಟ ಹೇಗಿದೆ ಮತ್ತು ನಮ್ಮ ಜೀವಿತದ ಅವಧಿಯು ಎಷ್ಟಿದೆ ಎಂಬುದು ನಮ್ಮ ಬಾಯಿ ಮಾತುಗಳ ಮೇಲೆಯೇ ಆಧಾರಗೊಂಡಿದೆ.
ಆಜ್ಞೆಗಳನ್ನು ಹೊರಡಿಸುವಂಥದ್ದು ಅರಸರಿಗಿರುವ ಒಂದು ಸವಲತ್ತಾಗಿದೆ! ಅರಸನು ಒಂದು ಆಜ್ಞೆಯನ್ನು ಹೊರಡಿಸಿದರೆ ಆ ದೇಶದಲ್ಲಿ ಅದು ಒಂದು ಕಾನೂನಿನ ನಿಯಮವಾಗಿ ಬಿಡುತ್ತದೆ. ಕ್ರಿಸ್ತನಲ್ಲಿ ನಾವು ಪರಲೋಕದಲ್ಲಿ ಆಸೀನರಾಗಿರುವ ಅರಸರೂ, ಯಾಜಕರೂ ಆಗಿದ್ದೇವೆ ಹಾಗಾಗಿ ನಾವು ಸಹ ದೇವರ ವಾಕ್ಯಕ್ಕೆ ಅನುಗುಣವಾಗಿ ಮತ್ತು ದೇವರ ಚಿತ್ತಕ್ಕನುಸಾರವಾಗಿ ಆಜ್ಞೆಯನ್ನು ನೀಡಬಹುದು. ನಾವು ಹಾಗೆ ಮಾಡಿದಾಗ ಆತ್ಮಿಕ ಲೋಕದಲ್ಲಿಯೂ ಆ ನಿಯಮವು ಸ್ಥಾಪಿಸಲ್ಪಡುತ್ತದೆ ಮತ್ತು ನಾವು ಅಜ್ಞಾಪಿಸಿದಂತೆಯೇ ಅದು ನೆರವೇರಿಸಲ್ಪಡುತ್ತದೆ
ಒಮ್ಮೆ ಸಭೆಯ ಸೇವಾ ಕಾರ್ಯ ನಡೆಯುವಾಗ ಒಬ್ಬ ಮಹಿಳೆಗೆ ಆಕೆಯ ಸುಮಾರು ಐದು ವರ್ಷದ ಮಗನು ಕಾಣೆಯಾಗಿದ್ದಾನೆ ಎಂಬ ಕರೆ ಬಂತು. ನೆರೆಹೊರೆಯವರು ಕುಟುಂಬದವರು ಅಲ್ಲಿ ಇಲ್ಲಿ ಎಲ್ಲಾಕಡೆ ಆ ಮಗುವಿಗಾಗಿ ಹುಡುಕಲು ಆರಂಭಿಸಿದರು. ಅವರೆಲ್ಲರೂ ಅತ್ಯಂತ ಭೀಕರವಾಗಿ ಭಯಗ್ರಸ್ಥರಾಗಿದ್ದರು. ಆ ಮಗುವಿನ ತಾಯಿಯಂತೂ ಕಣ್ಣೀರನ್ನಿಡುತ್ತಲೇ ಇದ್ದಳು. ಆದರೆ ದೇವರನ್ನು ಆರಾಧಿಸುವುದನ್ನು ಮಾತ್ರ ಆಕೆ ಬಿಡಲಿಲ್ಲ. ಸಭೆಯ ಕೊನೆಯ ಸಮಯದಲ್ಲಿ ಆಕೆಯು ವೇದಿಕೆ ಬಳಿಗೆ ಓಡಿಬಂದು ತನ್ನ ಆತಂಕವನ್ನೆಲ್ಲಾ ತೋಡಿಕೊಂಡಳು. ಆ ಕ್ಷಣದಲ್ಲಿ ಪವಿತ್ರಾತ್ಮನ ಬಲವು ನನ್ನೊಳಗೆ ಹೊಯ್ದಾಡುವುದನ್ನು ಅನುಭವಿಸಿದೆನು ಮತ್ತು ಇಡೀ ಸಭೆಯು ಆಕೆಯ ಮಗುವು ಸುರಕ್ಷಿತವಾಗಿ ಹಿಂದಿರುಗಬೇಕೆಂದು ಎಲ್ಲರೂ ಏಕಮನಸ್ಸಿನಿಂದ ಘೋಷಿಸಿ ಎಂದು ಹೇಳಿದೆನು. ಇದಾಗಿ ಒಂದು ಗಂಟೆಯ ತರುವಾಯ ಆಕೆಯ ಮಗುವು ಸುರಕ್ಷಿತವಾಗಿ ಆಕೆಯ ಕೈ ಸೇರಿತು ಎಂಬ ಕರೆಯನ್ನು ನಾವು ಪಡೆದುಕೊಂಡೆವು. ಒಂದು ವಿಚಿತ್ರವಾದ ಸಂದರ್ಭದಲ್ಲಿ ಅವರು ಆ ಮಗುವನ್ನು ಕಂಡುಕೊಂಡರು.
ನಾವು ಆಜ್ಞಾಪಿಸಿದವಷ್ಟೇ ಅದು ಆಗಲೇ ಸ್ಥಾಪಿಸಲ್ಪಟ್ಟು ನೆರವೇರಿಸಲ್ಪಟ್ಟಿತು!
ಇತ್ತೀಚೆಗಷ್ಟೇ ನಾನು ಒಬ್ಬ ದೇವ ಮನುಷ್ಯರ ಸಾಕ್ಷಿಯನ್ನು ಕೇಳುತ್ತಿದ್ದೆನು. ಆ ದೇವಸೇವಕರಿಗೆ ಒಂದು ದರ್ಶನವಾಗಿತ್ತು ಆ ದರ್ಶನದಲ್ಲಿ ಅವರು ಸಾವಿರಾರು ದೇವದೂತ ಸೈನ್ಯವು ಕಡೆಯ ಕಾಲದ ಆತ್ಮಿಕ ಬೆಳೆಯನ್ನು ಕೊಯ್ಯಲು ಸಭೆಗೆ ಸಹಾಯ ಮಾಡಲು ಹಾಗೂ ದೇವರ ಮಹಿಮೆಯನ್ನು ಭೂಮಿಯ ಮೇಲೆ ಪ್ರಕಟಿಸಲು ಭೂಮಿಗೆ ಕಳುಹಿಸಲ್ಪಟ್ಟಿದ್ದನ್ನು ಕಂಡರು. ಆ ದೇವಸೇವಕರು ಆ ದರ್ಶನದಲ್ಲಿ ದೇವದೂತರ ಕೈಗಳಲ್ಲಿ ಬಿಲ್ಲು ಇದ್ದು ಆ ದೇವದೂತರ ಕೈಗಳಲ್ಲಿ ಬಾಣಗಳು ಇಲ್ಲದಿರುವುದನ್ನು ಗಮನಿಸಿದರು.
ಆಗ ಕರ್ತನು ಆ ದೇವಸೇವಕರಿಗೆ ಸಭೆಯಾಗಿ ನಾವು ದೇವರ ವಾಕ್ಯವನ್ನು ಮತ್ತು ಅಧಿಕಾರವನ್ನು ಘೋಷಿಸಬೇಕು ನಾವೇ ಈ ಬಾಣಗಳನ್ನು ದೇವದೂತರ ಕೈಗಳಲ್ಲಿರುವ ಬಿಲ್ಲಿಗೆ ಹೂಡಬೇಕು ಅದು ಹೋಗಿ ಭೂಮಿಯ ಮೇಲೆಲ್ಲಾ ಅಂತ್ಯ ದಿನಗಳಲ್ಲಿ ಉಜ್ಜೀವನವನ್ನು ಉಂಟು ಮಾಡಿ ಬೆಳೆಯನ್ನು ತರುತ್ತದೆ ಎಂದು ಹೇಳಿದ್ದನ್ನು ಕೇಳಿದರು. ಇಬ್ರಿಯ1:14 ಹೀಗೆ ಹೇಳುತ್ತದೆ ಕರ್ತನ ದೂತರು "ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವ ಸೇವೆಗೋಸ್ಕರ ಕಳಿಸಲ್ಪಡುವ ಊಳಿಗದ ಆತ್ಮಗಳಾಗಿವೆ" ಎಂದು. ಆದ್ದರಿಂದ ದೇವದೂತರ ಚಟುವಟಿಕೆಗಳು ನಾವು ಘೋಷಿಸುವ ವಾಕ್ಯದ ಮೂಲಕ ಸಕ್ರಿಯಗೊಳ್ಳುತ್ತವೆ.
ಮತ್ತ್ತೊಂದು ದೇವರ ವಾಕ್ಯವು ಸಹ ಇದನ್ನೇ ದೃಢಪಡಿಸುತ್ತದೆ ಅದಾವುದೆಂದರೆ ಮತ್ತಾಯ6:10ರಲ್ಲಿ ಯೇಸು ಸ್ವಾಮಿಯು ತನ್ನ ಶಿಷ್ಯರಿಗೆ ಪ್ರಾರ್ಥನೆಯನ್ನು ಕಲಿಸುವಾಗ "ಪರಲೋಕದ ತಂದೆಯೇ ನಿನ್ನ ರಾಜ್ಯವು ಬರಲಿ. ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವಂತೆ ಭೂಮಿಯ ಮೇಲೂ ನಿನ್ನ ಚಿತ್ತವೇ ನೆರವೇರಿಸಲ್ಪಡಲಿ. ಎಂದು. ಆದರೆ ಮೂಲ ಗ್ರೀಕ್ ಭಾಷೆಯಲ್ಲಿ ಇದು ಒಂದು ಘೋಷಣಾ ರೂಪದಲ್ಲಿ ಇದೆಯೇ ಹೊರತು ವಿನಂತಿಯ ರೂಪದಲ್ಲಿ ಇಲ್ಲ. ಇದನ್ನು ಈ ರೀತಿಯಾಗಿ ಓದಬೇಕು "ದೇವರ ರಾಜ್ಯವೇ ಬಾ ಪರಲೋಕದಲ್ಲಿ ದೇವರ ಚಿತ್ತವು ನೆರವೇರುವಂತೆ ಭೂಲೋಕದಲ್ಲೂ ನೆರವೇರಲಿ" ಎಂದು. ನಾವು ನಮ್ಮ ಆಜ್ಞಾ ಘೋಷಣೆಯ ಮೂಲಕ ದೇವರ ವಾಕ್ಯದ ಆಧಾರದಲ್ಲಿ ಪರಲೋಕವನ್ನು ಭೂಮಿಗೆ ತರಬಹುದು!
ನಮ್ಮ ಮಾತುಗಳು, ನಮ್ಮ ಅಜ್ಞಾ ಘೋಷಗಳು ಮತ್ತು ನಮ್ಮ ಬಾಯಿಯ ಅರಿಕೆಗಳು ನಾವು ನಮ್ಮ ಕಣ್ಣಿನಿಂದ ಏನನ್ನು ನೋಡುತ್ತಿದ್ದೇವೆಯೋ, ಏನನ್ನು ಕೇಳುತ್ತಿದ್ದೇವೆಯೋ, ಏನನ್ನು ಅನುಭವಿಸುತ್ತಿದ್ದೇವೆಯೋ ಅದರ ಮೇಲೆ ಆಧಾರ ಗೊಳ್ಳದೆ ದೇವರು ತನ್ನ ವಾಕ್ಯದಲ್ಲಿ ಏನನ್ನು ಹೇಳುತ್ತಾನೋ ಅದರ ಮೇಲೆ ಆಧಾರಗೊಂಡಿರಬೇಕಾದದ್ದು ಬಹು ಮುಖ್ಯವಾಗಿದೆ.
ಪ್ರಾರ್ಥನೆಗಳು
1. ಕರ್ತನೇ ನನ್ನ ಕುರುಬನು. ಯೇಸು ನಾಮದಲ್ಲಿ ನಾನು ನನ್ನ ಜೀವಿತದಲ್ಲಿ ಯಾವ ಒಳ್ಳೆಯದಕ್ಕೂ ಕೊರತೆ ಪಡುವುದಿಲ್ಲ. (ಕೀರ್ತನೆ 23:1).
2. ಕರ್ತನು ನಮ್ಮ ಕುಟುಂಬದ ಕುರುಬನಾಗಿದ್ದಾನೆ, ಯೇಸು ನಾಮದಲ್ಲಿ ನಮ್ಮ ಜೀವಿತದಲ್ಲಿ ಯಾವ ಒಳ್ಳೆಯದಕ್ಕೂ ನಮಗೆ ಕೊರತೆಯಾಗುವುದಿಲ್ಲ. (ಕೀರ್ತನೆ 23:1).
3. ನಾನು ಯೇಸುವಿನ ನಾಮದಲ್ಲಿ ತಲೆಯಾಗಿದ್ದೇನೆಯೇ ಹೊರತು ಬಾಲವಲ್ಲ. ನಾನು ಯೇಸುವಿನ ನಾಮದಲ್ಲಿ ಮೇಲಿರುವೇನೇ ಹೊರತು ಕೆಳಗಿರುವುದಿಲ್ಲ. (ಧರ್ಮೋಪದೇಶ ಕಾಂಡ 28:13).
4.ನನಗೆ ವಿರುದ್ಧವಾಗಿ ನನ್ನ ಶತ್ರುಗಳು ರೂಪಿಸಿದ ಸಂಚಿಗೆ ನನ್ನ ಶತ್ರುಗಳೇ ಯೇಸುನಾಮದಲ್ಲಿ ಸಿಕ್ಕಿಹಾಕಿಕೊಳ್ಳುವರು. (ಕೀರ್ತನೆ 7:14-15).
5.ನನ್ನ ಜೀವಮಾನದಲ್ಲೆಲ್ಲಾ ಯೇಸುನಾಮದಲ್ಲಿ ಒಬ್ಬನೂ ನನ್ನ ಮುಂದೆ ನಿಲ್ಲನು. ಮೋಶೆಯ ಸಂಗಡ ದೇವರಿದ್ದ ಹಾಗೆ ಯೆಹೋಶವನ ಸಂಗಡ ದೇವರು ಇದ್ದ ಹಾಗೆ ನನ್ನ ಸಂಗಡಲೂ ಯೇಸು ನಾಮದಲ್ಲಿ ಕರ್ತನು ಇರುವನು. (ಯೆಹೋಶುವ 1:5)
6.ನಿಶ್ಚಯವಾಗಿಯೂ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯು ಯೇಸುನಾಮದಲ್ಲಿ ನನ್ನನ್ನು ಹಿಂಬಾಲಿಸುವವು ನಾನು ಸದಾ ಕಾಲವು ಯಹೋವನ ಮಂದಿರದಲ್ಲಿ ಯೇಸುನಾಮದಲ್ಲಿ ವಾಸಿಸುವೆನು.(ಕೀರ್ತನೆ 23:6)
7.ನಾನು ಯೇಸುನಾಮದಲ್ಲಿ ದೇವಾಲಯದ ಸೊಗಸಾದ ಎಣ್ಣೆ ಮರದಂತಿರುವೆನು ದೇವರ ಕೃಪೆಯನ್ನು ಯುಗ ಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು. (ಕೀರ್ತನೆ 52:8)
8.ಬೇರೆಯವರು ಯಾವ ಜಾಗದಲ್ಲಿ ತಿರಸ್ಕರಿಸಲ್ಪಟ್ಟರೋ ಆ ಜಾಗದಲ್ಲಿಯೇ ಯೇಸು ನಾಮದಲ್ಲಿ ನಾನು ಅಂಗೀಕರಿಸಲ್ಪಟ್ಟು ಸನ್ಮಾನಿಸಲ್ಪಡುತ್ತೇನೆ. ಆಮೆನ್
Join our WhatsApp Channel
Most Read
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.● ಬೀಜದಲ್ಲಿರುವ ಶಕ್ತಿ -3
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ಉತ್ತಮವು ಅತ್ಯುತ್ತಮವಾದದಕ್ಕೆ ಶತೃ
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
ಅನಿಸಿಕೆಗಳು