ಅನುದಿನದ ಮನ್ನಾ
ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
Tuesday, 20th of February 2024
4
3
415
Categories :
ಶಿಷ್ಯತ್ವ (Discipleship)
ಪ್ರತಿಯೊಂದು ದಿನವು ನಿಮ್ಮ ಜೀವನದ ಸ್ನ್ಯಾಪ್ ಶಾಟ್ ಆಗಿದೆ. ನೀವು ಹೇಗೆ ನಿಮ್ಮ ದಿನವನ್ನು ಕಳೆಯುತ್ತೀರಿ, ನೀವು ಹೇಗೆ ಸಂಗತಿಗಳನ್ನು ನಿಭಾಯಿಸುತ್ತೀರಿ, ನೀವು ಎಂಥ ಜನರನ್ನು ಸಂದಿಸುತ್ತೀರಿ ಎಂಬುವಂತವುಗಳೇ ನಿಮ್ಮ ಮುಂದಿನ ಭವಿಷ್ಯ ಹೇಗೆ ರೂಪಿತವಾಗುತ್ತಿದೆ ಎಂಬುದನ್ನು ಬಯಲು ಪಡಿಸುತ್ತದೆ ನೀವು ಹೇಗೆ ನಿಮ್ಮ ದಿನವನ್ನು ಕಳೆಯುತ್ತಿರೋ ಅದರಂತೆ ನಿಮ್ಮ ಭವಿಷ್ಯ ಸೃಷ್ಟಿಸಲ್ಪಡುತ್ತದೆ
'ಪ್ರತಿನಿತ್ಯ'ದ ಮಹತ್ವವನ್ನು ದೇವರ ವಾಕ್ಯವೂ ಸಹ ಎತ್ತಿ ಹಿಡಿಯುತ್ತದೆ.
"ಇದಲ್ಲದೆ ಕರ್ತನಾದ ಯೇಸು ಎಲ್ಲರಿಗೂ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ." ಎಂದು ( ಲೂಕ 9:23)
ಯೇಸುವನ್ನು ಹಿಂಬಾಲಿಸುವಂಥದ್ದು ಸಾಪ್ತಹಿಕವಾಗಿಯೋ, ಮಾಸಿಕವಾಗಿಯೋ ಅಥವಾ ವಾರ್ಷಿಕವಾಗಿಯೋ ಅಲ್ಲ ಅದು ದಿನಾಲು ಮಾಡಬೇಕಾದ ಕಾರ್ಯವಾಗಿದೆ.
"ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ."(ಕೀರ್ತನೆಗಳು 96:2)
ಪ್ರತಿನಿತ್ಯವೂ ಎಂದು ಈ ಕೀರ್ತನೆ ಹೇಳುವುದನ್ನು ಗಮನಿಸಿರಿ. ಇಲ್ಲಿ ಪ್ರತಿನಿತ್ಯ ಎಂಬುದರ ಸರಳ ಅರ್ಥ ನಾವು ದಿನನಿತ್ಯವೂ ಕರ್ತನನ್ನು ಆರಾಧಿಸಬೇಕು (ಕರ್ತನನ್ನು ಕೀರ್ತಿಸಬೇಕು) ಎಂಬುದೇ ನಾವು ಪ್ರತಿದಿನವೂ ನಮ್ಮ ಜೀವಿತದಲ್ಲಿ ಆತನಿಗೆ ಸಾಕ್ಷಿಗಳಾಗಿ ಜೀವಿಸಬೇಕೇ ವಿನಃ ವಾರಕ್ಕೊ ತಿಂಗಳಿಗೋ ಅಲ್ಲ.
ಇಲ್ಲಿ ಯಾವುದೇ ರೀತಿಯ ಮುಖ್ಯವಲ್ಲದ ದಿನ ಅಥವಾ ವ್ಯರ್ಥವಾದ ದಿನ ಎಂಬುದಿಲ್ಲ. ಅದರಿಂದಲೇ ಸತ್ಯವೇದ ಹೇಳುತ್ತದೆ.. "ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ."ಎಂದು (ಕೀರ್ತನೆಗಳು 118:24)
ದೇವರು ನಮ್ಮನ್ನು ಅನುದಿನವೂ ನಾವು ಉಲ್ಲಾಸಿಸುವಂತೆಯೂ ಆನಂದವಾಗಿರುವಂತೆಯೂ ಒತ್ತಾಯ ಪಡಿಸುತ್ತಾನೆ. ನಮಗೆ ಆತನು ಇನ್ನೊಂದು ದಿನವನ್ನು ಕೊಟ್ಟಿದ್ದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸುವುದಾಗಲಿ ಉಲ್ಲಾಸಿಸುವುದಾಗಲಿ ಅದು ನಮಗೆ ಬಿಟ್ಟ ಆಯ್ಕೆಯಾಗಿದೆ.
ಆದುದರಿಂದ ನೋಡಿರಿ ನಿಮ್ಮ ಭವಿಷ್ಯದ ರಹಸ್ಯ ಅಡಗಿರುವಂಥದ್ದು ನಿಮ್ಮ ಪ್ರತಿನಿತ್ಯದ ದಿನಚರಿಯಲ್ಲಿಯೇ. ಒಬ್ಬರು ಹೀಗೆ ಹೇಳಿದ್ದಾರೆ "ನಿಮ್ಮ ದಿನನಿತ್ಯದ ದಿನಚರಿ ಯನ್ನು ನನಗೆ ತೋರಿಸಿರಿ ನಾನು ನಿಮಗೆ ನೀವು ಎಲ್ಲಿಗೆ ಹೋಗಲಿದ್ದೀರಿ ಎಂದು ಹೇಳುವೆನು" ಎಂದು. ಅನೇಕ ಮಂದಿ ಕೋಟ್ಯಾಧಿಪತಿಗಳಿಗೆ ಈ ರಹಸ್ಯವು ಗೊತ್ತುಂಟು ಮತ್ತು ಇಂದಿನ ದಿನವೇ ನೀವು ಸಹ ಈ ರಹಸ್ಯವನ್ನು ಅರಿತುಕೊಂಡು ಅಳವಡಿಸಿಕೊಳ್ಳಬೇಕಾದ ಅವಶ್ಯ ದಿನವಾಗಿದೆ.
"ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು."ಎಂದು ಕರ್ತನಾದ ಯೇಸುವು ಹೇಳುತ್ತಾನೆ (ಮತ್ತಾಯ 6:34)
ಅನೇಕರು ತಮ್ಮ ನಾಳೆಯ ದಿನಗಳು ಹೇಗೋ ಎಂದು ಚಿಂತೆಯಲ್ಲಿ ಇರುತ್ತಾರೆ. ಆದರೆ ಕರ್ತನಾದ ಯೇಸುಕ್ರಿಸ್ತನು ' ಈ ಹೊತ್ತಿನ ಮೇಲೆ ಮಾತ್ರ ಲಕ್ಷವಿಡುವಂತದ್ದೇ ಈ ಚಿಂತೆಯಿಂದ ಹೊರಬರಲು ಇರುವ ಮಾರ್ಗ ಎಂಬ ರಹಸ್ಯವನ್ನು ಪ್ರಕಟಿಸುತ್ತಾನೆ. ನಾಳೆ ಬರಬೇಕಾದಂತಹ ಫಸಲಿಗೆ ಇಂದು ಎಂಬುದೇ ಬೀಜವಾಗಿದೆ. ನೀವು ಒಬ್ಬ ವಿದ್ಯಾರ್ಥಿಯಾಗಿರಬಹುದು, ಕಚೇರಿಯ ವ್ಯವಸ್ಥಾಪಕರಾಗಿರಬಹುದು, ವ್ಯಾಪಾರಿಯಾಗಿರಬಹುದು. ನೀವು ನಿಮ್ಮಲ್ಲಿನ ಉತ್ತಮೊತ್ತಮವನ್ನು ಇಂದಿನ ದಿನಕ್ಕೆ ಕೊಡಬಲಿರಾದರೆ ನಾಳೆದನ್ನು ನಾಳೆಯೇ ನೋಡಿಕೊಳ್ಳುತ್ತದೆ
ಇನ್ನೊಂದು ವಿಷಯ: ಒಬ್ಬ ಮಹಾನ್ ವ್ಯಕ್ತಿ ಒಮ್ಮೆ "ನೀವು ಯಾವಾಗಲೂ ದೇವರು ನಿಮಗಾಗಿ ಕೊಟ್ಟಿರುವ ಕರೆಯನ್ನು ಪೂರೈಸಲು ಅಗತ್ಯವಾದ ಕಾರ್ಯಗಳನ್ನು ನಿಮ್ಮ ದೈನಂದಿನ ಚಟುವಟಿಕೆಯ ಪ್ರಧಾನ ಕಾರ್ಯಗಳಾಗಿ ಮಾಡಿಕೊಳ್ಳಿ" ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ಹಾಗಾಗಿ ನಿಮ್ಮ ಎಲ್ಲಾ ಕಾರ್ಯಗಳ ಪಟ್ಟಿಯು ನೀವು ಮಾಡುವ ಎಲ್ಲವೂ ನೀವು ಎಲ್ಲಿ ಹೋಗಬೇಕು ಯಾರನ್ನು ಸಂಧಿಸಬೇಕು ಎಲ್ಲವನ್ನು ಅದರಂತೆಯೇ ವೇಳಾಪಟ್ಟಿ ತಯಾರಿಸಿ ಅದರಂತೆ ಮಾಡಿರಿ. ನಾನು ಅದನ್ನೇ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಮಾಡುತ್ತೇನೆ. ಈ ವಿಚಾರವೂ ಕೆಲವರಿಗೆ ಬೇಸರಿಕೆ ತರಬಹುದು ಅಂತಿಮವಾಗಿ ನಿಮ್ಮನ್ನು ಕರೆದಾತನನ್ನು ಖಂಡಿತವಾಗಿಯೂ ನೀವು ಮೆಚ್ಚಿಸುವಿರಿ.
ಅರಿಕೆಗಳು
(ಪ್ರತಿದಿನವೂ ಹೇಳಿರಿ)
ಇಂದಿನ ದಿನವು ನನ್ನ ಜೀವನದ ಅತ್ಯುತ್ತಮ ದಿನವಾಗಿದೆ. ಇಂದು ನಾನು ಹಿಂದೆಂದೂ ಮಾಡಿರದ ಹಾಗೆ ಆರಾಧನೆಯನ್ನು ಪ್ರಾರ್ಥನೆಯನ್ನು ಮಾಡುವೆನು. ಇಂದಿನ ದಿನ ಹಿಂದೆಂದೂ ಅನುಭವಿಸಿರದಂತಹ ದೇವರ ದಯೆಯನ್ನು ಅನುಭವಿಸುವೆನು. ಇಂದು ನಾನು ಹಿಂದೆಂದೂ ಕಂಡರಿಯದಂತಹ ದೇವರ ಬಲದ ಪ್ರಕಟಣೆಯನ್ನು ಕಾಣುವೆನು. ಇಂದಿನ ದಿನ ದೈವಿಕ ಸಹಾಯಕರನ್ನು ನಾನು ಸಂಧಿಸುವೆನು.ಇಂದಿನ ದಿನವೇ ಅತ್ಯಂತ ಉಲ್ಲಾಸ ಪಡುವ ಆನಂದ ಪಡುವಂತಹ ದಿನವಾಗಿದೆ.
Join our WhatsApp Channel
Most Read
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಅಪ್ಪನ ಮಗಳು - ಅಕ್ಷಾ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ಆತ್ಮಕ್ಕೆ ದೇವರ ಔಷಧಿ
ಅನಿಸಿಕೆಗಳು