ಅನುದಿನದ ಮನ್ನಾ
ಸಾಲದಿಂದ ಹೊರಬನ್ನಿ : ಕೀಲಿಕೈ #2
Sunday, 11th of February 2024
0
0
298
Categories :
ಸಾಲ(Debt)
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು."( 2 ಅರಸುಗಳು 4:1 )
ಈ ಮನುಷ್ಯನು ತನ್ನ ಹೆಂಡತಿ ಮಕ್ಕಳ ಮೇಲೆ ಸಾಲ ಹೊರಸಿ ತೀರಿಹೋಗಿದ್ದನು. ಸತ್ಯವೇದವು "ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ; ಪಾಪಿಯ ಸೊತ್ತು ಸಜ್ಜನರಿಗೆ ಗಂಟು." (ಜ್ಞಾನೋಕ್ತಿಗಳು13:22) ಎಂದು ಹೇಳುತ್ತದೆ
ಈ ವಾಗ್ದಾನವು ನನಗೂ ನಿಮಗೂ ಆಗಲೆಂದು ನಾನು ಪ್ರವಾದನೆ ಹೇಳುತ್ತೇನೆ. ನೀವೀಗ ಏನನ್ನು ಮಾಡುತ್ತಿದ್ದೀರೋ ಅದು ನಿಮ್ಮ ಕಾಲಕ್ಕೆ ಮುಗಿದು ಹೋಗಬಾರದು. ನೀವು ಮತ್ತು ನಾನು ಭವಿಷ್ಯತ್ಕಾಲದ ತಲೆಮಾರಿಗೂ ಆಶೀರ್ವಾದಕರವಾಗಿರುವಂತೆ ಇರಬೇಕು.
"ಎಲೀಷನು ಆಕೆಗೆ - ನಾನು ನಿನಗೇನು ಮಾಡಬೇಕನ್ನುತ್ತೀ? ನಿನ್ನ ಮನೆಯಲ್ಲಿ ಏನಿರುತ್ತದೆ, ಹೇಳು ಅಂದನು. ಅದಕ್ಕೆ ಆಕೆಯು - ನಿನ್ನ ದಾಸಿಯ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊರತಾಗಿ ಏನೂ ಇಲ್ಲ ಎಂದು ಉತ್ತರಕೊಟ್ಟಳು."(2 ಅರಸುಗಳು 4:2)
ಆ ವಿಧವೆಯು "ನನ್ನ ಬಳಿ ಮೊಗೆ ಎಣ್ಣೆ ಹೊರತು ಬೇರೇನೂ ಇಲ್ಲ" ಎಂಬ ವಿಚಿತ್ರವಾದ ಉತ್ತರವನ್ನು ಕೊಟ್ಟಳು. ನಿಮಗೆ ಈಗಾಗಲೇ ದೇವರು ಅನುಗ್ರಹಿಸಿರುವ ಏನೋ ಒಂದನ್ನೇ ದೇವರು ಯಾವಾಗಲೂ ನಿಮಗಾಗಿ ಬಳಸುವವನಾಗಿದ್ದಾನೆ. ದೇವರು ಮೋಶೆಯನ್ನು ನಿನ್ನ ಕೈಯಲ್ಲಿರುವುದು ಏನು ಎಂದು ಕೇಳಿದಾಗ ಅಂದಿಗೆ ಯಾವ ಮಹತ್ವವೂ ಇಲ್ಲದಂತಹ ಒಂದು ಕೋಲನ್ನು ಮೋಶೆಯು ತನ್ನ ಕೈಯಲ್ಲಿ ಹಿಡಿದಿದ್ದನು.
ದೇವರು ಆ ಕೋಲನ್ನು ಬಳಸಿಯೇ ಇಡೀ ಜನಾಂಗವನ್ನು ವಿಮೋಚಿಸಿದನು.ದೇವರು ದಾವಿದನ ಕೈಯಲ್ಲಿದ್ದ ಕವಣೆ ಹಾಗೂ ಕೆಲವು ನುಣುಪಾದ ಕಲ್ಲುಗಳನ್ನು ಬಳಸಿಯೇ ದಾವೀದನನ್ನು ಇಡೀ ಇಸ್ರಾಯೆಲ್ಯರ ಮಧ್ಯದಲ್ಲಿ ಪ್ರಖ್ಯಾತಿಗೊಳಿಸಿದನು. ದೇವರು ಐದು ರೊಟ್ಟಿ ಎರಡು ತುಂಡು ಮೀನುಗಳನ್ನು ಬಳಸಿ (ಬಹುಶಹಃ ಅವು ತಾಜಾವಾಗಿ ಇದ್ದಿರಲಾರದು) 5000ಕ್ಕೂ ಹೆಚ್ಚು ಜನರಿಗೆ ಊಟ ಬಡಿಸಿದನು. ನಿಮ್ಮ ಬಳಿ ಇರುವಂತದ್ದೇನು ಎಂಬುದನ್ನು ದೇವರು ನಿಮಗೆ ತೋರ್ಪಡಿಸಲಿ ಎಂಬುದೇ ನನ್ನ ಪ್ರಾರ್ಥನೆಯಾಗಿದೆ. ಅದು ನಿಮ್ಮ ತಲಾಂತಗಳಾಗಿರಬಹುದು ಅಥವಾ ವರಗಳಾಗಿರಬಹುದು ಅದು ಎಷ್ಟೇ ಸಣ್ಣದಾಗಿದ್ದರು ಪರವಾಗಿಲ್ಲ ದೇವರು ನಿಮ್ಮನ್ನು ಸಾಲದಿಂದ ಹೊರ ತರಲು ಅದನ್ನೇ ಬಳಸುತ್ತಾನೆ ಈ ವಾಕ್ಯವನ್ನು ಈಗಲೇ ಹೊಂದಿಕೊಳ್ಳಿರಿ
"ಆಗ ಎಲೀಷನು ಆಕೆಗೆ - ಹೋಗಿ ನಿನ್ನ ನೆರೆಯವರಿಂದ ಸಿಕ್ಕುವಷ್ಟು ಬರೀ ಪಾತ್ರೆಗಳನ್ನು ಕೇಳಿಕೊಂಡು ಬಾ.
ಅನಂತರ ನಿನ್ನ ಮಕ್ಕಳನ್ನು ಒಳಗೆ ಕರಕೊಂಡು ಬಾಗಲನ್ನು ಮುಚ್ಚಿ ಎಣ್ಣೆಯನ್ನು ಪಾತ್ರೆಗಳಲ್ಲಿ ಹೊಯ್ದು ತುಂಬಿದವುಗಳನ್ನೆಲ್ಲಾ ಒತ್ತಟ್ಟಿಗಿಡು ಎಂದು ಹೇಳಿದನು."(2 ಅರಸುಗಳು 4:3-4)
ದೇವರ ಮನುಷ್ಯನು ಆ ವಿಧವೆಗೆ ಒಂದು ಪ್ರವಾದನ ಸೂಚನೆಯನ್ನು ಕೊಟ್ಟನು. ಆಕೆಯು ಇದು ಹೇಗಾದೀತು ಎಂದು ತರ್ಕ ಮಾಡುತ್ತಾ ಕುಳಿತುಕೊಳ್ಳಲಿಲ್ಲ. ಆದರೆ ಅವಳು ಆ ಪ್ರವಾದನೆ ಮಾತನ್ನು ನಂಬಿದಳು. ಅದಕ್ಕೆ ವಿಧೇಯಳಾದಳು.ನೀವು ಪ್ರವಾದನೆಯನ್ನು ನಂಬಿ ಅದಕ್ಕೆ ವಿಧೇಯನಾಗುವೆನು ಎಂದು ನಿಮ್ಮಲ್ಲಿ ನೀವು ತೀರ್ಮಾನಿಸಿಕೊಂಡರೆ ಅದು ನಿಮ್ಮ ಭವಿಷ್ಯವನ್ನೇ ರೂಪಿಸುತ್ತದೆ.
ಒಂದು ನಿರ್ದೇಶನವು ಒಂದು ನಿರ್ಮಾಣವನ್ನು ತರುತ್ತದೆ ನಿರ್ದೇಶನ ಇಲ್ಲದಿರುವಂತದ್ದು ನಾಶನವನ್ನು ತರುತ್ತದೆ
ನಾನೀಗ ನಿಮಗೊಂದು ಪ್ರವಾದನಾ ನಿರ್ದೇಶನವನ್ನು ಕೊಡುತ್ತೇನೆ. ನಿಮ್ಮೆಲ್ಲಾ ಸಾಲಗಳನ್ನು ಒಂದು ಕಾಗದದಲ್ಲಿ ಬರೆಯಿರಿ. ನೀವು ಪ್ರಾರ್ಥಿಸುವಾಗಲೆಲ್ಲಾ ಈ ಪ್ರಾರ್ಥನಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಈ ಎಲ್ಲಾ ಸಾಲಗಳನ್ನು ರದ್ದುಗೊಳಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ನನಗೆ ಗೊತ್ತು ಇದು ಕೇಳುವುದಕ್ಕೆ ಅತೀ ಸಾಮಾನ್ಯವಾದ ಕಾರ್ಯವೆಂದು ಅನಿಸುತ್ತದೆ. ಆದರೆ ಯಾರು ಪ್ರವಾಧನೆಯ ಸಂದೇಶಗಳನ್ನು ನಂಬುತ್ತಾರೋ ಖಂಡಿತವಾಗಿ ಅವರಿಗೆ ಕಾರ್ಯ ಆಗಿಯೇ ತೀರುತ್ತದೆ.
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನ ಕ್ಷಿಪಣಿಯನ್ನು ನಿಮ್ಮ ಹೃದಯದಾಳದಿಂದ ಬರುವವರೆಗೂ ಒಂದು ನಿಮಿಷವಾದರೂ ಪುನರಾವರ್ತಿಸುತ್ತಲೇ ಇರಿ. ಆನಂತರವೇ ಮತ್ತೊಂದು ಪ್ರಾರ್ಥನಾ ಕ್ಷಿಪಣಿಗೆ ತೆರಳಿ
1. ಕರ್ತನೇ, ನೀನು ನನಗಾಗಿ ಕೊಟ್ಟಿರುವುದನ್ನು ನಾನು ಕಾಣುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆ ಮಾಡು.
2. ಕರ್ತನೇ,ಬೇರೆಯವರು ಸುಲಭವಾಗಿ ಕಾಣಲಾರದಂತಹ ಸಂಗತಿಗಳನ್ನು ನಾನು ಕಾಣುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆಮಾಡು. ದೈವಿಕವಾದ ಅವಕಾಶಗಳನ್ನು ಅನುಗ್ರಹಿಸಬೇಕೆಂದು ಯೇಸು ನಾಮದಲ್ಲಿ ನಿನ್ನಲ್ಲಿ ಬೇಡುತ್ತೇನೆ
3. ನನ್ನ ಹಾಗೂ ನನ್ನ ಕುಟುಂಬದವರ ಜೀವಿತದಲ್ಲಿರುವ ಪ್ರತಿಯೊಂದು ಸಾಲದ ಬೆಟ್ಟಗಳು ಯೇಸು ನಾಮದಲ್ಲಿ ನಿರ್ಮೂಲವಾಗಿ ಹೋಗಲಿ.
4. ಯೇಸುವಿನ ರಕ್ತವೇ ನನ್ನ ಪರವಾಗಿ ವಕಾಲತ್ತು ವಹಿಸು,ಇಂದಿನಿಂದಲೇ ಸಾಲದ ಶಾಪದ ನೋಗಗಳನ್ನು ಯೇಸುಕ್ರಿಸ್ತನ ನಾಮದಲ್ಲಿ ಮುರಿದು ಹಾಕು.
5. ನನ್ನ ಕುಟುಂಬದವರಿಗಿಂತ ನಾನು ಉನ್ನತ ಸ್ಥಿತಿಗೆ ಏರುವುದೇ ಇಲ್ಲ ಎಂದು ಹೇಳುವ ಪ್ರತಿಯೊಂದು ಬಲವೇ, ಏ ಸುಳ್ಳು ನಾಲಿಗೆಯೇ ಯೇಸುಕ್ರಿಸ್ತನ ನಾಮದಲ್ಲಿ ಸುಟ್ಟು ಬೂದಿಯಾಗು.
1. ಕರ್ತನೇ, ನೀನು ನನಗಾಗಿ ಕೊಟ್ಟಿರುವುದನ್ನು ನಾನು ಕಾಣುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆ ಮಾಡು.
2. ಕರ್ತನೇ,ಬೇರೆಯವರು ಸುಲಭವಾಗಿ ಕಾಣಲಾರದಂತಹ ಸಂಗತಿಗಳನ್ನು ನಾನು ಕಾಣುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆಮಾಡು. ದೈವಿಕವಾದ ಅವಕಾಶಗಳನ್ನು ಅನುಗ್ರಹಿಸಬೇಕೆಂದು ಯೇಸು ನಾಮದಲ್ಲಿ ನಿನ್ನಲ್ಲಿ ಬೇಡುತ್ತೇನೆ
3. ನನ್ನ ಹಾಗೂ ನನ್ನ ಕುಟುಂಬದವರ ಜೀವಿತದಲ್ಲಿರುವ ಪ್ರತಿಯೊಂದು ಸಾಲದ ಬೆಟ್ಟಗಳು ಯೇಸು ನಾಮದಲ್ಲಿ ನಿರ್ಮೂಲವಾಗಿ ಹೋಗಲಿ.
4. ಯೇಸುವಿನ ರಕ್ತವೇ ನನ್ನ ಪರವಾಗಿ ವಕಾಲತ್ತು ವಹಿಸು,ಇಂದಿನಿಂದಲೇ ಸಾಲದ ಶಾಪದ ನೋಗಗಳನ್ನು ಯೇಸುಕ್ರಿಸ್ತನ ನಾಮದಲ್ಲಿ ಮುರಿದು ಹಾಕು.
5. ನನ್ನ ಕುಟುಂಬದವರಿಗಿಂತ ನಾನು ಉನ್ನತ ಸ್ಥಿತಿಗೆ ಏರುವುದೇ ಇಲ್ಲ ಎಂದು ಹೇಳುವ ಪ್ರತಿಯೊಂದು ಬಲವೇ, ಏ ಸುಳ್ಳು ನಾಲಿಗೆಯೇ ಯೇಸುಕ್ರಿಸ್ತನ ನಾಮದಲ್ಲಿ ಸುಟ್ಟು ಬೂದಿಯಾಗು.
Join our WhatsApp Channel
Most Read
● ನಂಬತಕ್ಕ ಸಾಕ್ಷಿ● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಧನ್ಯನಾದ ಮನುಷ್ಯ
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಪುರುಷರು ಏಕೆ ಪತನಗೊಳ್ಳುವರು -6
ಅನಿಸಿಕೆಗಳು