ಅನುದಿನದ ಮನ್ನಾ
ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
Saturday, 17th of February 2024
3
2
446
Categories :
ಅಭ್ಯಾಸ (Habit)
ನೀವು ಎಂದಾದರೂ ನಾನು ಭಕ್ತಿಹೀನವಾದ ಅಭ್ಯಾಸಗಳಲ್ಲಿ ಬಿದ್ದು ಹೋಗಿದ್ದೇನೆ ಎಂದು ನೆನೆಸಿದ್ದೀರಾ. ಹಾಗಿದ್ದರೆ ನೀವೊಬ್ಬರೇ ಆ ರೀತಿ ಇಲ್ಲ. ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ವೀಕ್ಷಿಸುವಂತದ್ದು ಫೇಸ್ಬುಕ್ ಇನ್ಸ್ಟಾಗ್ರಾಂ ಮುಂತಾದವುಗಳಲ್ಲಿ ಬಹಳ ಸಮಯ ಕಳೆಯುವಂತ ಕೆಲವು ಅಭ್ಯಾಸಗಳು. ಕೆಲವರು ಆನ್ಲೈನ್ ಆಟಗಳಿಗೆ ದಾಸರಾಗಿ ಗೊತ್ತು ಗುರಿ ಇಲ್ಲದೆ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಒಂದು ಸಂಶೋಧನೆ ಹೇಳುವ ಪ್ರಕಾರ ಈ ರೀತಿಯ ನಡವಳಿಕೆಯು ಕೇವಲ ಸಂಬಂಧಗಳನ್ನು ಬಾಧಿಸುವುದಷ್ಟೇ ಅಲ್ಲದೆ ಆರೋಗ್ಯವನ್ನು ಹಾಳು ಗೆಡುವುತ್ತದೆ.
ನಿಮಗಿರುವ ಭಕ್ತಿಹೀನ ಅಭ್ಯಾಸಗಳಾವುವು ಎಂಬುದು ನನಗೆ ತಿಳಿದಿಲ್ಲ. ಆದರೆ ನಾವೆಲ್ಲರೂ ದೇವರಿಂದ ದೂರ ಉಳಿಯಬೇಕೆಂದು ಸೈತಾನನು ತರುವ ಶೋಧನೆಗಳು ಇದಾಗಿವೆ ಎಂದು ನನಗೆ ಗೊತ್ತು. ಆದರೆ 1ಕೊರಿಯಂತ 10:13 ಹೇಳುತ್ತದೆ...
"ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು." ಎಂದು.
ಶೋಧನೆಗಳು ನಮ್ಮನ್ನು ಜಯಿಸಲು ನಾವು ಅವಕಾಶ ಕೊಡಬಾರದು ನಾವು ಭಕ್ತಿಹೀನ ಅಭ್ಯಾಸಗಳನ್ನು ಮುರಿಯಬಹುದು ಮತ್ತು ಆ ಸ್ಥಳವನ್ನು ಭಕ್ತಿ ಅಭಿವೃದ್ಧಿ ಮಾಡುವಂತಹ ಅಭ್ಯಾಸಗಳಿಂದ ತುಂಬಿಸಬಹುದು.
ಅಭ್ಯಾಸಗಳನ್ನು ಮುರಿಯುವುದು
ಅಭ್ಯಾಸಗಳನ್ನು ಮುರಿಯುವಂತದ್ದು ಒಂದು ಮನಸ್ಥಿತಿಯ ಮೇಲೆ ಆಧಾರವಾಗಿದೆ. ನೀವು ಈಗ ಮಾಡುತ್ತಿರುವ ಭಕ್ತಿಹೀನ ಅಭ್ಯಾಸಗಳನ್ನು ತ್ಯಜಿಸುವುದರಿಂದ ನಿಮಗೆ ಅತ್ಯಧಿಕ ಬಹುಮಾನವಿದೆ ಎಂದು ನೀವು ಮನದಟ್ಟು ಮಾಡಿಕೊಳ್ಳಬೇಕು. ನೀವು ದೇವರ ವಾಕ್ಯದ ಮೂಲಕ ನಿಮ್ಮ ಮನಸ್ಸನ್ನು ನೂತನ ಪಡಿಸಿಕೊಳ್ಳಬೇಕು.
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ." ಎಂದು ರೋಮಾಪುರದವರಿಗೆ 12:2 ಹೇಳುತ್ತದೆ.
ಹಾಗೆಯೇ, ಈ ಶೋಧನೆಗಳ ವಿರುದ್ಧ ನೀವು ಒಬ್ಬರೇ ಹೋರಾಡಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ನೀವು ನಿಮ್ಮ ವಿಶ್ವಾಸವನ್ನು ದೇವರ ಮೇಲೆ ಇರಿಸಿ ಆಗ ಆತನು ನಿಮಗೆ ಭಕ್ತಿಹೀನ ಅಭ್ಯಾಸಗಳ ಮೇಲೆ ಜಯಕೊಟ್ಟು ನಿಮ್ಮಲ್ಲಿ ಉತ್ತಮ ಬದಲಾವಣೆ ಬರುವಂತೆ ಸಹಾಯ ಮಾಡುತ್ತಾನೆ. ಇಲ್ಲಿಯೇ ಪ್ರಾರ್ಥನೆಯ ಅವಶ್ಯಕತೆ ಬರುವಂತದ್ದು. ಇವುಗಳ ಮೇಲೆ ಜಯ ಸಾಧಿಸಲು ಕರ್ತನನ್ನು ಬೇಡಿಕೊಳ್ಳಿರಿ ಮತ್ತು ಪ್ರಾರ್ಥಿಸಿರಿ.
ಯಾವುದೇ ದುರಭ್ಯಾಸಗಳು ಆರೋಗ್ಯಕ್ಕೆ ಹಾನಿಕಾರಕ ಮತ್ತು ನಿಮಗೆ ಅಪಾಯಕಾರಿಯೂ ಆಗಬಹುದು. ಅವು ನಿಮ್ಮನ್ನು ನಿಮ್ಮ ನೀತಿವಂತಿಕೆ ಸ್ಥಾನದಿಂದ ಎಳೆದು ಕೆಳಗೆ ದಬ್ಬಲು ಸೈತಾನನು ಅದನ್ನು ತನ್ನ ಸಾಧನವಾಗಿ ಕೂಡ ಬಳಸಬಹುದು. ಇದರಿಂದಾಗಿ ಇಂತಹ ಯಾವುದೇ ಪಾಪಮಯ ಮಾದರಿಯಾದರೂ ನಿಮ್ಮ ಜೀವಿತದಲ್ಲಿ ಮರಕಳಿಸುತ್ತಿದ್ದರೆ ಆರಂಭದಲ್ಲಿಯೇ ಯೇಸು ನಾಮದಲ್ಲಿ ಅವುಗಳನ್ನು ಮುರಿದು ಹಾಕುವುದು ಕ್ರಿಸ್ತನ ಅನುಯಾಯಿಗಳಾಗಿ ನಿಮ್ಮ ಜವಾಬ್ದಾರಿಯಾಗಿದೆ.
ಕಡೆಯದಾಗಿ, ನೀವು ಹೊಸದಾದ ಅಭ್ಯಾಸಗಳನ್ನು ರೂಡಿಸಿಕೊಳ್ಳದಿದ್ದರೆ ಬಹುಬೇಗ ಹಳೆಯದಕ್ಕೆ ಬಿದ್ದು ಹೋಗುವಿರಿ ಮತ್ತು ನೀವು ವೃದ್ಧಿಪಡಿಸಿಕೊಂಡ ಎಲ್ಲವೂ ಬಹುಬೇಗನೆ ಪ್ರಯೋಜನವಿಲ್ಲದ ಹಾಗೆ ಆಗಿಬಿಡುತ್ತದೆ. ಕಚೇರಿಗೆ ಸರಿಯಾದ ಸಮಯದಲ್ಲಿ ತಲುಪುವಂಥದ್ದು ನಿಗದಿತ ಸಮಯದಲ್ಲಿ ಎದ್ದೇಳುವಂತದ್ದು, ನಿಗದಿತ ಸಮಯಕ್ಕೆ ಪ್ರಾರ್ಥನೆ ಮಾಡುವಂತದ್ದು ಅಥವಾ ನಿಗದಿತ ಸಮಯಕ್ಕೆ ಮಲಗುವಂತದ್ದು ಇವೆಲ್ಲವೂ ನೋಡಲು ಬಹಳ ಸಾಮಾನ್ಯ ಕಾರ್ಯಗಳಾಗಿ ತೋರುತ್ತವೆ.
"ಆತನಾದರೋ ಅರಣ್ಯಪ್ರದೇಶಗಳಿಗೆ ಹೋಗಿ ದೇವರ ಪ್ರಾರ್ಥನೆಯನ್ನು ಮಾಡುತ್ತಿದ್ದನು."(ಲೂಕ 5:16). ಯೇಸು ಸ್ವಾಮಿಗೆ ಯಾವಾಗಲೂ ಗುಂಪಿನೊಡನೆ ಕುಳಿತುಕೊಳ್ಳುವುದಕ್ಕಿಂತಲೂ ಏಕಾಂತವಾಗಿ ಪ್ರಾರ್ಥನೆಯಲ್ಲಿ ಕಾಲ ಕಳೆಯುವ ಅಭ್ಯಾಸವಿತ್ತು. ಇದರಿಂದಲೇ ದೇವರ ಬಲವು ಆತನ ಮೂಲಕ ನಿರಂತರವಾಗಿ ಹರಿದು ಬರುತ್ತಿತ್ತು
ಭಕ್ತಿವೃದ್ದಿ ಮಾಡುವ ಅಭ್ಯಾಸಗಳು ನಿಮ್ಮ ಬದುಕನ್ನು ಬದಲಾಯಿಸುತ್ತದೆ ಮತ್ತು ನಿಮ್ಮ ಸುತ್ತಲೂ ಇರುವವರ ಮೇಲೆ ಪ್ರಭಾವ ಬೀರುತ್ತದೆ
ಅರಿಕೆಗಳು
ಬಿಡುಗಡೆ
ನಿಮ್ಮ ನಿಮ್ಮ ದುರಭ್ಯಾಸಗಳನ್ನು ಕರ್ತನಿಗೆ ಅರಿಕೆ ಮಾಡಿರಿ
1. ತಂದೆಯೇ, ನನ್ನ ಜೀವಿತವನ್ನು ಬಾಧಿಸುತ್ತಿರುವ ಈ ನನ್ನ ದುರಭ್ಯಾಸದ ಭಯಂಕರ ಹಿಡಿತದಿಂದ ನನ್ನನ್ನು ಯೇಸು ನಾಮದಲ್ಲಿ ನಿಮ್ಮ ಪವಿತ್ರಾತ್ಮನ ಬಲದ ಮೂಲಕ ಬಿಡಿಸಿರಿ
2. ಲೋಕದಲ್ಲಿರುವವನಿಗಿಂತ ನನ್ನೊಳಗಿರುವಾತನು ದೊಡ್ಡವನು. ನನ್ನ ಜೀವಿತದ ಮೇಲೆ ಬಂಧನ ಹೇರಿರುವ ಎಲ್ಲಾ ಸೈತಾನನ ಬಲಗಳಿಂದ ಯೇಸು ನಾಮದಲ್ಲಿ ಈಗಲೇ ನನಗೆ ಬಿಡುಗಡೆ ಉಂಟಾಗಲಿ.
3. ತಂದೆಯೇ, ನನ್ನ ಜೀವಿತದಲ್ಲಿರುವ ಎಲ್ಲಾ ದುರಭ್ಯಾಸಗಳ ಬಲವನ್ನು ಮುರಿಯಲು ನಿಮ್ಮ ಬಲವನ್ನು ಸಾಮರ್ಥ್ಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿರಿ.
4. ತಂದೆಯೇ, ಭಕ್ತಿ ವೃದ್ಧಿ ಮಾಡುವ ಅಭ್ಯಾಸಗಳನ್ನು ರೂಡಿಸಿಕೊಳ್ಳುವಂತೆ ನಿಮ್ಮ ಬಲವನ್ನು ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿರಿ. ಆಮೆನ್.
ನಿಮ್ಮ ನಿಮ್ಮ ದುರಭ್ಯಾಸಗಳನ್ನು ಕರ್ತನಿಗೆ ಅರಿಕೆ ಮಾಡಿರಿ
1. ತಂದೆಯೇ, ನನ್ನ ಜೀವಿತವನ್ನು ಬಾಧಿಸುತ್ತಿರುವ ಈ ನನ್ನ ದುರಭ್ಯಾಸದ ಭಯಂಕರ ಹಿಡಿತದಿಂದ ನನ್ನನ್ನು ಯೇಸು ನಾಮದಲ್ಲಿ ನಿಮ್ಮ ಪವಿತ್ರಾತ್ಮನ ಬಲದ ಮೂಲಕ ಬಿಡಿಸಿರಿ
2. ಲೋಕದಲ್ಲಿರುವವನಿಗಿಂತ ನನ್ನೊಳಗಿರುವಾತನು ದೊಡ್ಡವನು. ನನ್ನ ಜೀವಿತದ ಮೇಲೆ ಬಂಧನ ಹೇರಿರುವ ಎಲ್ಲಾ ಸೈತಾನನ ಬಲಗಳಿಂದ ಯೇಸು ನಾಮದಲ್ಲಿ ಈಗಲೇ ನನಗೆ ಬಿಡುಗಡೆ ಉಂಟಾಗಲಿ.
3. ತಂದೆಯೇ, ನನ್ನ ಜೀವಿತದಲ್ಲಿರುವ ಎಲ್ಲಾ ದುರಭ್ಯಾಸಗಳ ಬಲವನ್ನು ಮುರಿಯಲು ನಿಮ್ಮ ಬಲವನ್ನು ಸಾಮರ್ಥ್ಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿರಿ.
4. ತಂದೆಯೇ, ಭಕ್ತಿ ವೃದ್ಧಿ ಮಾಡುವ ಅಭ್ಯಾಸಗಳನ್ನು ರೂಡಿಸಿಕೊಳ್ಳುವಂತೆ ನಿಮ್ಮ ಬಲವನ್ನು ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿರಿ. ಆಮೆನ್.
Join our WhatsApp Channel
Most Read
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ಹೊಗಳಿಕೆವಂಚಿತ ನಾಯಕರು
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ನಮ್ಮ ಆಯ್ಕೆಯ ಪರಿಣಾಮಗಳು
● ಪ್ರೀತಿಯ ಭಾಷೆ
ಅನಿಸಿಕೆಗಳು