ಅನುದಿನದ ಮನ್ನಾ
ಕೃಪೆಯ ವಾಹಕರಾಗಿ ಮಾರ್ಪಡುವುದು.
Sunday, 18th of February 2024
2
2
165
Categories :
ಅನುಗ್ರಹ (Grace)
ಸರಳವಾಗಿ ಹೇಳಬೇಕೆಂದರೆ ಕೃಪೆ ಎಂದರೆ ನಮಗೆ ಹೊಂದಲು ಯೋಗ್ಯತೆಯೇ ಇಲ್ಲದಂತದನ್ನು ಹೊಂದಿಕೊಳ್ಳುವುದಾಗಿದೆ. ನಾವು ನರಕದ ಶಿಕ್ಷೆಗೆ ಯೋಗ್ಯರಾಗಿದ್ದೆವು ಆದರೆ ದೇವರು ಕೃಪಾ ಪೂರ್ಣನಾಗಿ ಆತನ ಮಗನನ್ನು ನಮಗೆ ವರವಾಗಿ ಅನುಗ್ರಹಿಸಿದನು
"ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ."(ಎಫೆಸದವರಿಗೆ 2:8). ರಕ್ಷಣೆ ಮತ್ತು ದೇವರ ಕ್ಷಮಾಪಣೆಯು ದೇವರ ಉಚಿತಾರ್ಥ ವರವಾಗಿದೆ.ನಮಗೆ ಅದನ್ನು ನಾವಾಗಿಯೇ ಸಂಪಾದಿಸಿಕೊಳ್ಳಲು ಯಾವುದೇ ಯೋಗ್ಯತೆ ಇಲ್ಲ. ಕೊಲಸ್ಸೆ 1:21-22 ರ ಪ್ರಕಾರ ನಾವು ಮೊದಲು ದೇವರಿಗೆ ವೈರಿಗಳಾಗಿದ್ದೆವು. ಕ್ರಿಸ್ತನು ನಮಗಾಗಿ ಶಿಲುಬೆಯ ಮೇಲೆ ರಕ್ತ ಸುರಿಸಿದರಿಂದ ನಾವು ಬಿಡುಗಡೆ ಹೊಂದಿ ದೇವರೊಂದಿಗೆ ಸಮಾಧಾನವಾಗಿದ್ದೇವೆ. ಆತನ ಪರಿಶುದ್ಧವಾದಂತ ರಕ್ತದ ಮೂಲಕ ನಮ್ಮ ದೋಷರೋಪಣೆಯ ಪತ್ರಗಳನ್ನು ಮತ್ತು ಮರಣದ ಶಿಕ್ಷೆಯನ್ನು ಆತನು ರದ್ದುಪಡಿಸಿದನು.
ಒಂದು ದಿನ ಒಬ್ಬ ಯುವಕನು ನನ್ನ ಬಳಿಗೆ ಬಂದು "ನಾನು ದೇವರನ ಸೇವೆ ಮಾಡುವುದನ್ನು ಪ್ರೀತಿಸುತ್ತೇನೆ. ಆದರೆ ಆ ಸ್ಥಳದಲ್ಲಿರುವ ಜನರೆಂದರೆ ನನಗೆ ಇಷ್ಟವಿಲ್ಲ. ಇದರಿಂದಾಗಿ ನಾನು ದೇವರ ಸೇವೆಯನ್ನು ಬಿಟ್ಟುಬಿಟ್ಟೆ" ಎಂದನು. ಇದೇ ಸಾಲುಗಳು ಜಗತ್ತಿನೆಲ್ಲಡೆ ಪುನರಾವರ್ತನೆ ಆಗುತ್ತಲೇ ಇದೆ.
ಆದರೆ ಕರ್ತನನ್ನು ಅಷ್ಟು ಪ್ರೀತಿಸುವವರು ಏಕೆ ಹೀಗೆ ಕರ್ತನ ಸೇವೆ ಮಾಡುವುದನ್ನು ನಿಲ್ಲಿಸಿ ಬಿಡುತ್ತಾರೆ ಎಂದು ನೀವು ಎಂದಾದರೂ ಆಶ್ಚರ್ಯಪಟ್ಟಿದ್ದೀರಾ?
ಏಕೆಂದರೆ ಅವರು ತಾವು ಮೊದಲು ಹೊಂದುಕೊಂಡ ಅದೇ ಕೃಪೆಯನ್ನು ಇತರರಿಗೂ ವಿಸ್ತರಿಸುವಲ್ಲಿ ವಿಫಲರಾಗಿದ್ದಾರೆ ಅದರಿಂದಲೇ ಹೀಗೆ ಮಾಡುತ್ತಾರೆ ಎಂದು ನಾನು ನಂಬುತ್ತೇನೆ
".ಕೃಪೆಯೂ ಶಾಂತಿಯೂ ನಿಮಗೆ ಹೆಚ್ಚೆಚ್ಚಾಗಿ ದೊರೆಯಲಿ" ಎಂದು 2 ಪೇತ್ರನು 1:2 ಹೇಳುತ್ತದೆ.
ದೇವರ ರಾಜ್ಯದಲ್ಲಿ ಇತರರಿಗೆ ಹಂಚದೇ, ವಿಸ್ತರಿಸದೆ, ತುಂಬಿಸದೆ ಯಾವುದೂ ಸಹ ಹೆಚ್ಚಾಗಲಾರದು.ಅದು ಕರ್ತನಿಂದ ಮುರಿದು ಹಂಚಲ್ಪಟ್ಟ ರೊಟ್ಟಿ ಮತ್ತು ಮೀನುಗಳಾಗಿರಲಿ ಅಥವಾ ಎಲಿಷನ ಸಮಯದಲ್ಲಿ ಪಾತ್ರೆಗಳನ್ನು ಎಣ್ಣೆಯಿಂದ ತುಂಬಿಸಿದ ವಿಧವೆಯ ಸನ್ನಿವೇಶದಲ್ಲಿಯೇ ಆಗಿರಲಿ
ಲೂಕ 6:38ರ ಈ ವಾಕ್ಯವನ್ನು ಕೊಡುವ ವಿಚಾರ ಹೇಳುವಾಗ ಸಾಮಾನ್ಯವಾಗಿ ನಾವು ಬಳಸುತ್ತೇವೆ.
"ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು". ಹೇಗೂ ನೀವು ಕೊಟ್ಟಾಗಲೇ ಅದು ನಿಮಗೆ ಹೆಚ್ಚು ಹೆಚ್ಚಾಗಿ ಅಭಿವೃದ್ಧಿಯಾಗಿ ಹಿಂತಿರುಗಿ ಬರುವಂತದ್ದು. ಇದೇ ನಿಯಮವೇ ಕೃಪೆಗೂ ಕೂಡ ಅನ್ವಯಿಸುತ್ತದೆ.
ಧರ್ಮಶಾಸ್ತ್ರವು ಹೇಳುತ್ತದೆ. "ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಮರಣಶಿಕ್ಷೆಯಾಗಬೇಕು."ಎಂದು.(ವಿಮೋಚನಕಾಂಡ 21:16)
ಧರ್ಮಶಾಸ್ತ್ರದ ಈ ವಾಕ್ಯದ ಪ್ರಕಾರ ಯೋಸೇಫನ ಅಣ್ಣಂದಿರು ಮರಣಕ್ಕೆ ಪಾತ್ರರಾಗಿದ್ದರು. ಏಕೆಂದರೆ ಅವರು ಯೋಸೇಫನನ್ನು ಕದ್ದು ಐಗುಪ್ತರಿಗೆ ಮಾರಿದ್ದರು. ಆದರೆ ಯೋಸೇಫನು ಅವರಿಗೆ ಜೀವವನ್ನು ನೀಡಿದನು
"ಜನರು ಯಾವುದಕ್ಕೆ ಯೋಗ್ಯರೋ ಅದನ್ನು ನೀಡದೆ ಅವರಿಗೆ ಏನು ಅಗತ್ಯವೋ ಅದನ್ನು ನೀಡು" ಎಂದು ಪವಿತ್ರಾತ್ಮನು ಹೇಳುವುದನ್ನು ನಾನು ಕೇಳಿದ್ದೇನೆ.ನೀವು ಹಾಗೆ ನೀಡಿದಾಗ ನೀವು ಕೃಪೆಯನ್ನು ತೋರಿಸುವವರಾಗುತ್ತೀರಿ. ಕೃಪೆಯಡಿಯಲ್ಲಿಯೇ ಕ್ಷಮಾಪಣೆಯು ಬರುವಂತದ್ದು.
ಪ್ರಾರ್ಥನೆಗಳು
ತಂದೆಯೇ, ಯೇಸು ಕ್ರಿಸ್ತನ ನಾಮದಲ್ಲಿ ನನ್ನ ಮೇಲೆ ಅಪಾರವಾದ ನಿನ್ನ ಕೃಪೆಯನ್ನು ಬಿಡುಗಡೆ ಮಾಡು.
Join our WhatsApp Channel
Most Read
● ಬದಲಾಗಲು ಇನ್ನೂ ತಡವಾಗಿಲ್ಲ● ನಂಬತಕ್ಕ ಸಾಕ್ಷಿ
● ಆರಾಧನೆಗೆ ಬೇಕಾದ ಇಂಧನ
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ನಂಬಿಕೆಯ ಶಾಲೆ
ಅನಿಸಿಕೆಗಳು