ಅನುದಿನದ ಮನ್ನಾ
ಸಾಧನೆಯ ಪರೀಕ್ಷೆ.
Wednesday, 21st of February 2024
2
1
412
Categories :
ಯಶಸ್ಸು (Success)
"ನಿಮ್ಮ ದೇವರಾದ ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣ ಮಾಡಿಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ11 ನೀವು ಕೂಡಿಸದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ನೀವು ಅಗೆಯದ ನೀರಗುಂಡಿಗಳನ್ನೂ ನೀವು ಬೆಳಸದ ದ್ರಾಕ್ಷೇತೋಟಗಳನ್ನೂ ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ 12ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನನ್ನು ಮರೆಯಬಾರದು, ನೋಡಿರಿ." (ಧರ್ಮೋಪದೇಶಕಾಂಡ 6:10-12).
ನಮ್ಮಲ್ಲಿ ಅನೇಕರು ಇದನ್ನು ಕರ್ತನು ನಮಗೆ "ಕೃತಜ್ಞತೆ ಸಲ್ಲಿಸಿರಿ, ನಿಮ್ಮ ಸ್ತುತಿ ಆರಾಧನೆಯಲ್ಲಿ ನಿಮ್ಮ ಕೈಗಳನ್ನು ಎತ್ತಿರಿ" ಎಂದು ಹೇಳುತ್ತಿದ್ದಾನೆ ಎಂದು ನಿರೀಕ್ಷಿಸಬಹುದು. ಆದರೆ ಕರ್ತನು ಹಾಗೆ ಹೇಳುತ್ತಿಲ್ಲ ಬದಲಾಗಿ ಆತನು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ. ಎಂದು ಹೇಳುತ್ತಿದ್ದಾನೆ.
ಒಬ್ಬರನ್ನು ದೇವರು ಆಶೀರ್ವದಿಸಿದಾಗ ಎರಡು ಸಂಗತಿಗಳು ಜರಗುತ್ತವೆ.
ಮೊದಲನೆಯದಾಗಿ, ದೇವರಿಂದ ಒದಗಿ ಬಂದಂತ ಆಶೀರ್ವಾದವು ನಮ್ಮಲ್ಲಿ ಕೃತಜ್ಞತೆಯ ಭಾವವನ್ನು ಮತ್ತು ಕರ್ತನ ಮೇಲಿನ ಪ್ರೀತಿಯನ್ನು ವೃದ್ಧಿಸುತ್ತದೆ. ಉದಾಹರಣೆಗೆ ಕರ್ತನು ಪೇತ್ರನ ದೋಣಿಯನ್ನು ಹತ್ತಿದಾಗ ಕರ್ತನು ಕೊಟ್ಟ ಪ್ರವಾದನೆಯುಕ್ತ ಆಜ್ಞೆಗೆ ಪೇತ್ರನು ವಿಧೇಯನಾದನು. ಆಗ ಅವನ ಖಾಲಿ ಖಾಲಿಯಾಗಿದ್ದ ದೋಣಿಯು ಮೀನುಗಳಿಂದ ತುಂಬಿ ತುಳುಕಿತು. ಇದು ಪೇತ್ರನು ಕರ್ತನ ಮುಂದೆ ಗೌರವ ಪೂರ್ವಕವಾಗಿ ಅಡ್ಡ ಬೀಳುವಂತೆ ಮಾಡಿತು ಮತ್ತು ಅಂದಿನಿಂದ ಪೇತ್ರನು ಕರ್ತನನ್ನು ಹಿಂಬಾಲಿಸಲು ಆರಂಭಿಸಿದನು.
ಎರಡನೆಯದಾಗಿ, ಕರ್ತನು ಒಬ್ಬನನ್ನು ಆಶೀರ್ವದಿಸಿದ ಮೇಲೆ ಆ ವ್ಯಕ್ತಿಯು ಜಾಗರೂಕನಾಗಿರದೆ ಕರ್ತನನ್ನೇ ಮರೆತು ಹೋಗುವ ಸಾಧ್ಯತೆ ಕೂಡ ಇದೆ
ನೀವು ನಿಮ್ಮ ಹೊಸ ಮನೆಯನ್ನು ಪ್ರವೇಶಿಸುವಾಗ, ನೀವು ಪದವೀಧರರಾದಾಗ, ನಿಮ್ಮ ಸಂಬಳವೂ ಐದು ಅಂಕೆಗಳಿಂದ ಆರು ಅಂಕೆಗಳವರೆಗೆ ಹೆಚ್ಚಾದಾಗ, ಒಂದು ಸೂಕ್ಷ್ಮವಾದ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದೇ ಸಾಧನೆಯ ಪರೀಕ್ಷೆ.
ಎಲ್ಲಾ ಕುಂದಿಲ್ಲದ ಒಳ್ಳೆಯ ದಾನಗಳು ಬೆಳಕಿನ ತಂದೆಯಿಂದಲೇ ಬರುತ್ತವೆ ಎಂಬುದನ್ನು ದಯವಿಟ್ಟು ಈಗ ಅರ್ಥ ಮಾಡಿಕೊಳ್ಳಿ. (ಯಾಕೋಬ1:17). ಈ ಎಲ್ಲಾ ಒಳ್ಳೆಯವರಗಳು ಸ್ವಾಗತಿಸಲ್ಪಡುತ್ತವೆ ಮತ್ತು ಸಂಭ್ರಮಾಚರಣೆಯನ್ನು ಹೊಂದುತ್ತವೆ. ಆದರೆ ಈ ಪ್ರತಿಯೊಂದು ಒಳ್ಳೆಯ ದಾನಗಳು ಸಾಧನೆಯ ಸೂಕ್ಷ್ಮ ಪರೀಕ್ಷೆಯನ್ನೂ ಸಹ ತಂದೊಡ್ದುತ್ತವೆ ಎಂಬುದರ ಬಗ್ಗೆ ಜಾಗ್ರತೆ ವಹಿಸಬೇಕು.
"ಪೋಷಿಸಿದಾತನನ್ನು ಮರೆತು ನಿಮ್ಮ ಮನಸ್ಸಿನೊಳಗೆ ಈ ಭಾಗ್ಯವು ನಮ್ಮ ಸಾಮರ್ಥ್ಯ ಸಾಹಸಗಳಿಂದಲೇ ನಮಗುಂಟಾಯಿತು ಅಂದುಕೊಂಡೀರಿ ಜಾಗ್ರತೆ." (ಧರ್ಮೋಪದೇಶಕಾಂಡ 8:17)
ನೀವು ನಿಮ್ಮ ಸಾಕ್ಷಿಯನ್ನು ಹೇಳುವ ಮೂಲಕ ಕರ್ತನನ್ನು ಮಹಿಮೆ ಪಡಿಸುವುದನ್ನು ಮರೆಯುವಿರಾ? ನೀವು ಆಶೀರ್ವದಿಸಲ್ಪಟ್ಟ ಮೇಲೆ ದೇವರ ಮನೆಗೆ ಬರುವುದನ್ನು ಬಿಟ್ಟು ಬಿಡುವಿರಾ? ನೀವು ಆ ಜೀವನ ಸಂಗಾತಿಯನ್ನು ಆ ಮನೆಯನ್ನು, ಆ ಮಗುವನ್ನು ಹೊಂದಿಕೊಂಡ ಮೇಲೆ ಪ್ರಾರ್ಥಿಸುವುದನ್ನು ನಿಲ್ಲಿಸಿ ಬಿಡುವಿರಾ?
ಜೀವನದಲ್ಲಿ ಅತ್ಯಂತ ದೊಡ್ಡ ಆತ್ಮಿಕ ಅಪಾಯವು, ಅದು ವ್ಯಕ್ತಿಯು ರೋಗದಲ್ಲಿ ಬಿದ್ದಾಗ ಬರದೇ ಆ ವ್ಯಕ್ತಿಯು ಆರೋಗ್ಯವಾಗಿದ್ದಾಗಲೇ ಕರ್ತನನ್ನು ಮರೆತು ಬಿಟ್ಟಾಗ ಬರುವುದಾಗಿದೆ.
ಲೂಕ 17ರಲ್ಲಿ ನಾವು 10 ಕುಷ್ಟರೋಗಿಗಳು ಯೇಸುವಿನ ಬಳಿಗೆ ಬಂದು ಸ್ವಸ್ಥತೆಯನ್ನು ಹೊಂದಿದ್ದನ್ನು ಓದುತ್ತೇವಲ್ಲಾ. ಯೇಸು ಅವರಿಗೆ "ಹೋಗಿ ಯಾಜಕರಿಗೆ ನಿಮ್ಮ ಮೈಯನ್ನು ತೋರಿಸಿ "ಎಂಬ ಪ್ರವಾದನ ಯುಕ್ತವಾದ ಆಜ್ಞೆಯನ್ನು ಕೊಟ್ಟನು. ಅವರು ಹಾಗೆಯೇ ಆಜ್ಞೆಗೆ ವಿದೇಯರಾದರು ಆದರೆ ಸ್ವಸ್ಥತೆ ಹೊಂದಿ ಹಾಗೆಯೇ ಹೋಗಿಬಿಟ್ಟರು. ತಾನು ಸ್ವಸ್ತವಾದದ್ದನ್ನು ಕಂಡುಕೊಂಡ ಒಬ್ಬನೇ ಒಬ್ಬ ಕುಷ್ಟರೋಗಿ ಮಾತ್ರ ಯೇಸುವಿಗೆ ಕೃತಜ್ಞತೆಯನ್ನು ಸಲ್ಲಿಸಲು ತಿರುಗಿ ಬಂದನು.
"ಯೇಸು ಇದನ್ನು ನೋಡಿ - ಹತ್ತು ಮಂದಿ ಶುದ್ಧರಾದರಲ್ಲವೇ, ವಿುಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ ಎಂದು " ಹೇಳಿದ್ದನ್ನು ನೀವು ಗಮನಿಸಿ ನೋಡಿ.
ನಿಮ್ಮ ಜೀವಿತದಲ್ಲಿ ಬರುವ ದೊಡ್ಡ ಪರೀಕ್ಷೆಯು ನೀವು ಕೆಲಸವನ್ನು ಕಳೆದುಕೊಂಡಾಗ ಅಲ್ಲ ನಿಮಗೆ ಕೆಲಸ ಸಿಕ್ಕಾಗಲೇ ಬರುವಂತದ್ದಾಗಿದೆ. ನೀವು ನಿಮ್ಮ ಸಾಧನೆಯನ್ನು ಸಂಭ್ರಮಿಸಿ ಸುಮ್ಮನಾಗುತ್ತೀರಾ? ಅಥವಾ ಆ ಸಾಧನೆಯನ್ನು ಕರ್ತನಿಗೆ ಸಮರ್ಪಿಸಿ ಅದರ ಮಹಿಮೆಯನ್ನು ಆತನಿಗೆ ಸಲ್ಲಿಸುತ್ತೀರಾ? ನೀವು ಹೀಗೆ ಮಾಡಿದ್ದಾದರೆ ಮತ್ತೊಂದು ಹಂತದ ಆಶೀರ್ವಾದಕ್ಕೆ ನೀವು ಸಾಗುವಿರಿ.
ಪ್ರಾರ್ಥನೆಗಳು
ತಂದೆಯೇ, ನಾನು ಜೀವದಿಂದಿರುವವರೆಗೂ ನಿನಗೆ ನಂಬಿಗಸ್ತಿಕೆಯಿಂದ ಜೀವಿಸುವಂತೆ ಯೇಸು ನಾಮದಲ್ಲಿ ಕೃಪೆ ಮಾಡು. ಆಮೆನ್.
Join our WhatsApp Channel
Most Read
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸರ್ವಬೀಗದ ಕೈ
● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ನಿಮ್ಮನ್ನು ನಡೆಸುತ್ತಿರುವವರು ಯಾರು?
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
ಅನಿಸಿಕೆಗಳು