ಅನುದಿನದ ಮನ್ನಾ
ಸತ್ತವರೊಳಗಿಂದ ಮೊದಲು ಎದ್ದು ಬಂದವನು.
Sunday, 25th of February 2024
0
0
367
Categories :
ಕ್ರಿಸ್ತನಲ್ಲಿನ ದೈವತ್ವ(Deity of Christ)
"ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದುಬಂದವನೂ ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ ನಮ್ಮನ್ನು ರಾಜ್ಯವನ್ನಾಗಿಯೂ.. "(ಪ್ರಕಟನೆ 1:5)
ಕರ್ತನಿಗೆ ಇರುವ ಎರಡನೆಯ ಪದನಾಮ ಎಂದರೆ "ಸತ್ತವರೊಳಗಿಂದ ಮೊದಲು ಎದ್ದು ಬಂದವನು" ಎಂದು.
ಕರ್ತನು ಏಕೆ ಹೀಗೆ ಕರೆಯಲ್ಪಟ್ಟಿದ್ದಾನೆ?
"ಆ ಸಂಗತಿಗಳು ಏನಂದರೆ - ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು ಎಂಬದೇ."(ಅಪೊಸ್ತಲರ ಕೃತ್ಯಗಳು 26:23 )
ಈ ವಾಕ್ಯವನ್ನು ಗಮನಿಸಿ ನೋಡಿರಿ, ಇಲ್ಲಿಯೂ ಸಹ ಆತನು "ಸತ್ತವರೊಳಗಿಂದ ಎದ್ದು ಬಂದವನೆಂದು" ಹೇಳಿದೆ. ಆತನು ಸತ್ತವರೊಳಗಿಂದ ಎದ್ದು ಬಂದವನಾಗಿದ್ದು ಎಂದೆಂದಿಗೂ ಜೀವದಿಂದಿರುವವನು ಎಂಬುದರ ನಿಜವಾದ ಅರ್ಥವೇನು? ನಿಜವಾಗಿಯೂ ಸತ್ತವರೊಳಗಿಂದ ಮೊದಲು ಎದ್ದು ಬಂದವನೇ ಆಗಿದ್ದಾನೆ ಎಂಬುದೇ.
"ಸತ್ತವರೊಳಗಿಂದ ಮೊದಲು ಎದ್ದು ಬಂದವನು" ಎಂದು ಕ್ರಿಸ್ತನನ್ನು ಉಲ್ಲೇಖಿಸುವ ಮೂಲಕ ಕೊಲೊಸ್ಸೆಯವರಿಗೆ 1:15 ರಲ್ಲಿನ "ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ."
ಎಂಬ ಒಗಟಾದ ಹೇಳಿಕೆಗೆ ಸ್ಪಷ್ಟೀಕರಣ ನೀಡುತ್ತದೆ. ಇಲ್ಲಿ ಕ್ರಿಸ್ತನನ್ನು ಸೃಷ್ಟಿಗೆಲ್ಲಾ ಜೇಷ್ಠನಾದವನು ಎಂದು ಹೇಳಲ್ಪಟ್ಟಿದೆ
ಮೇಲ್ಮುಖವಾಗಿ ನೋಡಿದರೆ ಇದು ಕ್ರಿಸ್ತನು ಅಸ್ತಿತ್ವಕ್ಕೆ ಬಂದಿದ್ದು ಈ ಲೋಕದಲ್ಲಿ ಹುಟ್ಟಿದ ಮೇಲೆಯೇ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತನು ನಿತ್ಯವಾಗಿ ಇರುವವನಲ್ಲ ಆತನು ಸಹ ಸೃಷ್ಟಿಯಾದವನೇ ಎಂದು ಕೇಳಿಸುತ್ತದೆ. ಯಹೋವನ ಸಾಕ್ಷಿಗಳು ಈ ಒಂದು ದೇವರ ವಾಕ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ಹೇಳುತ್ತಾರೆ ಮುಖ್ಯ ವಿಷಯವೇನೆಂದರೆ ಯೇಸುಕ್ರಿಸ್ತನು ಪ್ರಪ್ರಥಮವಾಗಿ ಸತ್ತವರೊಳಗಿಂದ ಶಾಶ್ವತವಾಗಿ ಎದ್ದು ಬಂದವನಾಗಿದ್ದಾನೆ.
"ಮೊದಲು ಎದ್ದು ಬಂದವನು" ಎಂಬ ಪದದ ಅರ್ಥವೇನೆಂದರೆ, ಅನೇಕ ಮಂದಿ ಜನರು ಮಹಿಮೆಯಿಂದ ನಿರ್ಲಯವಾದ ದೇಹದಲ್ಲಿ ಏಳುವುದರಲ್ಲಿ ಈತನೇ ಪ್ರಪ್ರಥಮ ಫಲವಾದನು ಎಂದು (1ಕೊರಿಯಂತೆ 5:20)
ಕ್ರಿಸ್ತನ ಎರಡನೇ ಬರೋಣದ ಸಮಯದಲ್ಲಿ ನಾವು ಮಹಿಮೆಯ ದೇಹವನ್ನು ಹೊಂದಿಕೊಳ್ಳುತ್ತೇವೆ ಎಂದು ಸತ್ಯವೇದ ಹೇಳುತ್ತದೆ. ಹಾಗಾದರೆ ನಮ್ಮ ಆ ಮಹಿಮಾ ಶರೀರವು ಹೇಗಿರುತ್ತದೆ?
"ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ." ಎಂದು 1 ಕೊರಿಂಥದವರಿಗೆ 15:53 ಹೇಳುತ್ತದೆ.
ಈ ವಾಕ್ಯವು ನಾವು ರೂಪಾಂತರಗೊಂಡಿರುತ್ತೇವೆ ಎಂದು ಹೇಳುತ್ತದೆ. "ಪ್ರಿಯರೇ, ಈಗ ದೇವರ ಮಕ್ಕಳಾಗಿದ್ದೇವೆ; ಮುಂದೆ ನಾವು ಏನಾಗುವೆವೋ ಅದು ಇನ್ನು ಪ್ರತ್ಯಕ್ಷವಾಗಲಿಲ್ಲ. ಕ್ರಿಸ್ತನು ಪ್ರತ್ಯಕ್ಷನಾಕುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು" ಎಂದು 1ಯೋಹಾನ 3:2 ಹೇಳುತ್ತದೆ.ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ಮಹಿಮೆಯ ಶರೀರಗಳು ಕ್ರಿಸ್ತನ ಮಹಿಮೆಯ ಶರೀರದಂತಿರುತ್ತದೆ
ಕ್ರಿಸ್ತನ ಮಹಿಮೆಯ ಶರೀರವು ಹೇಗಿತ್ತು?
1. ಅದು ಆತ್ಮಿಕವಾಗಿತ್ತು: ಅದು ಸ್ವಾಭಾವಿಕ ನಿಯಮವನ್ನು ಮೀರಿದಂತದ್ದಾಗಿತ್ತು, ಲೂಕ 24 ಮತ್ತು ಯೋಹಾನ 20 ರ ಪ್ರಕಾರ ಯೇಸು ಸ್ವಾಮಿಯು ಪ್ರತ್ಯಕ್ಷವಾಗುವ ಮಾಯವಾಗುವ ಸಾಮರ್ಥ್ಯವನ್ನು ಹೊಂದಿದ್ದನು. ಮತ್ತು ಆತನು ಗೋಡೆಗಳ ಮುಖಾಂತರ ಮುಚ್ಚಿದ ಬಾಗಿಲುಗಳ ಮೂಲಕ ಸಹ ಹೋಗಿ ಬರುವಂತಿದ್ದನು
2. ಅದು ಭೌತಿಕವಾಗಿತ್ತು : ಯೇಸುಸ್ವಾಮಿಗೆ ಮೀನನ್ನು ಜೇನನ್ನು ತಿನ್ನಲು ಸಾಧ್ಯವಾಯಿತು. ಆತನು ತನ್ನ ಕೈಗಳ ಮತ್ತು ಕಾಲುಗಳಿದ್ದ ಮೊಳೆಗಳಿಂದ ಆದ ಗಾಯಗಳನ್ನು ತನ್ನ ಶಿಷ್ಯರಿಗೆ ತೋರಿಸಿದನು. ಮತ್ತು ಆತನಿಗೆ ಮಾತಾಡಲು ಸಾಧ್ಯವಾಗುತ್ತಿತ್ತು ಮತ್ತು ಆತನು ಅರ್ಥ ಮಾಡಿಕೊಳ್ಳಲು ಶಕ್ತನಾಗಿದ್ದನು.
3. ಅದು ಬಲದಿಂದ ಕೂಡಿತ್ತು: ಅಪೋಸ್ತಲರ ಕೃತ್ಯ 1:9-11 ರಲ್ಲಿ ಯೇಸು ಸ್ವಾಮಿಯು ಪರ್ವತದ ಮೇಲೆ ನಿಂತವನಾಗಿದ್ದನು ಮತ್ತು ಅಲ್ಲಿಂದ ಆಕಾಶಕ್ಕೆ ಪಕ್ಕನೆ ಏರಿಹೋದನು.
4. ಅದು ಮಹಿಮೆಯಿಂದ ಕೂಡಿತ್ತು: ಲೂಕ 24:31ರಲ್ಲಿ ತೋರಿಸಿದಂತೆ ಯೇಸುವು ತಾನು ಅಂದುಕೊಂಡ ಜಾಗಕ್ಕೆ ಅಂದುಕೊಂಡ ಕ್ಷಣದಲ್ಲಿ ಹೋಗುತ್ತಿದ್ದನು.
5. ಅದು ಅವಿನಾಶಿಯಾಗಿತ್ತು : ಅಪೋಸ್ತಲ ಕೃತ್ಯ 1:11 ಯೇಸು ಸ್ವಾಮಿಯು 2000 ವರ್ಷಗಳ ಹಿಂದೆ ಇದ್ದ ಅದೇ ದೇಹದಲ್ಲಿ ತಿರುಗಿ ಬರುವವನಾಗಿದ್ದಾನೆ ಎಂಬುದನ್ನು ತೋರಿಸುತ್ತದೆ.
ಪ್ರಾರ್ಥನೆಗಳು
1. ಪ್ರೀತಿಯುಳ್ಳ, ತಂದೆಯೇ ಕರ್ತನಾದ ಯೇಸುಕ್ರಿಸ್ತನು ನನಗಾಗಿ ಬಂದು ನನಗಾಗಿ ಸತ್ತನೆಂದು ಮತ್ತು ಆತನನ್ನು ಅಂಗೀಕರಿಸಿಕೊಳ್ಳುವ ಮೂಲಕ ನಾನು ಕ್ಷಮಾಪಣೆಯನ್ನು ಹೊಂದಿ ನಿತ್ಯ ಜೀವವನ್ನು ಪಡೆದಿದ್ದೇನೆ ಎಂದು ಹೃದಯದಿಂದ ನಂಬಿ ಬಾಯಿಂದ ಅರಿಕೆ ಮಾಡುವೆನು.
2. ಕರ್ತನೇ, ನಿನ್ನ ಆತ್ಮನಿಂದಲೇ ನಿನ್ನ ಮಹಿಮೆಯ ಬರೊಣಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಬಲಪಡಿಸು.
3. ಕರ್ತನೇ, ಇತರರನ್ನು ಸಹ ನಿನ್ನ ನಂಬಿಕೆಗೆ ಕರೆತರುವಂತೆ, ಅವರು ಮಾನಸಾಂತರ ಪಟ್ಟು ನಿನ್ನ ಕಡೆಗೆ ತಿರುಗಿಕೊಳ್ಳುವಂತೆಯೂ ನಾನು ಸುವಾರ್ತೆ ಸಾರಲು ನನ್ನನ್ನು ಬಲಪಡಿಸು, ಇದರಿಂದ ಅವರೂ ಸಹ ನಿನ್ನ ಮಹಿಮೆಯ ಬರೋಣಕ್ಕಾಗಿ ಸಿದ್ದರಾಗುತ್ತಾರೆ ಎಂದು ಯೇಸು ನಾಮದಲ್ಲಿ ಬೇಡಿ ಹೊಂದಿದ್ದೇನೆ ತಂದೆಯೇ ಆಮೆನ್.
2. ಕರ್ತನೇ, ನಿನ್ನ ಆತ್ಮನಿಂದಲೇ ನಿನ್ನ ಮಹಿಮೆಯ ಬರೊಣಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಬಲಪಡಿಸು.
3. ಕರ್ತನೇ, ಇತರರನ್ನು ಸಹ ನಿನ್ನ ನಂಬಿಕೆಗೆ ಕರೆತರುವಂತೆ, ಅವರು ಮಾನಸಾಂತರ ಪಟ್ಟು ನಿನ್ನ ಕಡೆಗೆ ತಿರುಗಿಕೊಳ್ಳುವಂತೆಯೂ ನಾನು ಸುವಾರ್ತೆ ಸಾರಲು ನನ್ನನ್ನು ಬಲಪಡಿಸು, ಇದರಿಂದ ಅವರೂ ಸಹ ನಿನ್ನ ಮಹಿಮೆಯ ಬರೋಣಕ್ಕಾಗಿ ಸಿದ್ದರಾಗುತ್ತಾರೆ ಎಂದು ಯೇಸು ನಾಮದಲ್ಲಿ ಬೇಡಿ ಹೊಂದಿದ್ದೇನೆ ತಂದೆಯೇ ಆಮೆನ್.
Join our WhatsApp Channel
Most Read
● ದೇವರು ಹೇಗೆ ಒದಗಿಸುತ್ತಾನೆ #2● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ದರ್ಶನ ಹಾಗೂ ಸಾಕಾರದ ನಡುವೆ...
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಕ್ರಿಸ್ತನ ಮೂಲಕ ಜಯಶಾಲಿಗಳು
ಅನಿಸಿಕೆಗಳು