ಅನುದಿನದ ಮನ್ನಾ
ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
Thursday, 28th of March 2024
2
1
459
Categories :
ಆರಾಧನೆ (Worship)
"ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು."(ಮತ್ತಾಯ 5:16).
ನೀವು ಒಂದು ಸಾರಿ ಕರ್ತನ ಸಾನಿಧ್ಯಕ್ಕೆ ನಿಯಮಿತವಾಗಿ ಬರುವುದನ್ನು ರೂಡಿಸಿಕೊಂಡು ಬಿಟ್ಟರೆ ನೀವು ಮತ್ತೆಂದಿಗೂ ನೀವು ಈಗ ಹೇಗಿದ್ದೀರೋ ಹಾಗೆಯೇ ಇರುವುದಿಲ್ಲ.ನೀವು ಪರಿಸ್ಥಿತಿಗಳನ್ನು ಸಂಗತಿಗಳನ್ನು ಎಲ್ಲವನ್ನು ದೇವರ ದೃಷ್ಟಿಯಲ್ಲಿ ನೋಡುವಾಗ ಸಂಪೂರ್ಣವಾಗಿ ವೈವಿಧ್ಯವಾಗಿ ಅವು ಕಾಣುತ್ತವೆ. ಅದು ನಿಮ್ಮ ನಡತೆಯನ್ನೇ ಬದಲಾಯಿಸಿ ಬಿಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನೀವು ಹಿಂದೆ ಹೇಗೆಲ್ಲಾ ನಡೆದುಕೊಳ್ಳುತ್ತಿದ್ದಿರೋ ಇನ್ನೆಂದಿಗೂ ನೀವು ಆ ರೀತಿ ನಡೆದುಕೊಳ್ಳಲಾರಿರಿ. ಎಸ್ತೇರಳು ಸಾಮಾನ್ಯವಾದ ರೈತ ವರ್ಗಕ್ಕೆ ಸೇರಿದ ಹುಡುಗಿಯಾಗಿದ್ದಳು. ಆದರೆ ಒಂದು ವರ್ಷಗಳ ಕಾಲದ ಅವಳಿಗಾದಂತ ಸಿದ್ಧತೆಯು ಒಂದೇ ರಾತ್ರಿಯಲಿ ಅವಳು ಅರಸನೊಂದಿಗೆ ಎಂದೆಂದಿಗೂ ಇರುವಂತೆ ಬದಲಾಯಿಸಿತು.
ಅವಳಿಗೆ ಒಂದು ಬಾರಿಯಾದರೂ ಅರಸನನ್ನು ಭೇಟಿಯಾಗುವೆನು ಎಂಬ ಭರವಸೆ ಕೂಡ ಇರಲಿಲ್ಲ. ಫಲವೇನಾದರೂ ಸರಿಯೇ ಎಂದು ಅವಳು ತನ್ನನ್ನು ಸಿದ್ದ ಪಡಿಸಿಕೊಂಡಳು. ಅವಳ ಸಿದ್ಧತೆಯ ಕಾಲವು ಮುಗಿದ ಮೇಲೆ ಅವಳಿಗೆ ಅಂದಿನಿಂದ ಸದಾ ರಾಜನ ಸಮುಖಕ್ಕೆ ಹೋಗುವ ಅವಕಾಶ ಲಭಿಸಿತು. ಈಗ ಅವಳು ರೈತ ವರ್ಗದ ಹುಡುಗಿಯಾಗಿಯೇ ಉಳಿಯದೆ 127 ದೇಶಗಳಿಗೂ ಸರ್ವಾಧಿಪತಿಯಾದ ಅರಸನ ಪಟ್ಟದ ರಾಣಿ ಆದಳು. ಅವಳು ಎಂದಿನಿಂದ ತನ್ನನ್ನು ತಾನು ಅರಸನ ಪಟ್ಟದ ರಾಣಿ ಆಗಬೇಕು ಎಂಬ ಬಯಕೆಯಿಂದ ಹೆಜ್ಜೆ ಇಡಲು, ಮಾತಾಡಲು, ರಾಣಿಯಂತೆ ಮುಂದುವರೆಯಲು ಆರಂಭಿಸಿದಳೋ ಅವಳು ಅದೇ ಆಗಿಬಿಟ್ಟಳು. ಅವಳ ಅದ್ಭುತ ಪೂರ್ವ ಸಿದ್ಧತೆಯೇ ಆನಂತರದಲ್ಲಿ ಅವಳ ಜೀವನ ಶೈಲಿಯಾಗಿ ಬಿಟ್ಟಿತು.
ನೆನಪಿಡಿರಿ, ಆರಾಧನೆ ಎನ್ನುವಂಥದ್ದು ಕೇವಲ ಸಭೆಯಾಗಿ ಕೂಡಿ ಬಂದಾಗ ಅಥವಾ ಚರ್ಚಿನಲ್ಲಿ ಒಂದು ಗಂಟೆಯೋ ಎರಡು ಗಂಟೆಯೋ ಅಥವಾ ಏಕಾಂತವಾಗಿ ದೇವರ ಸಾನಿದ್ಯದಲ್ಲಿ ಕುಳಿತಾಗ ಮಾತ್ರವೇ ಮಾಡುವ ಕಾರ್ಯವಲ್ಲ. ಅದು ನಮ್ಮ ಜೀವನ ಶೈಲಿ ಆಗಬೇಕು. ನೀವು ಎಲ್ಲೇ ಹೋದರೂ,ಅದು ಎಂತದ್ದೇ ಪರಿಸ್ಥಿತಿ ಆಗಿರಲಿ,ಆರಾಧನೆಯ ಪರಿಮಳವನ್ನು ನಿಮ್ಮ ಜೊತೆ ನೀವು ಕೊಂಡೊಯುವವರಾಗಿರಬೇಕು. ಏಕೆಂದರೆ ರಾಜಾಧಿರಾಜನಾದ ಕರ್ತನು ಪವಿತ್ರಾತ್ಮನ ಮುಖಾಂತರ ನಮ್ಮೊಳಗೆ ವಾಸಿಸುವನು. ಆದ್ದರಿಂದ ನಾವು ಎಲ್ಲಿಗೆ ಹೋದರೂ ಆತನ ಪ್ರಸನ್ನತೆಯನ್ನು ಕೊಂಡೊಯ್ಯುವವರಾಗಿರುತ್ತೇವೆ.ಆದ್ದರಿಂದ ನಿಮ್ಮ ಪ್ರತಿದಿನದ ಪ್ರತಿಯೊಂದು ಕ್ಷಣವನ್ನು ಆರಾಧನೆಗೆ ಸಿಕ್ಕ ಅವಕಾಶವೂ ಕಾರಣವೂ ಆಗಿರಲಿ.
ಆರಾಧನೆ ಎಂಬುದು ನಾವೇನು ಮಾಡುತ್ತೇವೋ ಅದಲ್ಲ ಆದರೆ ನಾವೇನಾಗಿದ್ದೇವೆಯೋ ಅದೇ ಆಗಿದೆ! ನಾವು ಸ್ವಾಭಾವಿಕವಾಗಿ ಆರಾಧಕರಾಗಿದ್ದೇವೆ. ನಾವು ರಾಜಾಧಿರಾಜನಿಗೆ ಪ್ರಿಯರಾಗಿರುವ ಕಾರಣ ನಮ್ಮ ಜೀವಿತವೆಲ್ಲವೂ ಆರಾಧನಾ ಪ್ರಕ್ರಿಯೆಯಲ್ಲಿಯೇ ಮುಂದುವರೆಯುತ್ತದೆ. ಮತ್ತಾಯ ಐದರಲ್ಲಿ ಕರ್ತನಾದ ಯೇಸು ಕ್ರಿಸ್ತನು ಆರಾಧಕರ ಗುಣ ಸ್ವಭಾವವನ್ನು ಹೀಗೆ ವರ್ಣಿಸುತ್ತಾನೆ. ಆರಾಧಕರು ಆತ್ಮದಲ್ಲಿ ಬಡವರಾಗಿರುತ್ತಾರೆ, (ಲೋಕದಲ್ಲಿನ ಪಾಪಗಳ ಬಗ್ಗೆ) ದುಃಖಿತರಾಗಿರುತ್ತಾರೆ, ಅವರು ಸಾತ್ವಿಕರಾಗಿರುತ್ತಾರೆ, ನೀತಿಗಾಗಿ ಹಸಿದು ಬಾಯಾರಿದವರಾಗಿರುತ್ತಾರೆ ಮತ್ತು ಹೃದಯದಲ್ಲಿ ನಿರ್ಮಲರಾಗಿದ್ದು ಸಮಾಧಾನ ಪಡಿಸುವವರಾಗಿರುತ್ತಾರೆ ಎಂದು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅವರು ತಮ್ಮ ತಂದೆಯೂ -ಅರಸನೂ ಆದಂತಹ ಕರ್ತನ ಗುಣಾತಿಶಯಗಳನ್ನು ಪ್ರದರ್ಶಿಸುವವರಾಗಿರುತ್ತಾರೆ.
ಇನ್ನೂಂದು ರೀತಿಯಲ್ಲಿ ಹೇಳುವುದಾದರೆ, ನಾವು ಏನೇ ಮಾಡಿದರೂ ಅಥವಾ ನಾವು ಏನೇ ಮಾತಾಡಿದರೂ ಅದು ಆತನ ನಾಮದ ಮಹಿಮೆಯನ್ನು ಗುಣಾತಿಶಯವನ್ನು ಪ್ರತಿಬಿಂಬಿಸುವಂತಿರಬೇಕು.ನಿಮ್ಮನ್ನು ನೀವೇ ಈಗ ಪ್ರಶ್ನಿಸಿಕೊಳ್ಳಿರಿ... ನಾನು ನನ್ನ ದಿನನಿತ್ಯದ ಜೀವನದಲ್ಲಿ ಈ ರೀತಿ ಆರಾಧನಾ ಕ್ರಮದಲ್ಲಿದ್ದೇನಾ? ನನ್ನ ನುಡಿಯ- ನಡೆಯು ಜನರನ್ನು ಕರ್ತನಾದ ಯೇಸುವಿನ ಬಳಿಗೆ ತರುವಂತದ್ದಾ? ಅಥವಾ ಯೇಸುವಿನ ಬಳಿಯಿಂದ ಓಡಿ ಹೋಗುವಂತೆ ಮಾಡುವಂತದ್ದಾ? ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.
ಪ್ರಾರ್ಥನೆಗಳು
ತಂದೆಯೇ, ನನ್ನ ಪೂರ್ಣ ಹೃದಯದಿಂದ, ಪೂರ್ಣ ಬಲದಿಂದ, ನಿನ್ನನ್ನು ಆರಾಧಿಸುವಂತೆ ಕೃಪೆ ಕೊಡು. ಆರಾಧನೆಯೇ ನನ್ನ ಜೀವನ ಶೈಲಿಯಾಗುವಂತೆ ಮಾಡು. ನಾನು ಏನೇ ಮಾತಾಡಿದರೂ ನಾನೇನೇ ಮಾಡಿದರೂ ಅದೆಲ್ಲವೂ ನಿನ್ನ ಮಹಿಮೆಯನ್ನು ಗುಣಾತಿಶಯಗಳನ್ನು ಪ್ರತಿಬಿಂಬಿಸಿ ಜನರನ್ನು ಕರ್ತನಾದ ಯೇಸುವಿನ ಬಳಿಗೆ ಕರೆ ತರುವಂತಾಗಲಿ. ಯೇಸು ನಾಮದಲ್ಲಿ ನನ್ನ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಮೇನ್.
Join our WhatsApp Channel
Most Read
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1● ಹೊಗಳಿಕೆವಂಚಿತ ನಾಯಕರು
● ಎರಡು ಸಾರಿ ಸಾಯಬೇಡಿರಿ
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸಹವಾಸದಲ್ಲಿರುವ ಅಭಿಷೇಕ
● ಮಾತಿನಲ್ಲಿರುವ ಶಕ್ತಿ
ಅನಿಸಿಕೆಗಳು