ಅನುದಿನದ ಮನ್ನಾ
ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
Saturday, 13th of April 2024
5
3
168
Categories :
ದೈವೀಕ ದರ್ಶನ (Divine Visitation)
"ಯೆಹೋವನು ತಾನು ದರ್ಶನ ಕೊಟ್ಟು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು."(ಆದಿಕಾಂಡ 21:1)
ದೇವರ ವಾಕ್ಯ ಹೇಳುತ್ತದೆ, ಕರ್ತನು ಸಾರಾಳನ್ನು ದರ್ಶಿಸಿದನು ಎಂದು.ಸಾರಾಳ ಜೀವಿತದಲ್ಲಿ ಇದೊಂದು ಕರ್ತನ ದೈವಿಕ ದರ್ಶನದ ಸಮಯವಾಗಿತ್ತು. ದೇವರು ತಾನು ದರ್ಶಿಸುವ ಪ್ರತೀ ವ್ಯಕ್ತಿಯ ಜೀವಿತದಲ್ಲಿ ಅದಕೆಂದೇ ಕೆಲವೊಂದು ಸಮಯವನ್ನು ಆಯೋಜಿಸಿರುತ್ತಾನೆ.ನೀವು ಮತ್ತು ನಾನು ಆ ಸಮಯವನ್ನು ಗುರುತಿಸಿಕೊಳ್ಳಬೇಕಷ್ಟೇ.
ಕರ್ತನಾದ ಯೇಸು ಸ್ವಾಮಿಯು ತನ್ನ ಜನರಾದ ಇಸ್ರಾಯೆಲ್ಯರನ್ನು ದರ್ಶಿಸಲೆಂದು ಬಂದನು. ದುರಂತವೆನೆಂದರೆ ಆ ಜನರು ಆ ಸಮಯವನ್ನು ಗುರುತಿಸಿಕೊಳ್ಳಲಾರದವರಾದರು.ಆತನು ತನ್ನ ಸ್ವಂತಕ್ಕೆ ಸ್ವಂತವಾದ ಜನರ ಬಳಿಗೆ ಬಂದನು ಆದರೆ ಅವರಾದರೋ ಆತನನ್ನು ಗುರುತಿಸಲೂ ಇಲ್ಲ ಆತನನ್ನು ಅಂಗೀಕರಿಸಿಕೊಳ್ಳಲೂ ಇಲ್ಲ.
"ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಅತ್ತು - 42ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.43
44ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳುಕೊಳ್ಳಲಿಲ್ಲವಾದದರಿಂದ ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು ಅಂದನು."(ಲೂಕ 19:41-44)
ದೇವರ ಆಲೋಚನೆಯು ಯಾವಾಗಲೂ ನಿಮ್ಮನ್ನು ರಕ್ಷಿಸುವುದಕ್ಕಾಗಿ ಇದೆಯೇ ಹೊರತು ನಿಮ್ಮನ್ನು ನಾಶಪಡಿಸಲು ಅಲ್ಲ. ರೋಗಕ್ಕೆ ಬದಲಾಗಿ ಆರೋಗ್ಯವನ್ನು ಕೊರತೆಯ ಬದಲು ಸೌಲಭ್ಯವನ್ನು ಅನುಗ್ರಹಿಸುವುದಕ್ಕಾಗಿಯೇ ಅದು ಇರುವಂತದಾಗಿದೆ. ಹೇಗೂ ದೇವರು ನಮ್ಮ ಸಮಸ್ಯೆಗಳಿಗಾಗಿ ಪರಿಹಾರ ತರುವ ಆತನ ದರ್ಶನ ಸಮಯವನ್ನು ವಿಪತ್ತಿನಿಂದ ತಪ್ಪಿಸಿಕೊಳ್ಳುವ ಜ್ಞಾನದೊಂದಿಗೆ ಗುರುತಿಸಿಕೊಳ್ಳಬೇಕು.
ದೇವರ ವಾಕ್ಯವು ಇನ್ನೂ ಮುಂದುವರೆದು ಹೇಳುವುದೇನೆಂದರೆ ಕರ್ತನು ತಾನು ಹೇಳಿದ ಹಾಗೆ ಸಾರಾಳಿಗೆ ಮಾಡಿದನು ಎಂದು. ವಾಗ್ದಾನಗಳ ಸಾಕಾರವು ಯಾವಾಗಲೂ ವಾಗ್ದಾನ ಕೊಡುವಾತನ ದರ್ಶನವನ್ನು ಹಿಂಬಾಲಿಸುತ್ತದೆ. ಸಾರಾಳು ಮೊದಲು ಕರ್ತನ ದರ್ಶನದ ಸಮಯವನ್ನು ಗ್ರಹಿಸಿಕೊಂಡಳು ಆನಂತರ ಅದರ ಸಾಕಾರವನ್ನು ಅನುಭವಿಸಿದಳು. ನೀವೂ ಸಹ ನಿಮ್ಮ ಜೀವಿತದಲ್ಲಿ ಮಹತ್ತರವಾದ ಕಾರ್ಯಗಳು ಸಾಕಾರಗೊಳ್ಳಬೇಕೆಂದು ಆಸೆಪಡುತ್ತಿದ್ದರೆ ಮೊದಲು ಆತನ ದರ್ಶನವನ್ನು ಅಪೇಕ್ಷಿಸಿರಿ ಆಮೇಲೆ ಎಂದಿಗೂ ನಿಮ್ಮ ಜೀವಿತ ಈಗಿದ್ದ ಹಾಗೆಯೇ ಇರುವುದಿಲ್ಲ.
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವಿತದಲ್ಲಿ ನಿನ್ನ ದರ್ಶನವಾಗುವ ಸಮಯವನ್ನು ನಾನು ಗ್ರಹಿಸಿಕೊಳ್ಳುವಂತೆ ನನ್ನ ಮನೋನೇತ್ರಗಳನ್ನು ತೆರೆಮಾಡು. ಯೇಸು ನಾಮದಲ್ಲಿ ಅದರ ತಿಳುವಳಿಕೆಯನ್ನು ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.● ಆತನ ಬಲದ ಉದ್ದೇಶ.
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ಸಾಧನೆಯ ಪರೀಕ್ಷೆ.
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ದರ್ಶನ ಹಾಗೂ ಸಾಕಾರದ ನಡುವೆ...
ಅನಿಸಿಕೆಗಳು