ಅನುದಿನದ ಮನ್ನಾ
ಕರ್ತನು ಎಂದಿಗೂ ಕೈ ಬಿಡುವುದಿಲ್ಲ
Thursday, 2nd of May 2024
2
2
246
Categories :
ನಿಷ್ಠೆ (Faithfulness)
"ದೇವರು ಪ್ರೀತಿಯಾಗಿದ್ದಾನೆ" (1ಯೋಹಾನ 4:8)
" ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ" (1 ಕೊರಿಯಂತೆ 13:8)
ಅಪೋಸ್ತಲನಾದ ಪೌಲನು ಈ ದೇವರ ವಾಕ್ಯಗಳನ್ನು ಹೇಗೆ ಬರೆದೆನೆಂದು ನಾನು ಯಾವಾಗಲೂ ಅಚ್ಚರಿ ಪಡುತ್ತೇನೆ. ಆ ಸಮಯದಲ್ಲಿ ಕ್ರೈಸ್ತರು ಅಲ್ಲಿ ಯಾವಾಗಲೂ ಹಿಂಸೆ ಒಳಗಾಗುತ್ತಿದ್ದರು. ಕ್ರೈಸ್ತರಿಗೆ ಕರ್ತನನ್ನು ಅಲ್ಲಗಳೆಯಲು ಹೇಳಿ ಅದರಂತೆ ಮಾಡದಿದ್ದರೆ ಅವರನ್ನು ಆ ರೋಮನ್ನರು ಸಿಂಹದ ಗವಿಯೊಳಗೆ ಹಾಕುತ್ತಿದ್ದರು. ಅದಂತೂ ನೋಡಲು ದೇವ ಜನರ ವಿರುದ್ಧ ನರಕದ ದ್ವಾರಗಳು ಉಗ್ರವಾಗಿ ಭಾಯ್ತೆರೆದು ಕೂತಂತೆ ಕಾಣಿಸುತ್ತಿತ್ತು. ಇಂತಹ ಸಮಯದಲ್ಲಿ ಇಂತಹ ಒಂದು ದೇವರ ವಾಕ್ಯ ಬರೆಯಲು ನಿಜಕ್ಕೂ ಅಪೋಸ್ತಲನಾದ ಪೌಲನಿಗೆ ಅಲೌಕಿಕವಾದ ಪ್ರಕಟಣೆಯೇ ದೊರಕಿರಬೇಕು. ಈ ಒಂದು ವಾಕ್ಯವನ್ನು ಮನುಷ್ಯ ದೃಷ್ಟಿಕೋನದಲ್ಲಿ ಬರೆಯಲು ಸಾಧ್ಯವೇ ಇಲ್ಲ. ಪೌಲನು ನಿಜವಾಗಿಯೂ ಅಲೌಕಿಕವಾದ ಸಂಪೂರ್ಣ ಚಿತ್ರಣವನ್ನು ನೋಡಿರಲೇಬೇಕು.
ಈ ಒಂದು ಕಾಲಮಾನದಲ್ಲಿ ಪ್ರಸ್ತುತ "ದೇವರು ನಮ್ಮ ಕೈ ಬಿಟ್ಟಿದ್ದಾನೆ" ಎಂಬ ಕಷ್ಟಾನುಭವದಲ್ಲಿ ಸಾಗುತ್ತಿದ್ದೇವೆ ಎನಿಸುತ್ತಿದೆ. ಯಾವುದೂ ಸಹ ಸರಿಯಾಗಿಲ್ಲ ಎನಿಸುತ್ತಿದೆ. ನಕರಾತ್ಮಕ ಭಾವನೆಗಳೇ ಎಲ್ಲಾ ಕಡೆಯೂ ಆವರಿಸಿಕೊಳ್ಳುವಂತೆ ಭಾಸವಾಗುತ್ತಿದ್ದಿದ್ದು ನಾವು ಆಗಾಗ್ಗೆ "ದೇವರು ಎಲ್ಲಿ ಹೋದನು" ಎಂದು ಅಚ್ಚರಿಪಡುವವರಾಗಿದ್ದೇವೆ.
ರೂತಳ ಪುಸ್ತಕವು ನೊವೋಮಿ ಎಂಬ ಸ್ತ್ರೀಯನ್ನು ನಮಗೆ ಪರಿಚಯಿಸುತ್ತದೆ. ಬರಗಾಲದ ದೆಸೆಯಿಂದ ಅವರ ಇಡೀ ಕುಟುಂಬವು ಮೊವಬ್ ದೇಶಕ್ಕೆ ಸ್ಥಳಾಂತರ ಗೊಂಡಿತ್ತು. ಇದರಿಂದ ಎಲ್ಲಾ ಪರಿಸ್ಥಿತಿಗಳು ಸರಿಹೋಗುವ ಬದಲು ನೊವೋಮಿಯು ತನ್ನ ಗಂಡನನ್ನು ಮತ್ತು ತನ್ನ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಳು. ಅವಳ ಇಬ್ಬರು ಸೊಸೆಯರು ಸಹ ಈಗ ಅವಳಂತೆ ವಿಧವೆಯರಾದರು. ಈ ಒಂದು ಪರಿಸ್ಥಿತಿಯಲ್ಲಿಯೇ ಅವಳ ಇಬ್ಬರ ಸೊಸೆಯರಲ್ಲಿ ಒಬ್ಬ ಸೊಸೆಯು ಅವಳನ್ನು ಬಿಟ್ಟು ತನ್ನ ತವರಿಗೆ ಹೋಗಿಬಿಟ್ಟಳು. ನೊವೋಮಿಯು ನೋವಿನ ಮೇಲೆ ನೋವನ್ನು, ಸಂಕಟದ ಮೇಲೆ ಸಂಕಟವನ್ನು ಹಾದು ಹೋದಳು. ದುಃಖಿತಳಾಗಿ, ನಿರ್ಗತಿಕಗಳಾಗಿ ಮತ್ತು ಏಕಾಂಗಿಯಾಗಿ ನಿಂತ ನೊವೋಮಿಯು "ದೇವರು ತನ್ನ ಕೈ ಬಿಟ್ಟು ಬಿಟ್ಟಿದ್ದಾನೆ" ಎಂದು ಖಂಡಿತ ಭಾವಿಸಿರಬೇಕು.
"ಹಾಗೆಯೇ ಪ್ರಯಾಣ ಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇವಿುಗೆ ಬಂದು ಊರೊಳಕ್ಕೆ ಹೋದಾಗ ಅಲ್ಲೆಲ್ಲಾ ಗದ್ದಲವಾಯಿತು. ಸ್ತ್ರೀಯರು - ಈಕೆಯು ನೊವೊವಿುಯಲ್ಲವೋ ಎಂದು ಮಾತಾಡತೊಡಗಲು [20] ಆಕೆಯು ಅವರಿಗೆ - ನನ್ನನ್ನು ನೊವೊವಿುಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ ಎಂದು ಕರೆಯಿರಿ. [21] ಭಾಗ್ಯವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಬರಮಾಡಿದನು. ಯೆಹೋವನು ನನಗೆ ವಿರೋಧವಾಗಿ ಸಾಕ್ಷಿಹೇಳಿದ್ದಾನೆ; ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಇದರಿಂದ ನೀವು ನನ್ನನ್ನು ನೊವೊವಿುಯೆಂದು ಕರೆಯುವದು ಹೇಗೆ ಅಂದಳು."(ರೂತಳು 1:19-21)
ನೊವೊಮಿಯು ತನ್ನ ಜೀವನದ ಕೇವಲ ಒಂದು ಚಿತ್ರಣದ ಭಾಗವಷ್ಟೇ ನೋಡಿದ್ದಳು. ಆದರೆ ಕರ್ತನು ಅವಳನ್ನು ತನ್ನ ಮಹಿಮೆಯಿಂದ ಕೂಡಿದಂತ ರಕ್ಷಣೆಗಾಗಿ ನಡೆಸಲು ಅವಳಿಗಾಗಿ ಒಂದು ಯೋಜನೆಯನ್ನು ಇಟ್ಟಿದ್ದಾನೆ ಎಂಬುದನ್ನು ಮಾತ್ರ ಅವಳು ಅರಿಯದವಳಾಗಿದ್ದಳು. ನೊವೋಮಿಯ ನಂಬಿಗಸ್ಥ ಸೊಸೆಯಾದ ರೂತಳು ಭೋಜನನ್ನು ಮದುವೆಯಾಗಲಿದ್ದಾಳೆ ಮತ್ತು ಅರಸನಾದ ದಾವೀದನಿಗೆ ಈ ಭೋವಜ ಮತ್ತು ರೂತಳು ಮುತ್ತಜ್ಜ ಮುತ್ತಜ್ಜಿಯಾಗಲಿದ್ದಾರೆ. ಅವರೇ ಮೆಸ್ಸೀಯನು - ಕರ್ತನಾದ ಯೇಸುಕ್ರಿಸ್ತನು ಹುಟ್ಟಿಬರುವ ವಂಶಾವಳಿಯನ್ನು ಹೊತ್ತು ತರುವಂತವರಾಗಿದ್ದಾರೆ ಎಂಬುದೆಲ್ಲಾ ಆಗ ಆಕೆಗೆ ಕಾಣಿಸುತ್ತಿರಲಿಲ್ಲ.
ರೋಮ್ ಸಾಮ್ರಾಜ್ಯಕ್ಕೆ ಏನಾಯ್ತು ಎಂದು ನಿಮಗೆ ಗೊತ್ತೇ? ಅನೇಕ ರೋಮನ್ನರು ಯೇಸುವನ್ನು ಕರ್ತನೆಂದು ರಕ್ಷಕನೆಂದು ಅಂಗೀಕರಿಸಿಕೊಂಡರು. ಕ್ರೈಸ್ತ ಧರ್ಮವು ಹಿಂಸೆಯಲ್ಲಿಯೂ ಕಾಳ್ಗಿಚ್ಚಿನಂತೆ ಬೆಳೆದಿತ್ತು. ಕೇವಲ 30 ವರ್ಷಗಳಲ್ಲಿಯೇ ರೋಮನ್ ಸಾಮ್ರಾಜ್ಯಕ್ಕೆ ಸುವಾರ್ತೆಯಾಯಿತು ಎಂದು ಚರಿತ್ರೆ ಹೇಳುತ್ತದೆ. ನೋಡ ನೋಡುತ್ತಿದ್ದಂತೆ ಯಾರು ಸೋಲಿಸಲಾರದಂತ ರೋಮನ್ ಸಾಮ್ರಾಜ್ಯವು ದೇವರ ಪ್ರೀತಿಗೆ ಸೋತು ಶರಣಾಗಿ ಇಡೀ ರೋಮ್ ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮವು ಅಧಿಕೃತವಾದ ಧರ್ಮವಾಯಿತು.
ಈ ಪ್ರಸ್ತುತ ಸಮಯದಲ್ಲಿ ನೀವು ದೇವರನ್ನು "ನನಗೆ ಉತ್ತರ ಕೊಡದಂತೆ ಯಾಕೆ ದೂರವಾಗಿ ನಿಂತಿದ್ದೀ" ಎಂದು ನಿಮ್ಮೊಳಗೆ ನೀವೇ ಕೇಳಿಕೊಳ್ಳುತ್ತಿರಬಹುದು. ಆದರೆ ನಾನೀಗ ನೀವು ಸ್ಥಿರಚಿತರಾಗಿರ್ರಿ ಎಂದು ನಿಮ್ಮನ್ನು ಉತ್ತೇಜಿಸಲು ಬಯಸುತ್ತೇನೆ. ದೇವರು ನಿಮ್ಮ ಈ ನೋವಿನ ಕಷ್ಟಕರವಾದ ಸಮಯವನ್ನು ನಿಮ್ಮ ಆತ್ಮೀಕ ಬೆಳವಣಿಗೆಗಾಗಿ ನಿಚ್ಚಣಿಗೆಯಾಗಿ ಬಳಸುತ್ತಿದ್ದಾನೆ. ಮುಖ್ಯವಾಗಿ ದೇವರು ಎಂದಿಗೂ ಕೈಬಿಡುವವನಲ್ಲ. ಆದಷ್ಟು ಬೇಗ ನೀವು ಆತನ ಒಳ್ಳೆಯತನಕ್ಕೆ ಸಾಕ್ಷಿಯಾಗುವಂತೆ ಮಾಡಿಯೇ ಮಾಡುತ್ತಾನೆ!
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದ ಎಲ್ಲಾ ಸಮಯಗಳಲ್ಲೂ ನಿನ್ನ ವಾಕ್ಯದಲ್ಲಿ ಸ್ಥಿರವಾಗಿ ನಿಲ್ಲುವಂಥ ಕೃಪೆಯನ್ನು ಅನುಗ್ರಹಿಸು. ನೀನು ಯಾವಾಗಲೂ ನನ್ನ ಪಕ್ಷದಲ್ಲಿ ಇದ್ದೀಯ ಎಂಬ ತಿಳುವಳಿಕೆಯೊಂದಿಗೆ ಪ್ರತಿದಿನವನ್ನು ವಿಶ್ವಾಸದಿಂದ ಎದುರಿಸುವಂತೆ ಸಹಾಯ ಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.
Join our WhatsApp Channel
Most Read
● ಏಳು ಪಟ್ಟು ಆಶೀರ್ವಾದ● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನೆಪ ಹೇಳುವ ಕಲೆ
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
● ಆರಾಧನೆಗೆ ಬೇಕಾದ ಇಂಧನ
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ವಿವೇಚನೆ v/s ತೀರ್ಪು
ಅನಿಸಿಕೆಗಳು