ಅನುದಿನದ ಮನ್ನಾ
ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
Tuesday, 18th of June 2024
3
2
264
Categories :
ಅನುಗ್ರಹ (Grace)
"ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ."(ಎಫೆಸದವರಿಗೆ 2:8)
ನೀವು ನಿಮ್ಮ ಅಡುಗೆ ಮನೆಯಲ್ಲಿ ನೀರಿನ ಪೂರೈಕೆಯು ಯಾವಾಗಲೂ ಇರಬೇಕೆಂದು ಅದಕ್ಕಾಗಿ ಒಂದು ನಲ್ಲಿಯನ್ನು ಹಾಕಿಸಬೇಕೆಂದು ಬಯಸುತ್ತೀರಾ ಎಂದು ಕಲ್ಪಿಸಿಕೊಳ್ಳಿ. ಅದಕ್ಕಾಗಿ ನೀವು ಏನು ಮಾಡುವಿರಿ? ಸರಿ, ಅದೊಂದು ಸರಳವಾದ ವಿಷಯ! ಒಬ್ಬ ನಲ್ಲಿಯ ಕೆಲಸ ಮಾಡುವವನನ್ನು ಕರೆದು ಅದಕ್ಕೆ ಬೇಕಾದ ಪೈಪನ್ನು ನೀರಿನ ಟ್ಯಾಂಕರಿಗೆ ಜೋಡಿಸಿಸಿ ನಿಮ್ಮ ಅಡಿಗೆ ಮನೆಯಲ್ಲಿ ನಲ್ಲಿಯನ್ನು ಅಳವಡಿಸುಸುತ್ತೀರಿ. ಒಂದು ಸಾರಿ ಸರಿಯಾಗಿ ಪೈಪುಗಳನ್ನು ಜೋಡಿಸಿದಾಗ ಏನಾಯಿತು? ನಿಮ್ಮ ಬಯಕೆಯು ಸಾಕಾರವಾಯಿತು. ಅಲ್ಲವೇ?
ಹಾಗೆಯೇ, ನೀವು ನೀರಿನ ವ್ಯವಸ್ಥೆಗಾಗಿ ಪೈಪುಗಳನ್ನು ನೀರಿನ ಮೂಲಗಳಿಗೆ ಅಳವಡಿಸಿದಂತೆ ನೀವು ನಂಬಿಕೆಯನ್ನು ದೇವರೊಂದಿಗೆ ಅಳವಡಿಸಿಕೊಳ್ಳದೇ ಹೋದರೆ ಕೃಪೆಯು ಅವಿರತವಾಗಿ ನಿಮ್ಮ ಬಳಿಗೆ ಹರಿದು ಬರಲಾರದು. ಒಬ್ಬ ಕ್ರೈಸ್ತನ ಜೀವಿತಕ್ಕೆ ಕೃಪೆಯು ಹರಿದುಬರುವುದಕ್ಕೆ ನಂಬಿಕೆಯೇ ಕೊಳವೆಯಾಗಿದೆ. ನಿಮ್ಮ ಜೀವಿತದಲ್ಲಿ ನಂಬಿಕೆಯು ಕಾರ್ಯ ಮಾಡುತ್ತಿದ್ದರೆ ಕೃಪೆಯು ನಿಮಗೆ ಕೈಗೆಟುಕುವಂತೆ ಇರುತ್ತದೆ.ನಂಬಿಕೆ ಇಲ್ಲದೆ ದೇವರ ಸಾನಿಧ್ಯ ಪ್ರವೇಶಿಸುವುದು ಅಸಾಧ್ಯ ಎಂಬುದನ್ನು ನೆನಪಿಡಿರಿ! ಇಬ್ರಿಯ 11:6 ನಮಗೆ ಇನ್ನೂ ಸ್ಪಷ್ಟವಾಗಿ ಹೇಳುವುದೇನೆಂದರೆ "ನಂಬಿಕೆ ಇಲ್ಲದೆ ದೇವರನ್ನು ಮೆಚ್ಚಿಸಲು ಮಾಡುವ ಎಲ್ಲಾ ಪ್ರಯಾಸವು ವ್ಯರ್ಥ" ಎಂಬುದೇ
ಯಾವಾಗ ಒಬ್ಬ ವ್ಯಕ್ತಿಯು ತನ್ನ ಸ್ವಂತ ಸಾಮರ್ಥ್ಯದ ಮೇಲೆ ಭರವಸೆ ಇಡದೆ ದೇವರ ಸಾಮರ್ಥ್ಯವನ್ನು ವಿಶ್ವಾಸಿಸುತ್ತಾನೋ ಆಗ ದೇವರು ತನ್ನ ಕೃಪಾಸನದ ಪ್ರವೇಶ ದ್ವಾರವನ್ನು ತೆರೆಯುತ್ತಾನೆ. ಎಷ್ಟು ಜನರು ದೇವರ ಕೃಪೆಯು ಅವರಿಗೆ ದೊರಕಬೇಕೆಂದು ಪ್ರಯತ್ನಿಸುತ್ತಾರೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿರಿ. ಕೃಪೆ ಎಂಬ ಅಲೌಕಿಕವಾದ ಸಾಮರ್ಥ್ಯವನ್ನು ಪ್ರವೇಶಿಸಲು ನಿಮಗೆ ಕ್ರಿಸ್ತನು ಮಾಡಿ ಮುಗಿಸಿದ ಕಾರ್ಯಗಳ ಮೇಲಿನ ನಂಬಿಕೆ ಇರಬೇಕು.! ಹಲ್ಲೆಲೂಯ! ನಮ್ಮ ಈ ದಿನದ ವಾಕ್ಯ ಧ್ಯಾನ ಹೇಳುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. "ಅದು ನಿಮ್ಮ ಸಾಮರ್ಥ್ಯದಿಂದ ಉಂಟಾದದ್ದಲ್ಲ ಅದು ದೇವರ ವರವೇ" ಕೃಪೆಯಲ್ಲಿ ನಿಮ್ಮನ್ನು ನಡೆಸುವಂತದ್ದು ಯಾವುದು?ನಂಬಿಕೆಯಿಂದ ಜೀವಿಸುವಂಥದ್ದೇ ಆಗಿದೆ!
ದೇವರೊಂದಿಗೆ ನಡೆಯಲು ನಂಬಿಕೆಯೊಂದೇ ವಿಧಿ ರೂಪವಾದ ಕೀಲಿ ಕೈ ಎಂಬುದು ನಮಗೆ ತಿಳಿದಿದೆ. ಆದರೆ ಕೃಪೆ ಇಲ್ಲದೆ ದೇವರೊಂದಿಗೆ ನಮ್ಮ ನಡೆಯು ನಿರರ್ಥಕ ಮತ್ತು ಕಷ್ಟ ಸಾಧ್ಯ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮ ಜೀವನದ ಹಾದಿಯಲ್ಲಿ ಬರುವ ಅನೇಕ ಜಲರಾಶಿಗಳನ್ನು ದಾಟುವಂತೆ ಕಾರ್ಯ ಮಾಡುವ ನಂಬಿಕೆಗಾಗಿ ದೇವರ ಕೃಪೆಯು ನಮಗೆ ಬೇಕೇ ಬೇಕು. "ನಂಬಿಕೆ ಇಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ" ಎಂದು ಸತ್ಯವೇದ ಹೇಳುವುದರ ಅರ್ಥವೇನು? ಸತ್ಯವೇದದ ಪ್ರಕಾರ ನಂಬಿಕೆ ಎಂದರೆ "ಕಣ್ಣಿಗೆ ಕಾಣದವಗಳನ್ನು ನಿಜವೆಂದು ನಿರೀಕ್ಷಿಸುವುದೇ ನಂಬಿಕೆಯಾಗಿದೆ". ಇಲ್ಲದೇ ಇರುವುದನ್ನು ಇರುವುದಾಗಿ ಕರೆಯುವಂತಹ ತನ್ನ ಸಾಮರ್ಥ್ಯವನ್ನು ನಂಬದೇ ಹೋಗುವ ಜನರಲ್ಲಿ ದೇವರಿಗೆ ಆಸಕ್ತಿ ಇಲ್ಲ! ಆದರೆ ನೀವು ಅಂತಹ ಹೀನಾಯವಾದ ಪರಿಸ್ಥಿತಿಯ ಮೂಲಕವೇ ನಿಮಗೆ ನಂಬಿಕೆಯನ್ನು ಆತನು ಅನುಗ್ರಹಿಸುತ್ತಾನೆ ಎಂದು ನಂಬುತ್ತೀರಾ?
ದೇವರು ನಿಮಗೆ ಉರುಲಾಗಿರುವ ಹಗ್ಗವನ್ನೇ ನಿಮ್ಮನ್ನು ಸಾಧನೆಯ ಶಿಖರಕೇರಿಸುವಂತಹ ನಿಮ್ಮನ್ನು ಮೇಲೆತ್ತುವ ಹಗ್ಗವಾಗಿ ಮಾಡಬಲ್ಲನು. ನಿಮ್ಮ ಸಂಕಷ್ಟಗಳನ್ನೇ ಅದ್ಬುತವಾದ ಆಶೀರ್ವಾದಗಳನ್ನಾಗಿ ಮಾಡಬಲ್ಲನು. ನೀವಿಂದು ನಿಮ್ಮ ಕಾರ್ಯಗಳಿಗಾಗಿ ಹೋಗುವಾಗ ನಿಮ್ಮ ನಂಬಿಕೆಯೇ ದೇವರ ಮೇಲಿನ ಕೀಲಾಗಿರಲಿ ಆತನನ್ನು ವಿಶ್ವಾಸಿಸಿರಿ. ನಿಮ್ಮ ನಂಬಿಕೆಯು ಆತನಲ್ಲೇ ಆಳವಾಗಿ ಬೇರೂರಿರಲಿ. ಆತನು ಎಂದಿಗೂ ಮಾತು ತಪ್ಪುವನಲ್ಲ. ಆತನು ಎಂದಿಗೂ ತಡವರಿಸುವವನಲ್ಲ. ನೀವು ನಂಬಿಕೆಯಲ್ಲಿ ಆತನನ್ನು ಹಿಡಿದುಕೊಂಡೇ ಇದ್ದರೆ ಆತನ ಕೃಪೆಯು ನಿಮಗೆ ಸಾಕಾದದ್ದು. ಮತ್ತದು ನಿಮಗೆ ಪ್ರತ್ಯಕ್ಷವಾಗುತ್ತದೆ.
ಪ್ರಾರ್ಥನೆಗಳು
ತಂದೆಯೇ, ನಿನ್ನನ್ನೇ ಮತ್ತು ನಿನ್ನನ್ನು ಮಾತ್ರವೇ ಹಿಡಿದುಕೊಂಡಿರುವಂತ ಬಲವಾದ ನಂಬಿಕೆಯನ್ನು ಹೊಂದಿಕೊಳ್ಳುವಂತೆ ನನಗೆ ಸಹಾಯ ಮಾಡು.ನಾನು ನಿನ್ನ ನಂಬಿಕೆಯ ಮೇಲೆಯೇ ಆಧಾರಗೊಂಡಿರುವಾಗ ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ಪಡೆದುಕೊಳ್ಳುವಂತೆ ಸಹಾಯ ಮಾಡು.
Join our WhatsApp Channel
Most Read
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ● ಹೆಚ್ಚಿನ ಹೊರೆ ಬೇಡ
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
● ಮಾತಿನಲ್ಲಿರುವ ಶಕ್ತಿ
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
ಅನಿಸಿಕೆಗಳು