ಅನುದಿನದ ಮನ್ನಾ
ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
Thursday, 4th of July 2024
3
2
134
Categories :
ಪ್ರಾರ್ಥನೆ (prayer)
ಬುದ್ಧಿವಂತಿಕೆ (Wisdom)
"ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು."(ಜ್ಞಾನೋಕ್ತಿಗಳು 13:20)
ನಾವು ನಮ್ಮ ಸುತ್ತಲಿನ ಜೊತೆಗಾರರಿಂದ ಬಹುಬೇಗನೆ ಪ್ರಭಾವಕ್ಕೆ ಒಳಗಾಗುವವರಾಗಿದ್ದೇವೆ. ನೀವು ಯಾರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿರೋ ನೀವು ಅವರ ಹಾಗೆಯೇ ಆಗುತ್ತೀರಿ. ಆದುದರಿಂದ ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಬಹು ಜಾಗರೂಕತೆಯಿಂದ ಇರಿ.
ನೀವು ಕೋಪಗೊಳ್ಳುವ ಸಿಡುಕುವಂಥ ಜನರ ಜೊತೆಯಲ್ಲಿದ್ದರೆ ನೀವೂ ಸಹ ಕೋಪ ಮಾಡಿಕೊಳ್ಳುವ ಸಿಡುಕುವ ವ್ಯಕ್ತಿಯಾಗಿ ಮಾರ್ಪಡುವ ಅಪಾಯ ಎದುರಿಸಬೇಕಾಗುತ್ತದೆ. ಏಕೆಂದರೆ ಗುಣ -ಸ್ವಭಾವವು ಒಬ್ಬರಿಂದ ಒಬ್ಬರಿಗೆ ಹರಡುವ ವ್ಯಾಧಿಯಂತೆ.
ದೇವರ ವಾಕ್ಯ ಹೇಳುವುದೇನೆಂದರೆ ನೀವು ಮೂರ್ಖರ ಸಂಗಡ ಇರುವುದಾದರೆ ಕಾಲಕ್ರಮೇಣ ಅವರ ಮೂರ್ಖತನದ ಅಂಟನ್ನೇ ಅವರು ನಿಮಗೂ ಅಂಟಿಸಿ ಹೋಗುತ್ತಾರೆ. ಸೋಲೋಮನನು "ಮೂರ್ಖ" ಎಂದು ಉಲ್ಲೇಖಿಸಿ ಹೇಳುವಾಗ ಒಬ್ಬ ವ್ಯಕ್ತಿಯ ಅಜ್ಞಾನದ ಕುರಿತು ಹೇಳುತ್ತಿಲ್ಲ. ಬದಲಾಗಿ, ಆ ವ್ಯಕ್ತಿಗಳು ಸತ್ಯಕ್ಕೆ ದೂರವಾಗಿದ್ದು ತಮ್ಮ ಸ್ವಯಿಚ್ಚೆಗಳನ್ನು ಪೂರೈಸಿಕೊಳ್ಳುವುದರ ಮೇಲೆ ಮನಸ್ಸಿಟ್ಟವರಾಗಿರುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದಾನೆ. ಅಂಥವರು ತಮ್ಮ ಜೀವನಕ್ಕೆ ಯಾವುದು ಅವರಿಗೆ ಅತ್ಯುತ್ತಮ ಎನಿಸುತ್ತದೆಯೋ ಅದನ್ನೇ ಮೂರ್ಖತನದಿಂದ ನಂಬುವರಾಗಿರುತ್ತಾರೆ. ಅವರು ತಮ್ಮ ದೇಹದ ಎಲ್ಲಾ ದುರಿಚ್ಚೆಗಳನ್ನು ಪೂರೈಸಿಕೊಳ್ಳುವಂತ ಕೆಟ್ಟ ಸಂಗತಿಗಳನ್ನು ಹುಡುಕುತ್ತಿರುತ್ತಾರೆ.
ಒಬ್ಬರು ಹೇಗೆ ಜ್ಞಾನಿಗಳ ಒಡನಾಟದಲ್ಲಿ ನಡೆಯಬಹುದು?
ಜ್ಞಾನಿಗಳ ಪುಸ್ತಕವನ್ನು ಅವರ ಚರಿತ್ರೆಯನ್ನು ಓದುವ ಮೂಲಕ ಒಬ್ಬರು ಅವರೊಂದಿಗೆ ನಡೆಯಬಹುದು. ಅವರು ಹಾದು ಹೋದಂತಹ ಪರಿಶ್ರಮಗಳ ಸಾಲುಗಳನ್ನು ಓದುವ ಮೂಲಕ ಮತ್ತು ಅವರು ಅವರ ಜೀವನದ ಅನುಭವದ ಅತ್ಯುತ್ತಮ ಪಾಠಗಳನ್ನು -ವಿವೇಕಯುತವಾದ ಆಲೋಚನೆಗಳನ್ನು ಹೇಳುವಾಗ ಅದನ್ನು ಕೇಳಿಸಿಕೊಳ್ಳುವ ಮೂಲಕ ಒಬ್ಬರು ಅವರೊಂದಿಗೆ ನಡೆಯಬಹುದು. ಆಗ ನೀವು ಅವರ ತಪ್ಪುಗಳಿಂದಲೂ- ಅವರ ಯಶಸ್ಸಿನಿಂದಲೂ ಜೀವನದ ಪಾಠವನ್ನು ಕಲಿಯುವವರಾಗಿರುತ್ತೀರಿ. "ಓದುಗರೇ ನಾಯಕರಾಗುವವರಾಗಿದ್ದಾರೆ"ಎಂದು ಒಬ್ಬರು ಹೇಳಿದ್ದಾರೆ.
ನೀವು ಜ್ಞಾನಿಗಳ ಮಾತುಗಳನ್ನು ಕೇಳುವ ಮೂಲಕ ಅವರೊಂದಿಗೆ ನಡೆಯಬಹುದು. ಅವರು ಮಾತನಾಡುವ ಕಡೆಗೆ ನೀವು ಹೋಗಿರಿ. ಇಲ್ಲವೇ ಅಂತರ್ಜಾಲದ ಮೂಲಕ ಕೇಳಿಸಿಕೊಳ್ಳಿರಿ ಅಥವಾ ಅವರ ಧ್ವನಿಮುದ್ರಿಕೆಯನ್ನು ಕೇಳಿಸಿಕೊಳ್ಳಿರಿ. ಕೊಲ್ಲಾಪುರದ ಒಬ್ಬ ಪಾಸ್ಟ್ ರವರು ನನಗೆ ಹೀಗೆ ಪತ್ರ ಬರೆದಿದ್ದರು. ಅವರು ಸ್ವಲ್ಪ ಸಮಯದ ಹಿಂದೆ ನಡೆದ W3 ಸಮ್ಮೇಳನದಲ್ಲೂ ಸಹ ಇದನ್ನು ಕುರಿತು ಸಾಕ್ಷಿ ಹೇಳಿದ್ದಾರೆ. ಅವರು "ಪಾಸ್ಟರ್, ನಾನು ನಿರಂತರವಾಗಿ ಬಿಡದೆ ನಿಮ್ಮ ಪ್ರಸಂಗಗಳನ್ನು ಕೇಳುತ್ತಿದ್ದೆ ಯೂಟ್ಯೂಬ್ ನಲ್ಲಿ ನಿಮ್ಮ ಸಾಕ್ಷಿಗಳ ವಿಡಿಯೋಗಳನ್ನು ನೋಡುತ್ತಲೇ ಇದ್ದೆ, ಆಗ ನನ್ನ ನಂಬಿಕೆಯು ಬೆಳೆಯುತ್ತಾ ಬಂತು. ಹಾಗೆಯೇ ನನ್ನ ಸಭೆಯು ಕೂಡ ಇಂದು 300ಕ್ಕಿಂತಲೂ ಅಧಿಕ ಜನರಾಗಿ ಕೂಡಿದ ಸಭೆಯಾಗಿ ಬೆಳೆಯುತ್ತಾ ಹೋಯಿತು"ಎಂದರು.
ಕಡೆಯದಾಗಿ ಹೇಳುವುದೇನೆಂದರೆ, ಅತ್ಯಂತ ಜ್ಞಾನವುಳ್ಳ ನಮ್ಮ ಕರ್ತನಾದ ಯೇಸುಕ್ರಿಸ್ತನೊಂದಿಗೆ ನಡೆಯುವುದನ್ನು ಎಂದಿಗೂ ಮರೆಯಬೇಡಿರಿ. ಆತನ ವಾಕ್ಯ ಧ್ಯಾನ ಹಾಗೂ ಪ್ರಾರ್ಥನೆಯ ಮೂಲಕ ಪ್ರತಿದಿನ ಆತನೊಂದಿಗೆ ಸಂಭಾಷಿಸುತ್ತಲೇ ಇರ್ರಿ. ಈಗ ಈ ಕೆಳಗಿನ ವಾಕ್ಯವನ್ನು ಜಾಗರೂಕತೆಯಿಂದ ಓದಿರಿ.
"ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು. ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು... "(ಅಪೊಸ್ತಲರ ಕೃತ್ಯಗಳು 4:13-14a)
ಪ್ರಾರ್ಥನೆಗಳು
ತಂದೆಯೇ, ನನ್ನ ಸುತ್ತಲೂ ನಿನ್ನ ಕರೆಯನ್ನು ಪೂರೈಸಲು ಸಹಾಯ ಮಾಡುವಂತಹ ಜನರಿಂದ ಸುತ್ತುವರಿಸು. ನಿನ್ನ ಹೃದಯದ ಸ್ಥಾನವನ್ನೇ ಅಪೇಕ್ಷಿಸುವ ಜನರಿಂದ ನನ್ನ ಜೀವಿತವನ್ನು ಯೇಸು ನಾಮದಲ್ಲಿ ತುಂಬಿಸು. ಆಮೆನ್.
Join our WhatsApp Channel
Most Read
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ಬೀಜದಲ್ಲಿರುವ ಶಕ್ತಿ -3
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
ಅನಿಸಿಕೆಗಳು