ಅನುದಿನದ ಮನ್ನಾ
ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
Monday, 15th of July 2024
3
2
253
Categories :
ವಿಧೇಯತೆ (Obedience)
ಸರಳ ಎಚ್ಚರಿಕೆಗಳನ್ನು ಗಮನಿಸಲು ಮನುಷ್ಯ ಸ್ವಭಾವಕ್ಕೆ ಯಾಕೆ ಇಷ್ಟು ಸಮಸ್ಯೆ? ಒಂದು ನಿದರ್ಶನ: ನೀವೊಂದು ಸಣ್ಣ ಮಗುವಿಗೆ "ಆ ಐರನ್ ಬಾಕ್ಸನ್ನು ಮುಟ್ಟಬೇಡ ಅದು ತುಂಬಾ ಬಿಸಿ" ಎಂದು ಹೇಳಿ ನೋಡಿ. ನೀವು ಆ ಮಗುವನ್ನು ಗಮನಿಸದೇ ಇರುವಾಗ ನೀವು ಯಾವ ಐರನ್ ಬಾಕ್ಸನ್ನು ಮುಟ್ಟಬೇಡ ಎಂದು ಹೇಳಿದಿರೋ ಆ ಬಾಕ್ಸನ್ನು ಮುಟ್ಟೇ ಮುಟ್ಟುತ್ತದೆ. ಈ ರೀತಿ ಎಚ್ಚರಿಕೆಗಳನ್ನು ಅಲಕ್ಷಿಸುವ ಸಮಸ್ಯೆ ಕೇವಲ ಬಾಲ್ಯಕ್ಕಷ್ಟೇ ಸೀಮಿತವಾಗಿರದೇ ಅದಕ್ಕಿಂತ ಮೀರಿ ಮುಂದಕ್ಕೆ ಪಯಣಿಸುತ್ತದೆ.
ನೀವು " ಈ ಬಣ್ಣಗಳನ್ನು ಮುಟ್ಟಬೇಡಿರಿ ಇನ್ನೂ ಹಸಿ ಇದೆ " ಎನ್ನುವ ಪೋಸ್ಟರ್ ಬರೆದಿರುವ ಕಡೆ ಗಮನಿಸಿ. ಅದನ್ನು ನೋಡುತ್ತಿರುವ ಜನರಲ್ಲಿ ಅನೇಕರು ಅದಿನ್ನೂ ಹಸಿಯಾಗಿದೆಯೇ ಇಲ್ಲವೇ ಎಂದು ಮುಟ್ಟಿ ನೋಡಿಯೇ ನೋಡುತ್ತಾರೆ. ನಾನು ಹೇಳಲು ಹೊರಟಿರುವ ವಿಷಯವೇನೆಂದರೆ: ಕೊಟ್ಟ ಎಚ್ಚರಿಕೆಗಳ ಕಡೆಗೆ ಗಮನಕೊಡದೆ ಹೋಗುವಂಥದ್ದು ನಿಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ನಾವು ಎಚ್ಚರಿಕೆಗಳನ್ನು ಅಲಕ್ಷಿಸುವ ಮತ್ತು ಆ ಎಚ್ಚರಿಕೆಗಳನ್ನು ಬಹು ಲಘುವಾಗಿ ಎಣಿಸುವ ಸ್ವಭಾವದವರಾಗಿದ್ದೇವೆ.
"ಅವನು ಕುದುರೆಯ ದಂಡನ್ನು ಕೂಡಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿಕೊಳ್ಳುವದಕ್ಕಾಗಿ ತನ್ನ ಪ್ರಜೆಗಳನ್ನು ಐಗುಪ್ತದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಯೆಹೋವನು ಆಜ್ಞಾಪಿಸಿದ್ದಾನಲ್ಲಾ. ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು... "(ಧರ್ಮೋಪದೇಶಕಾಂಡ 17:16-17)
ದೇವರು ತನ್ನ ಜನರನ್ನಾಳುವ ಅರಸರಿಗೆ ನಿರ್ದಿಷ್ಟವಾಗಿ ಈ ಎಚ್ಚರಿಕೆಯನ್ನು ಕೊಟ್ಟಿದ್ದನು. ಸೋಲೊಮನನ್ನು ದೇವರ ಈ ಎಚ್ಚರಿಕೆಯನ್ನು ಅಲಕ್ಷಿಸಿ, "ಅನೇಕ ಅನ್ಯ ಸ್ತ್ರೀಯರ ಮೇಲೆ ವ್ಯಾಮೋಹಕಗೊಂಡನು." ದೇವರ ಆಜ್ಞೆಗೆ ತದ್ವಿರುದ್ಧ ವಾಗಿ ಅವರ ಸೌಂದರ್ಯಕ್ಕೂ ವೈಯ್ಯಾರಕ್ಕೂ ಮರಳುಗೊಂಡನು. ಆ ಸ್ತ್ರೀಯರು ಅದಕ್ಕೆ ತಕ್ಕನಾಗಿ ಸೋಲೋಮನನನ್ನು ಅವರ ದೇವತೆಗಳಿಗಾಗಿ ಆಲಯ ಕಟ್ಟುವಂತೆಯೂ ಉನ್ನತ ಸ್ಥಳಗಳನ್ನು ಕಟ್ಟುವಂತೆಯೂ ಪ್ರಭಾವ ಬೀರಿದರು. ಸೋಲೋಮನನ "ಈ ಪತ್ನಿಯರು ಅವರ ದೇವತೆಗಳಿಗೆ ಧೂಪವನ್ನು ಅರ್ಪಿಸಿ ಯಜ್ಞ ಮಾಡುವವರಾದರು." (1ಅರಸು 11:1-8)
ದೇವರು ಇಸ್ರಾಯೆಲ್ಯರ ಅರಸರಿಗೆ ನೀವು ಕುದುರೆಗಳನ್ನು ಹೆಚ್ಚಿಸಿಕೊಳ್ಳಬಾರದೆಂದು ಸಹ ಎಚ್ಚರಿಸಿದ್ದನು. ಆದರೂ ಸೋಲೋಮನನು 40,000 ಕುದುರೆಗಳನ್ನು ತನ್ನ ರಥಕ್ಕಾಗಿಯೂ, 12,000 ಕುದುರೆ ಸಮಾರರನ್ನು ಕೂಡಿಸಿಕೊಂಡನು ಮತ್ತು ದೇವರ ಎಚ್ಚರಿಕೆಯನ್ನು ಉಲ್ಲಂಘಿಸಿ ಸೋಲೋಮನನು ಐಗುಪ್ತದಿಂದ ಅನೇಕ ಕುದುರೆಗಳನ್ನು (ರಥಗಳನ್ನು) ಆಮದು ಮಾಡಿಕೊಂಡನು. (1ಅರಸು 4:26-29)
ಅಕಸ್ಮಾತ್ ಸೋಲೊಮನನು ದೇವರ ಎಚ್ಚರಿಕೆಗಳನ್ನು ಪಾಲಿಸಿದ್ದರೆ ಚರಿತ್ರೆಯು ವಿಭಿನ್ನವಾಗಿ ರಚಿಸಲ್ಪಡುತ್ತಿತ್ತು ಎಂದು ನನಗೆ ಭರವಸೆ ಇದೆ. ದೇವರಿಂದ ಬರುವ ಎಚ್ಚರಿಕೆಗಳು ಅವು ಕೇವಲ ಸಲಹೆ ಅಷ್ಟೇ ಅಲ್ಲ, ಅದು ಪಾಲಿಸಲೇಬೇಕಾದ ಆಜ್ಞೆಗಳಾಗಿದ್ದು ಅವುಗಳನ್ನು ಪಾಲಿಸುವ ಮೂಲಕ ನಮ್ಮ ಜೀವನದಲ್ಲಿ ಉಂಟಾಗಲಿರುವ ಅನೇಕ ಸಮಸ್ಯೆಗಳನ್ನು ತಡೆಯಬಹುದು.

ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯವನ್ನು ನನ್ನ ಜೀವನದ ಅಸ್ತಿವಾರವನ್ನಾಗಿ ಮಾಡಿಕೊಳ್ಳುವಂತೆಯೂ, ನಿನ್ನ ವಾಕ್ಯದ ವಿಚಾರದಲ್ಲಿ ನಾನು ಸೂಕ್ಷ್ಮತೆಯಿಂದ ವರ್ತಿಸುವಂತೆಯೂ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು
Join our WhatsApp Channel
Most Read
● ಆರಾಧನೆಗೆ ಬೇಕಾದ ಇಂಧನ● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಆಳವಾದ ನೀರಿನೊಳಗೆ
● ಪ್ರೀತಿಯ ಭಾಷೆ
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರು ಹೇಗೆ ಒದಗಿಸುತ್ತಾನೆ #4
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
ಅನಿಸಿಕೆಗಳು