ಅನುದಿನದ ಮನ್ನಾ
ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
Thursday, 18th of July 2024
2
1
170
Categories :
ಪ್ರಾರ್ಥನೆ (prayer)
ಸಾಮಾನ್ಯವಾಗಿ ನೀವು ಜನರೊಟ್ಟಿಗೆ ಮಾತನಾಡುವಾಗ ಅವರು ಅದಕ್ಕೆ ಮರು ಉತ್ತರ ನೀಡಬೇಕೆಂದು ನಿರೀಕ್ಷಿಸುತ್ತೀರಿ. ಕೆಲವೊಮ್ಮೆ ನೀವು ಸಂಪೂರ್ಣವಾಗಿ ಭರವಸೆ ಇಡಲಾರದಂತ ವ್ಯಕ್ತಿಗಳಿಗೆ ಮರುತ್ತರಿಸುವಂತೆ ವಿನಂತಿ ಮಾಡುತ್ತೀರಿ. ಇದು ಆ ವ್ಯಕ್ತಿಗಳು ಗತಕಾಲದಲ್ಲಿ ನಿಮ್ಮೊಂದಿಗೆ ವ್ಯವಹರಿಸಿದ ರೀತಿಯಿಂದ ಆಗಿದ್ದಿರಬಹುದು. ಅದು ಅಷ್ಟು ಮನಮುರಿಯುವಂತೆ ಮಾಡಿ ನಿಮ್ಮನ್ನು ಕಣ್ಣೀರಿನಲ್ಲೂ ನಿರಾಶೆಗಳ ಭಾರದಲ್ಲೂ ಬಿಟ್ಟು ಹೋದದ್ದರಿಂದ ಆಗಿರಬಹುದು.
ವಾಸ್ತವವಾಗಿ ಮನುಷ್ಯನು ಮಾತುತಪ್ಪಬಹುದು, ಆದರೆ ದೇವರು ಎಂದಿಗೂ ಮಾತು ತಪ್ಪನು!. "ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ." ಎಂದು ಸತ್ಯವೇದವು ಸ್ಪಷ್ಟವಾಗಿ ಹೇಳುತ್ತದೆ (ಅರಣ್ಯಕಾಂಡ 23:19). ನೀವು ಪ್ರಾರ್ಥಿಸುವಾಗ ನಿಶ್ಚಿತವಾಗಿ ಉತ್ತರಕ್ಕಾಗಿ ಆತನನ್ನು ಎದುರುನೋಡಬಹುದು.
"ನಮ್ಮ ಪ್ರಾರ್ಥನೆಗಳು ನಯವಿಲ್ಲದಾಗಿರಬಹುದು, ನಮ್ಮ ಪ್ರಯತ್ನಗಳು ದುರ್ಬಲವಾಗಿರಬಹುದು, ಆದರೆ ಕೇಳಿಸಿಕೊಳ್ಳಲು ಶಕ್ತನಾದ ದೇವರಿಗೆ ಮಾಡುವ ಪ್ರಾರ್ಥನೆಯಲ್ಲಿ ಬಲವಿದೆಯೇ ಹೊರತು ಯಾರು ಪ್ರಾರ್ಥಿಸುತ್ತಿದ್ದಾರೋ ಅವರಲ್ಲಲ್ಲ. ನಮ್ಮ ಪ್ರಾರ್ಥನೆಗಳು ವ್ಯತ್ಯಾಸವನ್ನು ಮೂಡಿಸುವಂಥವುಗಳಾಗಿವೆ"ಎಂದು ಒಬ್ಬ ಮಹಾನ್ ದೇವಸೇವಕರು ಒಮ್ಮೆ ಹೇಳಿದ್ದಾರೆ.
ಜನರು ಚಿಕ್ಕ ಮಕ್ಕಳಿಗೆ ಯಾವುದಾದರೂ ವಾಗ್ದಾನ ನೀಡುವಾಗ ಆ ಮಕ್ಕಳು ಎಷ್ಟು ಮುಗ್ದವಾಗಿ ಅವರನ್ನು ಆ ವಾಗ್ದಾನಗಳನ್ನು ನೆರವೇರಿಸುತ್ತಾರೆ ಎಂದು ನಂಬುತ್ತಾರೆ ಎಂಬುದನ್ನು ನಾವು ಬಲ್ಲೆವು.ನಾವು ದೇವರಿಗೆ ಮಾಡುವ ಪ್ರಾರ್ಥನೆಗೂ ಕೂಡ ಈ ನಿದರ್ಶನ ಅಷ್ಟು ದೂರವಾದದ್ದೇನಲ್ಲ. ಆತನ ವಾಕ್ಯವೇ ಹೇಳುವಂತೆ ನಾವು ಆತನ ಚಿತ್ತಕ್ಕನುಗುಣವಾಗಿ ಏನೇ ಬೇಡಿಕೊಂಡರೂ ಆತನು ಅದಕ್ಕೆ ಕಿವಿಗೊಡುವನು. ಒಂದು ಸಣ್ಣ ಮಗು ಸಿಗರೇಟ್ ಅನ್ನು ಕೇಳಿದರೆ ಒಬ್ಬ ಸ್ವಸ್ಥ ಚಿತ್ತನಾದ ವಯಸ್ಕನು ಅದಕ್ಕೆ ಉತ್ತರಿಸುವುದಿಲ್ಲ. ಹಾಗೆಯೇ ನಮ್ಮ ಜೀವಿತದ ಮೂಲಕ ಆತನ ನಾಮಕ್ಕೆ ಮಹಿಮೆ ಆಗುವಂತ ಪ್ರಾರ್ಥನೆಯನ್ನು ನಾವು ಮಾಡುವವರೆಗೂ ಈ ಒಂದು ಅಂಧಕಾರದ ಲೋಕದಲ್ಲಿ ಹೊಳೆಯುವ ಬೆಳಕುಗಳಾಗುವಂತಹ ಪ್ರಾರ್ಥನೆಗಳನ್ನು ಮಾತ್ರ ಆತನು ಕೇಳುತ್ತಾನೆ ಮತ್ತು ಅಂತಹ ಪ್ರಾರ್ಥನೆಗಳಿಗೆ ಉತ್ತರವನ್ನು ನಾವು ಪಡೆಯುತ್ತೇವೆ ಎಂಬ ಸಂಪೂರ್ಣ ಭರವಸೆ ನಮಗಿದೆ. (1ಯೋಹಾನ 5:14,15)
ಪರಿಸ್ಥಿತಿಗಳು ಏನೇ ಆಗಿರಲಿ, ದೇವರು ಪ್ರಾರ್ಥನೆಗೆ ಉತ್ತರ ಕೊಟ್ಟೆ ಕೊಡುತ್ತಾನೆ. ಮನುಷ್ಯರ ಪ್ರಾರ್ಥನೆಗಳಿಗೆ ಕಿವಿಗೊಡುವ- ಮಾಡಿದ ಪ್ರಾರ್ಥನೆಗಳಿಗೆ ಉತ್ತರವನ್ನು ಹೊಂದಿಕೊಂಡ ಮನುಷ್ಯರ ಕಥೆಗಳಿಂದಲೇ ಸತ್ಯವೇದವು ತುಂಬಿದೆ. ಜಕರೀಯನೂ ಅಂತ ಮನುಷ್ಯರಲ್ಲಿ ಒಬ್ಬನು. ಜಕರೀಯನು ತಾನು ಮತ್ತು ತನ್ನ ಹೆಂಡತಿಯು ಮಕ್ಕಳನ್ನು ಹೊಂದಲು ದಿನ ಕಳೆದು ಹೋದಂತಹ ಅಸಮರ್ಥತೆ ಹೊಂದಿದ್ದರೂ ಛಲ ಬಿಡದೆ ಪ್ರಾರ್ಥಿಸುತ್ತಲೇ ಇದ್ದನು. ಕಾಲ ಕಳೆದಂತೆ ಒಂದು ನಿರ್ದಿಷ್ಟ ದಿನದಲ್ಲಿ ಅವನು ಯಥಾವತ್ತಾಗಿ ತನ್ನ ಯಾಜಕ ಧರ್ಮ ನಡೆಸಲು ದೇವಾಲಯಕ್ಕೆ ಹೋದಾಗ ದೇವದೂತನು ಪ್ರತ್ಯಕ್ಷನಾಗಿ "ಜಕರೀಯನೇ ಹೆದರಬೇಡ, ನಿನ್ನ ಪ್ರಾರ್ಥನೆಗಳು ಕೇಳಲ್ಪಟ್ಟಿವೆ" ಎಂದನು (ಲೂಕ 1:13)
ಅಪೋಸ್ತಲನಾದ ಪೇತ್ರನು ಸೆರೆಗೆ ಹಾಕಲ್ಪಟ್ಟಿದ್ದು ನಿಮಗೆ ನೆನಪಿದೆಯೇ? ಅವರೆಲ್ಲ ಅವನ ಬಿಡುಗಡೆಗಾಗಿ ಎಲ್ಲಾ ಕಡೆಯಿಂದಲೂ ಪ್ರಯತ್ನಿಸಿರಬಹುದು. ಆದರೆ ಒಂದು ಅಲೌಕಿಕವಾದ ಘಟನೆಯು ಪೇತ್ರನ ಬಿಡುಗಡೆ ವಿಚಾರದಲ್ಲಿ ಜರಗಿತ್ತು. "ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ ಸಭೆಯವರು ಆತನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿದ್ದರು." ಎಂದು ಅಪೊಸ್ತಲರ ಕೃತ್ಯಗಳು 12:5 ಹೇಳುತ್ತದೆ.
ನೀವಿಂದು ಯಾವುದಕ್ಕಾಗಿ ಪ್ರಾರ್ಥಿಸುತ್ತಿದ್ದೀರಿ? ಒಂದು ಕೆಲಸ, ಒಳ್ಳೆಯ ದಾಂಪತ್ಯ, ಸೇವೆಯಲ್ಲಿ ಯಶಸ್ಸು, ಒಳ್ಳೆಯ ಆರೋಗ್ಯ, ಒಂದು ಮಗು?. ಸಕಲ ಒಳ್ಳೆಯ ಹಾಗೂ ಪರಿಪೂರ್ಣವಾದ ದಾನಗಳನ್ನು ಅನುಗ್ರಹಿಸಬಲ್ಲ ಕರ್ತನಿಗೇ ನೀವು ಪ್ರಾರ್ಥಿಸಿರಿ. (ಯಾಕೋಬ 1:17 ಓದಿರಿ).
ನಿಮ್ಮ ಸವಾಲುಗಳನ್ನು ಪ್ರಾರ್ಥನೆಯಲ್ಲಿ ಕರ್ತನ ಸಮ್ಮುಖಕ್ಕೆ ತನ್ನಿರಿ ಮತ್ತು ನೀವು ನಿಮ್ಮ ಸಮಸ್ಯೆಗಳನ್ನೆಲ್ಲಾ ಆತನಿಗೆ ಹೇಳುವುದಾದರೆ ಖಂಡಿತವಾಗಿಯೂ ಆತನು ನಿಮಗೆ ಅದನ್ನು ನಡೆಸಿಕೊಡುತ್ತಾನೆ.
ಪ್ರಾರ್ಥನೆಗಳು
ತಂದೆಯೇ, ನಾನು ಪ್ರಾರ್ಥಿಸುವಾಗಲೆಲ್ಲಾ ನೀನು ಕಿವಿ ಗೊಡುವನಾಗಿದ್ದೀಯಾ. ಅದಕ್ಕಾಗಿ ನಿನಗೆ ಸ್ತೋತ್ರ. ನಾನು ಸೇವಿಸುವ ನನ್ನ ದೇವರು ನನ್ನ ಪ್ರಾರ್ಥನೆಗಳಿಗೆ ಉತ್ತರ ಕೊಡುವನಾಗಿದ್ದಾನೆ ಎಂದು ನನ್ನ ಹೃದಯವು ಹರ್ಷಿಸುತ್ತದೆ. ನನ್ನ ಮಾರ್ಗಗಳೆಲ್ಲವನ್ನೂ ನಿನಗೆ ಒಪ್ಪಿಸಿ ಕೊಡುವೆನು. ಓ ಕರ್ತನೇ ನನ್ನ ಭರವಸೆಯು ನಿನ್ನಲ್ಲಲ್ಲದೇ ಮತ್ಯಾವುದರ ಮೇಲೂ ಇಲ್ಲ. ಯೇಸು ನಾಮದಲ್ಲಿ ಪ್ರಾರ್ಥಿಸುವೆನು. ಆಮೆನ್.
Join our WhatsApp Channel
Most Read
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ನಂಬಿಕೆಯ ಶಾಲೆ
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ದೂರದಿಂದ ಹಿಂಬಾಲಿಸುವುದು
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
ಅನಿಸಿಕೆಗಳು