ಅನುದಿನದ ಮನ್ನಾ
ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
Monday, 17th of June 2024
4
1
228
Categories :
ಅಭ್ಯಾಸ (Habit)
ನೀವೀಗ ನಿಮ್ಮ ಪ್ರಸ್ತುತ ಹಾಗೂ ಭವಿಷ್ಯದ ಜೀವನದ ಮೇಲೆಯೂ ಬಹಳ ಕೆಟ್ಟ ಪರಿಣಾಮ ಬೀರುವಂತಹ ಕೆಲವೊಂದು ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದನ್ನು ನೀವು ಗಮನಿಸುತ್ತಿದ್ದೀರಾ? ನಿಜವಾದ ಒಂದು ದುಃಖದ ವಿಷಯವೇನೆಂದರೆ ಇಂತಹ ವಿಷಯಗಳನ್ನು ನೀವು ತಿಳಿದಿದ್ದರೂ ನಿಮ್ಮ ಕೈಲಿ ಅದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಅಲ್ಲವೇ.ಅಪೋಸ್ತಲನಾದಂತ ಪೌಲನು ಬರೆಯುವುದೇನೆಂದರೆ ".. ನಾನು ಮಾಡುವದು ನನಗೇ ಗೊತ್ತಿಲ್ಲ; ಯಾವದನ್ನು ಮಾಡಬೇಕೆಂದು ನಾನು ಇಚ್ಫೈಸುತ್ತೇನೋ ಅದನ್ನು ನಡಿಸದೆ ನನಗೆ ಅಸಹ್ಯವಾದದ್ದನ್ನು ಮಾಡುತ್ತೇನೆ."ಎಂದು(ರೋಮಾಪುರದವರಿಗೆ 7:15 )
ನಾವು ನಿರಂತರವಾಗಿ ಪದೇಪದೇ ಮಾಡುವ ಕಾರ್ಯಗಳೇ ಅಭ್ಯಾಸವಾಗುತ್ತದೆ. ಬಹುತೇಕ ಸಮಯದಲ್ಲಿ ಈ ಒಂದು ಅಭ್ಯಾಸಗಳು ವಿಶೇಷವಾದ ಗಮನವನ್ನು ಕೂಡ ನಿರೀಕ್ಷಿಸದೇ ತಾನೇ ತಾನಾಗಿ ನಡೆಯುವ ಕಾರ್ಯಗಳಾಗಿ ಬಿಡುತ್ತವೆ. ಇಂತಹ ಒಂದು ಕಾರ್ಯಗಳು ಒಳ್ಳೆಯ ಮತ್ತು ಕೆಟ್ಟ ಮಾದರಿಗಳನ್ನು ಸೃಷ್ಟಿಸುವಂಥಹಗಳಾಗಿವೆ. ಈ ಕೆಟ್ಟ ಮಾದರಿಗಳು ದೀರ್ಘ ಕಾಲದಲ್ಲಿ ದೊಡ್ಡ ನಾಶನವನ್ನು ಉಂಟುಮಾಡುವಂತಗಳಾಗಿವೆ. ನಮ್ಮ ಅಭ್ಯಾಸಗಳೇ ನಮ್ಮ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದರಿಂದ ನಮ್ಮ ಪ್ರತಿಯೊಂದು ಕಾರ್ಯಗಳನ್ನು ದೇವರ ಚಿತ್ತದೊಂದಿಗೆ ಐಕ್ಯಗೊಳಿಸುವುದೇ ನಂಬಿಕೆಯ ಹೋರಾಟವಾಗಿದೆ. "ಕ್ರಿಸ್ತ ನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು,... "(1 ತಿಮೊಥೆಯನಿಗೆ 6:12)
ದೇವರು ನಮ್ಮಲ್ಲಿ ಪ್ರತಿಯೊಬ್ಬಬ್ಬರನ್ನು ಒಂದೊಂದು ಉದ್ದೇಶಕ್ಕಾಗಿ, ಒಂದೊಂದು ಕರೆಗಾಗಿ ಆತನ ಹೋಲಿಕೆಗೆ ತಕ್ಕಂತೆ ಆತನ ಸ್ವರೂಪದಲ್ಲಿ ನಮ್ಮನ್ನು ಉಂಟು ಮಾಡಿದ್ದಾನೆ. ಆದಾಗಿಯೂ ಆ ಒಂದು ಉದ್ದೇಶವು ಮತ್ತು ಕರೆಯು ಈ ಭೂಮಿಯ ಮೇಲೆ ನೆರವೇರಲು ನೀವು ಮತ್ತು ನಾನು ಆತನ ವಾಕ್ಯಕ್ಕನುಗುಣವಾಗಿ ನಿರ್ದಿಷ್ಟ ಕಾರ್ಯಗಳನ್ನು ಮಾಡಬೇಕಾಗಿದೆ. ಅನೇಕ ಬಾರಿ ಶರೀರದಿಚ್ಚೆಗಳಿಂದಾಗಿ ಕೆಲವರು ತಮ್ಮ ಜೀವಿತಕ್ಕೂ ಕ್ರಿಸ್ತನಲ್ಲಿರುವ ತಮ್ಮ ಕರೆಗೂ ಎಷ್ಟೋ ಅಂತರ ಇರುವುದಾಗಿ ಕಂಡುಕೊಳ್ಳುತ್ತಾರೆ. ಇವು ನಾವು ಯಾವುದಕ್ಕಾಗಿ ಉಂಟು ಮಾಡಿಲ್ಪಟ್ಟಿದ್ದೇವೋ ಅದನ್ನು ನಾವು ಪೂರೈಸಲು ತಡಮಾಡುವುದಕ್ಕೂ ತಡೆಯುವುದಕ್ಕೂ ಕಾರಣವಾಗಬಹುದು.
ಈ ನಾಶನಕರ ಮಾದರಿಯನ್ನು ಮುರಿಯಲಿರುವ ಎರಡು ಸರಳ ಹೆಜ್ಜೆಗಳು.
1. ಒಪ್ಪಿಕೊಳ್ಳಿರಿ
ನಿಮ್ಮಲ್ಲಿ ನಿಮ್ಮನ್ನು ನಾಶನಕ್ಕೆ ಕೊಂಡೊಯ್ಯುವ ಅಭ್ಯಾಸಗಳಿವೆ ಎಂಬುದನ್ನು ನೀವು ಒಪ್ಪಿಕೊಳ್ಳುವುದೇ ಅದರಿಂದ ಬಿಡುಗಡೆ ಹೊಂದಲಿಡುವ ಮೊದಲ ಹೆಜ್ಜೆಯಾಗಿದೆ. ದೀನತ್ವ ಎಂದರೆ ನೀವು ನಿಮ್ಮ ದೇಹವನ್ನು ಎಷ್ಟರವರೆಗೂ ಬಗ್ಗಿಸುತ್ತೀರಿ ಎಂಬುದಲ್ಲ ಆದರೆ ನೀವು ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕಾಗಿದೆ ಎಂಬುದನ್ನು ಒಪ್ಪಿಕೊಳ್ಳುವದೇ ನಿಜವಾದ ಮಾನಸಾಂತರವಾಗಿದೆ.
ದಾವೀದನು ಹೀಗೆ ಪ್ರಾರ್ಥಿಸುವಾಗ ನಿಜವಾದ ಮಾನಸಾಂತರವನ್ನು ಅನುಭವಿಸಿದನು
" [ಹೀಗಿರುವಲ್ಲಿ] ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ. ಸೆಲಾ."(ಕೀರ್ತನೆಗಳು 32:5)
2. ಕರ್ತನಾತ್ಮನಿಗೆ ಸಂಪೂರ್ಣವಾಗಿ ಶರಣಾಗುವುದು.
ಪ್ರತಿನಿತ್ಯವೂ ಕರ್ತನನ್ನು ಆತನ ವಾಕ್ಯ ಧ್ಯಾನದ ಮೂಲಕ ಪ್ರಾರ್ಥನೆಯ ಮೂಲಕ ಎದುರು ನೋಡುವಂತದ್ದನ್ನು ಅಭ್ಯಾಸಿಸಬೇಕು. ನಾವು ಹೀಗೆ ಮಾಡುವಾಗ ಆತನು ನಮ್ಮೊಂದಿಗೆ ಮಾತನಾಡಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಏನು ಮಾಡಬೇಕೆಂದು ಮಾರ್ಗದರ್ಶಿಸುವನು. ಆತನು ಅದಕ್ಕಾಗಿ ಬೇಕಾಗಿರುವ ತನ್ನ ಕೃಪೆಯನ್ನು ಮತ್ತು ದಯೆಯನ್ನು ಬಿಡುಗಡೆ ಮಾಡುವನು. ನಾವು ಆತ್ಮನಲ್ಲಿ ಜೀವಿಸಲು ಕರೆಯಲ್ಪಟ್ಟವರಾಗಿದ್ದೇವೆ. ಆದ್ದರಿಂದ ನಾವು ನಮ್ಮ ಜೀವಿತದ ಪ್ರತಿಯೊಂದು ಆಯಾಮದಲ್ಲೂ ಪವಿತ್ರಾತ್ಮನ ಮಾರ್ಗದರ್ಶನವನ್ನೇ ಅನುಸರಿಸಬೇಕು.
"ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ. ಯಾಕಂದರೆ ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆ, ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಫಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ."
(ಗಲಾತ್ಯದವರಿಗೆ 5:16-17)
ಈ ಹೋರಾಟವನ್ನು ಜಯಿಸಲು ಮಾನಸಾಂತರ ಹಾಗೂ ಪವಿತ್ರಾತ್ಮನಿಗೆ ಸಂಪೂರ್ಣ ಶರಣಾಗುವುದರ ಮೇಲೆ ನಿಮ್ಮ ಮನಸ್ಸಿಡಿರಿ. ಇದನ್ನು ನೀವು ನಿಯಮಿತವಾಗಿ ಮಾಡುವಾಗ ದುಷ್ಟ ಮಾದರಿಗಳು ಮುರಿದುಬೀಳುತ್ತವೆ. ಆಗ ನೀವು ನಿಮ್ಮ ಜೀವಿತದಲ್ಲಿ ದೇವರು ನಿಮ್ಮನ್ನು ಕರೆದಂತಹ ಉದ್ದೇಶವು ನೆರವೇರುವುದನ್ನು ಕಾಣುವಿರಿ.
ಈಗ ಇದನ್ನು ಓದುತ್ತಿರುವ ನಿಮ್ಮಲ್ಲಿ ಅನೇಕರು ಸ್ವ-ನಾಶನ ಮಾದರಿಗಳೊಂದಿಗೆ ವ್ಯವಹರಿಸುವ ಕಾರ್ಯವನ್ನು ಮುಂದೂಡುತ್ತಾ ಬರುತ್ತಿರಬಹುದು. ಇದೂ ಸಹ ಮುಂದೇ ನಿಮಗೆ ಸಮಸ್ಯೆಯನ್ನು ತರುತ್ತದೆ. ನೀವು ಕೇಳಿದಂತೆ, ನೀವು ನೋಡಿದಂತೆ ಈ ಸ್ವ-ನಾಶಕ ಮಾದರಿಗಳನ್ನು ಮುರಿಯಲು ಅತ್ಯುತ್ತಮ ಮಾರ್ಗವೆಂದರೆ ಈಗಲೇ ಅದನ್ನು ಗಂಭೀರವಾಗಿ ಪರಿಗಣಿಸಿ ಅದರೊಟ್ಟಿಗೆ ವ್ಯವಹರಿಸಲು ಆರಂಭಿಸುವಂಥದ್ದು. ಇಲ್ಲದಿದ್ದರೆ ಅವು ಪುನಃ ನಿಮ್ಮ ಬಳಿಗೆ ಹಿಂದಿರುಗಿ ಬಂದು ನಿಮ್ಮನ್ನು ಸೀಳಿಬಿಡುತ್ತವೆ.
"ಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ."(2 ಕೊರಿಂಥದವರಿಗೆ 6:2 )
ಯಾವುದರೊಂದಿಗೆ ನೀವು ಬಲಶಾಲಿಗಳಾಗಿದ್ದಾಗಲೇ ವ್ಯವಹರಿಸಲು ಸಾಧ್ಯವಿಲ್ಲವೋ, ಅವುಗಳು ನೀವು ಅತ್ಯಂತ ಬಲಹೀನರಾದ ಸಮಯದಲ್ಲಿ ನಿಮ್ಮ ಮೇಲೆ ದಾಳಿ ಮಾಡುತ್ತವೆ. ಹಾಗಾಗಿ ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!.
ಪ್ರಾರ್ಥನೆಗಳು
ತಂದೆಯೇ, ಕ್ರಿಸ್ತನಲ್ಲಿ ನೀನು ನನಗಾಗಿ ಇಟ್ಟಿರುವ ಕರೆಯನ್ನು ಪೂರೈಸಲು ನನ್ನನ್ನು ಹಿಂದೆಳಿಯುತ್ತಿರುವ ಸಂಗತಿಗಳೊಂದಿಗೆ ವ್ಯವಹರಿಸುವ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು ಆಮೆನ್
Join our WhatsApp Channel
Most Read
● ಕ್ರಿಸ್ತನಲ್ಲಿ ಅರಸರೂ ಯಾಜಕರೂ..● ಬೀಜದಲ್ಲಿರುವ ಶಕ್ತಿ-1
● ಕೆಂಪು ದೀಪದ ಎಚ್ಚರಿಕೆ ಗಂಟೆ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ದೇವರಿಗಾಗಿ ಮತ್ತು ದೇವರೊಂದಿಗೆ.
● ಸಮಯದ ಸೂಚನೆಗಳ ವಿವೇಚನೆ.
● ವಾಕ್ಯದಿಂದ ಬೆಳಕು ಬರುತ್ತದೆ
ಅನಿಸಿಕೆಗಳು