ಅನುದಿನದ ಮನ್ನಾ
ಸಮಯದ ಸೂಚನೆಗಳ ವಿವೇಚನೆ.
Monday, 19th of August 2024
4
1
269
Categories :
ಅಂತ್ಯಕಾಲ (End Time)
"ಸಂಜೇವೇಳೆಯಲ್ಲಿ ನೀವು - ಆಕಾಶವು ಕೆಂಪಾಗಿದೆ, ನಿರ್ಮಲದಿನ ಬರುವದು ಅನ್ನುತ್ತೀರಿ; ಬೆಳಿಗ್ಗೆ - ಆಕಾಶವು ಮೋಡಮುಚ್ಚಿಕೊಂಡು ಕೆಂಪಾಗಿದೆ, ಈ ಹೊತ್ತು ಗಾಳಿ ಮಳೆ ಅನ್ನುತ್ತೀರಿ ಅಲ್ಲವೇ. ಆಕಾಶದ ಸ್ಥಿತಿಯನ್ನು ನೋಡಿ ಇದು ಹೀಗೆ ಅದು ಹಾಗೆ ಅನ್ನುವದಕ್ಕೆ ಬಲ್ಲಿರಿ; ಆದರೆ ಈ ಕಾಲದ ಸೂಚನೆಗಳನ್ನು ತಿಳುಕೊಳ್ಳಲಾರಿರಿ."(ಮತ್ತಾಯ 16:2-3)
ಇಂದಿನ ಆಧುನಿಕ ಯುಗದಲ್ಲಿ ಹವಾಮಾನವನ್ನು ಮುಂತಿಳಿಸಲು ಇಂದು ನಮಗೆ ಸಹಕರಿಸುವಂತಹ ಅನೇಕ ಶಕ್ತಿಶಾಲಿ ಉಪಕರಣಗಳಿವೆ. ಮುಂದಿನ ಕೆಲವು ವಾರಗಳವರೆಗೂ ಹವಾಮಾನ ಹೇಗೆ ಇರುತ್ತದೆ ಎಂಬುದನ್ನು ನಾವು ಮುಂಚಿತವಾಗಿ ಇಂದೇ ತಿಳಿದುಕೊಳ್ಳಬಹುದು. ಈ ಹವಾಮಾನ ಮುನ್ಸೂಚನೆಗಳ ವರಧಿಯು ಅಷ್ಟೇನೂ ನಿಖರವಾಗಿರದಿದ್ದರೂ ನಾವು ಹೆಚ್ಚು ಕಡಿಮೆಯಾಗಿ ಇದರ ವಿವರಗಳನ್ನು ನಿರೀಕ್ಷಿಸಬಹುದಾಗಿದೆ ಎಂಬ ಸ್ಪಷ್ಟ ಸೂಚನೆಗಳನ್ನು ಅವು ನಮಗೆ ಕೊಡುತ್ತವೆ.
ಯೇಸುವಿನ ಸಮಯದಲ್ಲಿಯೂ ಸಹ ಜನರಿಗೆ ಹವಮಾನವನ್ನು ಮುಂದಾಗಿ ತಿಳಿಯುವ ಮಾರ್ಗಗಳಿತ್ತು. ಆಕಾಶವನ್ನು ನೋಡುವ ಮೂಲಕ ಹವಾಮಾನ ಹೇಗೆ ಬದಲಾಗುತ್ತದೆ ಎಂದು ಅವರು ತಿಳಿಯಬಹುದಾಗಿತ್ತು. ಅವರು ಹವಮಾನದ ಕುರಿತು ನಿಖರವಾಗಿ ವಿವರವಾದ ಸೂಚನೆಗಳನ್ನು ನೀಡಲು ಸಾಧ್ಯವಾಗದಿದ್ದರೂ ಆ ದಿನದಲ್ಲಿ ಏನಾಗಬಹುದೆಂಬ ಸಾಮಾನ್ಯ ತಿಳುವಳಿಕೆಯನ್ನು ಹೆಚ್ಚು ಕಡಿಮೆಯಾಗಿ ತಿಳಿದವರಾಗಿದ್ದರು. ರಾತ್ರಿಯಲ್ಲಿ ಕೆಂಪು ಆಕಾಶವಿದ್ದರೆ ಹವಾಮಾನ ಉತ್ತಮವಾಗಿದೆ ಎಂದು ಬೆಳಗ್ಗೆ ಕೆಂಪು ಆಗಿದ್ದರೆ ಕೆಟ್ಟ ಹವಾಮಾನವೆಂದು ತಿಳಿದಿದ್ದರು. ಇಂತಹ ಸರಳವಾದ ನಿಯಮಗಳಿಗೆ ಅತ್ಯಾಧುನಿಕ ಉಪಕರಣಗಳ ಅಗತ್ಯವಿರಲಿಲ್ಲ.
ಅಂದಿನ ಆಧ್ಯಾತ್ಮಿಕ ನಾಯಕರುಗಳಿಗೂ ಹವಾಮಾನವನ್ನು ಗ್ರಹಿಸುವ ವಿವೇಚನೆ ಏನೋ ಇತ್ತು ಆದರೆ ಆತ್ಮಿಕವಾದ ವಿವೇಚನೆ ಮಾಡುವ ಶಕ್ತಿಯು ಅವರಲ್ಲಿ ಇರಲಿಲ್ಲ.
ಫರಿಸಾಯರು, ಶಾಸ್ತ್ರಿಗಳು ಮತ್ತು ಸದ್ದುಕಾಯರು ಜನಾಂಗವನ್ನು ಆತ್ಮಿಕ ನಾಯಕರಾಗಿ ನಡೆಸಬೇಕಿತ್ತು. ಆದರೆ ದುಃಖಕರ ಸಂಗತಿ ಏನೆಂದರೆ ಅವರು ಕುರುಡರನ್ನು ನಡೆಸುವ ಕುರುಡು ನಾಯಕರಾಗಿದ್ದರು. ಅವರು ಲೌಕಿಕವಾದ ವಿಚಾರಗಳಲ್ಲಿ ಎಷ್ಟು ಮುಳುಗಿ ಹೋಗಿದ್ದರು ಎಂದರೆ ಅವರು ತಮ್ಮದೇ ಆತ್ಮಿಕ ಆರೋಗ್ಯವನ್ನು ಸಹ ಕಡೆಗಣಿಸುವವರಾಗಿದ್ದರು.
ಹಾಗಾಗಿ ನಾವಿಂದು ಅವರಂತೆ ಅಜಾಗರೂಕತೆಯಿಂದ ನಡೆಯದೆ ಜಾಗರಕರಾಗಿರಬೇಕಾಗಿದೆ. ನಾವು ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಎಷ್ಟೇ ಪ್ರಗತಿಯನ್ನು ಸಾಧಿಸಿದ್ದರು ಅವು ನಮ್ಮ ಜೀವನಕ್ಕೆ ಆತ್ಮಿಕ ಮಾರ್ಗದರ್ಶನವನ್ನು ನೀಡಲಾರವು. ನಾವು ನಮ್ಮ ಮನುಷ್ಯ ಬುದ್ಧಿಶಕ್ತಿಯನ್ನು ಅವಲಂಬಿಸದೆ ದೇವರ ವಾಕ್ಯದ ಮೇಲೆ ಅವಲಂಬಿತರಾಗಿರಬೇಕು ಇಲ್ಲದಿದ್ದರೆ ನಾವು ಸಹ ಆ ಹಿಂದಿನ ನಾಯಕರಗಳಂತೆ ಕಪಟಿಗಳಾಗುತ್ತೇವೆ.
ನಿಸ್ಸಂದೇಹವಾಗಿ ನಾವಿಂದು ಕಡೆಯ ದಿನಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಎಲ್ಲಾ ಸೂಚನೆಗಳು ಸ್ಪಷ್ಟವಾಗಿ ತೋರುತ್ತಿವೆ. ರೋಗಗಳು ಕ್ಷಾಮ ಭೂಕಂಪ ಪ್ರವಾಹ ಯುದ್ದ ಮತ್ತು ಜನರ ನಡುವೆ ಪರಸ್ಪರ ಪ್ರೀತಿಯ ತಣ್ಣಗಾಗುವಿಕೆ ಇವೆಲ್ಲವೂ ನಾವು ಕಡೆಯ ದಿನಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಒತ್ತಿ ಹೇಳುವಂತಹ ಸಂಕೇತಗಳಾಗಿವೆ.
ಯೇಸು ಕ್ರಿಸ್ತನು ಅನುಗ್ರಹಿಸುವ ಕಣ್ಣಿನ ಮಸೂರದಲ್ಲಿ ನಮ್ಮ ಕಣ್ಣುಗಳನ್ನು ಅಭಿಷೇಕಿಸಲ್ಪಟ್ಟಾಗ ನಾವು ಹಿಂದೆಂದೂ ಕಾಣದಂತ ಆತ್ಮಿಕ ಸಂಗತಿಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ.
ನೀನು ಐಶ್ವರ್ಯವಂತ ನಾಗುವ ಹಾಗೆ ಬೆಂಕಿಯಲ್ಲಿ ಶೋಧಿಸಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಹೊದ್ದು ಕೊಳ್ಳುವದಕ್ಕಾಗಿ ಬಿಳೀ ವಸ್ತ್ರವನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಿನಗೆ ಬುದ್ಧಿ ಹೇಳುತ್ತೇ
(ಪ್ರಕಟಣೆ3:18).
ಇದು ಈ ಕಡೆಯ ದಿವಸಗಳಲ್ಲಿ ನಮಗೆ ಅಗತ್ಯವಾಗಿ ಬೇಕಾಗಿರುವ ಅಭಿಷೇಕವಾಗಿದೆ.
ಪ್ರಾರ್ಥನೆಗಳು
ತಂದೆಯೇ, ಇತರ ಎಲ್ಲಾ ದ್ವನಿಗಳಿಗಿಂತಲೂ ನಿನ್ನ ಸ್ವರವನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳುವಂತಹ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು.
ತಂದೆಯೇ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಹಾಗೂ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ವಿವೇಚಿಸುವಂತಹ ಕೃಪೆಯನ್ನು ಅನುಗ್ರಹಿಸಿ ಈ ಕಾಲದ ಸೂಚನೆಗಳನ್ನು ವಿವೇಚಿಸುವ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ಸಾಲದಿಂದ ಹೊರಬನ್ನಿ : ಕೀಲಿಕೈ #2
● ಪರಲೋಕದ ವಾಗ್ದಾನ
● ಬೆಟ್ಟಗಳ ಮತ್ತು ತಗ್ಗಿನ ದೇವರು.
ಅನಿಸಿಕೆಗಳು