ನೆಪಗಳು ಮನುಕುಲದಷ್ಟೇ ಪುರಾತನವಾದದ್ದು. ದೂಷಣೆಗಳಿಂದ ತಪ್ಪಿಸಿಕೊಳ್ಳಲು ನ್ಯೂನತೆಗಳನ್ನು ನಿರಾಕರಿಸಲು ಅಥವಾ ಅಹಿತಕರ ಸಂದರ್ಭಗಳಿಂದ ತಪ್ಪಿಸಿಕೊಳ್ಳಲು ನಾವೆಲ್ಲರೂ ನಮ್ಮ ಜೀವನದಲ್ಲಿ ಕೆಲವು ಹಂತದವರೆಗೂ ಅವುಗಳನ್ನು ಮಾಡಿದವರೇ ಆಗಿದ್ದೇವೆ.
ಆದರೆ ನಾವು ಏಕೆ ಹೀಗೆ ನೆಪಗಳನ್ನು ಹೇಳುತ್ತೇವೆ ಎಂದು ಒಂದು ಸಾರಿ ನಿಂತು ಯೋಚಿಸಿದ್ದೇವಾ? ಯಾವುದು ನಮ್ಮನ್ನು ಪ್ರೆರೇಪಿಸುತ್ತದೆ... ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದೋ ಅಥವಾ ಸತ್ಯವನ್ನು ನಿರಾಕರಿಸುವುದೋ. ಜನರು ನೆಪಗಳನ್ನು ಹೇಳಲು ಇರುವ ಎರಡು ಪ್ರಮುಖ ಕಾರಣಗಳನ್ನು ನಾವಿಂದು ಅಧ್ಯಯನ ಮಾಡೋಣ.
1) ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು
2) ನಮ್ಮ ವೈಯಕ್ತಿಕ ನ್ಯೂನತೆಗಳನ್ನು ನಿರಾಕರಿಸಲು.
ಹಾಗಾಗಿ ಈಗ ಈ ಅಧ್ಯಯನದ ಮೂಲಕ ಅವುಗಳ ಅಪಾಯಗಳ ಆತ್ಮಿಕ ಪರಿಣಾಮಗಳನ್ನು ಅನಾವರಣಗೊಳಿಸೋಣ.
A).ಸಮಸ್ಯೆಗಳಿಂದ ಹೊರಬರಲು ( ದೂಷಣೆಗಳಿಂದ ತಪ್ಪಿಸಿಕೊಳ್ಳಲು)
ನಾವು ಮಾಡಿದ ತಪ್ಪುಗಳ ಪರಿಣಾಮಗಳನ್ನು ಎದುರಿಸುವಾಗ ಯಾವುದರ ಮೇಲಾದರೂ ಅಥವಾ ಯಾರ ಮೇಲಾದರೂ ಆ ದೋಷವನ್ನು ವರ್ಗಾಯಿಸುವಂತೆ ಇದು ನಮ್ಮ ಪ್ರಚೋದಿಸುತ್ತದೆ. ಇದರ ಕಲ್ಪನೆಯು ಬಹಳ ಸರಳ! ನಾನು ಈ ಆಪಾದನೆಯನ್ನು ಬೇರೆಯವರ ಮೇಲೆ ತಿರುಗಿಸಲು ಸಾಧ್ಯವಾದರೆ ನಾನು ಈ ಸಮಸ್ಯೆಯಿಂದ ಹೊರಬರಬಹುದು ಎನ್ನುವ ಈ ಪ್ರವೃತ್ತಿ ಹೊಸದೇನಲ್ಲ. ವಾಸ್ತವವಾಗಿ ಇದು ಏದೆನ್ ತೋಟದಲ್ಲಿಯೇ ಆರಂಭವಾಯಿತು.
ಆದಿಕಾಂಡ 3:12-13ರಲ್ಲಿ ಈ ರೀತಿ ಮತ್ತೊಬ್ಬರ ಮೇಲೆ ತಮ್ಮ ದೋಷಾರೋಪಣೆಯನ್ನು ವರ್ಗಾಯಿಸುವ ಪ್ರಕರಣವನ್ನು ಮೊದಲ ಬಾರಿಗೆ ನೋಡುತ್ತೇವೆ.
"ಆ ಮನುಷ್ಯನು - ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು. ಯೆಹೋವದೇವರು ಸ್ತ್ರೀಯನ್ನು - ಇದೇನು ನೀನು ಮಾಡಿದ್ದು ಎಂದು ಕೇಳಲು ಸ್ತ್ರೀಯು - ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು ಎಂದು ಉತ್ತರ ಕೊಟ್ಟಳು."
ಇಲ್ಲಿ ಆದಾಮಾನು ಹವ್ವಳ ಮೇಲೆ ತನ್ನ ದೋಷವನ್ನು ವರ್ಗಾಯಿಸುತ್ತಾನೆ. ಅದು ಎಷ್ಟರವರೆಗೆ ಎಂದರೆ ದೇವರು ಆ ಹವ್ವಳನ್ನು ಕೊಟ್ಟಿದ್ದಕ್ಕೆ ಇದಾಯಿತು ಎನ್ನುವವರೆಗೆ. ಅವಳು ಆಕೆಯ ತನ್ನ ದೋಷಾರೋಪವನ್ನು ಸರ್ಪವು ವಂಚಿಸಿತು ಎಂದು ಸರ್ಪಕ್ಕೆ ವರ್ಗಾಯಿಸುತ್ತಾಳೆ. ಅದರಲ್ಲಿ ನೆಪ ಹೇಳದೆ ಇದ್ದದ್ದು ಸರ್ಪ ಮಾತ್ರವೇ! ಈ ಸ್ವಭಾವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬೇರೆಯವರ ಮೇಲೆ ಬೆಟ್ಟು ತೋರಿಸುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ.
ದೋಷವನ್ನು ವರ್ಗಾಯಿಸುವಂಥದ್ದು ತಾತ್ಕಾಲಿಕವಾಗಿ ಪಾಪಪ್ರಜ್ಞೆಯ ಅಥವಾ ಕಡಿಮೆ ಮಟ್ಟದ ಶಿಕ್ಷೆಯ ಭಯವನ್ನು ಹುಟ್ಟಿಸಬಹುದು. ಆದರೆ ಇದು ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಒಬ್ಬ ಕ್ರೈಸ್ತನು ಉನ್ನತ ಮಟ್ಟದ ಜೀವಿತ ಜೀವಿಸಲು ಕರೆಯಲ್ಪಟ್ಟವನಾಗಿದ್ದಾನೆ. ಆದ್ದರಿಂದ ನಾವು ನೆಪಗಳನ್ನು ಹೇಳುವ ಬದಲು ಜವಾಬ್ದಾರಿಯನ್ನು ಸ್ವೀಕರಿಸಿ ನಮ್ಮ ಪಾಪಗಳನ್ನು ಒಪ್ಪಿಕೊಂಡು ದೇವರಿಂದ ಪಾಪ ಕ್ಷಮಾಪಣೆಯನ್ನು ಎದುರು ನೋಡಬೇಕು. 1 ಯೋಹಾನ1:9 ನಮಗೆ ನೆನೆಪಿಸುವಂತೆ..
"ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು."
ನೆಪ ಹೇಳುವುದಕ್ಕಿಂತಲೂ ಪಾಪದರಿಕೆ ಮಾಡುವುದು ವಿಮೋಚನೆಗೂ ಸ್ವಸ್ತತೆಗೂ ಇರುವ ಮಾರ್ಗವಾಗಿದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆಯನ್ನು ಬೇಡಿಕೊಂಡರೆ ದೇವರು ನಮ್ಮನ್ನು ಶುದ್ಧೀಕರಿಸಿ ನಮ್ಮ ನೀತಿವಂತಿಕೆಯನ್ನು ಪುನಃ ಸ್ಥಾಪಿಸುತ್ತಾನೆ.
B) ವೈಯಕ್ತಿಕ ನ್ಯೂನ್ಯತೆಯನ್ನು ನಿರಾಕರಿಸಲು( ನಿರಾಕರಣೆ)
ಜನರು ನೆಪ ಹೇಳಲು ಮತ್ತೊಂದು ಕಾರಣವೆಂದರೆ ಅನೇಕರು ತಮ್ಮ ವೈಯಕ್ತಿಕ ನ್ಯೂನ್ಯತೆಯನ್ನು ಬಚ್ಚಿಟ್ಟುಕೊಳ್ಳಲು ಸತ್ಯವನ್ನು ಎದುರಿಸುವುದಕ್ಕೆ ಬದಲಾಗಿ ತಮ್ಮ ತಲೆಗಳನ್ನು ಉಷ್ಟ್ರ ಪಕ್ಷಿಯ ಹಾಗೆ ಮರಳಿನಲ್ಲಿ ಹೂತು ತಪ್ಪಿಸಿಕೊಳ್ಳಲು ನೋಡುತ್ತಾರೆ. ಆರೋನನು ಮತ್ತು ಚಿನ್ನದ ಬಸವದ ಎರಕದ ಕಥೆಯಲ್ಲಿ ವಿಶೇಷವಾಗಿ ಸ್ಪಷ್ಟವಾಗಿ ನಮಗೆ ಕಾಣುತ್ತದೆ. ಇಲ್ಲಿ ಆರೋನನು ತಾನು ಚಿನ್ನದ ಬಸವದ ವಿಗ್ರಹವನ್ನು ಮಾಡಿದ್ದಕ್ಕೆ ನೆಪ ಹೇಳಲು ಆರಂಭಿಸುತ್ತಾನೆ.
ವಿಮೋಚನಕಾಂಡಾ 32ರಲ್ಲಿ ಮೋಶೆಯು ಸೀನಾಯಿ ಬೆಟ್ಟದಲ್ಲಿ ದಶಾಜ್ಞೆಗಳನ್ನು ಪಡೆದುಕೊಳ್ಳುತ್ತಿರುವಾಗ ಇಸ್ರಾಯೆಲ್ಯರು ತಾಳ್ಮೆ ಕಳೆದುಕೊಂಡು ಆರೋನನ್ನು ತಮಗಾಗಿ ದೇವರನ್ನು ಮಾಡಿಕೊಡುವಂತೆ ಒತ್ತಾಯಿಸುತ್ತಾರೆ.
ಅವರ ಒತ್ತಾಯಕ್ಕೆ ಬಲಿಯಾದ ಆರೋನನು ಅವರು ಆರಾಧಿಸಲು ಚಿನ್ನದ ಬಸವನ ವಿಗ್ರಹವನ್ನು ಮಾಡಿಕೊಡುತ್ತಾನೆ.
"ಆಗ ಅವನು ಆರೋನನನ್ನು - ನೀನು ಈ ಜನರಿಂದ ಮಹಾಪರಾಧವನ್ನು ಮಾಡಿಸಿದಿಯಲ್ಲಾ; ಹೀಗೆ ಮಾಡಿಸುವದಕ್ಕೆ ಇವರು ನಿನಗೇನು ಮಾಡಿದರು ಎಂದು ವಿಚಾರಿಸಲು"(ವಿಮೋಚನಕಾಂಡ 32:21)
ಇಲ್ಲಿ ಆರೋನನು ಅದರ ಹೊಣೆಗಾರಿಕೆಯನ್ನು ಹೊತ್ತು ಕೊಳ್ಳುವ ಬದಲು ಎರಡು ನೆಪಗಳನ್ನು ಹೇಳುತ್ತಾನೆ.
ನೆಪ #1:
"ಆರೋನನು - ಸ್ವಾವಿುಯವರು ರೋಷಗೊಳ್ಳಬಾರದು; ಈ ಜನರು ದುಷ್ಟಸ್ವಭಾವಿಗಳೆಂಬದನ್ನು ಬಲ್ಲಿರಷ್ಟೆ."(ವಿಮೋಚನಕಾಂಡ 32:22)
ಅನುವಾದ : " ಇದು ನನ್ನ ತಪ್ಪಲ್ಲ ಜನರ ತಪ್ಪು"
ನೆಪ#2.
"ಅದಕ್ಕೆ ನಾನು - ಯಾರಲ್ಲಿ ಚಿನ್ನದ ಒಡವೆಯಿದೆಯೋ ಅವರೆಲ್ಲರು ಅದನ್ನು ತೆಗೆದು ನನಗೆ ಕೊಡಬೇಕು ಅಂದೆನು. ಅವರು ಹಾಗೆ ಕೊಡಲಾಗಿ ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಬಸವ ಉಂಟಾಯಿತು ಅಂದನು."(ವಿಮೋಚನಕಾಂಡ 32:24)
ಅನುವಾದ " ಅದಾಗಿ ಅದೇ ಆಗಿ ಹೋಯ್ತು ನನ್ನ ಕೈಲಿ ಏನೂ ಇರಲಿಲ್ಲ"
ಆರೋನನು ಕೊಟ್ಟ ನೆಪಗಳು ತನ್ನ ಸಧ್ಯದ ಪರಿಸ್ಥಿತಿಗೆ ಹೊಣೆಗಾರಿಕೆಯನ್ನು ನಿರಾಕರಿಸುವಂತಹ ಪ್ರಯತ್ನವಾಗಿತ್ತು.
ನಿಜವಾದ ಸಮಸ್ಯೆ ವಿಮೋಚನಾ ಕಾಂಡ 32:25ರಲ್ಲಿ ಕಂಡುಬರುತ್ತದೆ. ಆರೋನನು ಒಬ್ಬ ಮಹಾ ಯಾಜಕನಾಗಿ ನಾಯಕನಾಗಿ ನಿಜವಾಗಿಯೂ ತನ್ನ ಜನರನ್ನು ನಿಯಂತ್ರಿಸಲು ಸಾಧ್ಯವಿತ್ತು.ಆದರೆ ಜನರನ್ನು ನೀತಿವಂತಿಕೆಯಲ್ಲಿ ನಡೆಸುವ ತನ್ನ ಜವಾಬ್ದಾರಿಯಲ್ಲಿ ಆರೋನನು ವಿಫಲನಾದನು. ಅವನು ತನ್ನ ವೈಫಲ್ಯತೆಯನ್ನು ಒಪ್ಪಿಕೊಳ್ಳುವ ಬದಲು ನೆಪವನ್ನು ಹೇಳುವುದನ್ನು ಆಯ್ಕೆ ಮಾಡಿಕೊಂಡನು.
ಈ ರೀತಿಯ ನಿರಾಕರಣೆ ಅಪಾಯಕಾರಿಯಾದದ್ದು ಏಕೆಂದರೆ ಅದು ನಿಜವಾದ ಸಮಸ್ಯೆಯನ್ನು ಎದುರಿಸುವುದರಿಂದ ನಮ್ಮನ್ನು ಹಿಂದೆಳಿಯುತ್ತದೆ. ಜ್ಞಾನಕ್ತಿ 30:12 ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುವುದರ ಕುರಿತು ಎಚ್ಚರಿಸುತ್ತದೆ.
"ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು ಎಣಿಸಿಕೊಳ್ಳುವ ಬೇರೊಂದು ತರದವರುಂಟು."
ನಾವು ನಮ್ಮ ಪಾಪಗಳನ್ನು ಮುಚ್ಚಿಕೊಳ್ಳುವಾಗ, ನಾವು ನೆಪಗಳನ್ನು ಹೇಳುವಾಗ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುತ್ತೇವೆ ಮತ್ತು ಪಶ್ಚಾತಾಪ ಪಡದೇ ಹೋಗುತ್ತೇವೆ.. 1 ಯೋಹಾನ 1:8 ಈ ಸತ್ಯವನ್ನು ಒತ್ತಿ ಹೇಳುತ್ತದೆ.
"ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ."
ನಿರಾಕರಣೆ ಮತ್ತು ನೆಪಗಳು ನಮ್ಮನ್ನು ಆತ್ಮಿಕ ತಟಸ್ಥತೆ ಮತ್ತು ಪಶ್ಚಾತಾಪ ಪಡದ ಸ್ವಭಾವದ ಸುಳಿಯಲ್ಲಿ ಸಿಲುಕಿಸುತ್ತದೆ. ಇದರಿಂದ ಹೊರಬರುವ ಏಕೈಕ ಮಾರ್ಗವೆಂದರೆ ಪ್ರಾಮಾಣಿಕವಾಗಿ ಸ್ವಯಂಪರಿಶೋಧಿಸಿಕೊಳ್ಳುವುದು ಮತ್ತು ಪಾಪದರಿಕೆ ಮಾಡುವುದಾಗಿದೆ
ನೆಪ ಹೇಳುವುದರಿಂದ ಆಗುವ ದುಷ್ಪರಿಣಾಮಗಳು
ನೆಪಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದು. ಆದರೆ ದೀರ್ಘಾವಧಿಯ ದುಷ್ಪರಿಣಾಮಗಳನ್ನು ತರುತ್ತದೆ. ನಾವು ನಮ್ಮ ತಪ್ಪಿಗೆ ಇತರರನ್ನು ದೂಷಿಸುವಾಗ ಅಥವಾ ನಮ್ಮ ನ್ಯೂನತೆಗಳನ್ನು ನಿರಾಕರಿಸುವಾಗ ನಮ್ಮ ಆತ್ಮೀಕ ಬೆಳವಣಿಗೆ ಮತ್ತು ಸ್ವಸ್ತತೆಯ ಅವಕಾಶದಿಂದ ವಂಚಿತರಾಗುತ್ತೇವೆ. ಇನ್ನೂ ಕೆಟ್ಟ ಸಂಗತಿ ಏನೆಂದರೆ, ನಾವು ನಮ್ಮನ್ನು ಸತ್ಯತೆಯಲ್ಲಿಯೂ ನಂಬಿಗಸ್ತಿಕೆಯಲ್ಲಿಯೂ ಜೀವಿಸಲು ಕರೆದ ದೇವರಿಂದ ದೂರ ಆಗುತ್ತೇವೆ.
ಅದರ ಬದಲು ನಾವು ಮಾಡಿದ ಕಾರ್ಯಗಳಿಗೆ ನಾವೇ ಹೊಣೆಗಳನ್ನು ಹೊತ್ತು ಆ ಬಲಹೀನತೆಗಳಿಂದ ಹೊರಬರಲು ದೇವರ ಸಹಾಯವನ್ನು ಎದುರು ನೋಡಬೇಕು. ಸತ್ಯವೇದವು ನಮಗೆ ಪಾಪದರಿಕೆಯ, ಮಾನಸಂತರದ ಮತ್ತು ದೇವರ ಕೃಪೆಯ ಮೇಲೆ ಆಧಾರ ಕೊಳ್ಳುವ ಅನೇಕ ಮಾದರಿಯನ್ನು ತೋರಿಸುತ್ತದೆ. ಈ ಮಾರ್ಗಗಳನ್ನು ಅನುಸರಿಸುವ ಮೂಲಕ ನಾವು ನೆಪ ಹೇಳುವ ಚಕ್ರದಿಂದ ವಿಮುಕ್ತರಾಗಬಹುದು ಮತ್ತು ಆತ್ಮಿಕ ಪ್ರಬುದ್ದತೆಯತ್ತ ಸಾಗಬಹುದು.
ಪ್ರಾರ್ಥನೆಗಳು
ಪರಲೋಕದ ತಂದೆಯೇ ನೆಪಗಳನ್ನು ನಿಲ್ಲಿಸಲು ಮತ್ತು ನನ್ನಿಂದಾದ ತಪ್ಪುಗಳ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ನನಗೆ ಸಹಾಯ ಮಾಡು. ನನ್ನ ಪಾಪಗಳನ್ನು ಒಪ್ಪಿಕೊಂಡು ನಿಮ್ಮ ಕ್ಷಮಾಪಣೆಯನ್ನು ಹೊಂದಿಕೊಳ್ಳಲು ಮತ್ತು ಆತ್ಮಿಕ ಪ್ರಭುದ್ದತೆಯಲ್ಲಿ ಬೆಳೆಯಲು ಯೇಸುವಿನ ನಾಮದಲ್ಲಿ ನನಗೆ ಬಲವನ್ನು ಅನುಗ್ರಹಿಸು. ಆಮೇನ್.
Join our WhatsApp Channel
Most Read
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?● ನೀವು ಎಷ್ಟು ವಿಶ್ವಾಸಾರ್ಹರು?
● ಅನುಕರಣೆ
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಕರ್ತನೊಂದಿಗೆ ನಡೆಯುವುದು
ಅನಿಸಿಕೆಗಳು