ಶಿಕ್ಷಕರ ಕುರಿತು ನನಗೆ ಅಪಾರ ಗೌರವವಿದೆ. ಅವರು ಅನುದಿನವೂ ಎದುರಿಸುವ ಸವಾಲುಗಳನ್ನು ನಾನು ಗುರುತಿಸುತ್ತೇನೆ. ನನ್ನ ಜೀವನದ ಒಂದು ಹಂತದಲ್ಲಿ ನಾನು ಸಹ ಶಾಲಾ ಶಿಕ್ಷಕರಾಗಿದ್ದು ಯುವ ಮನಸ್ಸನ್ನು ಸರಿಯಾದ ರೀತಿಯಲ್ಲಿ ರೂಪಿಸಲು ನಮಗೆ ಅಗತ್ಯವಾದ ಸಮರ್ಪಣೆ ಮತ್ತು ತಾಳ್ಮೆ ಇರಬೇಕಾದ ಅಗತ್ಯಗಳನ್ನು ನಾನು ಸಹ ನೇರವಾಗಿ ಅನುಭವಿಸಿದ್ದೇನೆ. ಬೋಧನೆ ಎಂಬುದು ಕೇವಲ ವೃತ್ತಿಯಲ್ಲ. ಅದೊಂದು ವಿದ್ಯಾರ್ಥಿಗಳ ಪ್ರೀತಿ ಸಹಾನುಭೂತಿ ಮತ್ತು ಅವರ ಬೆಳವಣಿಗೆ ಹಾಗು ಯೋಗ ಕ್ಷೇಮ ಕುರಿತಾಗಿ ಇರುವಂತಹ ಅಚಲವಾದ ಬದ್ಧತೆಯ ಕರೆಯಾಗಿದೆ.
ಪ್ರಥಮ ಶಿಕ್ಷಕರಾಗಿ ಪಾಲಕರ ಪಾತ್ರ.
ತಮ್ಮ ಮಕ್ಕಳಿಗೆ ಜೀವನ ಕೌಶಲ್ಯ ಹಾಗೂ ನಡವಳಿಕೆಗಳನ್ನು ಕಲಿಸುವಂಥದ್ದು ಪಾಲಕರ ಮೂಲಭೂತ ಕರ್ತವ್ಯವಾಗಿದೆ. ಪಾಲಕರನ್ನು ಸಾಮಾನ್ಯ ಬೋಧಕರು ಎಂದು ಪರಿಗಣಿಸುವಲ್ಲಿ ಕಡೆಗಣಿಸಿದರೂ ಮಕ್ಕಳ ಬೆಳವಣಿಗೆಯಲ್ಲಿ ಅವರೇ ಗಾಢವಾಗಿ ಪ್ರಭಾವ ಬೀರುವವರಾಗಿರುತ್ತಾರೆ. ಒಂದು ಮಗುವಿನ ಜನನದ ಕ್ಷಣದಿಂದಲೇ ಅವರ ಪೋಷಕರು ಅವರ ಮೊದಲ ಶಿಕ್ಷಕರಾಗುತ್ತಾರೆ. ಜೀವನದ ಆರಂಭಿಕ ಹಂತದಿಂದಲೇ ಅವರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಲು ಆರಂಭಿಸುವವರಾಗಿರುತ್ತಾರೆ.
ಜ್ಞಾನೋಕ್ತಿ 22:6 ರಲ್ಲಿ ತಂದೆ ತಾಯಿಗಳ ಶಿಕ್ಷಣದ ಮಹತ್ವವನ್ನು ಕುರಿತು ದೇವರ ವಾಕ್ಯ ಒತ್ತಿ ಹೇಳುತ್ತದೆ. "ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು."ಈ ಒಂದು ವಾಕ್ಯವು ನಮ್ಮ ಆತ್ಮೀಯ ಪೋಷಕರು ಕಲಿಸಿದಂತಹ ಪಾಠಗಳು ಶಾಶ್ವತವಾದ ಪರಿಣಾಮವನ್ನು ಉಂಟುಮಾಡುವಂತಗಳಾಗಿದ್ದು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುವಂಥದ್ದಾಗಿದೆ ಎಂದು ನಮಗೆ ನೆನಪಿಸುತ್ತದೆ.
ಬೋಧಕನಾಗಿ ಪವಿತ್ರಾತ್ಮನು
ಪವಿತ್ರಾತ್ಮನು ಲೋಕದ ಎಲ್ಲಾ ಶಿಕ್ಷಕರನ್ನು ಮೀರಿಸಿದಂತಹ ದೈವಿಕ ಬೋಧಕನೆಂಬುದನ್ನು ನಾವು ಅಂಗೀಕರಿಸಿಕೊಳ್ಳಲೇಬೇಕಾದ ಸತ್ಯ. ಯೋಹಾನ 14:26 ರಲ್ಲಿ
"ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು." ಎಂದು ಯೇಸುಸ್ವಾಮಿ ಹೇಳುತ್ತಾನೆ. ಪವಿತ್ರಾತ್ಮನು ನಮ್ಮನ್ನು ಮಾರ್ಗದರ್ಶಿಸುತ್ತಾನೆ. ನಮ್ಮ ಮಾನುಷ ಸಾಮರ್ಥ್ಯಕ್ಕೆ ಮೀರಿದಂತ ಜ್ಞಾನ ವಿವೇಕಗಳನ್ನು ದಯಪಾಲಿಸುತ್ತಾನೆ. ಈ ಒಂದು ದೈವೀಕ ಬೋಧಕನು ಆತ್ಮಿಕ ಅಂತದೃಷ್ಟಿ ಮತ್ತು ಸ್ಪಷ್ಟತೆಯನ್ನು ಒದಗಿಸಿ ಜೀವನದ ಸಂಕೀರ್ಣತೆಗಳಲ್ಲೂ ನಾವು ಮುನ್ನಡೆಯಲು ಸಹಾಯ ಮಾಡುತ್ತಾನೆ.
ಶಿಕ್ಷಕರ ತ್ಯಾಗಗಳು
ಶಿಕ್ಷಕರು ಸಾಮಾನ್ಯವಾಗಿ ತಮ್ಮ ಕರ್ತವ್ಯದ ಕರೆಯನ್ನು ದಾಟಿ ತಮ್ಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಮ್ಮ ಸಮಯ ಹಾಗೂ ಶಕ್ತಿಯನ್ನು ತ್ಯಾಗ ಮಾಡುವವರಾಗಿರುತ್ತಾರೆ. ಅವರ ಕೇವಲ ಶಿಕ್ಷಕರಷ್ಟೇ ಅಲ್ಲದೆ, ಮಾರ್ಗದರ್ಶಕರು ಸಲಹೆಗಾರರು ಮತ್ತು ಆದರ್ಶಪ್ರಾಯರು ಆಗಿರುತ್ತಾರೆ. ಇಂತಹ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕೆಂದು ತಾವು ಹೆಚ್ಚುವರಿಯಾಗಿ ಪಠ್ಯಗಳನ್ನು ಸಿದ್ಧಪಡಿಸಿ ಕಾರ್ಯ ಯೋಜನೆಗಳನ್ನು ರೂಪಿಸುವುದು ಇತ್ಯಾದಿಗಳನ್ನು ಮಾಡುತ್ತಲೇ ಇರುತ್ತಾರೆ.
ಒಂದು ಕೊರಿಯಂತೆ 15 58 ರಲ್ಲಿ ಅಂತಹ ಸಮರ್ಪಣೆಯ ಮೌಲ್ಯವುಳ್ಳವರು ಸನ್ಮಾನಕ್ಕೆ ಯೋಗ್ಯರು ಎಂಬುದನ್ನು ನಮಗೆ ನೆನಪಿಸುತ್ತದೆ. "ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ. "(1 ಕೊರಿಂಥದವರಿಗೆ 15:58)
ನೀವು ಶಿಕ್ಷಕರಾಗಿದ್ದರೆ ನಿಮ್ಮ ಪ್ರಯತ್ನಗಳು ವ್ಯರ್ಥವಾಗಿ ಹೋಗಿಲ್ಲ. ಅದಕ್ಕೆ ಪ್ರತಿಫಲ ಉಂಟು ಎಂದು ನಿಮ್ಮನ್ನು ನಾನು ಉತ್ತೇಜಿಸಲು ಬಯಸುತ್ತೇನೆ. ನೀವು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಅಡಿಪಾಯವನ್ನು ನಿರ್ಮಿಸುವವರಾಗಿದ್ದೀರಿ.
ನಮ್ಮ ಜೀವಿತದಲ್ಲಿರುವ ಶಿಕ್ಷಕರು
ನಾನು ನನ್ನ ಸ್ವಂತ ಅನುಭವವನ್ನು ನೋಡಿಕೊಂಡು ಹೇಳುವುದೇನೆಂದರೆ ನನ್ನ ಜೀವನದ ಮೇಲೆ ಪ್ರಭಾವ ಬೀರಿದ ಶಿಕ್ಷಕರಿಗೆ ನಾನು ಕೃತಜ್ಞನಾಗಿದ್ದೇನೆ. ಅವರು ನನ್ನಲ್ಲಿ ಕಲಿಕೆಯ ಪ್ರೀತಿಯನ್ನು ತುಂಬಿದರು ಮತ್ತು ನಾನು ಕನಸುಗಳನ್ನು ಕಾಣುವಂತೆ ನನ್ನನ್ನು ಪ್ರೋತ್ಸಾಹಿಸಿದರು. ನಿರ್ದಿಷ್ಟವಾಗಿ ಭಾನುವಾರ ಶಾಲೆಯ ಶಿಕ್ಷಕರು ನನ್ನ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದರು. ಅವರು ನನಗೆ ಹೇಗೆ ಪ್ರೀತಿ ಗೌರವ ಮತ್ತು ನಂಬಿಕೆಯಲ್ಲಿ ನಡೆದುಕೊಳ್ಳಬೇಕೆಂದು ಕಲಿಸಿಕೊಟ್ಟರು.
ಮತ್ತಾಯ 19 :14ಅಂತಹ ಬೋಧನೆಗಳ ಪ್ರಾಮುಖ್ಯತೆಯನ್ನು ನಮಗೆ ನೆನಪಿಸುತ್ತದೆ.
"ಆದರೆ ಯೇಸು - ಮಕ್ಕಳನ್ನು ಬಿಡಿರಿ; ನನ್ನ ಹತ್ತರ ಬರುವದಕ್ಕೆ ಅವುಗಳಿಗೆ ಅಡ್ಡಿಮಾಡಬೇಡಿರಿ; ಪರಲೋಕರಾಜ್ಯವು ಇಂಥವರದೇ..
"
ಹಾಗಾಗಿ ಶಿಕ್ಷಕರ ದಿನಾಚರಣೆಯ ದಿನವಾದ ಇಂದು ನಾನು ನನ್ನ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲು- ಸಂಭ್ರಮಿಸಲು ಬಯಸುತ್ತೇನೆ. ನಿಮ್ಮ ಕೊಡುಗೆಗಳನ್ನು ಲೋಕವು ಗುರುತಿಸದೇ ಹೋಗಿರಬಹುದು. ಆದರೆ ಅವು ದೇವರ ಕಣ್ಣಿಗೆ ಮರೆಯಾದದಲ್ಲ. ನಿಮ್ಮ ಅಚಲವಾದ ಬದ್ಧತೆಗೆ ನಾನು ಆಭಾರಿಯಾಗಿದ್ದೇನೆ ಹಾಗೂ ನನ್ನ ಪ್ರಾಮಾಣಿಕವಾದ ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತೇನೆ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀನು ನನಗೆ ವರವಾಗಿ ಕೊಟ್ಟ ಶಿಕ್ಷಕರಿಗಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ಅವರಿಗೆ ಮುಂದಿನ ಪೀಳಿಗೆಯನ್ನು ರೂಪಿಸುವಂತಹ ಜ್ಞಾನ ತಾಳ್ಮೆ ಮತ್ತು ಶಕ್ತಿಯನ್ನು ಅನುಗ್ರಹಿಸಿ ಆಶೀರ್ವದಿಸಿ ಮತ್ತು ಅವರ ಶ್ರಮವು ಎಂದಿಗೂ ವ್ಯರ್ಥವಲ್ಲ ಎಂಬ ತಿಳುವಳಿಕೆಯನ್ನು ಅನುಗ್ರಹಿಸಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ
ಆಮೆನ್.
Join our WhatsApp Channel
Most Read
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ಕೊಡುವ ಕೃಪೆ - 1
ಅನಿಸಿಕೆಗಳು