ಅನುದಿನದ ಮನ್ನಾ
ದೇವರು ಹೇಗೆ ಒದಗಿಸುತ್ತಾನೆ #3
Sunday, 15th of September 2024
1
0
138
Categories :
ನಿಬಂಧನೆ (Provision)
3. ದೇವರು ನಿಮ್ಮ ಕೈಗಳ ಮೂಲಕವೇ ಒದಗಿಸುತ್ತಾನೆ.
" ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿವಸವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರಿಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರುಷದಲ್ಲೆಲ್ಲಾ ಕಾನಾನ್ ದೇಶದ ಉತ್ಪನ್ನವನ್ನು ಅನುಭವಿಸುತ್ತಿದ್ದರು."(ಯೆಹೋಶುವ 5:12)
ಇಸ್ರಾಯೆಲ್ಯರು ವಾಗ್ದಾತ್ತ ಪ್ರವೇಶಿಸಿದ ಕೂಡಲೇ ಒಂದು ಆಸಕ್ತಿಕರವಾದ ಘಟನೆ ಸಂಭವಿಸಿತು- ಅದೇನೆಂದರೆ ಮನ್ನಾ ಸುರಿಯುವುದು ನಿಂತು ಹೋಯಿತು. ಈಗ ಅವರು ಬಿತ್ತುವ ಕೊಯ್ಯುವ ತತ್ವವನ್ನು ಕಾರ್ಯರೂಪಕ್ಕೆ ತರುವವರಾಗಬೇಕೆಂದು ಕರ್ತನು ಬಯಸಿದನು. ಈಗ ಅವರು ಭೂಮಿಯನ್ನು ಹುಟ್ಟುವಳಿ ಮಾಡಿ ಬೆಳೆ ಬೆಳೆಯುವ ಕಾರ್ಯಾ ಆರಂಭಿಸಿದರು. ಈಗ ಅವರ ಸ್ವಂತ ಕೈಗಳೇ ಅವರಿಗೆ ಅಗತ್ಯವಾದದ್ದನ್ನು ಒದಗಿಸಿಕೊಡುವ ಹಾಗಾಯಿತು. ಇದುವೇ ಪ್ರಬುದ್ಧತೆಯ ಹಂತವಾಗಿದೆ
"ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು; ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ."( ಜ್ಞಾನೋಕ್ತಿಗಳು 12:11)
ಪ್ರಬುದ್ಧ ವ್ಯಕ್ತಿಗಳೆಂದರೆ ಕೇವಲ ಭೂಮಿಯಲ್ಲಿ ವ್ಯವಸಾಯ ಮಾಡುವವರಷ್ಟೇ ಅಲ್ಲ,ಅವರು ದೇವರ ವಾಕ್ಯಕ್ಕೆ ವಿದೇಯರಾಗುರುವವರಾಗಿರುತ್ತಾರೆ.ಆದ್ದರಿಂದ ಭೂಮಿಯನ್ನು ಅವರು ಹುಟ್ಟುವಳಿ ಮಾಡುತ್ತಾರೆ ಎಂದು ದೇವರ ವಾಕ್ಯವು ಸ್ಪಷ್ಟವಾಗಿ ಹೇಳುತ್ತದೆ. ಅಂತಹ ವ್ಯಕ್ತಿಯು ದೇವರ ಸಮೃದ್ಧಿಯನ್ನು ಅನುಭವಿಸುತ್ತಾನೆ.
ದೇವರು ನಮಗೆ ಸಾಕಷ್ಟು ಋತುಗಳನ್ನು ನೀಡಿರುವುದಕ್ಕೆ ಒಂದು ಕಾರಣವೆಂದರೆ ನಾವು ಆ ಋತುಗಳಿಗೆ ತಕ್ಕಂತೆ ನಾವು ಸಿದ್ಧತೆ ಮಾಡಿಕೊಳ್ಳಬಹುದು ಎಂಬುದಾಗಿದೆ. ಯೋಸೆಫನು ತನ್ನ ಬುದ್ಧಿವಂತಿಕೆಯಿಂದ ಕೊಯ್ಲಿನ ಸಮಯದಲ್ಲಿ ಕೊಯ್ಲಾದಂತಹ ಬೆಳೆಯಲ್ಲಿ 1/5 (20 percent)ರಷ್ಟನ್ನು ತೆಗೆದು ಅದನ್ನು ಉಳಿಸಿದನು. ಇದರಿಂದ ಬರಗಾಲದ ಸಮಯದಲ್ಲಿ ಐಗುಪ್ತ ಮಾತ್ರವಲ್ಲದೆ ಐಗುಪ್ತದ ಸುತ್ತಮುತ್ತಲಿನ ಜನಾಂಗಗಳನ್ನು ಸಂರಕ್ಷಿಸಲು ಸಾಧ್ಯವಾಯಿತು.
ಕೊಡುವ ವಿಷಯ ಬಂದಾಗ ಅನೇಕರಿಗೆ ಸಮಸ್ಯೆಯಾಗುತ್ತದೆ. ಆದಾಗಿಯೂ ಇದು ಪ್ರಭುದ್ಧತೆಯ ಮಾರ್ಗವಾಗಿದೆ. ದೇವರ ರಾಜ್ಯದಲ್ಲಿ ಪ್ರಬುದ್ಧತೆಯ ನಿಜವಾದ ಸಂಕೇತವೆಂದರೆ ಆ ವ್ಯಕ್ತಿಯು ಬಿತ್ತುವ ಮತ್ತು ಕೊಯ್ಯುವ ತತ್ವವನ್ನು ಅಳವಡಿಸಿಕೊಂಡ ವ್ಯಕ್ತಿಯಾಗಿರುತ್ತಾನೆ.ಇದರಿಂದಲೇ ಅವನಿಗೆ ಸರ್ವತೋಮುಖವಾದ ಬೆಳವಣಿಗೆಯಾಗುತ್ತದೆ.
ಪ್ರಾಕೃತಿಕ ಕ್ಷೇತ್ರದಲ್ಲಿ ಪುರುಷನು ಪ್ರಬುದ್ಧನಾದ ಮೇಲೆಯೇ ತನ್ನಲಿನ ಬೀಜವನ್ನು ಸ್ತ್ರೀಗೆ ನೀಡುತ್ತಾನೆ. ಇದರಿಂದ ಒಂದು ಕುಟುಂಬವು ಜನಿಸುತ್ತದೆ. ಸೃಷ್ಟಿಕರ್ತನಾದ ದೇವರೇ ಈ ಸಿದ್ಧಾಂತವನ್ನು ರೂಡಿಸಿದ್ದಾನೆ. ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿರಿ. ನಾನು ಈ ತತ್ವದ ಕುರಿತು ಮಾತನಾಡುತ್ತಿದ್ದೇನೆ. ಶಿಶುಗಳು ಮಾತ್ರವೇ ಏನನ್ನೂ ಕೊಡಲು ಸಾಧ್ಯವಿಲ್ಲ.!
"ಕಾಣಿಕೆಯು ಅನುಕೂಲತೆಗೂ ಶ್ರೀಮಂತರ ಸಾನ್ನಿಧ್ಯಪ್ರವೇಶಕ್ಕೂ ಸಾಧನ."(ಜ್ಞಾನೋಕ್ತಿಗಳು 18:16)
ನಿಮ್ಮ ಕೈಗಳಿಂದ ಕರ್ತನಿಗಾಗಿ ತರುವ ಕಾಣಿಕೆಗಳನ್ನು ಕರ್ತನು ಆಶೀರ್ವದಿಸುವವನಾಗಿದ್ದಾನೆ ಮತ್ತೆ ಅದು ನಿಮಗೆ ಸಾನಿಧ್ಯ ಪ್ರವೇಶಕ್ಕೆ ಅನುಕೂಲ ಮಾಡಿಕೊಡುತ್ತದೆ.
ಪ್ರಾರ್ಥನೆಗಳು
1. ತಂದೆಯೇ, ನಿಮ್ಮ ಒದಗಿಸುವಿಕೆಗಾಗಿ ನಿಮಗೆ ಸ್ತೋತ್ರ. ತಂದೆಯೇ ನೀನು ಯಹೋವ ಯೀರೆಯಾದ ದೇವರಾಗಿದ್ದು ನಮಗೆ ಒದಗಿಸುವವನಾಗಿದ್ದೀಯ ಎಂದು ನಾನು ನಂಬುತ್ತೇನೆ
2. ಯೇಸು ನಾಮದಲ್ಲಿ ನಾನು ದೇವರ ಮತ್ತು ಮನುಷ್ಯರಾದ ದಯೆಯನ್ನು ಹೊಂದಿಕೊಳ್ಳುವೆನು.ಕರ್ತನೆ ಯೇಸು ನಾಮದಲ್ಲಿ ನನ್ನನ್ನು ಆಶೀರ್ವದಿಸುವ ಜನರನ್ನು ವೃದ್ಧಿಸು.
3. ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು.
2. ಯೇಸು ನಾಮದಲ್ಲಿ ನಾನು ದೇವರ ಮತ್ತು ಮನುಷ್ಯರಾದ ದಯೆಯನ್ನು ಹೊಂದಿಕೊಳ್ಳುವೆನು.ಕರ್ತನೆ ಯೇಸು ನಾಮದಲ್ಲಿ ನನ್ನನ್ನು ಆಶೀರ್ವದಿಸುವ ಜನರನ್ನು ವೃದ್ಧಿಸು.
3. ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು.
Join our WhatsApp Channel
Most Read
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
ಅನಿಸಿಕೆಗಳು