ಅನುದಿನದ ಮನ್ನಾ
ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
Thursday, 26th of September 2024
3
1
167
Categories :
ದೇವರವಾಕ್ಯ ( Word of God )
"ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ. ಸ್ತುತಿಪಾತ್ರನಾದ ಯೆಹೋವನೇ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು. ನನ್ನ ತುಟಿಗಳು ನಿನ್ನ ವಿಧಿವಚನಗಳನ್ನೆಲ್ಲಾ ವರ್ಣಿಸುತ್ತವೆ."
(ಕೀರ್ತನೆಗಳು 119:11-13)
ಇಂದಿನ ವಾಕ್ಯವು ದೇವರ ವಾಕ್ಯದ ಒಂದು ಮುಖ್ಯವಾದ ಪಾಠವನ್ನು ನಿಮಗೆ ಬೋಧಿಸುವಂಥದ್ದಾಗಿದೆ. ನೀವು ಸತ್ಯವೇದದಲ್ಲಿ ಓದುವಂತಹ ವಾಕ್ಯಗಳು ಕೇವಲ ಪದಗಳಾಗಿರದೆ ಅದಕ್ಕಿಂತಲೂ ಮೇಲಾದವುಗಳಾಗಿವೆ. ಅವು ಬದುಕನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಕರ್ತನಾದ ಯೇಸುವೇ ಸ್ವತಃ "ನನ್ನ ವಾಕ್ಯವು ಆತ್ಮವಾಗಿದ್ದು ಅದು ಬದುಕಿಸುವಂಥದ್ದಾಗಿದೆ" ಎಂದು ಘೋಷಿಸಿದ್ದಾನೆ. (ಯೋಹಾನ 6:63)
ಇದು ಹೇಗೆ ನಮ್ಮಲ್ಲಿ ಜೀವ ನೀಡುವ ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು ಕೂಡ ತೋರಿಸುತ್ತದೆ. ನೀವು ದೇವರ ವಾಕ್ಯವನ್ನು ಹೃದಯದ ಆಳಕ್ಕೆ ಬಿತ್ತುವಾಗ ಅದು ಸಕ್ರಿಯಗೊಳ್ಳುತ್ತದೆ.
ನೀವು ದೇವರ ವಾಕ್ಯವನ್ನು ಓದಲು ಅಥವಾ ಕೇಳಿಸಿಕೊಳ್ಳಲು ಆರಂಭಿಸಿದಾಗ ನೀವು ಅವುಗಳನ್ನು ನಿಮ್ಮ ಕಣ್ಣುಗಳ ಮೂಲಕ ಮತ್ತು ಕಿವಿಗಳ ಮೂಲಕ ನಿಮ್ಮ ಮನಸ್ಸಿಗೆ ತರುವವರಾಗಿರುತ್ತೀರಿ.ಆದರೆ ಅದರ ನಿಜವಾದ ಶಕ್ತಿಯು ನೀವು ಆ ವಾಕ್ಯಗಳನ್ನು ನಿಮ್ಮ ಹೃದಯಗಳಲ್ಲಿ ಬೇರೂರಿಸಿದಾಗ ಬಿಡುಗಡೆಯಾಗುತ್ತದೆ. ಆಗಲೇ ಅದು ನಿಮ್ಮಲ್ಲಿ ಜೀವವನ್ನುಂಟು ಮಾಡುವಂತದ್ದು.
ಉದಾಹರಣೆಗೆ: ನೀವು ಸ್ವಸ್ಥತೆಗೆ ಸಂಬಂಧಿಸಿದ ದೇವರ ವಾಕ್ಯಗಳನ್ನು ಮತ್ತು ಬೋಧನೆಗಳನ್ನು ಕೇಳುತ್ತಾ, ಓದುತ್ತಾ, ಧ್ಯಾನಿಸುತ್ತಾ ಇರುವಾಗ ಕ್ರಮೇಣವಾಗಿ ನಿಮ್ಮ ಹೃದಯದಲ್ಲಿ ಒಂದು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುತ್ತೀರಿ ಮತ್ತು ಆ ನಂಬಿಕೆಯು ನಿಮ್ಮಲ್ಲಿ ದೇಹಕ್ಕೆ ಸ್ವಸ್ತತೆಯನ್ನು ತರುತ್ತದೆ. ನಿಮ್ಮ ಹೃದಯವು ವಚನವನ್ನು ಹಿಡಿದಿಟ್ಟುಕೊಳ್ಳುವಾಗ ನಿಮ್ಮ ಹೃದಯದೊಳಗಿಂದ ನಿಮ್ಮ ಜೀವಿತಕ್ಕೆ ಆ ಸ್ವಸ್ಥತೆಯು ಹರಿದು ಬರುತ್ತದೆ.
ಒಂದು ವೇಳೆ ನೀವು ಅಶುದ್ಧವಾದ ಆಲೋಚನೆಗಳು ಮತ್ತು ಕನಸುಗಳೊಡನೆ ಹೋರಾಡುತ್ತಿದ್ದೀರಿ ಎಂದುಕೊಳ್ಳೋಣ. ಆಗ ನೀವು ಅದಕ್ಕೆ ಸಂಬಂಧಿಸಿದ ದೇವರ ವಾಕ್ಯಗಳನ್ನು ಓದಿ ಧ್ಯಾನಿಸಬೇಕು. ಹೀಗೆ ಮಾಡುವಾಗ ಅದು ನಿಮ್ಮನ್ನು ಪಾಪದಿಂದ ದೂರವಿರಿಸಿ ನಿಮ್ಮ ಕರೆಯನ್ನು ಪೂರೈಸಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ದೇವರ ವಾಕ್ಯವನ್ನು ಬಿತ್ತುವ ಬೀಜಕ್ಕೆ ಹೋಲಿಸಲಾಗಿದೆ. ಹೊಸ ಒಡಂಬಡಿಕೆಯಲ್ಲಿ "ಬೀಜ" ಎನ್ನುವ ಪದವು ಗ್ರೀಕ್ ಮೂಲದ "ಸ್ಪರ್ಮಾ" ಎಂಬ ಪದದಿಂದ ಭಾಷಾಂತರ ಹೊಂದಿದೆ. ಇದೇ ಪದವು ಆಂಗ್ಲ ಭಾಷೆಯಲ್ಲಿ ಸ್ಪರ್ಮ್ (ಬೀಜಾಣು)ಎಂಬುದಾಗಿ ಉಂಟಾಗಿದೆ.
ಪ್ರಾಕೃತಿಕ ಆಯಾಮದಲ್ಲಿರುವಂತೆ ಆತ್ಮಿಕ ಆಯಾಮದಲ್ಲೂ ನಡೆಯುವಂತಹದ್ದು. ನಿಮ್ಮ ಆತ್ಮಿಕ ಆಯಾಮದಲ್ಲಿ ಅದ್ಭುತಗಳು ಜನಿಸಲು ಕೂಡ ನೀವು ದೇವರ ವಾಕ್ಯ ಎಂಬ ಬೀಜವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಬೇಕು.
ಗಮನಿಸಿ: ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗುವ ಪಾಸ್ಟರ್ ಮೈಕಲ್ ರವರ ಬೋಧನೆಗಳನ್ನು ಕೇಳುವಂಥದ್ದು ದೇವರ ವಾಕ್ಯಗಳನ್ನು ಧ್ಯಾನಿಸಲಿರುವ ಒಂದು ಮಹತ್ವವಾದ ಮಾರ್ಗವಾಗಿದೆ
ಪ್ರಾರ್ಥನೆಗಳು
ತಂದೆಯೇ ನಾನು ದಿನನಿತ್ಯವೂ ನಿನ್ನ ವಾಕ್ಯವನ್ನು ಧ್ಯಾನಿಸುವಂತೆ ಕೃಪೆಯನ್ನು ಅನುಗ್ರಹಿಸು ಆಗ ನಾನು ನಿನ್ನಲ್ಲಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಇದರಿಂದ ಯೇಸು ನಾಮದಲ್ಲಿ ನಾನು ಏನು ಬೇಡಿಕೊಂಡರು ಅದು ನನಗೆ ನೆರವೇರುತ್ತದೆ ಆಮೆನ್
Join our WhatsApp Channel
Most Read
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ದೈವೀಕ ಶಿಸ್ತಿನ ಸ್ವರೂಪ-1
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಆಟ ಬದಲಿಸುವವ
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
ಅನಿಸಿಕೆಗಳು