ಅನುದಿನದ ಮನ್ನಾ
ಮೂರು ಆಯಾಮಗಳು
Saturday, 12th of October 2024
4
1
110
Categories :
ನರಕ (Hell)
ಯೇಸುವಿನ ಹೆಸರು (Name of Jesus)
ಈ ಮುಂದಿನ ದೇವರ ವಾಕ್ಯವನ್ನು ಬಹಳ ಜಾಗರೂಕತೆಯಿಂದ ಓದಿರಿ
"ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು - ಈ ಸುರುಳಿಯನ್ನು ಬಿಚ್ಚುವದಕ್ಕೂ ಇದರ ಮುದ್ರೆಗಳನ್ನು ಒಡೆಯುವದಕ್ಕೂ ಯಾವನು ಯೋಗ್ಯನು ಎಂದು ಮಹಾ ಶಬ್ದದಿಂದ ಸಾರುವದನ್ನು ಕಂಡೆನು. ಆ ಸುರುಳಿಯನ್ನು ಬಿಚ್ಚುವದಕ್ಕಾದರೂ ಅದರೊಳಗೆ ನೋಡುವದಕ್ಕಾದರೂ ಪರಲೋಕದಲ್ಲಿಯಾಗಲಿ ಭೂವಿುಯಲ್ಲಿಯಾಗಲಿ ಭೂವಿುಯ ಕೆಳಗಾಗಲಿ ಯಾವನಿಗೂ ಶಕ್ತಿಯಿರಲಿಲ್ಲ."(ಪ್ರಕಟನೆ 5:2-3)
"ಆದದರಿಂದ ಸ್ವರ್ಗ ಮರ್ತ್ಯಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು."(ಫಿಲಿಪ್ಪಿಯವರಿಗೆ 2:10-11)
ಈ ಮೇಲಿನ ವಾಕ್ಯವು ಮೂರು ಆಯಾಮಗಳನ್ನು ನಮಗೆ ಪ್ರಕಟಿಸುತ್ತದೆ
- ಪರಲೋಕ
- ಭೂಲೋಕ
- ಪಾತಾಳ ಲೋಕ
ಪರಲೋಕದ ಸಂಗತಿಗಳು- ದೇವರ ಸಿಂಹಾಸನ ಇರುವಂತ ಆತ್ಮಿಕ ಆಯಾಮವನ್ನು ಸೂಚಿಸುತ್ತದೆ. ಹಾಗೆ ಇದನ್ನು ಮೂರನೇ ಆಕಾಶ ಎಂತಲೂ ಕರೆಯಲಾಗುತ್ತದೆ (2ಕೊರಿಂತ 12:2). ಇದು ದೇವರ, ದೇವದೂತರ ಮತ್ತು ಸಂತರ ವಾಸ ಸ್ಥಾನವಾಗಿದೆ.
ಭೂಮಿಯಲ್ಲಿನ ಸಂಗತಿಗಳು- ಮನುಷ್ಯರು ಮತ್ತು ಪ್ರಾಣಿಗಳು ಇತ್ಯಾದಿ.
ಭೂಮಿಯ ತಳಭಾಗ (ಅದೋಲೋಕ ಅಥವಾ ನರಕ)ದ ಸಂಗತಿಗಳು - ಈ ಸ್ಥಳವು ದೊಬ್ಬಲ್ಪಟ್ಟ ದೇವ ದೂತರಗಳು ತಮ್ಮ ನ್ಯಾಯ ತೀರ್ಪಿನ ದಿನಕ್ಕಾಗಿ ಕಾಯುತ್ತಿರುವುದಕ್ಕಾಗಿ ಸರಪಳಿಗಳಿಂದ ಬಂದಿಸಲ್ಪಟ್ಟಿರುವ ಕತ್ತಲೆಯ ಕೋಣೆಗಳನ್ನು ಒಳಗೊಂಡಿರುತ್ತದೆ.
ಹೊಸ ಒಡಂಬಡಿಕೆ ಪ್ರಕಾರ ನೀತಿವಂತರ ಆತ್ಮಗಳು ಮತ್ತು ಅಗಲಿಗ ಸ್ತ್ರೀ ಪುರುಷರ ಆತ್ಮಗಳು ಸಹ ಇರುತ್ತವೆ.
ದೇವರು ಕರ್ತನಾದ ಯೇಸುಕ್ರಿಸ್ತನನ್ನು ಸತ್ತವರೊಳಗಿಂದ ಬದುಕಿಸಿ ಪರಲೋಕದೊಳಗೆ ಸಕಲ ರಾಜ್ಯ ಅಥವಾ ಅಧಿಕಾರ ಮಹತ್ವ ಪ್ರಭುತ್ವಗಳ ಮೇಲೆ ಕೂರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಕ್ರಿಸ್ತನಿಗೆ ದಯಪಾಲಿಸಿದ್ದಾನೆ.(ಎಫಸ್ಸೆ 1:20, ಫಿಲಿಪ್ಪಿ 2:9-11 ವರೆಗೂ ಓದಿ ನೋಡಿ )
ದೇವರು (ತಂದೆಯು) ಯೇಸುವಿಗೆ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಮಾತ್ರ ಕೊಡದೆ ಸ್ವರ್ಗ ಭೂಮಿ ಪಾತಾಳದಲ್ಲಿ ಇರುವವರೆಲ್ಲರೂ ಯೇಸುವಿನ ಹೆಸರಲ್ಲಿ ಅಡ್ಡ ಬೀಳಬೇಕೆಂದು ಆಜ್ಞಾಪಿಸಿದ್ದಾನೆ.
ದೇವರು ಕರ್ತನಾದ ಯೇಸುವನ್ನು ಸಕಲ ಲೋಕದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿಸಿ ತನ್ನ ಬಲಗಡೆಯಲ್ಲಿ ಕೂಡಿಸಿಕೊಂಡು ಆತನಿಗೇ ಎಲ್ಲಾ ಸಂಗತಿಗಳನ್ನು ಅಧೀನ ಮಾಡಿದನು. (ಎಫಸ್ಸೆ 1:19-22 ಓದಿರಿ )
ಯೇಸು ನಾಮದಲ್ಲಿ ಪ್ರಾರ್ಥಿಸುವಂತದು ಬಹಳ ಬಲವುಳ್ಳದ್ದು ಎಂಬುದೇ ಇದರ ಅರ್ಥ. ನಾವು "ಯೇಸು ನಾಮದಲ್ಲಿ" ಎಂದು ಪ್ರಾರ್ಥಿಸುವಾಗ ಈ ಮೂರು ಲೋಕಗಳ ಮೇಲೆ ಆತನಿಗೆ ಇರುವ ಅಧಿಕಾರದಲ್ಲಿ ಪ್ರಾರ್ಥಿಸುವವರಾಗುತ್ತೇವೆ. ನಿಮಗಾಗಲಿ ನನಗಾಗಲಿ ಯೇಸು ನಾಮ ಬಿಟ್ಟು ಯಾವುದೇ ಹೆಸರಿನ ಅಗತ್ಯ ನಮಗಿಲ್ಲ.
ಪ್ರಾರ್ಥನೆಗಳು
ತಂದೆಯೇ, "ಯೇಸು" ಎನ್ನುವ ನಿನ್ನ ನಾಮಕ್ಕಾಗಿ ಸ್ತೋತ್ರ. ನಾನು ಕ್ರಿಸ್ತನಲ್ಲಿ ದೇವರ ನೀತಿವಂತನಾಗಿದ್ದೇನೆ. ನಾನು ಹೋಗುವ ಕಡೆಯೆಲ್ಲ ಯೇಸುವಿನ ನಾಮದಲ್ಲಿ ದೇವರ ದಯೆಯು ನನ್ನನ್ನು ಆವರಿಸಿಕೊಳ್ಳುತ್ತದೆ. ನನ್ನ ಜೀವಿತವು ಎಂದಿಗೂ ಇದ್ದಹಾಗೆ ಇರುವುದಿಲ್ಲ.
Join our WhatsApp Channel
Most Read
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದೇವರ ರೀತಿಯ ನಂಬಿಕೆ
● ಬೀಜದಲ್ಲಿರುವ ಶಕ್ತಿ-1
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ತುರ್ತು ಪ್ರಾರ್ಥನೆ.
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
ಅನಿಸಿಕೆಗಳು